Home
ಸುದ್ದಿಜಾಲ

ವಾಟ್ಸಾಪ್‌ನಿಂದ ಬಂತು ಹೊಸ ಸುದ್ದಿ! MacOS ಬಳಕೆದಾರರಿಗೂ ಲಭ್ಯವಾಗಲಿದೆ ಈ ಫೀಚರ್ಸ್‌!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಮ್ಯಾಕ್‌ಒಎಸ್‌ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಹೊಸ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟ್ಸಾಪ್‌ ಇದೀಗ MacOS ಡಿವೈಸ್‌ಗಳಲ್ಲಿ ಗ್ರೂಪ್‌ ಕಾಲ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ.

ಹೌದು, ವಾಟ್ಸಾಪ್‌ ತನ್ನ ಮ್ಯಾಕ್‌ಒಎಸ್‌ ಡಿವೈಸ್‌ ಬಳಕೆದಾರರಿಗೆ ಗ್ರೂಪ್‌ ಕಾಲ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದರಿಂದ ಆಯ್ದ ಸಂಖ್ಯೆಯ ಬಳಕೆದಾರರು ಗ್ರೂಪ್‌ ಕಾಲ್‌ನಲ್ಲಿ ಭಾಗವಹಿಸಲು ಸಾದ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಿಂದ ಬಂತು ಹೊಸ ಸುದ್ದಿ! MacOS ಬಳಕೆದಾರರಿಗೂ ಲಭ್ಯವಾಗಲಿದೆ ಈ ಫೀಚರ್ಸ್

ವಾಟ್ಸಾಪ್‌ ಗ್ರೂಪ್‌ ಕಾಲ್‌ ಫೀಚರ್ಸ್‌ ಅನ್ನು ಮ್ಯಾಕ್‌ಒಎಸ್‌ ಡಿವೈಸ್‌ಗಳಲ್ಲಿ ಪರಿಚಯಿಸಲು ಮುಂದಾಗಿದೆ. ಇದರಿಂದ ಮ್ಯಾಕ್‌ಒಎಸ್‌ ಬಳಕೆದಾರರು ಕೂಡ ವಾಟ್ಸಾಪ್‌ ಗ್ರೂಪ್‌ ಕಾಲ್‌ ಅನ್ನು ಬಳಸಬಹುದಾಗಿದೆ. ವಾಟ್ಸಾಪ್‌ ಗ್ರೂಪ್‌ ಕಾಲ್‌ ಫೀಚರ್ಸ್‌ ಅನ್ನು ಈಗಾಗಲೇ ಪರಿಚಯಿಸಿದೆ. ಆದರೆ ಮ್ಯಾಕ್‌ಒಎಸ್‌ ಡಿವೈಸ್‌ನಲ್ಲಿ ಈ ಫೀಚರ್ಸ್‌ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದಾಗ್ಯೂ, ವಾಟ್ಸಾಪ್‌ ಬೀಟಾದ ಇತ್ತೀಚಿನ ಅಪ್‌ಡೇಟ್‌ನಲ್ಲಿ ಕಾಲ್‌ ಬಟನ್‌ಗಳು ಲಭ್ಯವಿದೆ.

ಇದಲ್ಲದೆ, ಈ ಹೊಸ ಫೀಚರ್ಸ್‌ ಒಂದೇ ಗುಂಪಿನಲ್ಲಿಲ್ಲದ ಜನರೊಂದಿಗೆ ಹೊಸ ಗ್ರೂಪ್‌ ಕಾಲ್‌ ಅನ್ನು ಕ್ರಿಯೆಟ್‌ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಇದರಲ್ಲಿ ನೀವು ಕಾಲ್ಸ್‌ ಟ್ಯಾಬ್ ತೆರೆಯಿರಿ ಮತ್ತು ಕಾಲ್‌ ಕ್ರಿಯೆಟ್‌ ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ವಾಟ್ಸಾಪ್‌ನಲ್ಲಿ ಕರೆಗೆ ಸೇರಿಸಲು ಬಯಸುವ ಜನರನ್ನು ಆಯ್ಕೆ ಮಾಡುವ ಮೂಲಕ ಹೊಸ ಗ್ರೂಪ್‌ ಕಾಲ್‌ ಅನ್ನು ಕ್ರಿಯೆಟ್‌ ಮಾಡಬಹುದಾಗಿದೆ.

ಇನ್ನು ಈ ಫೀಚರ್ಸ್‌ನಲ್ಲಿ ಬಳಕೆದಾರರು ಏಳು ಜನರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಆದರೆ 32 ಜನರು ನಂತರ ಗ್ರೂಪ್‌ ಆಡಿಯೊ ಕರೆಗಳಿಗೆ ಸೇರಿಸುವುದಕ್ಕೆ ಆಯ್ಕೆ ಮಾಡಬಹುದಾಗಿದೆ. ಸದ್ಯ ಗ್ರೂಪ್‌ಗಳಲ್ಲಿ ಗ್ರೂಪ್‌ ಕಾಲ್‌ಗಳನ್ನು ಮಾಡುವ ಫೀಚರ್ಸ್‌ ಹೊಸ ಅಪ್ಡೇಟ್‌ನೊಂದಿಗೆ ಬೀಟಾ ಪರೀಕ್ಷಕರಿಗೆ ಲಭ್ಯವಾಗಲಿದೆ. ಇದಲ್ಲದೆ ವಾಟ್ಸಾಪ್‌ 12 ಹೊಸ ಫೀಚರ್ಸ್‌ಗಳನ್ನು ಒಳಗೊಂಡಂತೆ ಆಂಡ್ರಾಯ್ಡ್‌ ನಲ್ಲಿ ಲೈವ್‌ ಚಾನಲ್‌ ಕಮ್ಯೂನಿಕೇಷನ್‌ನಲ್ಲಿ ಕೂಡ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಹೊಸದಾಗಿ 'ಚಾಟ್‌ ಲಾಕ್‌' ಫೀಚರ್‌ ಬಿಡುಗಡೆ ಮಾಡಿದೆ. ಈ ಫೀಚರ್ಸ್‌ ಸಕ್ರಿಯದಿಂದ ಮೆಸೆಜ್‌/ ಚಾಟ್‌ ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಬಳಕೆದಾರರು ಸಂಪೂರ್ಣ ವಾಟ್ಸಾಪ್‌ ಲಾಕ್‌ ಮಾಡದೇ, ಕೇವಲ ನಿರ್ದಿಷ್ಟ ಚಾಟ್‌ ಮಾತ್ರ ಲಾಕ್ ಮಾಡಬಹುದಾಗಿರುತ್ತದೆ.

ವಾಟ್ಸಾಪ್‌ನಿಂದ ಬಂತು ಹೊಸ ಸುದ್ದಿ! MacOS ಬಳಕೆದಾರರಿಗೂ ಲಭ್ಯವಾಗಲಿದೆ ಈ ಫೀಚರ್ಸ್

ವಾಟ್ಸಾಪ್‌ನಲ್ಲಿ ಚಾಟ್ ಲಾಕ್ ಸಕ್ರಿಯಗೊಳಿಸಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ವಾಟ್ಸಾಪ್‌ ಕಾಂಟ್ಯಾಕ್ಟ್‌ ಪ್ರೊಫೈಲ್ ವಿಭಾಗಕ್ಕೆ ಹೋಗಿ.
ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್ ಲಾಕ್ ಅನ್ನು ಟ್ಯಾಪ್ ಮಾಡಿ.
ಹಂತ 3: 'ಫಿಂಗರ್‌ಪ್ರಿಂಟ್‌ನೊಂದಿಗೆ ಈ ಚಾಟ್ ಅನ್ನು ಲಾಕ್ ಮಾಡಿ' ಆಯ್ಕೆಯನ್ನು ಸಕ್ರಿಯಗೊಳಿಸಿ.

ಹಾಗೆಯೇ ವಾಟ್ಸಾಪ್‌ (WhatsApp) ಇತ್ತೀಚಿಗಷ್ಟೆ ಒಂದು ವಾಟ್ಸಾಪ್‌ ಖಾತೆಯನ್ನು ಒಂದೇ ವೇಳೆ ನಾಲ್ಕು ಸಾಧನಗಳಲ್ಲಿ ಬಳಕೆ ಮಾಡುವ ಆಯ್ಕೆ ಲಭ್ಯ ಮಾಡಿದೆ. ಇದ್ರಿಂದಾಗಿ ಈಗ ಖಾತೆಯನ್ನು ವೆಬ್ ಬ್ರೌಸರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳೊಂದಿಗೆ ಹೇಗೆ ಲಿಂಕ್ ಮಾಡುತ್ತೀರೋ ಹಾಗೆಯೇ ನಾಲ್ಕು ಸಾಧನಗಳೊಂದಿಗೆ ಸಿಂಕ್ ಮಾಡಬಹುದು. ಬಳಕೆದಾರರು ಎರಡು ಆಂಡ್ರಾಯ್ಡ್ ಫೋನ್‌ಗಳು ಅಥವಾ ಐಫೋನ್‌ಗಳನ್ನು ಹೊಂದಿದ್ದರೆ. ಅವರು ಒಂದೇ ಸಮಯದಲ್ಲಿ ಅವರ ವಾಟ್ಸಾಪ್‌ ಖಾತೆಯನ್ನು ಐಫೋನ್‌ ಮತ್ತು ಆಂಡ್ರಾಯ್ಡ್‌ ಎರಡರಲ್ಲೂ ಏಕಕಾಲದಲ್ಲಿ ಬಳಸಬಹುದು. ಹಾಗೆಯೇ ಅದೇ ಸಮಯದಲ್ಲಿ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿಯೂ ಅದೇ ವಾಟ್ಸಾಪ್‌ ಖಾತೆಯನ್ನು ಬಳಕೆ ಮಾಡಬಹುದಾಗಿದೆ.

Best Mobiles in India

English summary
WhatsApp is rolling out a new group calling feature on macOS devices
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+