ಜನಪ್ರಿಯ ವಾಟ್ಸ್​ಆಪ್‌ನಲ್ಲಿ ಕಾಣಿಸಿಕೊಂಡಿತು ಜಾಹಿರಾತು!

|

ವಿಶ್ವದಾದ್ಯಂತ 1.5 ಶತಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸ್​ಆಪ್​ ಇಲ್ಲಿಯವರೆಗೆ ತನ್ನ ಅಪ್ಲಿಕೇಶನ್​ನಲ್ಲಿ ಜಾಹೀರಾತು ಬಿತ್ತರಿಸದೇ ಬಳಕೆ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೀಗ ವಾಟ್ಸ್ಆಪ್‌ನಲ್ಲಿ ಜಾಹಿರಾತು ಆರಂಭವಾಗಿದೆ. ತನ್ನ ಈ ಅಪ್​ಡೇಟ್​ನ್ನು ಪ್ರಾಯೋಗಿಕವಾಗಿ ಈಗಾಗಲೇ ಕೆಲ ಸ್ಮಾರ್ಟ್​ಫೋನ್​ಗಳಲ್ಲಿ ನೀಡಲಾಗಿದ್ದು, ಇದರಿಂದ ಬಳಕೆದಾರರು ಇದರಿಂದ ಸ್ವಲ್ಪ ಕಿರಿ ಕಿರಿ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

 ಜನಪ್ರಿಯ ವಾಟ್ಸ್​ಆಪ್‌ನಲ್ಲಿ ಕಾಣಿಸಿಕೊಂಡಿತು ಜಾಹಿರಾತು!

ಹೌದು, 2018 ರಲ್ಲಿ ವಾಟ್ಸ್​ಆಪ್​ ಕಂಪೆನಿಯು ಅನೇಕ ಫೀಚರ್​ಗಳನ್ನು ಪರಿಚಯಿಸಿತ್ತು. ಅದರಲ್ಲಿ ಮುಖ್ಯವಾಗಿ ಸ್ವೈಪ್ ರಿಪ್ಲೈ, ಗ್ರೂಪ್​ ಕಾಲಿಂಗ್, ಸ್ಟಿಕ್ಕರ್ಸ್​ ಸೇರಿದಂತೆ ಹಲವು ಫೀಚರ್​ಗಳು ಬಳಕೆದಾರರ ಮನಗೆದ್ದಿತ್ತು. ಆದರೆ, ಈ ವರ್ಷದಲ್ಲಿ ವಾಟ್ಸ್​ಆಪ್​ ಪ್ರಸ್ತುತ ಪಡಿಸಲಿರುವ ಆಯ್ಕೆಯಿಂದ ಬಳಕೆದಾರರು ಸ್ವಲ್ಪ ತೊಂದರೆ ಅನುಭವಿಸಲಿದ್ದಾರೆ ಎನ್ನಲಾಗಿದೆ. ವಾಟ್ಸ್​ಆಪ್​ನಲ್ಲಿ ಜಾಹೀರಾತುಗಳು ವೀಡಿಯೊ ರೂಪದಲ್ಲಿದ್ದು ಇದು ಬಳಕೆದಾರರಿಗೆ ಸ್ವಲ್ಪ ಕಿರಿಕಿರಿಯಾಗಿದೆ ಎನ್ನಲಾಗಿದೆ.

ಮೊದಲೇ ಹೇಳಲಾಗಿತ್ತು

ಮೊದಲೇ ಹೇಳಲಾಗಿತ್ತು

ವಾಟ್ಸ್ಆಪ್​ನಲ್ಲಿ ಜಾಹೀರಾತುಗಳು 2019ರಿಂದ ಆರಂಭವಾಗಲಿವೆ ಎಂದು ಈ ವರ್ಷದ ಆರಂಭದಲ್ಲೇ ವಾಲ್​ ಸ್ಟ್ರೀಟ್​ ಜರ್ನಲ್​ ಪ್ರಕಟಿಸಿದ್ದ ವರದಿಯಲ್ಲಿಯೇ ಹೇಳಲಾಗಿತ್ತು. ಇನ್ನು ಕಳೆದ ತಿಂಗಳಷ್ಟೇ WaBetaInfo ಪ್ರಕಟಿಸಿರುವ ವರದಿ ಅನ್ವಯ ವಾಟ್ಸ್‌ಆಪ್ ತನ್ನ​ ಬಳಕೆದಾರರ ಸ್ಟೇಟಸ್​ನಲ್ಲಿ ಜಾಹೀರಾತುಗಳನ್ನು ತೋರಿಸಲಿದೆ ಎಂದು ಹೇಳಿದ್ದನ್ನು ಸಹ ನೀವು ನೋಡಬಹುದು.

ಜಾಹಿರಾತು ಟೆಸ್ಟಿಂಗ್ ಆರಂಭ!

ಜಾಹಿರಾತು ಟೆಸ್ಟಿಂಗ್ ಆರಂಭ!

ಫೇಸ್​ಬುಕ್​ ಇದೇ ವರ್ಷ ಜೂನ್​ನಲ್ಲಿ ಇನ್ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಜಾಹೀರಾತನ್ನು ಆರಂಭಿಸಿತ್ತು. ಇದೇ ರೀತಿ ಈಗ ವಾಟ್ಸ್ಆಪ್ ಮೂಲಕವೂ ಜಾಹಿರಾತು ಟೆಸ್ಟಿಂಗ್​ನ್ನೂ ಅನ್ನು ಈಗಾಗಲೇ ಆರಂಭಿಸಿದೆ. ಲಭ್ಯವಾದ ಮಾಹಿತಿ ಅನ್ವಯ ಇನ್ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಕಾಣಿಸುವ ಜಾಹಿರಾತುಗಂತೆ ವಾಟ್ಸ್ಆಪ್‌ನಲ್ಲಿಯೂ ಜಾಹಿರಾತುಗಳು ಕಾಣಿಸಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.

ಸ್ಟೇಟಸ್‌ನಲ್ಲಿ ಜಾಹಿರಾತು!

ಸ್ಟೇಟಸ್‌ನಲ್ಲಿ ಜಾಹಿರಾತು!

ಇನ್ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಕಾಣಿಸುವಂತೆ ವಾಟ್ಸ್ಆಪ್‌ನ ಸ್ಟೇಟಸ್ ಮೂಲಕ ಮಾತ್ರ ಜಾಹಿರಾತುಗಳನ್ನು ಪ್ರಕಟಿಸಲು ಸಂಸ್ಥೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ಜಾಹೀರಾತುಗಳು ವಿಡಿಯೋ ಹಾಗೂ ಚಿತ್ರದ ರೂಪದಲ್ಲಿ ಇರಲಿವೆ. ಬಳಕೆದಾರರು ಆ ಜಾಹಿರಾತುಗಳನ್ನು ಕ್ಲಿಕ್ ಮಾಡಿದಾಗ ನೇರವಾಗಿ ಜಾಹಿರಾತು ನೀಡಿದ ಕಂಪೆನಿಗಳ ವೆಬ್‌ಸೈಟ್ ತೆರೆದುಕೊಳ್ಳಲಿದೆ.

 ಗ್ರಾಹಕರಿಗಿಲ್ಲ ಹೆಚ್ಚು ಕಿರಿಕಿರಿ!

ಗ್ರಾಹಕರಿಗಿಲ್ಲ ಹೆಚ್ಚು ಕಿರಿಕಿರಿ!

ಉಚಿತವಾಗಿ ಸೇವೆಯನ್ನು ನೀಡುತ್ತಿದ್ದ ವಾಟ್ಸಆಪ್‌ನಲ್ಲಿ ಆದಾಯ ಮಾಡಲು ಮುಂದಾಗಿರುವ ಮಾತೃಸಂಸ್ಥೆ ಫೇಸ್‌ಬುಕ್, ವಾಟ್ಸ್ಆಪ್ ಮೂಲಕ ಪ್ರಕಟಿಸು ಜಾಹಿರಾತುಗಳು ಬಳಕೆದಾರರಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಿದೆ. ವಾಟ್ಸ್ಆಪ್ ಸ್ಟೇಟಸ್ ಬಿಟ್ಟರೆ ಬೇರೆಲ್ಲಿಯೂ ಜಾಹಿರಾತು ನೀಡಿಲ್ಲದಿರುವುದು ಗ್ರಾಹಕರಿಗಿಲ್ಲ ಹೆಚ್ಚು ಕಿರಿಕಿರಿಯಾಗಿಲ್ಲ ಎಂದು ಹೇಳಲಾಗಿದೆ.

ಜನವರಿ 1 ರಿಂದಲೇ ಆರಂಭ?

ಜನವರಿ 1 ರಿಂದಲೇ ಆರಂಭ?

ವಾಟ್ಸ್ಆಪ್ ಬಳಕೆದಾರರ ಸ್ಟೇಟಸ್​ ವಿಭಾಗದಲ್ಲಿ ಜಾಹೀರಾತುಗಳು ಕಾಣಿಸಿಕೊಂಡಿರುವುದು ಖಚಿತವಾದರೂ, ಸದ್ಯ ಜಾಹೀರಾತುಗಳು ಎಲ್ಲಾ ಬಳಕೆದಾರರಿಗೂ ಯಾವಾಗ ಕಾಣಿಸಿಕೊಳ್ಳಲಿವೆ ಎನ್ನುವ ಕುರಿತು ಸ್ಪಷ್ಟಪಡಿಸಿಲ್ಲ. ಆದರೆ, ವಾಟ್ಸ್ಆಪ್ ಮೂಲಗಳು ಬಿಟ್ಟುಕೊಟ್ಟಿರುವ ವದಂತಿಗಳಂತೆ, ಇದೇ ಜನವರಿ ತಿಂಗಳಿನಲ್ಲೇ ಎಲ್ಲಾ ಬಳಕೆದಾರರಿಗೂ ಜಾಹಿರಾತು ಕಾಣಿಸಿಕೊಳ್ಳಲಿವೆ.

Best Mobiles in India

Read more about:
English summary
WhatsApp is currently available across all popular platforms – iOS, Android, PC and Windows Phone – and will soon add advertisements to its Status feature. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X