Home
ಸುದ್ದಿಜಾಲ

ಸದ್ಯದಲ್ಲೇ ವಾಟ್ಸಾಪ್‌ನ ಪ್ರಮುಖ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ಆಗಲಿದೆ!

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಕಾಲಕಾಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಸೇರಿಸುವುದಕ್ಕೆ ಮುಂದಾಗಿದೆ. ಈ ಹೊಸ ಫೀಚರ್ಸ್‌ ವಾಯ್ಸ್‌ ನೋಟ್‌ಗಳನ್ನು ರೆಕಾರ್ಡಿಂಗ್ ಮತ್ತು ಸೆಂಡ್‌ ಮಾಡುವುದನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ವಾಯ್ಸ್‌ ಮೆಸೇಜ್‌ ಅನ್ನು ವೇಗವಾಗಿ ಕಳುಹಿಸುವುದಕ್ಕೆ ಅನುಮತಿಸುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ ಫೀಚರ್ಸ್‌ನಲ್ಲಿ ಮತ್ತೊಂದು ಬದಲಾವಣೆಗೆ ಮುಂದಾಗಿದೆ. ಇದಕ್ಕಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫೀಚರ್ಸ್‌ ಸೇರ್ಪಡೆ ಮಾಡಲು ಸಿದ್ಧತೆ ನಡೆಸಿದೆ. ಇದರಿಂದ ನೀವು ಯಾವುದೇ ಮಾಹಿತಿಯನ್ನು ಬೇಕಿದ್ದರೂ ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ನಲ್ಲಿ ರೆಕಾರ್ಡ್‌ ಮಾಡಿ ಕಳುಹಿಸಬಹುದು. ಅಲ್ಲದೆ ವಾಯ್ಸ್‌ ನೋಟ್‌ ರೆಕಾರ್ಡಿಂಗ್ ಮಾಡುವಾಗ ಪಾಸ್‌ ಮಾಡುವ ಮತ್ತು ರಿಸ್ಟಾರ್ಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ವಾಯ್ಸ್‌ ಮೆಸೇಜ್‌ ಮಾಡುವಾಗ ಪಾಸ್‌ ಮತ್ತು ಸ್ಟಾರ್ಟ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ನೀವು ವಾಯ್ಸ್‌ ನೋಟ್‌ ರೆಕಾರ್ಡಿಂಗ್‌ ಮಾಡುವಾಗ ಬೇಕೆನಿಸಿದರೆ ವಿರಾಮಗೊಳಿಸುವ ಹಾಗೂ ತದನಂತರ ಅದನ್ನು ಮುದುವರೆಸುವುದಕ್ಕೆ ಸಾಧ್ಯವಾಗಲಿದೆ. ಏಕೆಂದರೆ ನೀವು ವಾಯ್ಸ್‌ ಮೆಸೇಜ್‌ ರೆಕಾರ್ಡ್‌ ಮಾಡುವಾಗ ಕಾರ್ ಹಾರ್ನ್ ಮಾಡುತ್ತಿದ್ದರೆ, ಯಾವುದೇ ಶಬ್ದದ ಅಡಚಣೆಯಾಗುತ್ತಿದ್ದರೆ ರೆಕಾರ್ಡಿಂಗ್‌ ಅನ್ನು ವಿರಾಮಗೊಳಿಸಬಹುದಾಗಿದೆ.

ಈ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ?

ಈ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ?

ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ನಲ್ಲಿ ವಾಯ್ಸ್‌ ನೋಟ್‌ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಲು ಮತ್ತು ನೀವು ಕಳುಹಿಸುವ ಮೊದಲು ಅದನ್ನು ಸ್ಟಾಪ್‌ ಮಾಡಲು ನಿಮಗೆ ಅನುಮತಿಸುತ್ತದೆ. ಬಳಕೆದಾರರು ಬಟನ್ ಅನ್ನು ಹಿಡಿದಿಟ್ಟುಕೊಳ್ಳುವ ಬದಲು ಒಂದು ಕೈಯನ್ನು ಬಳಸದೆಯೇ ರೆಕಾರ್ಡ್ ಬಟನ್ ಅನ್ನು ಲಾಕ್ ಮಾಡಬಹುದು. ಅಲ್ಲದೆ ಯಾವುದೇ ಬಟನ್‌ ಟ್ಯಾಪ್‌ ಮಾಡದೆ ಲಾಂಗ್‌ ಮೆಸೇಜ್‌ಗಳನ್ನು ರೆಕಾರ್ಡ್ ಮಾಡಬಹುದು. ಇದರಿಂದ ವಾಯ್ಸ್‌ ಮೆಸೇಜ್‌ ರೆಕಾರ್ಡಿಂಗ್‌ ಅನ್ನು ವಿರಾಮಗೊಳಿಸಲು ಮತ್ತು ಧ್ವನಿ ರೆಕಾರ್ಡಿಂಗ್‌ಗಳಿಗೆ ಹಿಂತಿರುಗಲು ಈ ಫೀಚರ್ಸ್‌ ಮುಖ್ಯವಾಗಿದೆ. ಪ್ರಸ್ತುತ ಈ ಫೀಚರ್ಸ್‌ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಆದ್ದರಿಂದ ಇದು ನಿಮ್ಮ ವಾಟ್ಸಾಪ್‌ನಲ್ಲಿ ಲಬ್ಯವಾಗುವುದಕ್ಕೆ ಸ್ವಲ್ಪ ಸಮಯ ಹಿಡಿಯಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಶೀಘ್ರದಲ್ಲೇ ಕಾಲ್‌ ಲಿಂಕ್‌ಗಳನ್ನು ಬಳಸಿಕೊಂಡು ವಾಟ್ಸಾಪ್‌ ಕಾಲ್‌ ಸೇರುವುದಕ್ಕೆ ಅವಕಾಶ ನೀಡಲಿದೆ. ವಾಟ್ಸಾಪ್‌ ಕಾಲ್‌ ಹೋಸ್ಟ್‌ ಮಾಡುವವರು ಕಾಲ್ಸ್‌ ಲಿಂಕ್ಸ್‌ ಕ್ರಿಯೆಟ್‌ ಮಾಡುವುದಕ್ಕೆ ಅವಕಾಶ ನೀಡಲಿದ್ದು, ಇದರಿಂದ ನೀವು ವಾಟ್ಸಾಪ್‌ ಕಾಲ್‌ನಲ್ಲಿ ಸೇರುವುದು ಸುಲಭವಾಘಲಿದೆ. ಇನ್ನು ಕಾಲ್‌ ಹೋಸ್ಟ್‌ ಕಾಲ್ಸ್‌ ಲಿಂಕ್‌ ಮೂಲಕ ಯಾರನ್ನು ಬೇಕಾದರೂ ಕಾಲ್‌ಗೆ ಇನ್ವೈಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇದಲ್ಲದೆ ಲಿಂಕ್ ಅನ್ನು ಬಳಸಿಕೊಂಡು ವಾಟ್ಸಾಪ್‌ನಲ್ಲಿ ಕರೆ ಮಾಡಲು ಅವಕಾಶ ದೊರೆಯಲಿದೆ.

ಫೀಚರ್ಸ್‌

ಇನ್ನು ಈ ಹೊಸ ಫೀಚರ್ಸ್‌ ಈಗಾಗಲೇ ಮೆಸೆಂಜರ್ ರೂಮ್‌ಗಳಲ್ಲಿ ಲಭ್ಯವಿರುವ ಫೀಚರ್ಸ್‌ ಮಾದರಿಯಲ್ಲಿಯೇ ಇದ್ದರೂ ಸ್ವಲ್ಪ ಭಿನ್ನವಾಗಿರುತ್ತದೆ. ಮೆಸೆಂಜರ್ ರೂಮ್ ಅನ್ನು ಫೇಸ್‌ಬುಕ್‌ ಅಕೌಂಟ್‌ ಇಲ್ಲದವರೂ ಕೂಡ ಸೇರಬಹುದು. ಆದರೆ ವಾಟ್ಸಾಪ್‌ ಕಾಲ್‌ ಅನ್ನು ವಾಟ್ಸಾಪ್‌ ಅಕೌಂಟ್‌ ಹೊಂದಿರುವ ಬಳಕೆದಾರರು ಮಾತ್ರ ಸೇರುವುದಕ್ಕೆ ಅವಕಾಶವಿದೆ. ಸದ್ಯ ಈ ಫೀಚರ್ಸ್‌ ಇನ್ನು ಅಭಿವೃದ್ಧಿ ಹಂತದಲ್ಲಿರುವುದರಿಂದ, ಪ್ರಸ್ತುತ ಕಾಲ್‌ ಲಿಂಕ್ಸ್‌ ಕ್ರಿಯೆಟ್‌ ಮಾಡಲು ಸಾಧ್ಯವಿಲ್ಲ. ಆದರೆ ಶೀಘ್ರದಲ್ಲೇ ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ಪರಿಚಯಿಸಲಿದೆ ಎಂದು ವರದಿಯಾಗಿದೆ.

Best Mobiles in India

English summary
WhatsApp will soon let Android users pause and resume voice note recordings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+