Home
ಸುದ್ದಿಜಾಲ

ಈ ಹೊಸ WhatsApp ಫೀಚರ್ ನೋಡಿದ್ರೆ ಎಷ್ಟು ಖುಷಿ ಪಡ್ತೀರಾ ಗೊತ್ತಾ!

ನಮ್ಮಲ್ಲಿ ಬಹುತೇಕರಿಗೆ ಒಂದು ಸಮಸ್ಯೆ ಇರುತ್ತದೆ. ಇಂಗ್ಲೀಷ್‌ನಲ್ಲಿ ಸಂದೇಶವನ್ನು ಕಳುಹಿಸುವಾಗ ಎಲ್ಲಿ ತಪ್ಪಾದ ಅರ್ಥ ಬರುವಂತೆ ಕಳುಹಿಸುತ್ತೇನೋ ಅಥವಾ ಪದಗಳ ಅಕ್ಷರಗಳು ಎಲ್ಲಿ ತಪ್ಪಾಗುತ್ತದೋ ಎಂದು ಚಿಂತಿಸುತ್ತಿರುತ್ತಾರೆ. ಆದರೆ, ಇನ್ಮುಂದೆ ಈ ಚಿಂತೆ ಬಿಡಿ. ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ WhatsApp ನಲ್ಲಿ ಹೊಸ ಬರವಣಿಗೆ ಸಹಾಯ (Writing Assistant) ವೈಶಿಷ್ಟ್ಯವು ನಿಮಗಾಗಿ ಬಂದಿದೆ. ಈ ವೈಶಿಷ್ಟ್ಯವು ನಿಮ್ಮ ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ ಹೇಳಲು ಸರಿಯಾದ ಪದಗಳನ್ನು ಹುಡುಕುತ್ತದೆ. ಅಂದರೆ, ನಿಮ್ಮ ಬರಹವನ್ನು ಕ್ಷಣಮಾತ್ರದಲ್ಲಿ ಸುಧಾರಿಸಲಿದೆ.!

ಹೌದು, WhatsApp ನಲ್ಲಿ ಹೊಸ AI-ಚಾಲಿತ ವೈಶಿಷ್ಟ್ಯವು ನಿಮ್ಮ ಸಂದೇಶಗಳನ್ನು ಪರಿಷ್ಕರಿಸಲು ಸಹಾಯ ಮಾಡುತ್ತದೆ. ನೀವು ವೈಯಕ್ತಿಕವಾಗಿ ಅಥವಾ ಗ್ರೂಪ್ ಚಾಟ್‌ನಲ್ಲಿ ಸಂದೇಶವನ್ನು ಟೈಪ್ ಮಾಡಲು ಪ್ರಾರಂಭಿಸಿದಾಗ, ಹೊಸದಾಗಿ ಸೇರಿಸಲಾದ ಪೆನ್ಸಿಲ್ ಐಕಾನ್ ಕಾಣಿಸಿಕೊಳ್ಳುತ್ತದೆ. ಅದನ್ನು ಟ್ಯಾಪ್ ಮಾಡಿದಾಗ, ನಿಮ್ಮ ಸಂದೇಶವನ್ನು ಸುಧಾರಿಸಲು ಹಲವಾರು ಸಲಹೆಗಳನ್ನು ಪಡೆಯಬಹುದು. ನೀವು ಆ ಸಲಹೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು ಅಥವಾ ನಿಮಗೆ ಇಷ್ಟವಾಗುವವರೆಗೂ ಅದನ್ನು ಸಂಪಾದಿಸಬಹುದು. ಇದು ನಿಮ್ಮ ಆಲೋಚನೆಗಳನ್ನು ಸುಲಭವಾಗಿ ಬರವಣಿಗೆಗೆ ಇಳಿಸಲು ಸಹಾಯ ಮಾಡುತ್ತದೆ.

ಈ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಅನುಭವದ ಮೇಲೆ ಸಂಪೂರ್ಣ ನಿಯಂತ್ರಣ ನೀಡುತ್ತದೆ. ಬರವಣಿಗೆ ಸಹಾಯವನ್ನು ಬಳಸುವುದು ಐಚ್ಛಿಕ ಮತ್ತು ಪೂರ್ವನಿಯೋಜಿತವಾಗಿ ಆಫ್ ಆಗಿರುತ್ತದೆ. ಆದ್ದರಿಂದ, ನಿಮಗೆ ಬೇಕಾದಾಗ ಮಾತ್ರ ಅದನ್ನು ಬಳಸಬಹುದು. ಪ್ರಸ್ತುತ, ಈ ವೈಶಿಷ್ಟ್ಯವು ಅಮೆರಿಕಾ ಮತ್ತು ಕೆಲವು ಇತರೆ ದೇಶಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರಾರಂಭವಾಗಿದೆ. ಈ ವರ್ಷದ ಕೊನೆಯಲ್ಲಿ, WhatsApp ಇದನ್ನು ಹೆಚ್ಚು ಭಾಷೆಗಳು ಮತ್ತು ಪ್ರದೇಶಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ, ಇದರಿಂದ ಜಗತ್ತಿನಾದ್ಯಂತ ಜನರು ಇದರ ಲಾಭ ಪಡೆಯಬಹುದು ಎಂದು ತಿಳಿದುಬಂದಿದೆ.

ಈ ಹೊಸ WhatsApp ಫೀಚರ್ ನೋಡಿದ್ರೆ ಎಷ್ಟು ಖುಷಿ ಪಡ್ತೀರಾ ಗೊತ್ತಾ!

ಇನ್ನು ಈ ಬರವಣಿಗೆ ಸಹಾಯವು ಸಂಪೂರ್ಣವಾಗಿ ಖಾಸಗಿಯಾಗಿದೆ. ಮೆಟಾ ಅಥವಾ WhatsApp ನಿಮ್ಮ ಸಂದೇಶಗಳನ್ನು ಅಥವಾ AI ನೀಡಿದ ಸಲಹೆಗಳನ್ನು ನೋಡಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ. ಈ ಗೌಪ್ಯತಾ-ರಕ್ಷಣಾ ತಂತ್ರಜ್ಞಾನವನ್ನು ತಪಾಸಣೆ ಮಾಡಲು ಮತ್ತು ಮೌಲ್ಯೀಕರಿಸಲು, ಮೆಟಾ ಭದ್ರತಾ ತಜ್ಞರೊಂದಿಗೆ ಸಹಕರಿಸಿದೆ. ಎನ್‌ಸಿಸಿ ಗ್ರೂಪ್ ಮತ್ತು ಟ್ರಯಲ್ ಆಫ್ ಬಿಟ್ಸ್‌ನ ಸ್ವತಂತ್ರ ಸಂಶೋಧಕರು ಈ ಗೌಪ್ಯತೆ-ರಕ್ಷಣಾ ತಂತ್ರಜ್ಞಾನವನ್ನು ವಿಕಸಿಸಲು ಮೆಟಾ ತೆಗೆದುಕೊಂಡ ಕ್ರಮಗಳ ಕುರಿತು ತಮ್ಮ ಪರಿಶೀಲನಾ ವರದಿಗಳನ್ನು ಪ್ರಕಟಿಸಿವೆ.

ಈ ಹೊಸ ವೈಶಿಷ್ಟ್ಯವು ಸುಗಮ ಮತ್ತು ಹೆಚ್ಚು ಆತ್ಮವಿಶ್ವಾಸದಿಂದ ಮಾಡುತ್ತದೆ. ಇದು ಸಮಯವನ್ನು ಉಳಿಸುವುದಲ್ಲದೆ, ತಮ್ಮ ಸಂದೇಶಗಳು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಧ್ವನಿಸಬೇಕು ಎಂದು ಬಯಸುವ ಲಕ್ಷಾಂತರ ಜನರಿಗೆ ಸಹಕಾರಿಯಾಗಿದೆ. ಅತಿಯಾಗಿ ಯೋಚಿಸುವ ಒತ್ತಡವಿಲ್ಲದೆ, ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಸಂವಹನವನ್ನು ಇನ್ನಷ್ಟು ಸುಲಭಗೊಳಿಸುವ ಮತ್ತು ಆತ್ಮವಿಶ್ವಾಸದಿಂದ ಕೂಡಿದ WhatsApp ಬರವಣಿಗೆ ಸಹಾಯ, ಪ್ರತಿಯೊಬ್ಬರಿಗೂ ಒಂದು ಅತ್ಯುತ್ತಮ ಸಾಧನವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಇಷ್ಡೇ ಅಲ್ಲದೆ, ಈ ಬರವಣಿಗೆ ಸಹಾಯವು ಸಂಪೂರ್ಣವಾಗಿ ಖಾಸಗಿಯಾಗಿರುವುದು ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗೆ WhatsApp ನೀಡಿದ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ. ನಿಮ್ಮ ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ ಹೇಳಲು ಸರಿಯಾದ ಪದಗಳನ್ನು ಹುಡುಕಲು ನೀವು ಕಷ್ಟಪಡುತ್ತಿದ್ದೀರಾ?. ಹಾಗಾದರೆ, ನಿಮ್ಮ ಸಮಸ್ಯೆಗೆ ಇನ್ನು ಮುಕ್ತಿ ದೊರೆಯಲಿದೆ.! ಆದರೆ, ಈ ಹೊಸ ವೈಶಿಷ್ಟ್ಯವು ಇಂಗ್ಲೀಸ್‌ಗೆ ಮಾತ್ರವೇ ಅಥವಾ ಇತರ ಭಾಷೆಗಳಿಗೂ ಲಭ್ಯವಾಗಲಿದೆಯಾ ಎಂಬ ಬಗ್ಗೆ ಪ್ರಸ್ತುತ ನಮಗೆ ಮಾಹಿತಿ ದೊರೆಯಲ್ಲಿ. ಒಟ್ಟಾರೆಯಾಗಿ, ಈ ವಿಷಯದ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
WhatsApp’s new AI Writing Assistant helps you send clearer, mistake-free messages in seconds.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+