Home
ಸುದ್ದಿಜಾಲ

ವಾಟ್ಸಾಪ್‌ ಸೇರಲಿದೆ 21 ಹೊಸ ಎಮೋಜಿಗಳು! ಯಾರಿಗೆಲ್ಲಾ ಲಭ್ಯ!

ವಾಟ್ಸಾಪ್‌ ತನ್ನ ವಿಶೇಷ ಫೀಚರ್ಸ್‌ಗಳಿಂದ ಮಾತ್ರವಲ್ಲದೆ ಅತ್ಯಾಕರ್ಷಕ ಎಮೋಜಿಗಳಿಂದಲೂ ಕೂಡ ಗಮನಸೆಳೆದಿದೆ. ಬಳಕೆದಾರರು ತಮ್ಮ ಭಾವನೆಗಳನ್ನು ಸಂದೇಶದ ಮೂಲಕ ಮಾತ್ರವಲ್ಲ ಎಮೋಜಿಗಳ ಮೂಲಕ ಕೂಡ ವ್ಯಕ್ತಪಡಿಸುವುದಕ್ಕೆ ಅವಕಾಶ ನೀಡಿದೆ. ಸದ್ಯ ಇದೀಗ ಬಳಕೆದಾರರ ಅನುಕೂಲಕ್ಕಾಗಿ ಹೊಸದಾಗಿ 21ಮೋಜಿಗಳನ್ನು ಪರಿಚಯಿಸಲು ಮುಂದಾಗಿದೆ.

ಹೌದು, ವಾಟ್ಸಾಪ್‌ ಆಂಡ್ರಾಯ್ಡ್‌ ಬೀಟಾ ಪರೀಕ್ಷಕರಿಗೆ 21 ಹೊಸ ಎಮೋಜಿಗಳನ್ನು ಪರಿಚಯಿಸಲು ಮುಂದಾಗಿದೆ. ಈ ಹೊಸ ಎಮೋಜಿಗಳನ್ನು ಅಧಿಕೃತ ವಾಟ್ಸಾಪ್‌ ಕೀಬೋರ್ಡ್‌ನಿಂದ ಡೈರೆಕ್ಟ್‌ ಆಗಿ ಸೆಂಡ್‌ ಮಾಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಎಮೋಜಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಸೇರಲಿದೆ 21 ಹೊಸ ಎಮೋಜಿಗಳು! ಯಾರಿಗೆಲ್ಲಾ ಲಭ್ಯ!

ವಾಟ್ಸಾಪ್‌ ಹೊಸದಾಗಿ ಪರಿಚಯಿಸಲಿರುವ 21 ಎಮೋಜಿಗಳನ್ನು ಇತ್ತೀಚಿನ ಬೀಟಾ ವರ್ಷನ್‌ನಲ್ಲಿ ಕಾಣಬಹುದು. ಅಂದತೆ ವಾಬೇಟಾಇನ್ಫೋ ಪ್ರಕಾರ ಯುನಿಕೋಡ್ 15.0 ನಿಂದ ಈ 21 ಎಮೋಜಿಗಳನ್ನು ಕಳುಹಿಸಲು ಬೇರೆ ಕೀಬೋರ್ಡ್ ಅನ್ನು ಡೌನ್‌ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಈ ಹಿಂದೆ ಅಭಿವೃದ್ದಿಯ ಹಂತದಲ್ಲಿದ್ದ ಕಾರಣಕ್ಕೆ ಈ ಎಮೋಜಿಗಳು ವಾಟ್ಸಾಪ್‌ ಕೀಬೋರ್ಡ್‌ನಲ್ಲಿ ಕಾಣಿಸಿರಲಿಲ್ಲ. ಆದರೆ ಇದೀಗ ಅಧಿಕೃತ ವಾಟ್ಸಾಪ್‌ ಕೀಬೋರ್ಡ್‌ನಲ್ಲಿ ಎಮೋಜಿಗಳನ್ನು ಕಾಣಬಹುದಾಗಿದೆ.

ಇನ್ನು ವಾಟ್ಸಾಪ್‌ ಪರಿಚಯಿಸಿರುವ ಹೊಸ ಎಮೋಜಿಗಳು ಬಳಕೆದಾರರ ಗೊಂದಲವನ್ನು ನಿವಾರಿಸಲಿವೆ. ಈ ಎಮೋಜಿಗಳನ್ನು ಬಳಕೆದಾರರು ಇದೀಗ ಸ್ವೀಕರಿಸಬಹುದು ಎಂದು ಸಹ ಹೇಳಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ, ಕೆಲವು ಬಳಕೆದಾರರು ಇಂದಿನಿಂದ ಪ್ರಾರಂಭವಾಗುವ ಅಧಿಕೃತ ವಾಟ್ಸಾಪ್‌ ಕೀಬೋರ್ಡ್‌ ಮೂಲಕ ಈ ಹೊಸ ಎಮೋಜಿಗಳನ್ನು ಪ್ರವೇಶಿಸಲು ಸಾಧ್ಯವಾಗಲಿದೆ. ನಿಮ್ಮ ವಾಟ್ಸಾಪ್‌ ಖಾತೆಯಲ್ಲಿಯೂ ಸಹ ಈ ಎಮೋಜಿಗಳನ್ನು ಕಾಣಬೇಕಾದರೆ ಹೊಸ ಆವೃತ್ತಿಗೆ ಅಪ್ಡೇಟ್‌ ಮಾಡಬೇಕಾಗುತ್ತದೆ.

ವಾಟ್ಸಾಪ್‌ ಸೇರಲಿದೆ 21 ಹೊಸ ಎಮೋಜಿಗಳು! ಯಾರಿಗೆಲ್ಲಾ ಲಭ್ಯ!

ವಾಟ್ಸಾಪ್‌ ಸೇರ್ಪಡೆ ಮಾಡಿರುವ ಹೊಸ ಎಮೋಜಿಗಳು ಬಳಕೆದಾರರ ಭಾವನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದಕ್ಕೆ ಅವಕಾಶ ನೀಡಲಿವೆ. ಈ ಎಮೋಜಿಗಳನ್ನು ಬಳಸಿಕೊಂಡು ಬಳಕೆದಾರರು ಸಂದೇಶದ ಮೂಲಕ ವ್ಯಕ್ತಪಡಿಸಬಹುದಾದ ಭಾವನೆಗಳನ್ನು ಕೆಲವೇ ಎಮೋಜಿಗಳಲ್ಲಿ ಎಫೆಕ್ಟಿವ್‌ ಆಗಿ ತಿಳಿಸಬಹುದಾಗಿದೆ. ಈ 21 ಎಮೋಜಿಗಳ ಪರಿಪೂರ್ಣ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದು ವಾಬೇಟಾಇನ್ಫೋ ವರದಿ ಮಾಡಿದೆ.

ಇನ್ನು ವಾಟ್ಸಾಪ್‌ ಇತ್ತೀಚಿಗೆ ತನ್ನ ಐಒಎಸ್‌ ಬೀಟಾ ವರ್ಷನ್‌ನಲ್ಲಿ ಚಾಟ್‌ ಪಟ್ಟಿಯೊಳಗೆ ಪುಶ್‌ ಹೆಸರು ("Push name within the chat list") ಫೀಚರ್ಸ್‌ ಸೇರ್ಪಡೆ ಮಾಡಲು ಮುಂದಾಗಿದೆ. ಇದು ಅಪರಿಚಿತ ಗುಂಪಿನ ಸದಸ್ಯರಿಂದ ಸಂದೇಶವನ್ನು ಸ್ವೀಕರಿಸಿದಾಗ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ಗಳನ್ನು ಕಾಣುವಂತೆ ಮಾಡಲಿದೆ. ವಾಟ್ಸಾಪ್‌ ಐಒಎಸ್‌ ಬೀಟಾ ವರ್ಷನ್‌ ಸೇರಿರುವ ಹೊಸ ಫುಶ್‌ ನೇಮ್‌ ವಿಥಿನ್‌ ದಿ ಚಾಟ್‌ ಲಿಸ್ಟ್‌ ಫೀಚರ್ಸ್‌ ಹೆಸರೇ ಸೂಚಿಸುವಂತೆ ವಿಶೇಷವಾಗಿದೆ. ನಿಮ್ಮ ವಾಟ್ಸಾಪ್‌ ಗ್ರೂಪ್‌ನಲ್ಲಿ ಅಪರಿಚಿತ ಸಂಖ್ಯೆಯಂದ ಸಂದೇಶವನ್ನು ಸ್ವೀಕರಿಸಿದರೆ ಪ್ರತಿ ಬಾರಿ ಫೋನ್‌ ನಂಬರ್‌ ಬದಲಿಗೆ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ ಅನ್ನು ತೋರಿಸಲಿದೆ. ಇದರಿಂದ ಪ್ರತಿ ಭಾರಿಯು ಸಂದೇಶ ಕಳುಹಿಸಿದ ಸಂದೇಶವನ್ನು ಕಾಣುವ ಬದಲಿಗೆ ಪುಶ್‌ ನೇಮ್‌ ನಿಮಗೆ ಕಾಣಿಸಲಿದೆ ಎಂದು ವಾಬೇಟಾ ಇನ್ಫೋ ವರದಿ ಮಾಡಿದೆ.

ವಾಟ್ಸಾಪ್‌ ಸೇರಲಿದೆ 21 ಹೊಸ ಎಮೋಜಿಗಳು! ಯಾರಿಗೆಲ್ಲಾ ಲಭ್ಯ!

ಇನ್ನು ಈ ಫೀಚರ್ಸ್‌ ಮೂಲಕ ಬಳಕೆದಾರರು ಅಪರಿಚಿತ ಕಂಟ್ಯಾಕ್ಟ್‌ ಯಾರೆಂದು ಅರ್ಥಮಾಡಿಕೊಳ್ಳಲು ಅವಕಾಶ ನೀಡಲಿದೆ. ಅಲ್ಲದೆ ನೀವು ಪ್ರತಿ ಭಾರಿ ಸಂದೇಶ ಕಳುಹಿಸುವ ಸಂಖ್ಯೆಯನ್ನು ಸೇವ್‌ ಮಾಡಬೇಕಾದ ಅನಿವಾರ್ಯತೆ ಕೂಡ ಬರುವುದಿಲ್ಲ. ಈ ಹೊಸ ಫೀಚರ್ಸ್‌ ಆಯ್ಕೆಯು ಬಿಗ್‌ ಗ್ರೂಪ್‌ ಚಾಟ್‌ಗಳನ್ನು ಭಾಗವಹಿಸುವವರಿಗೆ ತುಂಬಾನೇ ಉಪಯುಕ್ತವಾಗಲಿದೆ. ಇದರಲ್ಲಿ ಪ್ರತಿಯೊಬ್ಬರ ಸಂಖ್ಯೆಯನ್ನು ಹುಡುಕುತ್ತಾ ಕೂರುವ ಬದಲು ಸಂದೇಶ ಕಳುಹಿಸಿದವರನ್ನು ಟ್ರ್ಯಾಕ್‌ ಮಾಡಲು ಅವಕಾಶ ನೀಡಲಿದೆ.

Best Mobiles in India

English summary
the new 21 emojis were not visible within the official WhatsApp keyboard as they were under development
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+