ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಉಪಯುಕ್ತ ಪ್ರೈವೆಸಿ ಫೀಚರ್ಸ್‌!

|

ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಅಲ್ಲದೆ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಜೊತೆಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಐಒಎಸ್‌ ಬಳಕೆದಾರರಿಗಾಗಿ ಹೊಸ ಪ್ರೈವೆಸಿ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದು ಲಾಸ್ಟ್‌ ಸೀನ್‌ ಸ್ಟೇಟಸ್‌ ಅನ್ನು ಹೈಡ್‌ ಮಾಡಲು ಅವಕಾಶ ನೀಡಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಐಒಎಸ್‌ ಬಳಕೆದಾರರಿಗೆ ಹೊಸ ಪ್ರೈವೆಸಿ ಆಯ್ಕೆಯನ್ನು ಸೇರಿಸುತ್ತಿದೆ. ಇದು ನಿರ್ದಿಷ್ಟ ಸಂಪರ್ಕಗಳಿಂದ "ಲಾಸ್ಟ್‌ ಸೀನ್‌" ಸ್ಟೇಟಸ್‌ ಹೈಡ್‌ ಮಾಡಲು ಅನುಮತಿಸಲಿದೆ. ಈ ಫೀಚರ್ಸ್‌ ಈಗಾಗಲೇ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಇನ್ನು ಈ ಫೀಚರ್ಸ ಅನ್ನು ಈಗ ಇತ್ತೀಚಿನ iOS ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಿದವರು ಈ ಫೀಚರ್ಸ್‌ ಅನ್ನು ಬಳಸಲು ಸಾಧ್ಯವಾಗಲಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಐಒಎಸ್‌ ಬಳಕೆದಾರರಿಗೆ ನಿರ್ಧಿಷ್ಟ ಸಂಪರ್ಕಗಳಿಗೆ ಲಾಸ್ಟ್‌ಸೀನ್‌ ಹೈಡ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದು ಕೆಲವು ಜನರಿಂದ ತಮ್ಮ "ಲಾಸ್ಟ್‌ ಸೀನ್‌" ಅನ್ನು ಹೈಡ್‌ ಮಾಡಲು ಬಯಸುವವರಿಗೆ ಇದು ಉಪಯುಕ್ತ ಫೀಚರ್ಸ್‌ ಆಗಿದೆ. ನೀವು ನಿಮ್ಮ ಲಾಸ್ಟ್‌ ಸೀನ್‌ ಯಾರು ನೋಡಬಾರದು ಅಂತಾ ಬಯಸುತ್ತೀರೋ ಅಂತಹವರನ್ನು ನೀವು ಹೈಡ್‌ ಮಾಡಬಹುದಾಗಿದೆ. ಪ್ರಸ್ತುತ, ವಾಟ್ಸಾಪ್‌ ನಿಮ್ಮ ಸಂಪರ್ಕಗಳಿಂದ ಲಾಸ್ಟ್ ಸೀನ್ ಅನ್ನು ಹೈಡ್‌ ಮಾಡಲು ಕೇವಲ ಮೂರು ಆಯ್ಕೆಗಳನ್ನು ಮಾತ್ರ ನೀಡುತ್ತಿದೆ. ಈ ಎಲ್ಲಾ ಆಯ್ಕೆಗಳು ಸ್ವಯಂ ವಿವರಣಾತ್ಮಕವಾಗಿವೆ.

ಫೋನ್‌

ಇದರಲ್ಲಿ ಮೊದಲನೆಯ ಆಯ್ಕೆ ಎವೆರಿಒನ್‌ ಆಗಿದೆ. ಇದರರ್ಥ ನಿಮ್ಮ ಲಾಸ್ಟ್‌ ಸೀನ್‌ ಅನ್ನು ಎಲ್ಲರೂ ಕೂಡ ನೋಡಬಹುದಾಗಿದೆ. ಎರಡನೆಯದು ಮೈ ಕಂಟ್ಯಾಕ್ಟ್ಸ್‌ , ಇದನ್ನು ನೀವು ಆಯ್ಕೆ ಮಾಡಿದರೆ ನಿಮ್ಮ ಫೋನ್‌ ಬುಕ್‌ನಲ್ಲಿ ಲಭ್ಯವಿರುವ ಕಂಟ್ಯಾಕ್ಟ್‌ಗಳು ಮಾತ್ರ ನಿಮ್ಮ ಲಾಸ್ಟ್‌ ಸೀನ್‌ ನೋಡುವುದಕ್ಕೆ ಸಾಧ್ಯವಾಗಲಿದೆ. ಇನ್ನು ಮೂರನೇಯ ಆಯ್ಕೆ ನೋಬಡಿ, ಇದು ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್‌ ಯಾರಿಗೂ ಕಾಣದಂತೆ ಮಾಡಲು ಬಯಸಿದರೆ ಇದು ನಿಮಗೆ ಅನುಕೂಲವಾಗಲಿದೆ.

ವಾಟ್ಸಾಪ್‌

ಇದೀಗ ವಾಟ್ಸಾಪ್‌ ಈ ಮೂರು ಆಯ್ಕೆಗಳ ಜೊತೆಗೆ ಮತ್ತೊಂದು ಹೊಸ ಆಯ್ಕೆಯನ್ನು ಪರೀಕ್ಷಿಸುತ್ತಿದೆ. ಈ ಆಯ್ಕೆಯು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ನಿಮ್ಮ ಲಾಸ್ಟ್‌ ಸೀನ್‌ ಹೈಡ್‌ ಮಾಡಲು ಅವಕಾಶ ನೀಡಲಿದೆ. ಸದ್ಯ ಈ ಫೀಚರ್ಸ್‌ ಇನ್ನು ಕೂಡ ಪರೀಕ್ಷಾ ಹಂತದಲ್ಲಿದೆ. ಬೀಟಾ ಬಳಕೆದಾರರು ಮಾತ್ರ ಇದನ್ನು ಬಳಸುವುದಕ್ಕೆ ಪ್ರಯತ್ನಿಸಬಹುದಾಗಿದೆ. ಈ ಫೀಚರ್ಸ್‌ ಎಲ್ಲರಿಗೂ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಾಟ್ಸಾಪ್‌

ಇದಲ್ಲದೆ, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಫೈಲ್ ಶೇರ್‌ ಗಾತ್ರವನ್ನು ಹೆಚ್ಚಿಸುವುದಕ್ಕೆ ಕೂಡ ಮುಂದಾಗಿದೆ. ಅದರಂತೆ ಶೀಘ್ರದಲ್ಲೇ ಬಳಕೆದಾರರು 2GB ವರೆಗೆ ಫೈಲ್‌ಗಳನ್ನು ಶೇರ್‌ ಮಾಡಲು ಸಾಧ್ಯವಾಗಲಿದೆ ಎಂದು ವಾಟ್ಸಾಪ್‌ ಹೇಳಿದೆ. ಪ್ರಸ್ತುತ, ವೀಡಿಯೊಗಳು, ಧ್ವನಿ ಸಂದೇಶಗಳು ಮತ್ತು ಫೋಟೋಗಳಿಗಾಗಿ ಗರಿಷ್ಠ ಫೈಲ್ ಹಂಚಿಕೆ ಗಾತ್ರವು 16MB ಗಿಂತ ಹೆಚ್ಚಿಲ್ಲ. ಡಾಕ್ಯುಮೆಂಟ್‌ಗಳಿಗಾಗಿ, 100MB ಗಾತ್ರದ ಫೈಲ್‌ಗಳನ್ನು ವಿನಿಮಯ ಮಾಡಿಕೊಳ್ಳಲು ವಾಟ್ಸಾಪ್‌ನಲ್ಲಿ ಅವಕಾಶವಿದೆ. ಮುಂದಿನ ದಿನಗಳಲ್ಲಿ 2GB ವರೆಗೆ ಫೈಲ್‌ ಶೇರ್‌ ಸೈಜ್‌ ಜಾಸ್ತಿ ಮಾಡಿದರೆ ಸುಲಭವಾಗಿ ಫೈಲ್‌ಗಳನ್ನು ವಾಟ್ಸಾಪ್‌ನಲ್ಲಿ ಶೇರ್‌ ಮಾಡಬಹುದಾಗಿದೆ.

Best Mobiles in India

English summary
WhatsApp is adding a new privacy option, which will allow people to hide the “Last Seen” status from specific contacts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X