Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಫೋಟೋ ಶೇರ್‌ ಮಾಡೋಕು ಮುನ್ನ ಈ ಸುದ್ದಿ ಗಮನಿಸಿ!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಇತ್ತೀಚಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಹೊರತಂದಿದೆ. ಇದರಲ್ಲಿ HD ಫೋಟೋ ಫೀಚರ್ಸ್‌ ಕೂಡ ಒಂದಾಗಿದೆ. ಇದು ವಾಟ್ಸಾಪ್‌ನಲ್ಲಿ ಫೋಟೋ ಶೇರ್‌ ಮಾಡುವ ಬಳಕೆದಾರರ ಅನುಭವವನ್ನೇ ಬದಲಾಯಿಸಿದೆ. ಇದರಿಂದ ವಾಟ್ಸಾಪ್‌ನಲ್ಲಿ ಫೋಟೋ ಕ್ವಾಲಿಟಿ ಕಡಿಮೆಯಾಗದಂತೆ ಸೆಂಡ್‌ ಮಾಡಬಹುದು.

ಹೌದು, ವಾಟ್ಸಾಪ್‌ನಲ್ಲಿ ಫೋಟೋ ಕ್ವಾಲಿಟಿ ಕಡಿಮೆ ಆಗದಂತೆ ಸೆಂಡ್‌ ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ವಾಟ್ಸಾಪ್‌ ಹೆಚ್‌ಡಿ ಫೋಟೋ ಫೀಚರ್ಸ್‌ ಪರಿಚಯಿಸಿದೆ. ಇದನ್ನು ಬಳಸಿಕೊಂಡು ಬಳಕೆದಾರರು ತಮ್ಮ ಕಂಟ್ಯಾಕ್ಟ್‌ಗಳಿಗೆ ಹೆಚ್‌ಡಿ ಫೋಟೋಗಳನ್ನು ಸೆಂಡ್‌ ಮಾಡಬಹುದಾಗಿದೆ. ಹಾಗಂತ ಈ ಫೀಚರ್ಸ್‌ ಪ್ರಸ್ತುತ ಎಲ್ಲರಿಗೂ ಕೂಡ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಇದು ರೂಲ್‌ಔಟ್‌ ಆಗುವ ಸಾಧ್ಯತೆಯಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಹೆಚ್‌ಡಿ ಫೋಟೋ ಫೀಚರ್ಸ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ಫೋಟೋ ಶೇರ್‌ ಮಾಡೋಕು ಮುನ್ನ ಈ ಸುದ್ದಿ ಗಮನಿಸಿ!

ವಾಟ್ಸಾಪ್‌ನಲ್ಲಿ ಹೆಚ್‌ಡಿ ಫೋಟೋ ಫೀಚರ್ಸ್‌ ಆಯ್ಕೆಯು ಶೀಘ್ರದಲ್ಲೇ ರೋಲ್‌ಔಟ್‌ ಆಗಲಿದೆ. ಈ ಆಯ್ಕೆಯು ಲಭ್ಯವಾದ ನಂತರ ಬಳಕೆದಾರರು ಫೋಟೋ ಶೇರ್‌ ಮಾಡುವಾಗ ಎರಡು ಆಯ್ಕೆಗಳನ್ನು ಪಡೆಯಲಿದ್ದಾರೆ. ಇದರಲ್ಲಿ ಪ್ರಮಾಣಿತ ಮತ್ತು ಹೆಚ್‌ಡಿ ಗುಣಮಟ್ಟ ಎಂಬ ಆಯ್ಕೆಗಳಿರಲಿವೆ. ಇದರಲ್ಲಿ ಪ್ರಮಾಣಿತ ಗುಣಮಟ್ಟವು ಫೋಟೋಗಳನ್ನು ಸೆಂಡ್‌ ಮಾಡುವ ಡೀಫಾಲ್ಟ್‌ ಆಯ್ಕೆಯಾಗಿಯೆ ಇರಲಿದೆ. ಇದಲ್ಲದೆ ಸದ್ಯದಲ್ಲಿ ಹೆಚ್‌ಡಿ ವೀಡಿಯೊ ಶೇರ್‌ ಆಯ್ಕೆಯು ಕೂಡ ಲಭ್ಯವಾಗುವ ಸಾಧ್ಯತೆಯಿದೆ.

ವಾಟ್ಸಾಪ್‌ನಲ್ಲಿ ಹೆಚ್‌ಡಿ ಕ್ವಾಲಿಟಿ ಫೋಟೋ ಶೇರ್‌ ಮಾಡುವುದು ಹೇಗೆ?
* ಮೊದಲಿಗೆ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ
* ನೀವು HD ಫೋಟೋಗಳನ್ನು ಶೇರ್‌ ಮಾಡಲು ಬಯಸುವ ಚಾಟ್‌ ತೆರೆಯಿರಿ
* ಇದರಲ್ಲಿ ಲಗತ್ತು (attachment ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ಇದೀಗ ನಿಮಗೆ ಸ್ಟ್ಯಾಂಡರ್ಡ್ ಮತ್ತು HD ಫೋಟೋಸ್‌ ಎಂಬ ಎರಡು ಆಯ್ಕೆಗಳನ್ನು ಕಾಣಲಿವೆ
* ಇದರಲ್ಲಿ ನೀವು HD ಗುಣಮಟ್ಟದ ಫೋಟೋ ಶೇರ್‌ ಮಾಡಲು ಎರಡನೇ ಆಯ್ಕೆಯನ್ನು ಕ್ಲಿಕ್ ಮಾಡಿ
* ಇದೀಗ ನೀವು ಸೆಂಡ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ
* ನೀವು ಸೆಂಡ್‌ ಮಾಡಿದ ಫೋಟೋ ಹೆಚ್‌ಡಿ ಕ್ವಾಲಿಟಿಯಲ್ಲಿ ಶೇರ್‌ ಆಗಲಿದೆ

ಇದಲ್ಲದೆ ವಾಟ್ಸಾಪ್‌ ನಿಮಗೆ ಇನ್ನೊಂದು ಆಯ್ಕೆಯನ್ನು ಸಹ ನೀಡಿದೆ. ಅದೆನೆಂದರೆ ನೀವು ಕಡಿಮೆ ಬ್ಯಾಂಡ್‌ವಿಡ್ತ್ ಸಂಪರ್ಕವನ್ನು ಹೊಂದಿರುವಾಗ ಫೋಟೋವನ್ನು ಸ್ವೀಕರಿಸಿದರೆ, ಪ್ರಮಾಣಿತ ಆವೃತ್ತಿಯನ್ನು ಇರಿಸಿಕೊಳ್ಳಲು ಅಥವಾ ಅದನ್ನು HD ಗೆ ಅಪ್‌ಗ್ರೇಡ್ ಮಾಡಲು ನೀವು ಫೋಟೋ-ಬೈ-ಫೋಟೋ ಆಧಾರದ ಮೇಲೆ ಆಯ್ಕೆ ಮಾಡಬಹುದು ಎಂದು ಹೇಳಿದೆ.

ಇನ್ನು ಇತ್ತೀಚಿಗೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ AI ಬಳಸಿಕೊಂಡು ಕಸ್ಟಮ್‌ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡಲು ಅವಕಾಶ ನೀಡಲು ಮುಂದಾಗಿದೆ. ಇದರಿಂದ ಬಳಕೆದಾರರು ತಮ್ಮ ಆಲೋಚನೆಯನ್ನು AI ಮೂಲಕ ಕಸ್ಟಮ್‌ ಸ್ಟಿಕ್ಕರ್‌ ಕ್ರಿಯೆಟ್‌ ಮಾಡಬಹುದು. ಸದ್ಯ ಈ ಆಯ್ಕೆಯು ಸೀಮಿತ ಸಂಖ್ಯೆಯ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೂ ಲಬ್ಯವಾಗುವ ನಿರೀಕ್ಷೆಯಿದೆ.

ಈ ಆಯ್ಕೆಯನ್ನು ರೂಲ್‌ಔಟ್‌ ಮಾಡಿದ ನಂತರ ನಿಮಗೆ ಹೇಗೆ ಬೇಕೋ ಹಾಗೆಲ್ಲಾ ಸ್ಟಿಕ್ಕರ್‌ ಕ್ರಿಯೆಟ್‌ ಮಾಡುವುದಕ್ಕೆ ಸಾದ್ಯವಿಲ್ಲ. ಕೆಲವು ವಿಚಾರಗಳಲ್ಲಿ ನಿಮಗೆ ನಿಯಂತ್ರಣವನ್ನು ಹೇರಲಾಗುತ್ತದೆ. ಏಕೆಂದರೆ ನೀವು ಸೂಕ್ತವಲ್ಲದ ಅಥವಾ ಹಾನಿಕಾರಕ ಎನಿಸುವ ಸ್ಟಿಕ್ಕರ್‌ ಕ್ರಿಯೆಟ್‌ ಮಾಡಿದರೆ ಬಳಕೆದಾರರು ರಿಪೋರ್ಟ್‌ ಮಾಡುವುದಕ್ಕೆ ಅವಕಾಶವಿದೆ. ಇಂತಹ ಸನ್ನಿವೇಶದಲ್ಲಿ ನಿಮ್ಮ ಅಕೌಂಟ್‌ ಅನ್ನು ನಿರ್ಬಂಧಿಸುವ ಸಾದ್ಯತೆ ಕೂಡ ಇರಲಿದೆ.

Best Mobiles in India

English summary
WhatsApp has launched a new HD photo feature: How to use?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+