Home
ಸುದ್ದಿಜಾಲ

ವಾಟ್ಸಾಪ್‌ನಿಂದ ಇಂತಹ ಆಯ್ಕೆ ನೀವು ನಿರೀಕ್ಷೆ ಮಾಡಿರಲಿಲ್ಲ..! ಇದೇ ಕಾರಣಕ್ಕೆ ವಾಟ್ಸಾಪ್‌ ಎಲ್ಲರಿಗೂ ಇಷ್ಟ!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಮತ್ತೊಂದು ಅಚ್ಚರಿಯ ಆಯ್ಕೆಯನ್ನು ಪರಿಚಯಿಸಿದೆ. ಸಾಕಷ್ಟು ದಿನಗಳಿಂದ ಕೇಳಿ ಬರುತ್ತಿದ್ದ ಒತ್ತಾಯವನ್ನು ವಾಟ್ಸಾಪ್‌ ಇದೀಗ ಈಡೇರಿಸಿದೆ. ಅದೆನೆಂದರೆ ವಾಟ್ಸಾಪ್‌ ಬಳಕೆದಾರರು ಇದೀಗ ಒಂದೇ ಡಿವೈಸ್‌ನಲ್ಲಿ ಎರಡು ವಾಟ್ಸಾಪ್‌ ಖಾತೆಗಳಿಗೆ ಲಾಗ್‌ಇನ್‌ ಆಗುವುದಕ್ಕೆ ಅವಕಾಶ ಕಲ್ಪಿಸಿದೆ.

ಹೌದು, ಒಂದು ಸ್ಮಾರ್ಟ್‌ಫೋನ್‌ನಲ್ಲಿಯೇ ಎರಡು ವಾಟ್ಸಾಪ್‌ ಅಕೌಂಟ್‌ಗಳಿಗೆ ಲಾಗ್‌ ಇನ್‌ ಆಗಬಹುದು ಅಂತಾ ವಾಟ್ಸಾಪ್ ಹೇಳಿದೆ. ಈ ಮೂಲಕ ಏಕಕಾಲದಲ್ಲಿ ಎರಡು ಆಕ್ಟಿವ್‌ ವಾಟ್ಸಾಪ್‌ ಅಕೌಂಟ್‌ಗಳನ್ನು ಲಾಗಿನ್‌ ಆಗಬಹುದು. ಇದಕ್ಕಾಗಿ ನೀವು ಯಾವುದೇ ವಾಟ್ಸಾಪ್‌ ಅಕೌಂಟ್‌ನಿಂದ ಲಾಗ್‌ಔಟ್‌ ಆಗಬೇಕಾದ ಅವಶ್ಯಕತೆಯಿಲ್ಲ ಎಂದು ಸಹ ಮೆಟಾ ಕಂಪೆನಿ ಸ್ಪಷ್ಟಪಡಿಸಿದೆ. ಹಾಗಾದ್ರೆ ಏಕಕಾಲದಲ್ಲಿ ಎರಡು ವಾಟ್ಸಾಪ್‌ ಅಕೌಂಟ್‌ಗಳನ್ನು ಒಂದೇ ಮೊಬೈಲ್‌ನಲ್ಲಿ ಪ್ರವೇಶಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಿಂದ ಇಂತಹ ಆಯ್ಕೆ ನೀವು ನಿರೀಕ್ಷೆ ಮಾಡಿರಲಿಲ್ಲ..!

ಪ್ರಸ್ತುತ ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಬೇರೆ ವಾಟ್ಸಾಪ್‌ ಅಕೌಂಟ್‌ಗೆ ಲಾಗಿನ್‌ ಆಗಬೇಕಾದರೆ ಸಕ್ರಿಯವಾಗಿರುವ ನಿಮ್ಮ ಅಕೌಂಟ್‌ನಿಂದ ಲಾಗ್‌ಔಟ್‌ ಆಗಬೇಕಾಗುತ್ತದೆ. ಆದರೆ ವಾಟ್ಸಾಪ್‌ ನೀವು ಲಾಗ್‌ಔಟ್‌ ಆಗದೇ ಇನ್ನೊಂದು ವಾಟ್ಸಾಪ್‌ ಅಕೌಂಟ್‌ಗೆ ಲಾಗಿನ್‌ ಆಗುವ ಅವಕಾಶ ನೀಡಿದೆ. ಇದರಿಂದ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಒಂದೇ ಸಮಯದಲ್ಲಿ ಎರಡು ಸಕ್ರಿಯ ವಾಟ್ಸಾಪ್‌ ಖಾತೆಗಳನ್ನು ನೀವು ಬಳಸಬಹುದಾಗಿದೆ. ಅಲ್ಲದೆ ವಾಟ್ಸಾಪ್‌ ಬಳಕೆದಾರರು ಲಾಗ್ ಔಟ್ ಮಾಡದೆಯೇ ಎರಡು ಖಾತೆಗಳ ನಡುವೆ ಮನಬಂದಂತೆ ಬದಲಾಯಿಸಬಹುದು.

ಇನ್ನು ವಾಟ್ಸಾಪ್‌ನ ಈ ಹೊಸ ಆಯ್ಕೆಯಂತೆ ನಿಮ್ಮ ಮೊಬೈಲ್‌ನಲ್ಲಿ ಎರಡು ಅಕೌಂಟ್‌ಗಳನ್ನು ಸೆಟ್‌ ಮಾಡಲು, ಬಳಕೆದಾರರಿಗೆ ಎರಡನೇ ಫೋನ್ ಸಂಖ್ಯೆ ಮತ್ತು SIM ಕಾರ್ಡ್ ಅಥವಾ ಮಲ್ಟಿ-ಸಿಮ್ ಬೆಂಬಲಿಸುವ ಫೋನ್ ಅಗತ್ಯವಿದೆ. ನಿಮ್ಮ ಮೊಬೈಲ್‌ ಡ್ಯುಯಲ್‌ ಸಿಮ್‌ ಬೆಂಬಲಿಸುತ್ತಿದ್ದರೆ ನೀವು ವಾಟ್ಸಾಪ್‌ ಸೆಟ್ಟಿಂಗ್‌ಗಳಿಗೆ ಹೋಗಿ ಸೆಟ್‌ ಮಾಡಬಹುದಾಗಿದೆ. ಇದಕ್ಕಾಗಿ ನೀವು ವಾಟ್ಸಾಪ್‌ ಸೆಟ್ಟಿಂಗ್ಸ್‌ ತೆರೆಯಬೇಕು, ನಂತರ ಅವರ ಹೆಸರಿನ ಮುಂದಿನ ಬಾಣದ ಮೇಲೆ ಟ್ಯಾಪ್ ಮಾಡಿ ಮತ್ತು "ಖಾತೆಯನ್ನು ಸೇರಿಸಿ" ಕ್ಲಿಕ್ ಮಾಡಿ. ಇದರಲ್ಲಿ ದ್ವಿತೀಯ ಫೋನ್ ಸಂಖ್ಯೆಯನ್ನು ಬಳಸಿಕೊಂಡು, ಎರಡನೇ ವಾಟ್ಸಾಪ್‌ ಅಕೌಂಟ್‌ ಅನ್ನು ಸೆಟ್‌ ಮಾಡಬಹುದು.

ವಾಟ್ಸಾಪ್‌ ನೀಡಿರುವ ಮಲ್ಟಿ ಅಕೌಂಟ್‌ ಯೂಸ್‌ ಆಯ್ಕೆಯಲ್ಲಿ ಬಳಕೆದಾರರು ಪ್ರತಿ ಖಾತೆಯಲ್ಲಿ ಗೌಪ್ಯತೆ ಮತ್ತು ಅಧಿಸೂಚನೆಗಳ ಸೆಟ್ಟಿಂಗ್‌ಗಳನ್ನು ಪ್ರತ್ಯೇಕವಾಗಿ ಸೆಟ್‌ ಮಾಡಬಹುದಾಗಿದೆ. ಅಂದರೆ ನಿಮ್ಮ ಪರ್ಸನಲ್‌ ಖಾತೆಗೆ ಸಂಬಂದಿಸಿದಂತೆ ನೋಟಿಫಿಕೇಶನ್‌ ಮ್ಯೂಟ್‌ ಮಾಡಬಹುದು. ನಿಮ್ಮ ವರ್ಕ್‌ ಅಕೌಂಟ್‌ಗೆ ಅನುಮತಿಸಬಹುದು. ನಿಮಗೆ ಹೇಗೆ ಅನುಕೂಲವಾಗಲಿದೆಯೋ ಹಾಗೇ ಅದನ್ನು ಸೆಟ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಈ ಎರಡೂ ಖಾತೆಗಳಲ್ಲಿ ಕಳುಹಿಸಲಾದ ಮತ್ತು ಸ್ವೀಕರಿಸಿದ ಸಂದೇಶಗಳು ಸಹ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಹೊಂದಿರುತ್ತವೆ.

ಇದಲ್ಲದೆ ವಾಟ್ಸಾಪ್‌ ಪರಿಚಯಿಸಿರುವ ಮಲ್ಟಿ ಅಕೌಂಟ್‌ ಫೀಚರ್ಸ್‌ ಎರಡು ಅಕೌಂಟ್‌ಗಳ ನಡುವೆ ಸಲಭವಾಗಿ ಬದಲಾಯಿಸಲು ಅವಕಾಶ ನೀಡಿದೆ. ಇದರಿಂದ ನಿಮ್ಮ ವರ್ಕ್‌ ವಾಟ್ಸಾಪ್‌ ಅಕೌಂಟ್‌ ಹಾಗೂ ನಿಮ್ಮ ಪರ್ಸನಲ್‌ ಅಕೌಂಟ್‌ ನಡುವ ಬದಲಾವಣೆ ಮಾಡಬಹುದಾಗಿದೆ. ಆದರೆ ಈ ರೀತಿಯ ಆಯ್ಕೆಗಳನ್ನು ಬಳಸಬೇಕಾದರೆ ನೀವು ವಾಟ್ಸಾಪ್‌ನ ಅಧಿಕೃತ ಅಪ್ಲಿಕೇಶನ್‌ ಅನ್ನು ಮಾತ್ರ ಬಳಸಬೇಕಾಗುತ್ತದೆ. ಸದ್ಯ ಈ ಆಯ್ಕೆಯು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಮಾತ್ರ ಲಭ್ಯವಿದೆ. ಇದನ್ನು ಇನ್ನು ಸಹ ಐಒಎಸ್ ಡಿವೈಸ್‌ಗಳಲ್ಲಿ ಪರಿಚಯಿಸಲಾಗಿಲ್ಲ.

ಇನ್ನು ವಾಟ್ಸಾಪ್‌ ಇತ್ತೀಚಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರಲ್ಲಿ ವಾಯ್ಸ್‌ ಮೆಸೇಜ್‌ಗಳಿಗಾಗಿ 'ವ್ಯೂ ಒನ್ಸ್‌' ಮೋಡ್ ಟಾಗಲ್ ಅನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಇದಲ್ಲದೆ ಆಂಡ್ರಾಯ್ಡ್‌ನಲ್ಲಿ ಪಾಸ್‌ಕೀಗಳಿಗೆ ಬೆಂಬಲವನ್ನು ಹೊರತಂದಿದೆ.

Best Mobiles in India

English summary
WhatsApp has Introduces Multiple Accounts on Android smartphones: How to Activate the Feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+