WhatsApp Status ಹಾಕುವವರಿಗಾಗಿ ಡಬಲ್ ಖುಷಿ ಸುದ್ದಿ
ವಾಟ್ಸಪ್ ಬಳಕೆದಾರರಿಗೆ ಡಬಲ್ ಖುಷಿ ಸುದ್ದಿ. ನೀವೇನಾದರೂ ಹೆಚ್ಚು ಹೆಚ್ಚು WhatsApp Status ಹಾಕುತ್ತಿದ್ರೆ ನಿಮಗಾಗಿ ಬಂದಿದೆ ಹೊಸ ಫೀಚರ್. ಹೌದು, ಮೆಟಾ ಕಂಪನಿಯು ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ WhatsAppನಲ್ಲಿ ಹೊಸ ಫೀಚರ್‌ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದೆ. ಇದೀಗ, ಮತ್ತೊಂದು ಹೊಸ ಫೀಚರ್ ಈ ಪಟ್ಟಿಗೆ ಸೇರಿದೆ. ಹೆಚ್ಚಾಗಿ WhatsApp Status ಹಾಕುವ ಬಳಕೆದಾರರಿಗೆ ವಿಶೇಷವಾದ ಫೀಚರ್ ಅನ್ನು ಪರಿಚಯಿಸಿದೆ. WhatsApp ಬಳಕೆದಾರರು ಯಾವುದೇ ಲಿಂಕ್ ಮಾಡಲಾದ ಮೊಬೈಲ್ ಡಿವೈಸ್‌ಗಳಿಂದ ಸ್ಟೇಟಸ್ ಅಪ್ಡೇಟ್ ಮಾಡಬಹುದು. ವಿಡಿಯೋಗಳು, GIFs, ಮೆಸೇಜ್ ಮತ್ತು ವಾಯ್ಸ್ ಮೆಸೇಜ್‌ಗಳನ್ನು ಆಯ್ಕೆ ಮಾಡಿಕೊಂಡು ಶೇರ್ ಮಾಡಬಹುದು.
ಜಗತ್ತಿನಲ್ಲಿ ಅತೀ ಹೆಚ್ಚು ಜನರು ಬಳಸುತ್ತಿರುವ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಅಂದ್ರೆ ವಾಟ್ಸಪ್. ಇದು ತನ್ನ ಬಳಕೆದಾರರ ಅನುಭವನ್ನು ಮತ್ತಷ್ಟು ಉತ್ತಮಗೊಳಿಸಲು ಒಂದಲ್ಲ ಒಂದು ಹೊಸ ಫೀಚರ್ ಅಥವಾ ಅಪ್ಡೇಟ್ ಬಿಡುಗಡೆ ಮಾಡುತ್ತಿದೆ. ಅದರಂತೆ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಿದೆ. ಇದು WhatsApp Status ಹಾಕುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಏನಿದು ಹೊಸ ಫೀಚರ್? ಇದನ್ನು ಯಾರೆಲ್ಲಾ ಬಳಸಬಹುದು? ಎಂಬಿತ್ಯಾದಿ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ಹೊಸ ಫೀಚರ್ ಅನ್ನು ಯಾರೆಲ್ಲಾ ಬಳಸಬಹುದು?
ಇನ್ಮುಂದೆ ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಮೂಲಕ ನಿಮ್ಮ ವಾಟ್ಸಪ್ ಅಕೌಂಟ್‌ನಲ್ಲಿ ನಿಮ್ಮ WhatsApp Statusಗಳನ್ನು ಪೋಸ್ಟ್ ಮಾಡಬಹುದು. ಇದಕ್ಕೆ ಅವಕಾಶ ನೀಡುವ ಫೀಚರ್ ಅನ್ನು WhatsApp ಪರಿಚಯಿಸಿದೆ. ಇದರಿಂದ ಕೆಲಸದ ಸಮಯದಲ್ಲಿ ಅಗತ್ಯವಿಲ್ಲದೆ ನಿಮ್ಮ ಮೊಬೈಲ್‌ನಲ್ಲಿ ಸಮಯವನ್ನು ಹಾಳು ಮಾಡುವುದು ತಪ್ಪಲಿದೆ. ನೇರವಾಗಿ ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಮೂಲಕ WhatsApp ಸ್ಟೇಟಸ್ ಅಪ್ಡೇಟ್ ಮಾಡಬಹುದು. ಪೋಸ್ಟ್ ಕೂಡ ಮಾಡಬಹುದು.
ಈ ಹೊಸ ಅಪ್ಡೇಟ್ ಈಗಾಗಲೇ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಲಭ್ಯವಿದ್ದು ಪ್ರಸ್ತುತ Apple Mac ಬುಕ್‌ಗಳಿಗೆ ಪರಿಚಯಿಸಲಾಗಿದೆ. ಇದನ್ನು Mac ಆವೃತ್ತಿ 24.11.73 ಇತ್ತೀಚಿನ ಬೀಟಾದಲ್ ಪರಿಚಯಿಸಲಾಗಿದೆ. ನೀವು ಈ ಫೀಚರ್ ಸಹಾಯದಿಂದ WhatsApp Status ಅಪ್ಡೇಟ್‌ನಲ್ಲಿ ವಿಡಿಯೋಗಳು, GIFs, ಮೆಸೇಜ್ ಮತ್ತು ವಾಯ್ಸ್ ಮೆಸೇಜ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು.
ಹೊಸ ಫೀಚರ್‌ನ ಸ್ಕ್ರೀನ್‌ಶಾಟ್ ಲೀಕ್!
WABetaInfo ಹೊಸ ಫಿಚರ್ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ನೀಡಿದೆ. ಸ್ಕ್ರೀನ್‌ಶಾಟ್ ಒಂದನ್ನು ಸಹ ಹಂಚಿಕೊಂಡಿದೆ. ಈ ಫೀಚರ್ ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಇತರ ಬಳಕೆದಾರರಿಗೆ ಇದನ್ನು ಪರಿಚಯಿಸಲಾಗುವುದು. ಇದಲ್ಲದೆ ಇತ್ತೀಚೆಗೆ WhatsApp ಸ್ಟೇಟಸ್‌ನಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಇದರ ಹಿಂದಿನ ಬಳಕೆದಾರರು 30 ಸೆಕೆಂಡುಗಳ ವಾಯ್ಸ್ ಮೆಸೇಜ್ ಪೋಸ್ಟ್ ಮಾಡಬಹುದಾಗಿತ್ತು. ಆದರೀಗ, ಇದನ್ನು ವಿಸ್ತರಿಸಿ 1 ನಿಮಿಷದ ವಾಯ್ಸ್ ಮೆಸೇಜ್ ಪೋಸ್ಟ್ ಮಾಡುವ ಅವಕಾಶವನ್ನು ನೀಡಲಾಗಿದೆ.
WhatsApp ಚಾಟ್‌ಗಾಗಿ ಮತ್ತೊಂದು ಫೀಚರ್
ಇನ್ನೂ WhatsApp ಚಾಟ್‌ಗಾಗಿ ಮತ್ತೊಂದು ಫೀಚರ್ ಅನ್ನು ಪರಿಚಯಿಸಲಾಗಿದೆ. ಹೊಸ ಫೀಚರ್ ಅಡಿಯಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಾಟ್‌ಗಳನ್ನು ಪ್ರತ್ಯೇಕ ವಿಭಾಗದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಫೀಚರ್ ಅನ್ನು ಪರಿಚಯಿಸಿದ ನಂತರ ಬಳಕೆದಾರರು WhatsApp ಚಾಟ್‌ನಲ್ಲಿ ಪ್ರತ್ಯೇಕ ಮೆಚ್ಚಿನ ಚಾಟ್ ಫಿಲ್ಟರ್ ಅನ್ನು ಪಡೆಯಬಹುದು. ಈ ಫೀಚರ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ.
ವರದಿಯ ಪ್ರಕಾರ ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂ ಮೂಲಕ ನೋಂದಾಯಿಸಿದ ಪರೀಕ್ಷಕರಿಗೆ ಇದು ಲಭ್ಯವಿದೆ. ಒಮ್ಮೆ ಇದು ಬೀಟಾದಲ್ಲಿದ್ದರೆ ಈ ಬಳಕೆದಾರರು ಈ ಫೀಚರ್ ಅನ್ನು ನೋಡಲು ಮತ್ತು ಅದನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ ಎಂದು ತಿಳಿದು ಬಂದಿದೆ. ಒಟ್ನಲ್ಲಿ WhatsApp ತನ್ನ ಬಳಕೆದಾರರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಅಪ್ಡೇಟ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಈ ಬಾರಿ ತಂದಿರುವ ಈ ಫೀಚರ್ ನಿಮಗೆ ಡಬಲ್ ಖುಷಿ ನೀಡುವುದು ಪಕ್ಕಾ! ಎನ್ನಲಾಗಿದೆ.


Click it and Unblock the Notifications








