ಬಳಕೆದಾರರ ಸುರಕ್ಷತೆಗಾಗಿ ಮತ್ತೊಂದು ಹೊಸ ಫೀಚರ್ಸ್‌ ಪರಿಚಯಿಸಿದ ವಾಟ್ಸಾಪ್‌!

|

ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ಒಳಗೊಂಡಿರುವ ಫೀಚರ್ಸ್‌ಗಳು ಬಳಕೆದಾರರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯಕವಾಗಿವೆ. ಬಳಕೆದಾರರ ಅನುಕೂಲಕ್ಕಾಗಿಯೇ ಈ ಫೀಚರ್ಸ್‌ಗಳನ್ನು ವಾಟ್ಸಾಪ್‌ ಪರಿಚಯಿಸಿದೆ. ಈ ಪೈಕಿ ವಾಟ್ಸಾಪ್‌ನ ಕೆಲವು ಫೀಚರ್ಸ್‌ಗಳು ಬೇರೆಯವರು ನಿಮ್ಮ ಕಾರ್ಯ ಚಟುವಟಿಕೆಗಳನ್ನು ನೋಡದಂತೆ ಮಾಡಲು ಅವಕಾಶ ನೀಡಿವೆ. ನಿಮ್ಮ ಆನ್‌ಲೈನ್‌ ಸ್ಟೇಟಸ್‌, ಲಾಸ್ಟ್‌ ಸೀನ್‌, ಸೇರಿದಂತೆ ಹಲವು ವಿಚಾರಗಳನ್ನು ನೀಡು ಹೈಡ್‌ ಮಾಡಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಮೂಲಕ ನೀವು ನಿಮ್ಮನ್ನು ಹಿಂಬಾಲಿಸುವವರನ್ನು ದೂರವಿಡಬಹುದಾಗಿದೆ. ಇದಕ್ಕಾಗಿ ವಾಟ್ಸಾಪ್‌ ಅನೇಕ ಹೊಸ ಮಾದರಿಯ ಫೀಚರ್ಸ್‌ಗಳನ್ನು ಹೊರತರುತ್ತಿದೆ. ಸದ್ಯ ಇದಿಗ ವಾಟ್ಸಾಪ್‌ ಆನ್‌ಲೈನ್‌ ಸ್ಟೇಟಸ್‌ ಹಾಗೂ ಲಾಸ್ಟ್‌ ಸೀನ್‌ ವಿಚಾರದಲ್ಲಿ ಹೊಸ ಕ್ರಮವನ್ನು ಜಾರಿಗೊಳಿಸಿದೆ. ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳು ಟೈಂ ಲಾಗ್‌ಗಳಿಗೆ ಪ್ರವೇಶವನ್ನು ಪಡೆಯುವುದನ್ನು ತಡೆಯಲು ಈ ಹೊಸ ಕ್ರಮ ಜಾರಿಗೊಳಿಸಿದೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಯಾವ ಕ್ರಮಕ್ಕೆ ಮುಂದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಲಾಸ್ಟ್‌ ಸೀನ್‌ ಹಾಗೂ ಆನ್‌ಲೈನ್‌ ಸ್ಟೇಟಸ್‌ ಫೀಚರ್ಸ್‌ನಲ್ಲಿ ಹೊಸ ಮಿತಿಯನ್ನು ಜಾರಿಗೊಳಿಸಿದೆ. ಅದರಂತೆ ನೀವು ಚಾಟ್‌ ಮಾಡದ ನಿಮ್ಮ ಸ್ನೆಹಿತರ ಲಾಸ್ಟ್‌ ಸೀನ್‌ ಹಾಗೂ ಆನ್‌ಲೈನ್‌ ಸ್ಟೇಟಸ್‌ ಅನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಲಾಸ್ಟ್‌ ಸೀನ್‌ ಲಾಗ್‌ ಟೈಂ ಮೂಲಕ ಡೇಟಾ ಹ್ಯಾಕ್‌ ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ. ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳು 'ಆನ್‌ಲೈನ್' ಸ್ಟೇಟಸ್‌ ಟೈಂ ಮತ್ತು 'ಲಾಸ್ಟ್‌ ಸೀನ್‌' ಟೈಂ ಅನ್ನು ಲಾಗ್ ಮಾಡಲು ಅಪ್ಲಿಕೇಶನ್‌ನಿಂದ ಡೇಟಾವನ್ನು ಪ್ರವೇಶಿಸಬಹುದು. ಅಂತಹ ಅಪ್ಲಿಕೇಶನ್‌ಗಳು ನಿಮ್ಮ ಡೇಟಾವನ್ನು ಪ್ರವೇಶಿಸುವುದನ್ನು ತಡೆಯಲು ವಾಟ್ಸಾಪ್‌ ಹೊಸ ಸೆಕ್ಯುರಿಟಿ ಫೀಚರ್ಸ್‌ ಪರಿಚಯಿಸಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಹೊಸ ಕ್ರಮದಿಂದ ನೀವು ಚಾಟ್‌ ಮಾಡದ ವ್ಯಕ್ತಿ ಹಾಗೂ ನೀವು ಇಬ್ಬರೂ ಕೂಡ ಆನ್‌ಲೈನ್‌ನಲ್ಲಿ ಆಕ್ಟಿವ್‌ ಆಗಿದ್ದರೂ ನಿಮಗೆ ಲಾಸ್ಟ್‌ ಸೀನ್‌ ಟೈಂ ಕಾಣುವುದಿಲ್ಲ. ಕೆಲವು ಚಾಟ್ ಹಿಸ್ಟರಿ ಹೊರತು ಬಳಕೆದಾರರು ಅದನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆನ್‌ಲೈನ್ ಸ್ಟೇಟಸ್ ಕೂಡ ಕಾಣಿಸುವುದಿಲ್ಲ. ಅಂದರೆ ವಾಟ್ಸಾಪ್‌ ಜಾರಿಗೊಳಿಸಿರುವ ಹೊಸ ಮಿತಿಯು ಬಳಕೆದಾರರೊಂದಿಗೆ ಆನ್‌ಲೈನ್‌ ಸ್ಟೇಟಸ್‌ ಕಾಣದಂತೆ ಮಾಡಿದೆ. ಇದರಿಂದ ನೀವು ಸಂವಹನ ನಡೆಸುತ್ತಿರುವ ಸ್ನೇಹಿತರು, ಕುಟುಂಬ ಮತ್ತು ವ್ಯಾಪಾರಗಳೊಂದಿಗೆ ಚಾಟ್‌ಗಳಲ್ಲಿ ಯಾವುದೇ ಅಡಚಣೆಯನ್ನು ಉಂಟುಮಾಡುವುದಿಲ್ಲ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಇದು ನಿಮ್ಮ ಮತ್ತು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ನಿಮಗೆ ತಿಳಿದಿರುವ ಅಥವಾ ಹಿಂದೆ ಸಂದೇಶ ಕಳುಹಿಸಿದ ವ್ಯವಹಾರಗಳ ನಡುವೆ ಏನನ್ನೂ ಬದಲಾಯಿಸುವುದಿಲ್ಲ ಎಂದು ಹೇಳಲಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇನ್ನು ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ ಪೈಕಿ ಹಲವು ಫೀಚರ್ಸ್‌ಗಳು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಇನ್ನು ಅನೇಕ ಫೀಚರ್ಸ್‌ಗಳು ಮುಂದಿನ ವರ್ಷ ಬಳಕೆದಾರರಿಗೆ ಲಭ್ಯವಾಗಲಿದೆ. ಅಂತಹ ಫೀಚರ್ಸ್‌ಗಳಲ್ಲಿ ಪ್ರಮುಖವಾದ ಫೀಚರ್ಸ್‌ ಅಂದರೆ ಸಮುದಾಯಗಳು (Communities) ಫೀಚರ್ಸ್‌. ಈ ಆಯ್ಕೆಯು ಗುಂಪುಗಳೊಳಗೆ ಗುಂಪುಗಳನ್ನು ರಚಿಸುವ ಆಯ್ಕೆಯನ್ನು ಒದಗಿಸುತ್ತದೆ ಮತ್ತು ಡಿಸ್ಕಾರ್ಡ್ ಸಮುದಾಯದ ಅಡಿಯಲ್ಲಿ ಜೋಡಿಸಲಾದ ಬಹು ಚಾನೆಲ್‌ಗಳಂತೆಯೇ ಕಾರ್ಯ ನಿರ್ವಹಿಸುತ್ತದೆ. ಉಪ-ಗುಂಪುಗಳನ್ನು ಅಂತ್ಯದಿಂದ ಕೊನೆಯವರೆಗೆ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಸ್ಪಷ್ಟವಾಗಿ, ಆಂಡ್ರಾಯ್ಡ್ ಬೀಟಾ ಅಪ್‌ಡೇಟ್ v2.21.25.17 ಗಾಗಿ ವಾಟ್ಸಾಪ್‌ ನಲ್ಲಿ ವಿವರಗಳನ್ನು ಹುಡುಕಲು ಔಟ್‌ಲೆಟ್ ನಿರ್ವಹಿಸುತ್ತಿದೆ ಎನ್ನಲಾಗಿದೆ.

ಸಂದೇಶ ಪ್ರತಿಕ್ರಿಯೆಗಳು (Message Reactions)

ಸಂದೇಶ ಪ್ರತಿಕ್ರಿಯೆಗಳು (Message Reactions)

ಈ ಆಯ್ಕೆಯಲ್ಲಿ ಬಳಕೆದಾರರು ಪ್ರತಿ ಬಾರಿ ಟೈಪ್ ಮಾಡುವ ಬದಲು ಎಮೋಜಿಯೊಂದಿಗೆ ಸಂದೇಶಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಈ ಫೀಚರ್ಸ್‌ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಲಭ್ಯವಿರುವ ಸಂದೇಶ ಪ್ರತಿಕ್ರಿಯೆ ಆಯ್ಕೆಯಿಂದ ಸೂಚನೆಯನ್ನು ತೆಗೆದುಕೊಳ್ಳುತ್ತದೆ. ಪ್ಲಾಟ್‌ಫಾರ್ಮ್ ಆರಂಭದಲ್ಲಿ ಬಳಕೆದಾರರಿಗೆ ಆಯ್ಕೆ ಮಾಡಲು 6 ಎಮೋಜಿಗಳನ್ನು ತರಲು ನಿರೀಕ್ಷಿಸಲಾಗಿದೆ.

ಆಡಿಯೋ ಮೆಸೆಜ್‌ಗಳಿಗೆ ಪ್ಲೇಬ್ಯಾಕ್ ನಿಯಂತ್ರಣ ಆಯ್ಕೆ

ಆಡಿಯೋ ಮೆಸೆಜ್‌ಗಳಿಗೆ ಪ್ಲೇಬ್ಯಾಕ್ ನಿಯಂತ್ರಣ ಆಯ್ಕೆ

ವಾಟ್ಸಾಪ್‌ ಬಳಕೆದಾರರು ಈ ಆಯ್ಕೆಯಲ್ಲಿ ಆಡಿಯೊ ಮೆಸೆಜ್‌ಗಳ ಪ್ಲೇಬ್ಯಾಕ್ ನಿಯಂತ್ರಣ ಮಾಡಬಹುದು ಎಂದು ವರದಿಯಾಗಿದೆ. ವಾಟ್ಸಾಪ್‌ಗೆ ಬರುವ ಆಡಿಯೊ ಸಂದೇಶಗಳನ್ನು ವೇಗವಾಗಿ ಕೇಳುವ ಆಯ್ಕೆ ಇರಲಿದ್ದು, 1.5X ಮತ್ತು 2X ಪ್ಲೇಬ್ಯಾಕ್ ವೇಗಗಳ ನಡುವೆ ಆಯ್ಕೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಪ್ಲೇಬ್ಯಾಕ್ ವೇಗವನ್ನು ನಿಧಾನಗೊಳಿಸುವ ಆಯ್ಕೆಯನ್ನು ಮುಂದೆ ಸೇರಿಸಬಹುದು.

Best Mobiles in India

English summary
WhatsApp has now introduced some safeguards features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X