Home
ಸುದ್ದಿಜಾಲ

ಶೀಘ್ರದಲ್ಲೇ ವಾಟ್ಸಾಪ್‌ ಗ್ರೂಪ್‌ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್‌! ಏನೆಲ್ಲಾ ಲಾಭಗಳು!

ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ಹೊಸ ಶೆಡ್ಯೂಲ್‌ ಗ್ರೂಪ್‌ ಕಾಲ್‌ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ಗ್ರೂಪ್‌ ಕಾಲ್‌ ಟೈಂ ಅನ್ನು ಕೂಡ ಶೆಡ್ಯೂಲ್‌ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ.

ಹೌದು ವಾಟ್ಸಾಪ್‌ ಗ್ರೂಪ್‌ ಕಾಲ್‌ನಲ್ಲಿ ಶೆಡ್ಯೂಲ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಸದ್ಯ ಈ ಫೀಚರ್ಸ್‌ ಪ್ರಸ್ತುತ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ ಎನ್ನಲಾಗಿದೆ. ಅಲ್ಲದೆ ಈ ಫೀಚರ್ಸ್‌ ಆಪಲ್‌ನ ಟೆಸ್ಟ್‌ಫ್ಲೈಟ್‌ ಪ್ರೋಗ್ರಾಂಗೆ ದಾಖಲಾದ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಹಾಗಾದ್ರೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶೀಘ್ರದಲ್ಲೇ ವಾಟ್ಸಾಪ್‌ ಗ್ರೂಪ್‌ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್‌! ಏನೆಲ್ಲಾ ಲಾಭ

ವಾಟ್ಸಾಪ್‌ ಗ್ರೂಪ್‌ ಕಾಲ್‌ ಶೆಡ್ಯೂಲ್‌ ಫೀಚರ್ಸ್‌ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ. ಇದರಿಂದ ಬಳಕೆದಾರರು ತಮ್ಮ ಗ್ರೂಪ್‌ ಕಾಲ್‌ ಅನ್ನು ಶೆಡ್ಯೂಲ್‌ ಮಾಡಲು ಸಾಧ್ಯವಾಗಲಿದೆ. ಇನ್ನು ಈ ಆಯ್ಕೆಯ ಅನ್ನು ವಾಟ್ಸಾಪ್‌ ಗ್ರೂಪ್‌ ಚಾಟ್‌ಗಳಲ್ಲಿ ಕಾಲ್‌ ಬಟನ್‌ ಅನ್ನು ಟ್ಯಾಪ್‌ ಮಾಡಿದಾಗಲೆಲ್ಲಾ ಕಾಣಿಸಲಿದೆ ಎಂದು ವಾಬೇಟಾಇನ್ಫೋ ವರದಿ ಮಾಡಿದೆ. ಸದ್ಯ ಬೀಟಾ ಪ್ರೋಗ್ರಾಂ ಭಾಗವಾಗಿರುವ ಬಳಕೆದಾರರು iOS 23.4.0 ನೊಂದಿಗೆ ವಾಟ್ಸಾಪ್‌ ಅಪ್ಡೇಟ್‌ ಮಾಡಿದರೆ ಈ ಫೀಚರ್ಸ್‌ ಅನ್ನು ಬಳಸಬಹುದಾಗಿದೆ.

ವಾಟ್ಸಾಪ್‌ ಗ್ರೂಪ್‌ ಕಾಲ್‌ ಶೆಡ್ಯೂಲ್‌ ಫೀಚರ್ಸ್‌ ಮೂಲಕ ನೀವು ಗ್ರೂಪ್‌ ಕಾಲ್‌ ಅನ್ನು ಯಾವಾಗ ಪ್ರಾರಂಭಿಸಬೇಕು. ನಿಗದಿತ ಕರೆಗೆ ಹೆಸರನ್ನು ಸೇರಿಸುವುದಕ್ಕೆ ಕೂಡ ಅವಕಾಶ ನೀಡಲಿದೆ. ಗ್ರೂಪ್‌ ಕಾಲ್‌ ಶೆಡ್ಯೂಲ್‌ನಿಂದಾಗಿ ನಿಮ್ಮ ಗ್ರೂಪ್‌ ಕಾಲ್‌ ಟೈಂ ಟೇಬಲ್‌ ಅನ್ನು ಸೆಟ್‌ ಮಾಡಬಹುದಾಗಿದೆ. ಜೊತೆಗೆ ಕಾಲ್‌ಗೆ ಕ್ಯಾಪ್ಶನ್‌ ನೀಡುವ ಮೂಲಕ ಗ್ರೂಪ್‌ ಕಾಲ್‌ ಮಿಟಿಂಗ್‌ಗೆ ಸೇರಲು ಗುಂಪಿನ ಭಾಗವಹಿಸುವವರಿಗೆ ನೆನಪಿಸಬೇಕಾದ ಅನಿವಾರ್ಯತೆಯನ್ನು ನಿವಾರಿಸಲಿದೆ.

ಶೀಘ್ರದಲ್ಲೇ ವಾಟ್ಸಾಪ್‌ ಗ್ರೂಪ್‌ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್‌! ಏನೆಲ್ಲಾ ಲಾಭ

ಇನ್ನು ಗ್ರೂಪ್‌ ಕಾಲ್‌ ಶೆಡ್ಯೂಲ್‌ ಮಾಡಿದ ನಂತರ ಆ ಗ್ರೂಪ್‌ನಲ್ಲಿರುವ ಎಲ್ಲಾ ಸದಸ್ಯರಿಗೆ ನಿಗದಿತ ಸಮಯದಲ್ಲಿ ಗ್ರೂಪ್‌ ಕಾಲ್‌ಗೆ ಸೇರುವುದಕ್ಕೆ ನೋಟಿಫಿಕೇಶನ್‌ ಬರಲಿದೆ. ಇದಲ್ಲದೆ ಈ ಫೀಚರ್ಸ್‌ ವೀಡಿಯೊ ಮತ್ತು ಆಡಿಯೊ ಕರೆಗಳೆರಡರಲ್ಲೂ ಕೂಡ ಕಾರ್ಯನಿರ್ವಹಿಸಲಿದೆ. ಸದ್ಯ ಈ ಫೀಚರ್ಸ್‌ ಐಒಎಸ್‌ ಬೀಟಾ ವರ್ಷನ್‌ನಲ್ಲಿ ಟೆಸ್ಟಿಂಗ್ ಸ್ಟೇಜ್‌ನಲ್ಲಿ ಇದೆಯಾದರೂ ಮುಂದಿನ ದಿನಗಳಲ್ಲಿ ಭವಿಷ್ಯದ ಅಪ್ಡೇಟ್‌ ಮೂಲಕ ಆಂಡ್ರಾಯ್ಡ್‌ನಲ್ಲಿ ಕೂಡ ಲಭ್ಯವಾಗುವ ನಿರೀಕ್ಷೆಯಿದೆ.

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ತನ್ನ ಐಒಎಸ್‌ ಬಳಕೆದಾರರಿಗೆ ಪಿಕ್ಚರ್-ಇನ್-ಪಿಕ್ಚರ್ ಮೋಡ್, ಕ್ಯಾಪ್ಶನ್‌ ಫಾರ್‌ ಡಾಕ್ಯುಮೆಂಟ್ಸ್‌ ಮತ್ತು ಪರ್ಸನಲೈಜ್ಡ್‌ ಅವತಾರ್‌ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಬಳಕೆದಾರರಿಗೆ ಮಲ್ಟಿಟಾಸ್ಕ್ ಮಾಡಲು ಅಂದರೆ ವೀಡಿಯೊ ಕಾಲ್‌ನಲ್ಲಿರುವಾಗಲೇ ಇತರೆ ಅಪ್ಲಿಕೇಶನ್‌ಗಳನ್ನು ಬಳಸುವುದಕ್ಕೆ ಅವಕಾಶ ನೀಡಲಿದೆ.

ಶೀಘ್ರದಲ್ಲೇ ವಾಟ್ಸಾಪ್‌ ಗ್ರೂಪ್‌ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್‌! ಏನೆಲ್ಲಾ ಲಾಭ

ಇನ್ನು ಕ್ಯಾಪ್ಶನ್‌ ಫಾರ್‌ ಡಾಕ್ಯುಮೆಂಟ್‌ ಫೀಚರ್ಸ್‌ ನೀವು ಸೆಂಡ್‌ ಮಾಡಲು ಬಯಸುವ ಫೈಲ್‌ಗಳಿಗೆ ಕ್ಯಾಪ್ಶನ್‌ ಸೇರ್ಪಡೆ ಮಾಡಲು ಅನುಮತಿಸಲಿದೆ. ಇದರೊಂದಿಗೆ ಲಾಂಗ್‌ ಗ್ರೂಪ್‌ ಸಬ್ಜೆಕ್ಟ್‌ ಮತ್ತು ವಿವರಣೆಗಳಿಗೆ ಬೆಂಬಲವನ್ನು ಸಹ ನೀಡುವ ಫೀಚರ್ಸ್‌ ಸೇರ್ಪಡೆ ಮಾಡಿದೆ. ಇದು ನಿಮ್ಮ ವಾಟ್ಸಾಪ್‌ ಗ್ರೂಪ್‌ನ ಮೂಲ ಉದ್ದೇಶ ಏನು ಅನ್ನೊದನ್ನ ಎಲ್ಲಾ ಬಳಕೆದಾರರಿಗೆ ಸುಲಭವಾಗಿ ವಿವರಿಸಲು ಅನುವು ಮಾಡಿಕೊಡಲಿದೆ. ಇದರೊಂದಿಗೆ ಪರ್ಸನಲೈಜ್ಡ್‌ ಅವತಾರ್‌ ಫೀಚರ್ಸ್‌ ಮೂಲಕ ವಾಟ್ಸಾಪ್‌ನಲ್ಲಿ ಸ್ಟಿಕ್ಕರ್‌ಗಳು ಮತ್ತು ಪ್ರೊಫೈಲ್ ಫೋಟೋಗಳಾಗಿ ಬಳಸುವುದಕ್ಕೆ ಕೂಡ ಅವಕಾಶ ನೀಡಿದೆ.

ಇದಲ್ಲದೆ ವಾಟ್ಸಾಪ್‌ ಶೀಘ್ರದಲ್ಲೇ ಎಡಿಟ್‌ ಸೆಂಡ್‌ ಮೆಸೇಜ್‌ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಈಗಾಗಲೇ ಸೆಂಡ್‌ ಮಾಡಿರುವ ಮೆಸೇಜ್‌ ಅನ್ನು ಎಡಿಟ್‌ ಮಾಡಲು ಅವಕಾಶ ನೀಡಲಿದೆ. ಆದರೆ ನೀವು ಮೆಸೇಜ್‌ ಅನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಎಡಿಟ್ ಮಾಡಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ.

Best Mobiles in India

English summary
WhatsApp is developing a new 'Schedule group call' feature to allow users plan their team call beforehand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+