ಸದ್ಯದಲ್ಲೇ ವಾಟ್ಸಾಪ್‌ ಸೇರಲಿದೆ ಹೊಸ ಫೀಚರ್ಸ್‌! ಏನಿದರ ವಿಶೇಷ?

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಹಂತಹಂತವಾಗಿ ಪರಿಚಯಿಸುತ್ತಲೇ ಬಂದಿದೆ. ಇದೀಗ ಸಣ್ಣ ಮತ್ತು ದೊಡ್ಡ ಪ್ರಮಾಣದ ವ್ಯಾಪಾರಿಗಳಿಗೆ ಅನುಕೂಲವಾಗುವ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ವಾಟ್ಸಾಪ್‌ನ ಈ ಫೀಚರ್ಸ್‌ ಬಳಸಿ ನಿಮಗೆ ಬೇಕಾದ ಉತ್ಪನ್ನಗಳು ಎಲ್ಲಿ ಸಿಗುತ್ತವೆ, ನೀವು ಬಯಸುವ ಸ್ಟೋರ್‌ ಎಲ್ಲಿದೆ ಎಂದು ಸರ್ಚ್‌ ಮಾಡುವುದಕ್ಕೆ ಸಹಾಯ ಮಾಡಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇ-ಕಾಮರ್ಸ್‌ ಸೇವೆಗಳನ್ನು ಹೆಚ್ಚಿಸಲು ಮುಂದಾಗಿದೆ. ಇದಕ್ಕಾಗಿ ವಾಟ್ಸಾಪ್‌ನಲ್ಲಿಯೇ ಅಪ್‌ ಮೂಲಕ ನೀವು ಬಯಸುವ ಸ್ಟೋರ್‌ ಎಲ್ಲಿದೆ ಎಂದು ತಿಳಿಯಲು ಸಹಾಯ ಮಾಡಲಿದೆ. ಇದರಿಂದ ಸಣ್ಣ ಮತ್ತು ದೊಡ್ಡ ಪ್ರಮಾಣದ ವ್ಯಾಪಾರಿಗಳಿಗೆ ಗ್ರಾಹಕರನ್ನು ಸೆಳೆಯುವುದು ಕೂಡ ಸುಲಭವಾಗಲಿದೆ. ಸದ್ಯ ವಾಟ್ಸಾಫ್‌ ಯಾವುದೇ ಮೆಸೇಜ್‌ ಅನ್ನು ಡಿಸ್‌ಪ್ಲೇ ಮಾಡುವುದಿಲ್ಲ. ಆದರಿಂದ ಈ ರೀತಿಯಲ್ಲಿ ಹೊಸ ಮಾರ್ಗ ಹುಡುಕಲು ಮುಂದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ನಿಮ್ಮ ಆಯ್ಕೆಯ ಸ್ಟೋರ್‌ಗಳನ್ನು ಸರ್ಚ್‌ ಮಾಡೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್

ವಾಟ್ಸಾಪ್ ನ ಈ ಹೊಸ ಫೀಚರ್ ಸಣ್ಣ ಮತ್ತು ದೊಡ್ಡ ಪ್ರಮಾಣದ ವ್ಯಾಪಾರಗಳಿಗೆ ಸಹಾಯ ಮಾಡಲಿದೆ.ಈ ಫೀಚರ್ಸ್‌ ಆಪ್‌ನಲ್ಲಿ ನಿರ್ದಿಷ್ಟ ಉತ್ಪನ್ನವನ್ನು ನೀಡುವ ವ್ಯಾಪಾರಿಗಳು ಅಥವಾ ಅಂಗಡಿಗಳನ್ನು ಹುಡುಕುವುದಕ್ಕೆ ಅವಕಾಶ ನೀಡಲಿದೆ. ಇನ್ನು ಈ ಫೀಚರ್ಸ್‌ನ ಬಗ್ಗೆ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್, ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾವು @WhatsApp ನಲ್ಲಿ ಸ್ಥಳೀಯ ವ್ಯಾಪಾರ ಡೈರೆಕ್ಟರಿಯನ್ನು ಪ್ರಾಯೋಗಿಕವಾಗಿ ಆರಂಭಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇದು ನಿಮ್ಮ ನೆರೆಹೊರೆಯ ಕಾಫಿ ಶಾಪ್, ಸೇರಿದಂತೆ ಇತರೆ ಸ್ಥಳೀಯ ವ್ಯವಹಾರಗಳನ್ನು ಸರ್ಚ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಫೀಚರ್ಸ್‌

ಇನ್ನು ಈ ಹೊಸ ಫೀಚರ್ಸ್‌ ಮೂಲಕ ವಾಟ್ಸಾಪ್‌ನಲ್ಲಿ ಜನರು ವಾಣಿಜ್ಯ ಪ್ರಕ್ರಿಯೆಯನ್ನು ಆರಂಭಿಸುವುದಕ್ಕೆ ಸಹಾಯವಾಗಲಿದೆ. ಇದರಿಂದ ಸಣ್ಣ ಪ್ರಮಾಣದ ವ್ಯವಹಾರಗಳು ಬೆಳೆಯಲು ಸಹಾಯ ಮಾಡಲಿದೆ. ಸದ್ಯ ಈ ಫೀಚರ್ಸ್‌ ಬ್ರೇಜಿಲ್‌ನಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ವ್ಯಾಪಾರಗಳು ಆಹಾರ, ಚಿಲ್ಲರೆ ವ್ಯಾಪಾರ ಮತ್ತು ಸ್ಥಳೀಯ ಸೇವೆಗಳಂತಹ ಕೆಲವು ಸಾವೊ ಪಾಲೊ ನೆರೆಹೊರೆಗಳಲ್ಲಿ ಒಳಗೊಂಡಿರುತ್ತವೆ ಎಂದು ವಾಟ್ಸಾಪ್‌ ಬಹಿರಂಗಪಡಿಸಿದೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗೆ ಈ ಫೀಚರ್ಸ್‌ ಅನ್ನು ಪರಿಚಯಿಸಬಹುದಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚಿಗೆ ಹೊಸದಾಗಿ ಚಾಟ್‌ ಬ್ಯಾಕಪ್‌ಗಳಿಗೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅನ್ನು ಪರಿಚಯಿಸಿದೆ. ಇದು ಯಾವುದೇ ಮೂರನೇ ವ್ಯಕ್ತಿ ಚಾಟ್‌ ಬ್ಯಾಕಪ್‌ ಅನ್ನು ನೋಡುವುದಕ್ಕೆ ಸಾಧ್ಯವಿಲ್ಲದಂತೆ ಮಾಡಲಿದೆ. ಇಲ್ಲಿಯವರೆಗೆ, ಚಾಟ್ ಬ್ಯಾಕಪ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ, ಇದೇ ಕಾರಣಕ್ಕೆ ಚಾಟ್‌ ಬ್ಯಾಕಪ್‌ ಬೇರೆಯವರ ಕೈಗೆ ಸಿಗುವುದು ಸುಲಭವಾಗಿತ್ತು. ಇದೀಗ ಚಾಟ್‌ ಬ್ಯಾಕಪ್‌ ಕೂಡ ಎನ್‌ಕ್ರಿಪ್ಶನ್‌ ಸೇರಿಸಿರುವುದರಿಂದ ಚಾಟ್‌ಬ್ಯಾಕಪ್‌ ಕೂಡ ಸೆಕ್ಯುರ್‌ ಆಗಿರಲಿದೆ.

ವಾಟ್ಸಾಪ್

ಇದಲ್ಲದೆ ವಾಟ್ಸಾಪ್ ಈಗಾಗಲೇ ತನ್ನ ಬಳಕೆದಾರರಿಗೆ ಮಲ್ಟಿ-ಡಿವೈಸ್ ಫೀಚರ್ ಪರೀಕ್ಷಿಸಲು ಅವಕಾಶ ನೀಡಿದೆ. ಕಂಪನಿಯು ಈ ವರ್ಷ ಜುಲೈನಲ್ಲಿ ಬೀಟಾ ಪರೀಕ್ಷಕರಿಗೆ ಮಾತ್ರ ಈ ಫಿಚರ್ಸ್‌ ಅನ್ನು ಪರಿಚಯಿಸಿತ್ತು. ಪರೀಕ್ಷಕರು ತಮ್ಮ ಪ್ರತಿಕ್ರಿಯೆಗಳನ್ನು ನೀಡಲು ಈ ಫಿಚರ್ಸ್‌ ಅನ್ನು ಲಭ್ಯವಾಗುವಂತೆ ಮಾಡಲಾಗಿದೆ. ಈ ಫೀಚರ್ಸ್‌ ಅನ್ನು ಪರಿಪೂರ್ಣವಾಗಿ ಘೋಷಿಸುವ ಮೊದಲು ಈ ಫೀಚರ್ಸ್‌ ಬಗ್ಗೆ ಎಲ್ಲಾ ರೀತಿಯ ಪ್ರತಿಕ್ರಿಯೆ ಪಡೆಯಲು ವಾಟ್ಸಾಪ್‌ ಮುಂದಾಗಿದೆ.

Most Read Articles
Best Mobiles in India

English summary
The Facebook-owned messaging app has rolled out the possibility of searching for businesses or stores offering a particular product within the app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X