Father’s Day ಪ್ರಯುಕ್ತ ಹೊಸ ಸ್ಟಿಕ್ಕರ್‌ ಪ್ಯಾಕ್‌ ಪರಿಚಯಿಸಿದ ವಾಟ್ಸಾಪ್‌!

|

ಅಪ್ಪ ಅಂದರೆ ಮಕ್ಕಳ ಪಾಲಿನ ಮೊದಲ ಹೀರೋ. ಬಾಲ್ಯದಲ್ಲಿ ಕೈ ಹಿಡಿದು ಹೆಜ್ಜೆ ಹಾಕಲು ಹೇಳಿಕೊಟ್ಟ, ಧೈರ್ಯವಾಗಿ ಎಲ್ಲರ ಎದುರು ನಿಲ್ಲಲು ದಾರಿ ತೋರಿದ ಅಪ್ಪ ಅಂದರೆ ಎಲ್ಲರ ಪಾಲಿನ ಹೀರೋ. ಅಪ್ಪನನ್ನು ಆರಾಧಿಸಲು ಒಂದು ದಿನದ ಅಗತ್ಯವಿಲ್ಲ. ಆದರೂ ತಂದೆಯ ಮಹತ್ವವನ್ನು ಸಾರುವುದಕ್ಕಾಗಿ ಜೂನ್‌ ತಿಂಗಳ ಮೂರನೇ ಭಾನುವಾರವನ್ನು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಜೂನ್‌ 20 ಅಂದರೆ ನಾಳೆ ವಿಶ್ವ ಅಪ್ಪಂದಿರ ದಿನ ಆಚರಿಸಲಾಗ್ತಿದೆ. ಇದಕ್ಕಾಗಿ ವಿಶ್ವ ಅಪ್ಪಂದಿರ ದಿನದ ಪ್ರಯುಕ್ತ ವಾಟ್ಸಾಪ್‌ ವಿಶೇಷ ಸ್ಟಿಕ್ಕರ್‌ ಪ್ಯಾಕ್‌ ಅನ್ನು ಪರಿಚಯಿಸಿದೆ.

ಅಪ್ಪಂದಿರ

ಹೌದು, ವಿಶ್ವ ಅಪ್ಪಂದಿರ ದಿನಾಚರಣೆಯ ಮುನ್ನ ವಾಟ್ಸಾಪ್ ಭಾರತದಲ್ಲಿ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಸ್ಟಿಕ್ಕರ್ ಪ್ಯಾಕ್‌ಗೆ ಜನಪ್ರಿಯ ಬಾಲಿವುಡ್ ಹಾಡಿನ ಸಾಲು "ಪಾಪಾ ಜಸ್ಟ್ ಪಾಪಾ" ಎಂದು ಹೆಸರಿಡಲಾಗಿದೆ. ಇನ್ನು ಈ ಸ್ಟಿಕ್ಕರ್ ಪ್ಯಾಕ್ ಅನ್ನು ಮೊದಲಿಗೆ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಲಾಂಚ್‌ ಮಾಡಲಾಗಿದೆ. ಸ್ಟಿಕ್ಕರ್ ಪ್ಯಾಕ್‌ನಲ್ಲಿ ತಂದೆಯ ವಿಶೇಷ ಸಾರುವ ಮತ್ತು ಮೀಸೆ ಇರುವ ವ್ಯಕ್ತಿಯ ಸ್ಟಿಕ್ಕರ್‌ ಅನ್ನು ಕಾಣಬಹುದಾಗಿದೆ. ಹಾಗಾದ್ರೆ ತಂದೆಯ ದಿನದ ವಿಶೇಷ ಪಾಪಾ ಜಸ್ಟ್‌ ಪಾಪಾ ಸ್ಟಿಕ್ಕರ್‌ ಅನ್ನು ವಾಟ್ಸಾಪ್‌ನಲ್ಲಿ ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ವಿಶ್ವ ಅಪ್ಪಂದಿರ ದಿನಾಚರಣೆಯ ಸ್ಟಿಕ್ಕರ್‌ ಪ್ಯಾಕ್‌ ಡೌನ್‌ಲೋಡ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವಿಶ್ವ ಅಪ್ಪಂದಿರ ದಿನಾಚರಣೆಯ ಸ್ಟಿಕ್ಕರ್‌ ಪ್ಯಾಕ್‌ ಡೌನ್‌ಲೋಡ್‌ ಮಾಡುವುದು ಹೇಗೆ?

ಹಂತ:1 ವೈಯಕ್ತಿಕ ಚಾಟ್ ವಿಂಡೋ ಅಥವಾ ಗ್ರೂಪ್‌ ಚಾಟ್ ವಿಂಡೋವನ್ನು ತೆರೆಯಿರಿ
ಹಂತ:2 ಹೊಸ ಸ್ಟಿಕ್ಕರ್ ವಿಭಾಗವನ್ನು ಬ್ರೌಸ್ ಮಾಡಲು ಸ್ಟಿಕರ್ಸ್ ಮೆನುವಿನಲ್ಲಿ ಪ್ಲಸ್ ಐಕಾನ್ ಟ್ಯಾಪ್ ಮಾಡಿ
ಹಂತ:3 ಸ್ಟಿಕ್ಕರ್ ವಿಭಾಗದಲ್ಲಿ ಇತ್ತೀಚಿನ ಸ್ಟಿಕ್ಕರ್ ಪ್ಯಾಕ್ ಮೇಲ್ಭಾಗದಲ್ಲಿ ಕಾಣಿಸುತ್ತದೆ
ಹಂತ:4 ನೀವು ಡೌನ್‌ಲೋಡ್ ಮಾಡಲು ಬಯಸುವ ಸ್ಟಿಕ್ಕರ್ ಪ್ಯಾಕ್‌ನ ಪಕ್ಕದಲ್ಲಿರುವ ಡೌನ್‌ಲೋಡ್ ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ:5 ಒಮ್ಮೆ ನೀವು ಪ್ಯಾಕ್ ಡೌನ್‌ಲೋಡ್ ಮಾಡಿದ ನಂತರ, ಚೆಕ್ ಗುರುತು ಕಾಣಿಸುತ್ತದೆ
ಹಂತ:6 ಸ್ಟಿಕ್ಕರ್ ಪ್ಯಾಕ್ ಡೌನ್‌ಲೋಡ್ ಮಾಡಿದ ನಂತರ, ಸ್ಟಿಕ್ಕರ್‌ಗಳ ಪಾಪ್ಅಪ್ ಮೇಲೆ ಸ್ವೈಪ್ ಮಾಡಿ
ಹಂತ:7 ಡೌನ್‌ಲೋಡ್ ಸ್ಟಿಕ್ಕರ್ ಪ್ಯಾಕ್ ಅನ್ನು ಹುಡುಕಿ ಮತ್ತು ನಿಮ್ಮ ಚಾಟ್‌ಗೆ ಸ್ಟಿಕ್ಕರ್‌ಗಳನ್ನು ಕಳುಹಿಸಿ.

ಡೌನ್‌ಲೋಡ್

ನೀವು ಡೌನ್‌ಲೋಡ್ ಮಾಡಿದ ನಿರ್ದಿಷ್ಟ ಸ್ಟಿಕ್ಕರ್‌ಗಳನ್ನು ಸಹ ನೀವು ನೋಡಬಹುದು. ಪಠ್ಯ ಅಥವಾ ಎಮೋಜಿಗಳನ್ನು ಬಳಸಿಕೊಂಡು ನೀವು ಸ್ಟಿಕ್ಕರ್‌ಗಳನ್ನು ಹುಡುಕಬಹುದು. ಆದಾಗ್ಯೂ, ವಾಟ್ಸಾಪ್ ಮಾರ್ಗಸೂಚಿಗಳ ಪ್ರಕಾರ ಸ್ಟಿಕ್ಕರ್ ಕ್ರಿಯೆಟರ್ಸ್‌ ಸ್ಟಿಕ್ಕರ್‌ಗಳನ್ನು ಟ್ಯಾಗ್ ಮಾಡದಿದ್ದರೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳಿಂದ ಡೌನ್‌ಲೋಡ್ ಮಾಡಲಾದ ಸ್ಟಿಕ್ಕರ್‌ಗಳನ್ನು ಹುಡುಕಲಾಗುವುದಿಲ್ಲ ಅನ್ನೊದನ್ನ ಗಮನಿಸಬೇಕಾಗುತ್ತದೆ.

Most Read Articles
Best Mobiles in India

English summary
WhatsApp has launched a new sticker pack in India ahead of Father’s Day. The sticker pack is named after a popular Bollywood song which goes by “Papa mere papa".to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X