ವಾಟ್ಸಾಪ್ ಹೊಸ ಸೇವಾ ನಿಯಮದ ಬಗ್ಗೆ ಸ್ಪಷ್ಟನೆ ನೀಡಿದ ವಾಟ್ಸಾಪ್ ಮುಖಸ್ಥ!
ಪ್ರಸ್ತುತ ವಾಟ್ಸಾಪ್‌ನ ಹೊಸ ಸೇವಾ ನಿಯಮಗಳ ಬಗ್ಗೆ ಭಾರಿ ಆಕ್ರೋಶ ಎದುರಾಗಿದೆ. ಹೊಸ ಸೇವಾ ನಿಯಮಗಳನ್ನ ಒಪ್ಪಿಕೊಳ್ಳಲೇಬೇಕು. ನಿಮ್ಮ ಮಾಹಿತಿಯನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಲಾಗಿತ್ತೋ ಅಮದೇ ವಾಟ್ಸಾಪ್ ಬಳಕೆದಾರರ ಆಕ್ರೋಶಕ್ಕೆ ಗುರಿಯಾಗಿತ್ತು. ಅಲ್ಲದೆ ತನ್ನ ಸೇವಾ ನಿಯಮದ ಬಗ್ಗೆ ಮಾಹಿತಿಯನ್ನು ನೀಡಲು ನೋಟಿಫೀಕೇಶನ್ ಕಳುಹಿಸಿದ ನಂತರ ಸಾಕಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಇದೀಗ ವಾಟ್ಸಾಪ್ ತನ್ನ ನಿಲುವು ಬದಲಿಸಿದೆ. ತನ್ನ ಸೇವಾ ನಿಯಮಗಳು ಬ್ಯುಸಿನೆಸ್ ಅಕೌಂಟ್‌ಗೆ ಮಾತ್ರ ಸೀಮಿತ ಎಂದೆಲ್ಲಾ ಮನವರಿಕೆ ಮಾಡಿಕೊಡುವುದಕ್ಕೆ ಮುಂದಾಗಿದೆ.

ಹೌದು, ವಾಟ್ಸಾಪ್‌ನ ಸೇವಾ ನಿಯಮದ ಬಗ್ಗೆ ಜಗತ್ತಿನ ಎಲ್ಲಾ ಕಡೆ ಅಸಮಾಧಾನ ಎದುರಾಗಿದೆ. ಅದರಲ್ಲೂ ವಿಶ್ವದ ನಂಬರ್ ಒನ್ ಶ್ರೀಮಂತ ಎಲೋನ್ ಮಸ್ಕ್ ಬಹಿರಂಗವಾಗಿಯೇ ಟ್ವಿಟರ್‌ನಲ್ಲಿ ವಾಟ್ಸಾಪ್ ಬದಲು ಸಿಗ್ನಲ್ ಆಪ್ ಬಳಸಿ ಎಂದು ಸಲಹೆ ನೀಡಿದ್ದಾರೆ. ಇಷ್ಟೆಲ್ಲಾ ಆದ ನಂತರ ಹೆಚ್ಚಿನ ಮಂದಿ ವಾಟ್ಸಾಪ್ ಅಕೌಂಟ್ ತೊರೆದು ಸಿಗ್ನಲ್ ಆಪ್ ಕಡೆಗೆ ಗಮನ ಹರಿಸಿದ್ದಾರೆ. ಇದನ್ನು ಮನಗಂಡಿರುವ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ವಾಟ್ಸಾಪ್ ಬಳಕೆದಾರರಿಗೆ ವಾಟ್ಸಾಪ್ ಚಾಟ್ ಗೌಪ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ. ಅಷ್ಟಕ್ಕೂ ವಾಟ್ಸಾಪ್ ಮುಖ್ಯಸ್ಥ ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಅಪ್ಲಿಕೇಶನ್ ಹೊಸ ಗೌಪ್ಯತೆ ನೀತಿಯಲ್ಲಿ ಬಳಕೆದಾರರು ಡೇಟಾವನ್ನು ಫೇಸ್‌ಬುಕ್ ಜೊತೆಗೆ ಹಂಚಿಕೊಳ್ಳಬೇಕೆಂಬ ನಿಯಮವಿದೆ ಇದನ್ನು ಬಳಕೆದಾರರು ವಿರೋದಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ, ವಾಟ್ಸಾಪ್‌ನ ಹೊಸ ನಿಯಮದ ಬಗ್ಗೆ ಸ್ಪಷ್ಟಿಕರಣ ನೀಡಿರುವ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುವ ಎಲ್ಲಾ ಚಾಟ್‌ಗಳು ಸುರಕ್ಷಿತ ಮತ್ತು ಎನ್‌ಕ್ರಿಪ್ಟ್ ಆಗಿವೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಬಳಕೆದಾರರ ಖಾಸಗಿ ಚಾಟ್‌ಗಳನ್ನು ವಾಟ್ಸಾಪ್ ಅಥವಾ ಫೇಸ್‌ಬುಕ್ ನೋಡಲು ಸಾಧ್ಯವೇ ಇಲ್ಲ ಏಕೆಂದರೆ ನಾವಿ ಎಲ್ಲಾ ಚಾಟ್‌ಗಳನ್ನ ಎನ್‌ಕ್ರಿಫ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

‘ವಾಟ್ಸಾಪ್ ಚಾಟ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ'
ನವೀಕರಿಸಿದ ವಾಟ್ಸಾಪ್ ಗೌಪ್ಯತೆ ನೀತಿಯ ಕುರಿತು ಕ್ಯಾಥ್‌ಕಾರ್ಟ್ ಟ್ವಿಟರ್‌ನಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. "ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ, ನಿಮ್ಮ ಖಾಸಗಿ ಚಾಟ್‌ಗಳು ಅಥವಾ ಕರೆಗಳನ್ನು ನಾವು ನೋಡಲಾಗುವುದಿಲ್ಲ ಮತ್ತು ಫೇಸ್‌ಬುಕ್‌ಗೂ ಸಾಧ್ಯವಿಲ್ಲ. ನಾವು ಈ ತಂತ್ರಜ್ಞಾನಕ್ಕೆ ಬದ್ಧರಾಗಿದ್ದೇವೆ ಮತ್ತು ಅದನ್ನು ಜಾಗತಿಕವಾಗಿ ರಕ್ಷಿಸಲು ಬದ್ಧರಾಗಿದ್ದೇವೆ "ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ವಾಟ್ಸಾಪ್‌ನಲ್ಲಿ ವಿನಿಮಯವಾಗುವ ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ ಎಂದು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಬಹಳ ಹಿಂದೆಯೇ ಹೇಳಿದೆ. ಎಲ್ಲರ ಚಾಟ್‌ಗಳನ್ನು ರಕ್ಷಿಸಲಾಗಿದೆ ಮತ್ತು ಅಲ್ಲದೆ ವಾಟ್ಸಾಪ್ ಸಹ ಅವುಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಇನ್ನು ವಾಟ್ಸಾಪ್ ಕಂಪನಿಯು ಗೌಪ್ಯತೆ ನೀತಿಯನ್ನು ಪಾರದರ್ಶಕವಾಗಿ ನವೀಕರಿಸಿದೆ ಎಂದು ಕ್ಯಾಥ್‌ಕಾರ್ಟ್ ವಿವರಿಸಿದ್ದಾರೆ. ಅವರು ಉಲ್ಲೇಖಿಸಿರುವ ಟ್ವೀಟ್‌ನಲ್ಲಿ, "ನಾವು ನಮ್ಮ ನೀತಿಯನ್ನು ಪಾರದರ್ಶಕವಾಗಿರಲು ಮತ್ತು ಐಚ್ಛಿಕ ಜನರಿಂದ ವ್ಯವಹಾರಕ್ಕೆ ಫೀಚರ್ಸ್‌ಗಳನ್ನು ಉತ್ತಮವಾಗಿ ವಿವರಿಸಲು ನವೀಕರಿಸಿದ್ದೇವೆ. ನಾವು ಇದರ ಬಗ್ಗೆ ಕಳೆದ ಅಕ್ಟೋಬರ್‌ನಲ್ಲಿಯೇ ತಿಳಿಸಿದ್ದೇವೆ ಬರೆದಿದ್ದೇವೆ. ಇದು ವಾಟ್ಸಾಪ್‌ನಲ್ಲಿನ ವಾಣಿಜ್ಯ ಮತ್ತು ಜನರಿಗೆ ವ್ಯವಹಾರವನ್ನು ಸಂದೇಶ ಕಳುಹಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. " ಎಂದು ಹೇಳಿದ್ದಾರೆ

ಇದಲ್ಲದೆ ಈ ನವೀಕರಣವು ವ್ಯವಹಾರ ಸಂವಹನವನ್ನು ವಿವರಿಸುತ್ತದೆ ಮತ್ತು ಫೇಸ್‌ಬುಕ್‌ನೊಂದಿಗೆ ವಾಟ್ಸಾಪ್‌ನ ಯಾವುದೇ ಡೇಟಾ ಹಂಚಿಕೆ ಮಾಡುವುದಿಲ್ಲ. ಜನರು ಜಗತ್ತಿನ ಎಲ್ಲೇ ಇದ್ದರೂ ಜನರು ಸ್ನೇಹಿತರು ಅಥವಾ ಕುಟುಂಬದೊಂದಿಗೆ ಹೇಗೆ ಖಾಸಗಿಯಾಗಿ ಸಂವಹನ ನಡೆಸುತ್ತಾರೆ ಎಂಬುದರ ಮೇಲೆ ಇದು ಪರಿಣಾಮ ಬೀರುವುದಿಲ್ಲ.ಅಲ್ಲದೆ ನಾವು ಇತರರೊಂದಿಗೆ ಗೌಪ್ಯತೆ ಕುರಿತು ಸ್ಪರ್ಧೆಯಲ್ಲಿದ್ದೇವೆ, ಜನರು ಹೇಗೆ ಸಂವಹನ ನಡೆಸುತ್ತಾರೆ ಮತ್ತು ಅವರ ಚಾಟ್‌ಗಳನ್ನು ಬೇರೆ ಯಾರೂ ನೋಡುವುದಿಲ್ಲ ಎಂಬ ವಿಶ್ವಾಸದಿಂದ ಜನರು ಆಯ್ಕೆಗಳನ್ನು ಹೊಂದಿರಬೇಕು. ನಾವು ನೀಡುವ ಸೇವೆಯ ಬಗ್ಗೆ ನಮಗೆ ಹೆಮ್ಮೆ ಇದೆ, ಸಾಧ್ಯವಾದಷ್ಟು ಜನರಿಗೆ ಖಾಸಗಿ, ಸುರಕ್ಷಿತ ಸಂವಹನಗಳನ್ನು ಒದಗಿಸಲು ತಂತ್ರಜ್ಞಾನ ಮತ್ತು ಅಭ್ಯಾಸಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಸ್ಪಷ್ಟ ಪಡಿಸಿದ್ದಾರೆ


Click it and Unblock the Notifications








