Home
ಸುದ್ದಿಜಾಲ

WhatsApp ಬಳಕೆದಾರರಿಗೆ ಬಿಗ್ ಶಾಕ್: ಇನ್ಮುಂದೆ ಜಾಹೀರಾತು ಕಾಣಿಸಲಿದೆ!

ಮೆಟಾ-ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp, ಹಲವಾರು ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದು, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳನ್ನು ಪರಿಚಯಿಸುವುದಾಗಿ ಘೋಷಿಸಿದೆ. WhatsApp ನಲ್ಲಿ ಹೊಸದಾಗಿ ಪರಿಚಯಿಸುತ್ತಿರುವ ಚಾನೆಲ್ ಚಂದಾದಾರಿಕೆ, ಜಾಹಿರಾತು ಮಾಡಿದ ಚಾನಲ್‌ಗಳನ್ನು ಒಳಗೊಂಡಿದೆ. ಈ ಜಾಹೀರಾತುಗಳು ಕೇವಲ 'ಅಪ್‌ಡೇಟ್‌ಗಳು' ಟ್ಯಾಬ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ, ಮತ್ತು ವೈಯಕ್ತಿಕ ಚಾಟ್‌ಗಳಲ್ಲಿ ಅಥವಾ ಕರೆಗಳಲ್ಲಿ ಯಾವುದೇ ಜಾಹೀರಾತುಗಳು ಇರಲಾರದು ಎಂದು WhatsApp ತಿಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಕೆಳಕಂಡಂತಿದೆ.

WhatsApp ನಲ್ಲಿ ಹೊಸದಾಗಿ ಪರಿಚಯಿಸಲಾಗುತ್ತಿರುವ ಚಾನೆಲ್ ಚಂದಾದಾರಿಕೆಯು, ಚಾನಲ್ ಮೂಲಕ ವ್ಯವಹಾರಗಳನ್ನು ಬೆಳೆಯಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಈ ಹೊಸ ವೈಶಿಷ್ಟ್ಯವು ಅಪ್ಲಿಕೇಶನ್‌ನ 'ಅಪ್‌ಡೇಟ್‌ಗಳು' ಟ್ಯಾಬ್‌ನಲ್ಲಿ ಗೋಚರಿಸುತ್ತದೆ ಮತ್ತು ಜಾಹೀರಾತುಗಳೊಂದಿಗೆ ಚಾನೆಲ್ ಚಂದಾದಾರಿಕೆ ಮತ್ತು ಪ್ರಚಾರ ಮಾಡಿದ ಚಾನೆಲ್‌ಗಳನ್ನು ಒಳಗೊಂಡಿದೆ. ಈ ಎಲ್ಲಾ ನವೀಕರಣಗಳು ಸಂಸ್ಥೆಗಳು ಮತ್ತು ವ್ಯವಹಾರಗಳಿಗೆ WhatsApp ನಲ್ಲಿ ಬೆಳೆಯಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ ಎಂದು ತಿಳಿಸಲಾಗಿದೆ. ಆದರೆ, ಇದು ನೇರವಾಗಿ ಜಾಹಿರಾತು ಪ್ರಚಾರವಾಗಿದೆ.

WhatsApp ಪರಿಚಯಿಸುತ್ತಿರುವ ಚಂದಾದಾರಿಕೆಯ ಈ ಹೊಸ ವೈಶಿಷ್ಟ್ಯವು, ಬಳಕೆದಾರರಿಗೆ ತಮ್ಮ ನೆಚ್ಚಿನ ಚಾನೆಲ್‌ಗಳಿಗೆ ಮಾಸಿಕ ಶುಲ್ಕವನ್ನು ಪಾವತಿಸುವ ಮೂಲಕ ಬೆಂಬಲಿಸಲು ಮತ್ತು ವಿಶೇಷ ಅಪ್‌ಡೇಟ್‌ಗಳನ್ನು ಸ್ವೀಕರಿಸಲು ಅವಕಾಶ ನೀಡುತ್ತದೆ. ಇದು ಕಂಟೆಂಟ್ ಕ್ರಿಯೇಟರ್‌ಗಳಿಗೆ ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಮ್ಮ ಕೆಲಸಕ್ಕೆ ಹಣ ಗಳಿಸಲು ಹೊಸ ಮಾರ್ಗವನ್ನು ಒದಗಿಸುತ್ತದೆ. ಜೊತೆಗೆ, ಪ್ರಚಾರ ಮಾಡಿದ ಚಾನೆಲ್‌ಗಳು ಬಳಕೆದಾರರಿಗೆ ಹೊಸ ಚಾನೆಲ್‌ಗಳನ್ನು ಹುಡುಕಲು ಸಹಾಯ ಮಾಡುತ್ತವೆ. ಇದರಿಂದ ಅಪ್‌ಡೇಟ್ ಬಳಸುವವರು ಪ್ರಚಾರ ಮಾಡುವ ಚಾನಲ್‌ಗಳನ್ನು ನೋಡಬೇಕಾಗುತ್ತದೆ.

2018 ರಿಂದಲೂ WhatsApp ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳನ್ನು ತರುವ ಬಗ್ಗೆ ಚರ್ಚಿಸುತ್ತಿತ್ತು. ಕಂಪನಿಯ ಅಧಿಕಾರಿಗಳು, ಜಾಹೀರಾತುಗಳು ವ್ಯವಹಾರಗಳಿಗೆ ತಮ್ಮ ಗ್ರಾಹಕರನ್ನು ತಲುಪಲು ಒಂದು ಪ್ರಾಥಮಿಕ ಹಣಗಳಿಸುವ ವಿಧಾನವಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಕಂಪನಿಯ ಪ್ರಕಾರ, ಸ್ಟೇಟಸ್ ಅಥವಾ ಚಾನೆಲ್‌ಗಳಲ್ಲಿನ ಜಾಹೀರಾತುಗಳನ್ನು ವೈಯಕ್ತೀಕರಿಸಲು ಸೀಮಿತ ಮಾಹಿತಿಯನ್ನು ಬಳಸಲಾಗುತ್ತದೆ. ಇದು ಬಳಕೆದಾರರ ದೇಶ, ನಗರ, ಭಾಷೆ, ಅವರು ಅನುಸರಿಸುವ ಚಾನೆಲ್‌ಗಳು ಮತ್ತು ಜಾಹೀರಾತುಗಳೊಂದಿಗೆ ಅವರ ಸಂವಹನ ಅಭ್ಯಾಸದಂತಹ ಡೇಟಾವನ್ನು ಒಳಗೊಂಡಿರುತ್ತದೆ.

WhatsApp ಬಳಕೆದಾರರಿಗೆ ಬಿಗ್ ಶಾಕ್: ಇನ್ಮುಂದೆ ಜಾಹೀರಾತು ಕಾಣಿಸಲಿದೆ!

ಆದಾಗ್ಯೂ, WhatsApp ಸಂಸ್ಥೆಯು ತನ್ನ ಬಳಕೆದಾರರ ಗೌಪ್ಯತೆಗೆ ಬದ್ಧವಾಗಿದೆ ಎಂದು ಒತ್ತಿ ಹೇಳಿದೆ. ಪ್ರಮುಖವಾಗಿ, ಕಂಪನಿಯು ಬಳಕೆದಾರರ ಫೋನ್ ಸಂಖ್ಯೆಗಳನ್ನು ಜಾಹೀರಾತುದಾರರಿಗೆ ಎಂದಿಗೂ ಮಾರಾಟ ಮಾಡುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ. ಇದಲ್ಲದೆ, ಜಾಹೀರಾತುಗಳನ್ನು ವೈಯಕ್ತೀಕರಿಸಲು ಬಳಕೆದಾರರ ವೈಯಕ್ತಿಕ ಸಂದೇಶಗಳು, ಕರೆಗಳು ಅಥವಾ ಗುಂಪು ಚಾಟ್‌ಗಳನ್ನು ಬಳಸಲಾಗುವುದಿಲ್ಲ. ಇದು ಬಳಕೆದಾರರ ಡೇಟಾದ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ WhatsApp ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ. ಈ ವಿಷಯದಲ್ಲಿ ಕಂಪೆನಿಯು ರಾಜಿಯಾಗಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಜಾಹೀರಾತುಗಳ ಸೇರ್ಪಡೆಯು WhatsApp ಕಂಪೆನಿಯು ತನ್ನ ತನ್ನ ಹಣಗಳಿಸುವ ವಿಧಾನಗಳನ್ನು ವಿಸ್ತರಿಸಲು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ವ್ಯಾಪಾರ ಮತ್ತು ವಿಷಯ ರಚನೆಕಾರರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಒಂದು ಹೆಜ್ಜೆಯಾಗಿದೆ. ಈ ಬದಲಾವಣೆಗಳು ಬಳಕೆದಾರರ ಅನುಭವದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಾದು ನೋಡಬೇಕು. ಏಕೆಂದರೆ, ಇಲ್ಲಿವರೆಗೂ ಜಾಹಿರಾತು ಇಲ್ಲ ಏಕೈಕ ಜನಪ್ರಿಯ ಅಪ್ಲಿಕೇಷನ್ ಇದಾಗಿತ್ತು ಎನ್ನಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಮತ್ತು ಟೆಕ್ ಸುದ್ದಿಗಳನ್ನು ತಿಳಿಯಲು ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.

Best Mobiles in India

English summary
WhatsApp is now introducing advertising, but it will be restricted to the Status tab.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+