Home
ಸುದ್ದಿಜಾಲ

WhatsApp: ಸದ್ಯದಲ್ಲೇ ಸೇರಲಿದೆ ಹೊಸ ಆಯ್ಕೆ!..ಫೋಟೋ ಶೇರ್‌ ಮಾಡೋರಿಗೆ ಭಾರಿ ಉಪಯುಕ್ತ!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ (whatsapp) ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಸುದ್ದಿ ಆಗ್ತಾನೇ ಇರುತ್ತೆ. ಪ್ರತಿನಿತ್ಯವೂ ಒಂದಲ್ಲ ಒಂದು ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುವ ಮೂಲಕ ಬಳಕೆದಾರರಿಗೆ ಹೊಸ ಅನುಭವ ನೀಡುತ್ತಾ ಬಂದಿದೆ. ಇದೀಗ ತನ್ನ ವಿಂಡೋಸ್‌ ಬೀಟಾದಲ್ಲಿ ಹೊಸ ಟೂಲ್‌ ಒಂದನ್ನು ಪರಿಚಯಿಸಲು ಮುಂದಾಗಿದೆ.

ಹೌದು, ವಾಟ್ಸಾಪ್‌ ವಿಂಡೋಸ್‌ ಬಿಟಾದಲ್ಲಿ ಡ್ರಾಯಿಂಗ್‌ ಎಡಿಟರ್‌ಗಾಗಿ ಹೊಸ ಕ್ರಾಪ್‌ ಟೂಲ್ ತರಲು ಮುಂದಾಗಿದೆ. ಈ ಟೂಲ್‌ನಿಂದಾಗಿ ಬಳಕೆದಾರರು ವಾಟ್ಸಾಪ್‌ನಲ್ಲಿ ಇಮೇಜ್‌ಗಳನ್ನು ಕ್ರಾಪ್‌ ಮಾಡಲು ಅವಕಾಶ ಸಿಗಲಿದೆ. ನಿಮಗೆ ಬೇಕಾದ ರೀತಿಯಲ್ಲಿ ಇಮೇಜ್‌ಗಳನ್ನು ಎಡಿಟ್‌ ಮಾಡಲು ಸಾದ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಕ್ರಾಪ್‌ ಟೂಲ್‌ ಯಾರಿಗೆಲ್ಲಾ ಲಭ್ಯವಾಗಲಿದೆ? ಇದರಿಂದ ಏನು ಉಪಯೋಗ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

WhatsApp: ಸದ್ಯದಲ್ಲೇ ಸೇರಲಿದೆ ಹೊಸ ಆಯ್ಕೆ!ಫೋಟೋ ಶೇರ್‌ ಮಾಡೋರಿಗೆ ಭಾರಿ ಉಪಯುಕ್ತ

ವಾಟ್ಸಾಪ್‌ ಡ್ರಾಯಿಂಗ್‌ ಎಡಿಟರ್‌ ಆಯ್ಕೆಯನ್ನು ಈಗಾಗಲೇ ಪರಿಚಯಿಸಿದೆ. ಇದೀಗ ಡ್ರಾಯಿಂಗ್‌ ಎಡಿಟರ್‌ನಲ್ಲಿ ಹೊಸದಾಗಿ ಟ್ರಾಪ್‌ ಟೂಲ್‌ ಸೇರಿಸಲು ಮುಂದಾಗಿದೆ. ಈ ಆಯ್ಕೆಯಿಂದ ನೀವು ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ತಮ್ಮ ಇಮೇಜ್‌ಗಳನ್ನು ಬೇಕಾದ ರೀತಿಯಲ್ಲಿ ಕ್ರಾಪ್‌ ಮಾಡಬಹುದು. ಇದರಿಂದ ನೀವು ವಾಟ್ಸಾಪ್‌ ಅಪ್ಲಿಕೇಶನ್‌ ಬಿಟ್ಟು ಇಮೇಜ್‌ ಎಡಿಟ್‌ ಮಾಡಿ ಮತ್ತೆ ವಾಟ್ಸಾಪ್‌ ಅಪ್ಲಿಕೇಶನ್‌ ಒಪನ್‌ ಮಾಡುವ ಸಮಯವನ್ನು ಉಳಿಸಲಿದೆ.

ಅಂದರೆ ಬಳಕೆದಾರರು ತಮ್ಮ ಫೋಟೋಗಳನ್ನು ಶೇರ್‌ ಮಾಡುವ ಮೊದಲು ಕ್ರಾಪ್‌ ಮಾಡಬೇಕಾದರೆ ಬಾಹ್ಯ ಇಮೇಜ್ ಎಡಿಟಿಂಗ್ ಟೂಲ್‌ಗಳನ್ನು ಬಳಸಬೇಕಿತ್ತು. ಆದರೆ ಈ ಹೊಸ ಆಯ್ಕೆಯು ನಿಮಗೆ ಅಪ್ಲಿಕೇಶನ್‌ನಲ್ಲಿಯೇ ಇಮೇಜ್‌ ಕ್ರಾಪ್‌ ಮಾಡಲು ಅವಕಾಶ ನೀಡಲಿದೆ. ಇದಲ್ಲದೆ ಬಳಕೆದಾರರು ತಮ್ಮ ಚಿತ್ರಗಳನ್ನು ಕ್ರಾಪ್ ಮಾಡಲು ವಾಟ್ಸಾಪ್‌ ಇಂಟರ್‌ಫೇಸ್‌ ಅನ್ನು ಬಿಡಬೇಕಾಗಿಲ್ಲ ಎಂದು ವರದಿಯಾಗಿದೆ.

WhatsApp: ಸದ್ಯದಲ್ಲೇ ಸೇರಲಿದೆ ಹೊಸ ಆಯ್ಕೆ!ಫೋಟೋ ಶೇರ್‌ ಮಾಡೋರಿಗೆ ಭಾರಿ ಉಪಯುಕ್ತ

ಸದ್ಯ ವಾಟ್ಸಾಪ್‌ ಡ್ರಾಯಿಂಗ್ ಎಡಿಟರ್‌ಗಾಗಿ ಕ್ರಾಪ್ ಟೂಲ್ ಕೆಲವೇ ಕೆಲ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಇದು ಎಲ್ಲಾ ರೀತಿಯ ಪರೀಕ್ಷೆಗಳ ನಂತರ ಎಲ್ಲರಿಗೂ ಕೂಡ ಲಭ್ಯವಾಗಲಿದೆ ಎಂದು ವರದಿಯಾಗಿದೆ.

ಇನ್ನು ವಾಟ್ಸಾಪ್‌ನ ಇತ್ತೀಚಿನ ವರದಿಯನ್ನು ಗಮನಿಸಿದರೆ ವಾಟ್ಸಾಪ್‌ 2021 ರ ಹೊಸ ಐಟಿ ನಿಯಮಗಳ ಅನ್ವಯ ಏಪ್ರಿಲ್‌ ತಿಂಗಳ ಮಾಸಿಕ ಅನುಸರಣಾ ವರದಿಯನ್ನು ಬಹಿರಂಗಪಡಿಸಿದೆ. ಏಪ್ರಿಲ್ 2023 ರ ಮಾಸಿಕ ಅನುಸರಣೆ ವರದಿಯಲ್ಲಿ ಸೇವಾ ನಿಯಮಗಳನ್ನು ಉಲ್ಲಂಘಿಸಿರುವ ಖಾತೆಗಳನ್ನು ಬ್ಯಾನ್‌ ಮಾಡಿರುವುದಾಗಿ ಹೇಳಿದೆ.

74 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಅಕೌಂಟ್‌ ಬ್ಯಾನ್‌: ವಾಟ್ಸಾಪ್‌ ಏಪ್ರಿಲ್ 1 ಮತ್ತು ಏಪ್ರಿಲ್ 30 ರ ನಡುವೆ ಭಾರತದಲ್ಲಿ 7,452,500 ಅಕೌಂಟ್‌ಗಳನ್ನು ಬ್ಯಾನ್‌ ಮಾಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ ಕುಂದುಕೊರತೆ ಕಾರ್ಯವಿಧಾನಗಳ ಮೂಲಕ ಈ ಕ್ರಮವನ್ನು ತೆಗೆದುಕೊಂಡಿದೆ. ಭಾರತದ ಬಳಕೆದಾರರಿಂದ ಸ್ವೀಕರಿಸುವ ದೂರುಗಳ ಆಧಾರದ ಮೇಲೆ ಖಾತೆಗಳನ್ನು ನಿಷೇದಿಸಿರುವುದಾಗಿ ತನ್ನ ವರದಿಯಲ್ಲಿ ವಿವರಿಸಿದೆ.

ಪೂರ್ವಭಾವಿಯಾಗಿ 25 ಲಕ್ಷ ಖಾತೆಗಳು ಬ್ಯಾನ್‌: ಬಳಕೆದಾರರ ದೂರುಗಳ ಆಧಾರದ ಮೇಲೆ ಮಾತ್ರವಲ್ಲ, ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು ವಾಟ್ಸಾಪ್‌ ಸುಮಾರು 25 ಲಕ್ಷ (2,469,700) ಖಾತೆಗಳನ್ನು ಬ್ಯಾನ್‌ ಮಾಡಿದೆ. ವಾಟ್ಸಾಪ್‌ನಲ್ಲಿ ಬಳಕೆದಾರರು ನಕಲಿ ಕರೆಗಳ ಆಧಾರದ ಮೇಲೆ ಇವುಗಳನ್ನು ಬ್ಯಾನ್‌ ಮಾಡಲಾಗಿದೆ. ಅಲ್ಲದೆ ಐಟಿ ಸಚಿವಾಲಯವೂ ಕೂಡ ಇಂತಹ ಖಾತೆಗಳ ಬಗ್ಗೆ ವಾಟ್ಸಾಪ್‌ಗೆ ನೋಟಿಸ್ ಕಳುಹಿಸುವುದಾಗಿ ಹೇಳಿದೆ.

ವಾಟ್ಸಾಪ್‌ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲು ಕಾರಣಗಳೇನು? 2021ರ ಹೊಸ ಐಟಿ ನಿಯಮಗಳ ಅನ್ವಯ ಈ ಖಾತೆಗಳನ್ನು ನಿಷೇದಿಸಲಾಗಿದೆ. ವಾಟ್ಸಾಪ್‌ ಬಳಕೆದಾರರ ಕುಂದುಕೊರತೆಗಳ ದೂರುಗಳ ಆಧಾರದಲ್ಲಿ ವಾಟ್ಸಾಪ್‌ ಈ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಅದರಂತೆ ಭಾರತದ ದುರುದ್ದೇಶಪೂರಿತ ಅಕೌಂಟ್‌ಗಳನ್ನು ಪ್ರತಿ ತಿಂಗಳು ಬ್ಯಾನ್‌ ಮಾಡುತ್ತಾ ಬಂದಿದೆ.

Best Mobiles in India

English summary
WhatsApp has rolling out a new crop tool in Windows beta!.details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+