Home
ಸುದ್ದಿಜಾಲ

ಇನ್ನು ಮುಂದೆ ಮಕ್ಕಳಿಗಿಲ್ಲ ವಾಟ್ಸ್‌ಆಪ್ ಬಳಸುವ ಅವಕಾಶ..! ಯಾಕೆ..?

By Srinidhi

ದಿನ ಕಳೆದಂತೆ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮತ್ತು ಯೂರೋಪ್ ಒಕ್ಕೂಟದಲ್ಲಿನ ನಿಯಮಗಳಲ್ಲಿನ ಬದಲಾವಣೆಯ ನಂತರ ಬಳಕೆದಾರರ ಮೇಲಿನ ಹಿಡಿತವನ್ನು ಸಾಧಿಸಿಲು ಮುಂದಾಗಿದೆ. ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ತನ್ನ ಸೇವೆಯನ್ನು ಪಡೆದುಕೊಳ್ಳಲು ವಯೋಮಿತಿಯನ್ನು ಏರಿಕೆ ಮಾಡಲು ಮುಂದಾಗಿದೆ.

ಇನ್ನು ಮುಂದೆ ಮಕ್ಕಳಿಗಿಲ್ಲ ವಾಟ್ಸ್‌ಆಪ್ ಬಳಸುವ ಅವಕಾಶ..! ಯಾಕೆ..?

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್, ತನ್ನ ಬಳಕೆದಾರರ ಕನಿಷ್ಠ ವಯೋಮಿತಿಯನ್ನು ಏರಿಕೆ ಮಾಡಲು ಮುಂದಾಗಿದೆ. ಈ ಹಿಂದೆ ಯುರೋಪ್ ನಲ್ಲಿ 13 ವಯಸ್ಸಿನವರು ವಾಟ್ಸ್‌ಆಪ್ ಬಳಸಲು ಅನುಮತಿ ಇತ್ತು. ಈಗ ಆ ವಯಸ್ಸನ್ನು 16 ಕ್ಕೆ ಏರಿಸಲು ಮುಂದಾಗಿದೆ.

ಮೇ ನಿಂದ ಜಾರಿ

ಮೇ ನಿಂದ ಜಾರಿ

ಇನ್ನು ಮುಂದೆ ಯುರೋಪಿಯನ್ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್(ಜಿಡಿಪಿಆರ್) ಕಾಯ್ದೆ ಪ್ರಕಾರವೇ ವಾಟ್ಸ್‌ಆಪ್ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಮೇ 25ರಿಂದ ವಯಸ್ಸು 16 ಮೀರಿದವರು ಮಾತ್ರವೇ ವಾಟ್ಸ್‌ಆಪ್ ಬಳಕೆ ಅವಕಾಶ ದೊರೆಯಲಿದೆ. ಅಧಿಕೃತವಾಗಿ ಈ ನಿಯಮ ಅಂದಿನಿಂದಲೇ ಜಾರಿಗೆ ಬರಲಿದೆ.

ವಯಸ್ಸಿನ ಖಾತ್ರಿ:

ವಯಸ್ಸಿನ ಖಾತ್ರಿ:

ವಾಟ್ಸ್‌ಆಪ್ ತನ್ನ ಕಂಪನಿಯ ಡೇಟಾ ಸುರಕ್ಷತೆಯ ನಿಯಮಗಳಲ್ಲಿ ಕೆಲವು ಬದಲಾವಣೆಯನ್ನು ಮಾಡಿದ್ದು, ಹೊಸ ನೀತಿಯನ್ನು ಅದರಲ್ಲಿ ಸೇರಿಸಿದೆ. ಇನ್ನು ಮುಂದೆ ಯುರೋಪಿಯನ್ ಬಳಕೆದಾರರ ವಯಸ್ಸನ್ನು ಖಾತ್ರಿ ಪಡಿಸಿಕೊಂಡ ನಂತರವೇ ಸೇವೆಯನ್ನು ನೀಡುವುದಾಗಿ ವಾಟ್ಸ್‌ಆಪ್ ತಿಳಿಸಿದೆ.

ಭಾರತದಲ್ಲಿ ಬದಲಾವಣೆ ಇಲ್ಲ

ಭಾರತದಲ್ಲಿ ಬದಲಾವಣೆ ಇಲ್ಲ

ಯೂರೋಪ್ ಒಕ್ಕೂಟದಲ್ಲಿ ಮಾತ್ರ ಜಿಡಿಪಿಆರ್ ಸಂಬಂಧಿಸಿದಂತೆ ಈ ಹೊಸ ನಿಯಮವು ಜಾರಿಯಾಗಲಿದ್ದು, ಭಾರತ ಸೇರಿದಂತೆ ಉಳಿದಡೆ ಕನಿಷ್ಟ ವಯಸ್ಸಿನ ಮಿತಿ 13 ಇರಲಿದೆ ಎನ್ನಲಾಗಿದೆ.

Best Mobiles in India

English summary
Whatsapp is banning under-16s from using the service. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+