Home
ಸುದ್ದಿಜಾಲ

ಡಿಸೆಂಬರ್ 31 ರಿಂದ ವಾಟ್ಸ್ ಆಪ್ ಕೆಲಸ ಮಾಡುವುದಿಲ್ಲ!

By Gizbot Bureau

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಇತ್ತೀಚೆಗೆ ವಿಂಡೋಸ್ ಫೋನ್ ಗಳಲ್ಲಿ ಡಿಸೆಂಬರ್ 31,2019 ರಿಂದ ಬೆಂಬಲ ನೀಡುವುದನ್ನು ನಿಲ್ಲಿಸುತ್ತದೆ ಎಂದು ಪ್ರಕಟಿಸಲಾಗಿದೆ. ಅಂದರೆ ವಿಂಡೋಸ್ ಫೋನ್ ಬಳಕೆದಾರರು 2020 ರಿಂದ ವಾಟ್ಸ್ ಆಪ್ ಬಳಕೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಡಿಸೆಂಬರ್ 31 ರಿಂದ ವಾಟ್ಸ್ ಆಪ್ ಕೆಲಸ ಮಾಡುವುದಿಲ್ಲ!

2016 ರಲ್ಲಿ ವಾಟ್ಸ್ ಆಪ್ ವಿಂಡೋಸ್ 7 ಗೆ ಬೆಂಬಲ ನೀಡುವುದನ್ನು ನಿಲ್ಲಿಸಿತ್ತು. ಈ ನೂತನ ನಿರ್ಧಾರದಿಂದ ಮೈಕ್ರೋಸಾಫ್ಟ್ ನ ನಿರ್ಧಾರದೊಂದಿಗೆ ಆಪರೇಟಿಂಗ್ ಸಿಸ್ಟಮ್ ಗೆ ಬೆಂಬಲ ನೀಡುವುದನ್ನು ನಿಲ್ಲಿಸುವ ನಿರ್ಧಾರವನ್ನು ನಾವು ಗಮನಿಸಬಹುದಾಗಿದೆ.

ಬ್ಲಾಗ್ ಪೋಸ್ಟ್ ನಲ್ಲಿ ಮಾಹಿತಿ:

ಬ್ಲಾಗ್ ಪೋಸ್ಟ್ ನಲ್ಲಿ ಮಾಹಿತಿ:

ವಾಟ್ಸ್ ಆಪ್ ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ವಿಂಡೋಸ್ ಡಿವೈಸ್ ಗಳಲ್ಲಿ ಕೆಲವು ಸಾಮಾಜಿಕ ಮೆಸೇಜಿಂಗ್ ಆಪ್ ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ ಎಂಬ ವಾರ್ನಿಂಗ್ ನ್ನೂ ಕೂಡ ಹೇಳಿದೆ. ಯಾಕೆಂದರೆ ನಾವು ಆ ಪ್ಲ್ಯಾಟ್ ಫಾರ್ಮ್ ಗಳಿಗಾಗಿ ನಿರಂತರವಾಗಿ ಅಭಿವೃದ್ಧಿಯನ್ನು ಮಾಡುತ್ತಿಲ್ಲ ಹಾಗಾಗಿ ಕೆಲವು ಫೀಚರ್ ಗಳು ಯಾವುದೇ ಸಮಯದಲ್ಲಿ ಬೇಕಿದ್ದರೂ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಬಹುದು ಎಂದು ವಾಟ್ಸ್ ಆಪ್ ತಿಳಿಸಿದೆ.

ಪ್ರಶ್ನೊತ್ತರಗಳ ಪುಟ:

ಪ್ರಶ್ನೊತ್ತರಗಳ ಪುಟ:

ತನ್ನ ಎಫ್ಎಕ್ಯೂ ಪೇಜ್ ಅಥವಾ ಪ್ರಶ್ನೋತ್ತರಗಳ ಪುಟವನ್ನೂ ಕೂಡ ಇದು ಅಪ್ ಡೇಟ್ ಮಾಡಿದೆ. ವಾಟ್ಸ್ ಆಪ್ ಯಾವೆಲ್ಲ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಮತ್ತು ಹೊಸ ಅಕೌಂಟ್ ಸೃಷ್ಟಿಮಾಡುವುದಕ್ಕೆ ಅಥವಾ ಹಳೆಯ ಅಕೌಂಟ್ ನ್ನು ಅಪ್ ಡೇಟ್ ಮಾಡುವುದಕ್ಕೆ ಯಾವೆಲ್ಲಾ ಆಪರೇಟಿಂಗ್ ಸಿಸ್ಟಮ್ ನಲ್ಲಿ ಸಾಧ್ಯವಾಗುವುದಿಲ್ಲ ಎಂಬುದನ್ನು ವಾಟ್ಸ್ ಆಪ್ ನಮೂದಿಸಿದೆ.

ಯಾವಾಗ ಅಂತ್ಯ:

ಯಾವಾಗ ಅಂತ್ಯ:

ಇದರಲ್ಲಿ ಆಂಡ್ರಾಯ್ಡ್ ವರ್ಷನ್ 2.3.7 ಮತ್ತು ಅದಕ್ಕಿಂತ ಹಳೆಯದು ಫೆಬ್ರವರಿ 1,2020 ಮತ್ತು ವಿಂಡೋಸ್ ಫೋನ್ ಆಪರೇಟಿಂಗ್ ಸಿಸ್ಟಮ್ ಡಿಸೆಂಬರ್ 1,2019 ಎಂದು ಬರೆಯಲಾಗಿದೆ.

ಸಂಬಂಧಪಟ್ಟ ಸುದ್ದಿ:

ಸಂಬಂಧಪಟ್ಟ ಸುದ್ದಿ:

ಇದಕ್ಕೆ ಸಂಬಂಧಿಸಿದ ಸುದ್ದಿಯೊಂದರಲ್ಲಿ ಫೇಸ್ ಬುಕ್ ಎಫ್8 ವಾರ್ಷಿಕ ಡೆವಲಪರ್ಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದು ಬ್ಯುಸಿನೆಸ್ ಗಾಗಿ ವಾಟ್ಸ್ ಆಪ್ ಅಭಿವೃದ್ಧಿಯನ್ನು ಹೇಗೆ ಸಾಧಿಸುವುದು ಎಂಬ ಬಗ್ಗೆ ಹೇಳಿದೆ ಮತ್ತು ಬ್ಯುಸಿನೆಸ್ ಕ್ಷೇತ್ರದಲ್ಲಿ ಚಾಟಿಂಗ್ ಮಾಡುವಾಗಿನ ಅನುಭವವನ್ನು ಹೇಗೆ ಅಭಿವೃದ್ಧಿಗೊಳಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿಗಳನ್ನು ನೀಡಿದೆ. ವಾಟ್ಸ್ ಆಪ್ ನಿಂದಲೇ ನೇರವಾಗಿ ಶಾಪಿಂಗ್ ಮಾಡುವ ಅವಕಾಶ ಲಭ್ಯವಾಗುವುದರಲ್ಲಿ ಆಶ್ಚರ್ಯವಿಲ್ಲ ಅದಕ್ಕಾಗಿ ನಾವು ಸ್ವಲ್ಪ ಕಾಯಬೇಕು.ವಾಟ್ಸ್ ಆಪ್ ಚಾಟ್ ನ ಒಳಗೆ ಫೇಸ್ ಬುಕ್ ಇದೀಗ ಪ್ರೊಡಕ್ಟ್ ಕೆಟಲಾಗ್ ನ್ನು ಬ್ಯುಸಿನೆಸ್ ಗಾಗಿ ಸೇರಿಸಲಿದೆ.

ಹೊಸ ಫೀಚರ್:

ಹೊಸ ಫೀಚರ್:

ಈ ಹೊಸ ಫೀಚರ್ ನಿಂದಾಗಿ ವಾಟ್ಸ್ ಆಪ್ ಬಳಕೆದಾರರು ವಾಟ್ಸ್ ಆಪ್ ನಲ್ಲಿ ಚಾಟಿಂಗ್ ಮಾಡುತ್ತಲೇ ಬ್ಯುಸಿನೆಸ್ ಕೆಟಲಾಗ್ ನ್ನು ವೀಕ್ಷಿಸುವುದಕ್ಕೆ ಸಹಾಯವಾಗುತ್ತದೆ. ಈ ಕೆಟಲಾಗ್ ಗಳ ಸಹಾಯದಿಂದ ಬ್ಯುಸಿನೆಸ್ ನ ಪ್ರೊಡಕ್ಟ್ ಗಳನ್ನು ಜನರಿಗೆ ವಾಟ್ಸ್ ಆಪ್ ನ ಒಳಗೆಯೇ ತೋರಿಸಬಹುದು ಮತ್ತು ಅದನ್ನು ಜನರು ಕೂಡ ಸುಲಭದಲ್ಲಿ ಗುರುತಿಸಬಹುದು ಎಂದು ಫೇಸ್ ಬುಕ್ ತಿಳಿಸಿದೆ.

ವರ್ಷಾಂತ್ಯದಲ್ಲಿ ಇಂಟಿಗ್ರೇಟ್ ಆಗಲಿರುವ ಫೀಚರ್:

ವರ್ಷಾಂತ್ಯದಲ್ಲಿ ಇಂಟಿಗ್ರೇಟ್ ಆಗಲಿರುವ ಫೀಚರ್:

ಈ ವರ್ಷದ ಅಂತ್ಯದಲ್ಲಿ ಈ ಫೀಚರ್ ಲಭ್ಯವಾಗಲಿದ್ದು ಹೇಗೆ ಫೇಸ್ ಬುಕ್ ಒಳಗೆ ಈ ವೈಶಿಷ್ಟ್ಯತೆ ಇಂಟಿಗ್ರೇಟ್ ಆಗಲಿದೆ ಎಂಬುದು ಕುತೂಹಲದ ವಿಷಯವಾಗಿದೆ.

Best Mobiles in India

English summary
WhatsApp is ending support for this operating system on December 31
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+