ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್ ಸೇರ್ಪಡೆ! ಇದರ ಲಾಭ ಕೇಳಿದ್ರೆ ದಿಲ್ ಖುಷ್ ಆಗ್ತಿರಾ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್ ಪರಿಚಯಿಸಿದೆ. ಇದು ವೈಯುಕ್ತಿಕ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಸಂದೇಶವನ್ನು ವಿಂಡೋದ ಮೇಲ್ಬಾಗಕ್ಕೆ ಪಿನ್ ಮಾಡಲು ಅವಕಾಶ ನೀಡಲಿದೆ. ಈ ಫೀಚರ್ಸ್ ಮೂಲಕ ಬಳಕೆದಾರರು ಟೆಕ್ಸ್ಟ್, ಸಮೀಕ್ಷೆಗಳು ಒಳಗೊಂಡಂತೆ ಎಲ್ಲಾ ರೀತಿಯ ಸಂದೇಶಗಳನ್ನು ಪಿನ್ ಮಾಡಬಹುದು.
ಹೌದು, ವಾಟ್ಸಾಪ್ ಹೊಸದಾಗಿ ಬಳಕೆದಾರರಿಗೆ ಚಾಟ್‌ಗಳನ್ನು ಪಿನ್ ಮಾಡಲು ಅವಕಾಶ ನೀಡಿದೆ. ಅದರಂತೆ ಇನ್ಮುಂದೆ ವಾಟ್ಸಾಪ್ ಬಳಕೆದಾರರು ಎಮೋಜಿಗಳು, ಸ್ಥಳಗಳು ಮತ್ತು ಚಿತ್ರಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಸಂದೇಶಗಳನ್ನು ಪಿನ್ ಮಾಡಲು ಸಾಧ್ಯವಾಗುತ್ತದೆ. ಆದರೆ ಒಂದು ಸಮಯದಲ್ಲಿ ಒಂದು ಸಂದೇಶವನ್ನು ಮಾತ್ರ ಪಿನ್ ಮಾಡಲು ಅನುಮತಿಸುತ್ತದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಪರಿಚಯಿಸಿರುವ ಹೊಸ ಪಿನ್ ಆಯ್ಕೆಯು ಟೆಲಿಗ್ರಾಮ್‌ಗಿಂತ ಭಿನ್ನವಾಗಿದೆ. ಏಕೆಂದರೆ ಟೆಲಿಗ್ರಾಮ್‌ನಲ್ಲಿರುವ ಪಿನ್ ಆಯ್ಕೆಯು ಬಹು ಸಂದೇಶಗಳನ್ನು ಪಿನ್ ಮಾಡಲು ಅವಕಾಶ ನೀಡಿದರೆ ವಾಟ್ಸಾಪ್ ಏಕಕಾಲದಲ್ಲಿ ಒಂದು ಸಂದೇಶವನ್ನು ಮಾತ್ರ ಪಿನ್ ಮಾಡಲು ಅವಕಾಶ ನೀಡಲಿದೆ. ಇನ್ನು ಆಂಡ್ರಾಯ್ಡ್‌ನಲ್ಲಿ ಚಾಟ್ ಅನ್ನು ಪಿನ್ ಮಾಡಲು, ಸಂದೇಶವನ್ನು ಲಾಂಗ್ ಪ್ರೆಸ್ ಮಾಡಬೇಕಾಗುತ್ತದೆ. ನಂತರ ಸ್ಕ್ರೀನ್ ಮೇಲಿನ ಬಲಭಾಗದಲ್ಲಿ ಕಾಣಿಸುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ 'ಪಿನ್' ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ನೀವು ಪಿನ್ ಮಾಡಿದ ಸಂದೇಶವು ಈಗ ವ್ಯಕ್ತಿಯ ಹೆಸರಿನ ಕೆಳಗೆ ಕಾಣಿಸಿಕೊಳ್ಳುತ್ತದೆ. ಇನ್ನು ನೀವು ಸಂದೇಶವನ್ನು 24 ಗಂಟೆಗಳು, 7 ದಿನಗಳು ಅಥವಾ 30 ದಿನಗಳವರೆಗೆ ಪಿನ್ ಮಾಡುವುದಕ್ಕೆ ಕೂಡ ಅವಕಾಶವಿದೆ. ಒಂದು ವೇಳೆ ನೀವು ಸಂದೇಶವನ್ನು ಅನ್‌ಪಿನ್ ಮಾಡಲು ಬಯಸಿದರೆ, ಇದೇ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಸದ್ಯ ವಾಟ್ಸಾಪ್ ಪೂರ್ವನಿಯೋಜಿತವಾಗಿ, 7 ದಿನದ ಆಯ್ಕೆಯನ್ನು ಮಾತ್ರ ನೀಡುತ್ತಿದೆ.

ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶವನ್ನು ಪಿನ್ ಮಾಡಲು ಬಯಸಿದರೆ ಇದಕ್ಕೆ ಕೆಲವು ಸೂಚನೆಗಳನ್ನು ನೀಡಲಾಗಿದೆ. ಅದರಂತೆ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶವನ್ನು ಯಾರೆಲ್ಲಾ ಪಿನ್ ಮಾಡಬಹುದು ಅನ್ನೊದನ್ನ ಗ್ರೂಪ್ ಅಡ್ಮಿನ್‌ಗಳು ನಿಯಂತ್ರಿಸಬಹುದಾಗಿದೆ. ಇನ್ನು ವಾಟ್ಸಾಪ್ ಈ ಹೊಸ ಪಿನ್ ಆಯ್ಕೆಯನ್ನು ತನ್ನ ಚಾನೆಲ್‌ಗಳಿಗೂ ವಿಸ್ತರಿಸಲು ಯೋಜಿಸುತ್ತಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಒಂದು ವೇಳೆ ನಿಮ್ಮ ಡಿವೈಸ್‌ನಲ್ಲಿ ಈ ಫೀಚರ್ಸ್ ಕಾಣದಿದ್ದರೆ ಅದಕ್ಕೆ ಸ್ವಲ್ಪ ಸಮಯ ಕಾಯಬೇಕಾಗಬಹುದು ಎಂದು ಮೆಟಾ ಕಂಪೆನಿ ಹೇಳಿದೆ.
ವಾಟ್ಸಾಪ್ (WhatsApp) ಆಡಿಯೋ ಸಂದೇಶಗಳಿಗಾಗಿ "ವ್ಯೂ ಒನ್ಸ್" ಫೀಚರ್ಸ್ ಅನ್ನು ವಿಸ್ತರಿಸಿದೆ. ಇಂದಿನಿಂದಲೇ ಈ ಹೊಸ ಬದಲಾವಣೆಯು ಜಾಗತಿಕವಾಗಿ ಎಲ್ಲರಿಗೂ ಲಬ್ಯವಾಗಲಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ ವ್ಯೂ ಒನ್ಸ್ ಹೇಗೆ ಕಾರ್ಯನಿರ್ವಹಿಸಲಿದೆಯೋ ಅದೇ ಮಾದರಿಯಲ್ಲಿಯೇ ಆಡಿಯೋ ಸಂದೇಶಗಳಿಗೂ ಕಾರ್ಯನಿರ್ವಹಿಸಲಿದೆ.

ವಾಟ್ಸಾಪ್ ವ್ಯೂ ಒನ್ಸ್ ಫೀಚರ್ಸ್ ಇದೀಗ ಆಡಿಯೋ ಸಂದೇಶದಲ್ಲಿಯೂ ಕಾರ್ಯನಿರ್ವಹಿಸಲಿದೆ. ವ್ಯೂ ಒನ್ಸ್ ಆಯ್ಕೆಯನ್ನು ಆನ್ ಮಾಡಿದ್ದರೆ ನೀವು ಆಡಿಯೋ ಸಂದೇಶವನ್ನು ಕೇಳಿಸಿಕೊಂಡ ನಂತರ ಅದು ಕಣ್ಮರೆಯಾಗಲಿದೆ. ಇದು ಎಲ್ಲಾ ವೈಯಕ್ತಿಕ ಸಂದೇಶಗಳಿಗೂ ಅನ್ವಯಿಸಬಹುದಾಗಿದೆ. ಇನ್ನು ವ್ಯೂ ಒನ್ಸ್ ಆಡಿಯೋ ಸಂದೇಶಗಳು ಕೂಡ ಎಂಡ್ ಟು ಎಂಡ್ ಎನ್‌ಕ್ರಿಪ್ಯನ್ ಹೊಂದಿರಲಿದೆ ಎಂದು ವಾಟ್ಸಾಪ್ ಹೇಳಿದೆ.
ವಾಟ್ಸಾಪ್‌ನಲ್ಲಿ ವ್ಯೂ ಒನ್ಸ್ ಆಡಿಯೋ ಸಂದೇಶವನ್ನು ಸೆಂಡ್ ಮಾಡುವುದು ಹೇಗೆ?
* ಮೊದಲಿಗೆ ವಾಟ್ಸಾಪ್‌ನಲ್ಲಿ ಪರ್ಸನಲ್ ಅಥವಾ ಗ್ರೂಪ್ ಚಾಟ್ ತೆರೆಯಿರಿ
* ನಂತರ ಮೈಕ್ರೊಫೋನ್ ಟ್ಯಾಪ್ ಮಾಡಿ
* ಇದರಲ್ಲಿ ರೆಕಾರ್ಡಿಂಗ್ ಅನ್ನು ಲಾಕ್ ಮಾಡಲು ಮೇಲಕ್ಕೆ ಸ್ವೈಪ್ ಮಾಡಿ
* ನಂತರ ರೆಕಾರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ * ಇದೀಗ ಬಟನ್ ಹಸಿರು ಬಣ್ಣಕ್ಕೆ ತಿರುಗಿದಾಗ, ವ್ಯೂ ಒನ್ಸ್ ಮೋಡ್ ಆನ್ ಆಗಲಿದೆ * ನಂತರ ನೀವು ಸಂದೇಶವನ್ನು ಸೆಂಡ್ ಬಟನ್ ಟ್ಯಾಪ್ ಮಾಡಿ * ಇದೀಗ ನೀವು ಕಳುಹಿಸುವ ಸಂದೇಶವನ್ನು ಸ್ವೀಕರಿಸುವವರು ಆಡಿಯೋ ಸಂದೇಶ ಪ್ಲೆ ಮಾಡಿದ ನಂತರ ಆಟೋಮ್ಯಾಟಿಕ್ ಕಣ್ಮರೆಯಾಗಲಿದೆ.


Click it and Unblock the Notifications








