Home
ಸುದ್ದಿಜಾಲ

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಕುತೂಹಲಕಾರಿ ಫೀಚರ್ಸ್‌!

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಬಳಕೆದಾರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಕಾಲಕ್ಕೆ ತಕ್ಕಂತೆ ಹಂತಹಂತವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಬಳಕೆದಾರರು ತಮ್ಮ ಕ್ಲೌಡ್ ಚಾಟ್ ಬ್ಯಾಕಪ್‌ಗಳನ್ನು ಪಾಸ್‌ವರ್ಡ್-ಪ್ರೊಟೆಕ್ಷನ್‌ ಮತ್ತು ಎನ್‌ಕ್ರಿಪ್ಟ್ ಮಾಡಲು ಅನುವು ಮಾಡಿಕೊಡುವ ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಕ್ಲೌಡ್ ಚಾಟ್ ಬ್ಯಾಕಪ್‌ಗಳಿಗೆ ಪಾಸ್‌ವರ್ಡ್-ಪ್ರೊಟೆಕ್ಷನ್ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಫೇಸ್‌ಬುಕ್‌ ಒಡೆತನದ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್‌ಗಳನ್ನು ಮಾತ್ರ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾಗುತ್ತಿತ್ತು.ಆದರೆ ಚಾಟ್ ಬ್ಯಾಕಪ್‌ಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಮಾಡಲಾಗಿರಲಿಲ್ಲ. ಇದೀಗ ಈ ಹೊಸ ಪ್ರಯತ್ನಕ್ಕೆ ವಾಟ್ಸಾಪ್‌ ಮುಂದಾಗಿದೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್‌ ಚಾಟ್‌ ಬ್ಯಾಕ್‌ಪ್‌ಗಳಿಗೆ ಪಾಸ್‌ವರ್ಡ್‌ ಪ್ರೊಟೆಕ್ಷನ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ರೊಟೆಕ್ಷನ್‌

ವಾಟ್ಸಾಪ್‌ ಕ್ಲೌಡ್ ಚಾಟ್ ಬ್ಯಾಕಪ್‌ಗಳನ್ನು ಪಾಸ್‌ವರ್ಡ್-ಪ್ರೊಟೆಕ್ಷನ್‌ ಮತ್ತು ಎನ್‌ಕ್ರಿಪ್ಟ್ ಮಾಡಲು ಅನುವು ಮಾಡಿಕೊಡುವ ಹೊಸ ಫೀಚರ್ಸ್ ಪರಿಚಯಿಸಲಿದೆ. ಈ ಫೀಚರ್ಸ್‌ ಅನ್ನು WABetaInfo ಗುರುತಿಸಿದೆ. ಈ ಫೀಚರ್ಸ್‌ ಕುರಿತಾದ ಸ್ಕ್ರೀನ್‌ಶಾಟ್‌ಗಳು ಚಾಟ್ ಬ್ಯಾಕಪ್ ಎನ್‌ಕ್ರಿಪ್ಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಸ್ಕ್ರೀನ್‌ಶಾಟ್‌ನಲ್ಲಿ ನಿಮ್ಮ ಐಕ್ಲೌಡ್ ಡ್ರೈವ್ ಬ್ಯಾಕಪ್‌ಗೆ ಅನಧಿಕೃತ ಪ್ರವೇಶವನ್ನು ತಡೆಯಲು, ನೀವು ಪಾಸ್‌ವರ್ಡ್ ಅನ್ನು ಹೊಂದಿಸಬಹುದು ಇದು ಭವಿಷ್ಯದ ಬ್ಯಾಕಪ್‌ಗಳನ್ನು ಎನ್‌ಕ್ರಿಪ್ಟ್ ಮಾಡಲು ಬಳಸಲಾಗುತ್ತದೆ ಎಂದು ಬರೆಯಲಾಗಿದೆ. ನೀವು ಬ್ಯಾಕಪ್‌ನಿಂದ ರಿ ಸ್ಟೋರ್‌ ಮಾಡಲು ಈ ಪಾಸ್‌ವರ್ಡ್ ಅಗತ್ಯವಿದೆ ಎನ್ನಲಾಗಿದೆ.

ಪಾಸ್‌ವರ್ಡ್

ಇನ್ನು ಬಳಕೆದಾರರು ಕನಿಷ್ಠ ಎಂಟು ಅಕ್ಷರಗಳಷ್ಟು ಉದ್ದದ ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗಿದೆ. ಸ್ಕ್ರೀನ್‌ಶಾಟ್‌ಗಳಲ್ಲಿ ''ಮರೆತುಹೋದ ಪಾಸ್‌ವರ್ಡ್‌ಗಳನ್ನು ಮರುಪಡೆಯಲು ವಾಟ್ಸಾಪ್‌ಗೆ ಸಾಧ್ಯವಾಗುವುದಿಲ್ಲ" ಎಂದು ಹೇಳಲಾಗಿದೆ. ಆದ್ದರಿಂದ, ಈ ಫೀಚರ್ಸ್‌ ಲಾಂಚ್‌ ಆದ ನಂತರ ನಿಮ್ಮ ಚಾಟ್‌ಗಳು ಮತ್ತು ಮೀಡಿಯಾ ಬ್ಯಾಕಪ್ ಅನ್ನು ಎನ್‌ಕ್ರಿಪ್ಟ್ ಮಾಡಲು ನೀವು ನಿರ್ಧರಿಸಿದರೆ, ನಿಮ್ಮ ಇಮೇಲ್‌ಗಳು ಮತ್ತು ಇತರ ಅಪ್ಲಿಕೇಶನ್ ಐಡಿಗಳಲ್ಲಿ ನೀವು ಸಾಮಾನ್ಯವಾಗಿ ಮಾಡುವಂತೆ ನಿಮ್ಮ ಪಾಸ್‌ವರ್ಡ್ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾಗಿರುತ್ತದೆ. ಈ ಪ್ರಮುಖ ಫೀಚರ್ಸ್‌ ಅಪ್ಡೇಟ್‌ನ ದಿನಾಂಕವನ್ನು ವಾಟ್ಸಾಪ್‌ ಇನ್ನು ಕೂಡ ಬಹಿರಂಗ ಪಡಿಸಿಲ್ಲ. ಆದರೆ, ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸಾಧನಗಳಲ್ಲಿ ಭದ್ರತಾ ಫೀಚರ್ಸ್‌ ಲಭ್ಯವಿರುವುದು ಖಚಿತ.

Best Mobiles in India

English summary
WhatsApp is reportedly working on password-protected chats backup feature.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+