Home
ಸುದ್ದಿಜಾಲ

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಕ್ವಿಕ್‌ ರಿಯಾಕ್ಷನ್‌ ಫೀಚರ್ಸ್‌!

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಅನೇಕ ಫಿಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಕ್ವಿಕ್‌ ರಿಯಾಕ್ಷನ್‌ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದು ವಾಟ್ಸಾಪ್‌ ಸ್ಟೇಟಸ್‌ ಅಪ್ಡೇಟ್‌ ಅನ್ನು ವೀಕ್ಷಿಸುವಾಗ ಬಳಕೆದಾರರಿಗೆ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ. ಈ ಮಾದರಿಯ ಫೀಚರ್ಸ್‌ ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಮತ್ತು ಮೆಸೆಂಜರ್‌ನಲ್ಲಿ ಲಭ್ಯವಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕ್ವಿಕ್‌ ರಿಯಾಕ್ಷನ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಸ್ಟೇಟಸ್‌ ಅಪ್ಡೇಟ್‌ ನೋಡುವಾಗಲೂ ಕೂಡ ಎಮೋಜಿ ರಿಯಾಕ್ಷನ್‌ ನೀಡಲು ಸಾಧ್ಯವಾಗಲಿದೆ. ಇನ್ನು ಈ ರಿಯಾಕ್ಷನ್‌ ಆಯ್ಕೆಯು ಎಂಟು ಎಮೋಟಿಕಾನ್‌ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗಿದೆ. ಇದು ಬಳಕೆದಾರರಿಗೆ ವೈಯಕ್ತಿಕ ಎಮೋಜಿಯನ್ನು ಸಂದೇಶವಾಗಿ ಕಳುಹಿಸದೆಯೇ ಸ್ಟೇಟಸ್‌ ಅಪ್ಡೇಟ್‌ ಕಡೆಗೆ ಭಾವನೆಗಳನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಕ್ವಿಕ್‌ ರಿಯಾಕ್ಷನ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಎಂಟು ಎಮೋಜಿಗಳನ್ನು ರಿಯಾಕ್ಷನ್‌ ಆಗಿ ಬಳಸಬಹುದಾಗಿದೆ. ಇವುಗಳಲ್ಲಿ ಹೃದಯದ ಕಣ್ಣುಗಳಿಂದ ನಗುತ್ತಿರುವ ಮುಖ, ಸಂತೋಷದ ಕಣ್ಣೀರಿನ ಮುಖ, ತೆರೆದ ಬಾಯಿಯ ಮುಖ, ಅಳುವ ಮುಖ, ಮಡಚಿ ಕೈಗಳನ್ನು ಹೊಂದಿರುವ ವ್ಯಕ್ತಿ, ಚಪ್ಪಾಳೆ, ಪಾರ್ಟಿ ಪಾಪ್ಪರ್ ಮತ್ತು ನೂರು ಅಂಕಗಳ ಎಮೋಜಿಯನ್ನು ಕಾಣಬಹುದಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಕ್ವಿಕ್ ರಿಯಾಕ್ಷನ್‌ಗಳಲ್ಲಿ ಬಳಕೆದಾರರು ಕಸ್ಟಮೈಸ್ ಮಾಡಲು ಅಥವಾ ಎಮೋಜಿಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದಾಗ್ಯೂ, ಈ ವರದಿಯು ಈ ಫೀಚರ್ಸ್‌ ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಲಾಗಿದೆ. ಆದರೆ ಈ ಫೀಚರ್ಸ್‌ ಭವಿಷ್ಯದ ಹೊಸ ಅಪ್‌ಡೇಟ್‌ನಲ್ಲಿ ಲಭ್ಯವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಸ್ಟೇಟಸ್ ಅಥವಾ ಸ್ಟೋರಿ ಅಪ್‌ಡೇಟ್‌ಗಳಿಗೆ ಕ್ವಿಕ್‌ ರಿಯಾಕ್ಷನ್‌ ನೀಡುವ ಫೀಚರ್ಸ್‌ ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್‌ನಲ್ಲಿ ಲಭ್ಯವಿದೆ.

ಫೇಸ್‌ಬುಕ್

ಇನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಕಥೆಗಳಲ್ಲಿ ಪೋಸ್ಟ್ ಮಾಡಲಾದ ಕೆಲವು ವಿಷಯಗಳ ಬಗ್ಗೆ ಹೇಗೆ ಭಾವಿಸುತ್ತಾರೆ ಎಂಬುದನ್ನು ತೋರಿಸಲು ಈ ಫೀಚರ್ಸ್‌ ಬಳಕೆದಾರರಿಗೆ ಅನುಮತಿಸುತ್ತದೆ. ಈ ಫೀಚರ್ಸ್‌ ಅನ್ನು ಆಯ್ಕೆ ಮಾಡಿದ ನಂತರ, ಆಯ್ಕೆಮಾಡಿದ ರಿಯಾಕ್ಷನೊಂದಿಗೆ ಅನಿಮೇಷನ್ ಸ್ಕ್ರಿನ್‌ ಮೇಲೆ ಗೋಚರಿಸುತ್ತದೆ. ಅಲ್ಲದೆ ನೀವು ಸ್ಟೋರಿಗೆ ರಿಯಾಕ್ಷನ್‌ ನೀಡಿದ್ದೀರಿ ಎಂದು ಸೂಚಿಸುವ ಸಂದೇಶವನ್ನು ಕೂಡ ಬಳಕೆದಾರರು ಸ್ವೀಕರಿಸಲಿದ್ದಾರೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಶೀಘ್ರದಲ್ಲೇ, ಬಳಕೆದಾರರು 2 GB ವರೆಗಿನ ಫೈಲ್‌ಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸಲಿದೆ. ಪ್ರಸ್ತುತ ವಾಟ್ಸಾಪ್‌ ಬಳಕೆದಾರರು ತಮ್ಮ ಸ್ನೇಹಿತರಿಗೆ 100 MB ಫೈಲ್‌ಗಳನ್ನು ಕಳುಹಿಸಲು ಅನುಮತಿಸುತ್ತದೆ. ಈ ಫೀಚರ್‌ ಅನ್ನು ಹೊರತಂದ ನಂತರ, ಬಳಕೆದಾರರು ಅಂತಿಮವಾಗಿ ತಮ್ಮ ಸಂಪರ್ಕಗಳೊಂದಿಗೆ ದೊಡ್ಡ ಫೈಲ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ವಾಟ್ಸಾಪ್‌

ಇನ್ನು ಒಂದೇ ಖಾತೆಗೆ ಹೆಚ್ಚಿನ ಸಾಧನಗಳನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ನೀಡುವ ಪಾವತಿಸಿದ ವೈಶಿಷ್ಟ್ಯವನ್ನು ವಾಟ್ಸಾಪ್‌ ಪರೀಕ್ಷಿಸುತ್ತಿದೆ. ಸದ್ಯ ಬಳಕೆದಾರರಿಗೆ ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಅನ್ನು ಜೋಡಿಸಲು ಅನುಮತಿಸುತ್ತದೆ. ವಾಟ್ಸಾಪ್‌ ಬಳಕೆದಾರರಿಗೆ ಒಂದು ಸಮಯದಲ್ಲಿ ಒಂದು ಸ್ಮಾರ್ಟ್‌ಫೋನ್ ಅನ್ನು ಮಾತ್ರ ಕನೆಕ್ಟ್‌ ಮಾಡಲು ಅನುಮತಿಸುತ್ತದೆ.

ವಾಟ್ಸಾಪ್‌

Wabetainfo ಪ್ರಕಾರ, ವಾಟ್ಸಾಪ್‌ ವಿಶೇಷವಾಗಿ ವಾಟ್ಸಾಪ್‌ ಬಿಸಿನೆಸ್‌ ಬಳಕೆದಾರರಿಗೆ ಹೊಸ ಚಂದಾದಾರಿಕೆ ಯೋಜನೆಯಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ. ಇದು ಲಿಂಕ್ಡ್‌ಇನ್ ಸಾಧನ ವಿಭಾಗಕ್ಕೆ ಎಲ್ಲಾ-ಹೊಸ ಇಂಟರ್ಫೇಸ್ ಅನ್ನು ರಚಿಸುತ್ತಿದೆ ಎಂದು ವರದಿಯಾಗಿದೆ. ವಾಟ್ಸಾಪ್‌ ಈ ಪರಿಷ್ಕರಿಸಿದ ಇಂಟರ್‌ಫೇಸ್‌ನಲ್ಲಿ ಬಹು-ಸಾಧನಗಳಿಗೆ ಸಂಪೂರ್ಣವಾಗಿ ವಿಭಿನ್ನವಾದ ವಿವರಣೆಯನ್ನು ಬಳಸುತ್ತದೆ.

Best Mobiles in India

English summary
whatsapp is reportedly working on a Quick Reactions feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+