Home
ಸುದ್ದಿಜಾಲ

ಭಾರತದಲ್ಲಿನ ಯಶಸ್ಸನ್ನು ವಿಶ್ವಕ್ಕೂ ಹಂಚಿದ 'ವಾಟ್ಸ್ಆಪ್'!

ಭಾರತದಲ್ಲಿ ಸುಳ್ಳು ಸುದ್ದಿಗಳು ಹಾಗೂ ವದಂತಿಗಳು ಹಬ್ಬುವುದನ್ನು ತಡೆಯಲು ವಾಟ್ಸ್ಆಪ್ ತಂದಿದ್ದ 'ಫಾರ್ವರ್ಡ್‌ ಸಂದೇಶಗಳ ಮಿತಿ'ಯನ್ನು ಈಗ ವಿಶ್ವಾದ್ಯಂತ ಜಾರಿಗೊಳಿಸಿದೆ. ಕಳೆದ ವರ್ಷ ಭಾರತದಲ್ಲಿ ಮೊದಲು ಜಾರಿಗೊಳಿಸಿದ್ದ ಗರಿಷ್ಠ 5 ಚಾಟ್‌ಗಳ ಫಾರ್ವರ್ಡ್‌ ಸಂದೇಶಗಳ ಮಿತಿ ಫೀಚರ್ ಅನ್ನು ಈಗ ವಿಶ್ವದಾದ್ಯಂತ ಎಲ್ಲಾ ಬಳಕೆದಾರರಿಗೂ ವಿಸ್ತರಿಸಲಾಗಿದೆ ಎಂದು ವಾಟ್ಸ್‌ಆಪ್ ಸಂಸ್ಥೆ ತಿಳಿಸಿದೆ.

ಕಳೆದ ವರ್ಷದ ಜುಲೈನಲ್ಲೇ ವಾಟ್ಸ್‌ಆಪ್‌ ಫಾರ್ವರ್ಡ್‌ ಸಂದೇಶಗಳನ್ನು ಗರಿಷ್ಠ 5 ಚಾಟ್‌ಗಳಿಗಷ್ಟೇ ಸೀಮಿತ ಗೊಳಿಸಲಾಗಿತ್ತು. ಈ ಫೀಚರ್ ದೇಶದಲ್ಲಿ ಯಶಸ್ವಿಯಾದ ಮೇಲೆ ಈಗ ಇದನ್ನು ವಿಶ್ವದೆಲ್ಲೆಡೆ ಪರಿಚಯಿಸಲು ವಾಟ್ಸ್ಆಪ್ ಮುಂದಾಗಿದೆ. ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ, 6 ತಿಂಗಳುಗಳ ಕಾಲ ಬಳಕೆದಾರರ ಪ್ರತಿಕ್ರಿಯೆ ಪಡೆದು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಾಟ್ಸ್ಆಪ್ ಸಂಸ್ಥೆ ಹೇಳಿದೆ.

ಭಾರತದಲ್ಲಿನ ಯಶಸ್ಸನ್ನು ವಿಶ್ವಕ್ಕೂ ಹಂಚಿದ 'ವಾಟ್ಸ್ಆಪ್'!

ವಿಶ್ವದೆಲ್ಲೆಡೆ ಈ ಹಿಂದೆ ಒಮ್ಮೆಗೆ 20 ಮಂದಿಗೆ ಫಾರ್ವರ್ಡ್‌ ಸಂದೇಶಗಳನ್ನು ಕಳುಹಿಸಲು ಅವಕಾಶವಿತ್ತು. ಆದರೆ, ಈ ಸೋಮವಾರದಿಂದಲೇ ಹೊಸ ನಿಯಮ ಜಾರಿಯಾಗಿದ್ದು, ಇನ್ಮುಂದೆ ವಾಟ್ಸ್‌ಆಪ್‌ನ ಲೇಟೆಸ್ಟ್ ವರ್ಷನ್ ಬಳಕೆದಾರರು ಒಮ್ಮೆಗೆ ಕೇವಲ ಐವರಿಗೆ ಮಾತ್ರ ಫಾರ್ವರ್ಡ್‌ ಸಂದೇಶಗಳನ್ನು ಕಳುಹಿಸಲು ಸಾಧ್ಯ ಎಂದು ಕಂಪೆನಿ ಹೇಳಿದೆ. ಅಲ್ಲದೆ, ಈ ಮಿತಿ ಹೇರಿದ ಬಳಿಕ ಫಾರ್ವರ್ಡ್‌ ಸಂದೇಶಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ ಎಂದು ವಾಟ್ಸ್‌ಆಪ್‌ ತಿಳಿಸಿದೆ.

ಕಳೆದ ವರ್ಷ ಮಕ್ಕಳ ಕಳ್ಳರಿದ್ದಾರೆ ಎಂಬ ಸುಳ್ಳು ಸುದ್ದಿಯು ಭಾರತದ ವಾಟ್ಸ್‌ಆಪ್‌ನಲ್ಲಿ ಹರಿದಾಡಿದ ಪರಿಣಾಮ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಥಳಿಸಿ ಹತ್ಯೆಗೈದಂಥ ಅಮಾನವೀಯ ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಸರಕಾರವು ಸುಳ್ಳು ಸುದ್ದಿಗಳನ್ನು ತಡೆಯಲು ಕಠಿಣ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಿಗೆ ನಿರ್ದೇಶನ ನೀಡಿದ ನಂತರ ಈ ಫೀಚರ್ ಅನ್ನು ಪರಿಚಯಿಸಲಾಗಿತ್ತು.

ಭಾರತದಲ್ಲಿನ ಯಶಸ್ಸನ್ನು ವಿಶ್ವಕ್ಕೂ ಹಂಚಿದ 'ವಾಟ್ಸ್ಆಪ್'!

ಭಾರತದಲ್ಲಿ ಈ ಫೀಚರ್ ಅನ್ನು ಪರಿಚಯಿಸಿದ ನಂತರ, ಪ್ರಾಯೋಗಿಕ ಅವಧಿಯಲ್ಲಿ ಫಾರ್ವರ್ಡ್‌ ಸಂದೇಶಗಳ ಪ್ರಮಾಣದಲ್ಲಿ ಶೇ.25ರಷ್ಟು ಇಳಿಕೆ ಕಂಡುಬಂದಿತ್ತು ಎಂದು ವಾಟ್ಸ್ಆಪ್ ಹೇಳಿದೆ. ಜಗತ್ತಿನಾದ್ಯಂತ ವಾಟ್ಸ್‌ಆಪ್‌ಗೆ 1.5 ಶತಕೋಟಿ ಬಳಕೆದಾರರು ಇದ್ದು, ಆ ಪೈಕಿ ಭಾರತ, ಬ್ರೆಜಿಲ್‌, ಇಂಡೋನೇಷ್ಯಾದಂಥ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಬಳಕೆದಾರರಿದ್ದು, ಅಲ್ಲಿಯೂ ಕೂಡ ಈ ಫೀಚರ್ ಯಶಸ್ವಿಯಾಗುವುದು ಎಂದು ವಾಟ್ಸ್‌ಆಪ್‌ ವಿಶ್ವಾಸ ವ್ಯಕ್ತಪಡಿಸಿದೆ.

Best Mobiles in India

English summary
WhatsApp Forward Message Limit: WhatsApp has today confirmed that it will be restricting forwards to just five chats, a limit that now applies globally and not just for the Indian market. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+