ವಾಟ್ಸಾಪ್ ವೀಡಿಯೋ ಕರೆಯಲ್ಲಿ ಹೊಸ ಆಯ್ಕೆ! ಇದನ್ನೇ ಅಲ್ಲವೇ ಜನ ಬಯಸೋದು!
ಮೆಟಾ ಒಡೆತನದ ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಮತ್ತೊಂದು ಹೊಸ ಫೀಚರ್ಸ್ ಪರಿಚಯಿಸಿದೆ. ಇದು ಐಒಎಸ್ ಬೀಟಾ ಬಳಕೆದಾರರಿಗೆ ಮಾತ್ರ ಪ್ರಸ್ತುತ ಲಭ್ಯವಾಗಲಿದೆ. ಇದು ಪಿಕ್ಚರ್ ಇನ್ ಪಿಕ್ಚರ್ ಫೀಚರ್ಸ್ ಆಗಿದ್ದು, ವೀಡಿಯೊ ಕರೆಗಳಿಗಾಗಿ ಇದನ್ನು ಪರಿಚಯಿಸಲಾಗಿದೆ. ಇದರಿಂದ ನೀವು ವಾಟ್ಸಾಪ್ ವೀಡಿಯೊ ಕಾಲ್‌ನಲ್ಲಿರುವಾಗಲೂ ಇತರ ಅಪ್ಲಿಕೇಶನ್‌ಗಳನ್ನು ಬಳಸುವುದಕ್ಕೆ ಸಾಧ್ಯವಾಗಲಿದೆ. ಆದರೆ ಈ ಫಿಚರ್ಸ್ ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಹೌದು, ವಾಟ್ಸಾಪ್ ತನ್ನ ಐಒಎಸ್ ಬೀಟಾ ಬಳಕೆದಾರರಿಗೆ ಹೊಸ ಪಿಕ್ಚರ್-ಇನ್-ಪಿಕ್ಚರ್ ಫೀಚರ್ಸ್ ಪರಿಚಯಿಸಿದೆ. ಇದರಿಂದ ನೀವು ವೀಡಿಯೊ ಕಾಲ್‌ನಲ್ಲಿ ಇರುವಾಗಲೇ ಇತರೆ ಅಪ್ಲಿಕೇಶನ್‌ಗಳನ್ನು ಏಕಕಾಲದಲ್ಲಿ ತೆರೆಯಬಹುದಾಗಿದೆ. ನೀವು ಬೇರೆ ಅಪ್ಲಿಕೇಶನ್ ತೆರೆದು ಕಾರ್ಯನಿರ್ವಹಿಸುತ್ತಿದ್ದರೂ ಕೂಡ ವಾಟ್ಸಾಪ್ ಕಾಲ್‌ನಲ್ಲಿ ಮುಂದುವರೆಯಲು ಸಾಧ್ಯವಾಗಲಿದೆ. ಈ ಪೀಚರ್ಸ್ ಅನ್ನು ಕೇಲವ ಐಒಎಸ್ ಬೀಟಾ ಪತರೀಕ್ಷಕರಿಗೆ ಇದೀಗ ಪರಿಚಯಿಸಲಾಗಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್ ತನ್ನ iOS 22.24.0.79 ಅಪ್‌ಡೇಟ್‌ನಲ್ಲಿ ಹೊಸ ಪಿಕ್ಚರ್ ಇನ್ ಪಿಕ್ಚರ್ ಮೋಡ್ ಪರಿಚಯಿಸಿದೆ. ಇದು ಐಒಎಸ್ ಬೀಟಾ ಪರೀಕ್ಷಕರು ಮಾತ್ರ ಪ್ರವೇಶಿಸಲು ಅವಕಾಶ ನೀಡಿದೆ. ಸದ್ಯ ಅಭಿವೃದ್ಧಿಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಈಗಾಗಲೇ ವೀಡಿಯೊ ಕಾಲ್‌ನಲ್ಲಿ ಅನೇಕ ಫೀಚರ್ಸ್ ಪರಿಚಯಿಸಿರುವ ವಾಟ್ಸಾಪ್ ಪಿಕ್ಚರ್ ಇನ್ ಪಿಕ್ಚರ್ ಮೋಡ್ ಮೂಲಕ ಇನ್ನಷ್ಟು ಉತ್ತಮ ಅನುಭವ ನೀಡಲಯ ಮುಂದಾಗಿದೆ.

ಪಿಕ್ಚರ್-ಇನ್-ಪಿಕ್ಚರ್ ಮೋಡ್ ಎಂದರೇನು?
ಪಿಕ್ಚರ್ ಇನ್ ಪಿಕ್ಚರ್ ಮೋಡ್ ಎಂದರೆ ನಿಮಗೆಲ್ಲಾ ತಿಳಿದಿರುವಂತೆ ನೀವು ವೀಡಿಯೊ ವೀಕ್ಷಣೆಯಲ್ಲಿರುವಾಗಲೇ ಏಕಕಾಲದಲ್ಲಿ ಮತ್ತೊಂದು ಅಪ್ಲಿಕೇಶನ್‌ನಲ್ಲಿ ಕೂಡ ಕಾರ್ಯನಿರ್ವಹಿಸುವುದಾಗಿದೆ. ಇದೀಗ ವಾಟ್ಸಾಪ್ ಪಿಕ್ಚರ್ ಇನ್ ಪಿಕ್ಚರ್ ಮೋಡ್ ಕೂದ ಇದೇ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಹೊಸ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಬಳಕೆದಾರರಿಗೆ ವಾಟ್ಸಾಪ್ ವೀಡಿಯೊ ಕಾಲ್‌ನಲ್ಲಿರುವಾಗ ಫೋನ್‌ನಲ್ಲಿ ಮಲ್ಟಿಟಾಸ್ಕ್ ಮಾಡಲು ಅನುಮತಿಸಲಿದೆ.

ಇದರಿಂದ ವಾಟ್ಸಾಪ್ ವೀಡಿಯೊ ಕಾಲ್ ಸಮಯದಲ್ಲಿ, ವಾಟ್ಸಾಪ್ ಆ್ಯಪ್ ಅನ್ನು ಮುಚ್ಚಿದರೆ ತಕ್ಷಣವೇ ಪಿಕ್ಚರ್ ಇನ್ ಪಿಕ್ಚರ್ ವಿಂಡೋ ತೆರೆಯಲಿದೆ. ಇದರ ಮೂಲಕ ವೀಡಿಯೊ ಕರೆ ಮುಂದುವರೆಯಲಿದೆ. ಇದರಿಂದ ಕ್ಯಾಮೆರಾವನ್ನು ವಿರಾಮಗೊಳಿಸದೆಯೇ ಫೋನ್‌ನಲ್ಲಿ ಇತರ ಅಪ್ಲಿಕೇಶನ್‌ಗಳನ್ನು ಬಳಸಲು ಇದು ಐಫೋನ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಬಳಕೆದಾರರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ವೀಡಿಯೊ ಕರೆ ವೀಕ್ಷಣೆಯನ್ನು ಆಫ್ ಮಾಡಲು ಅನುಕೂಲಮಾಡಿಕೊಡಲಿದೆ.

ಇನ್ನು ಪಿಕ್ಚರ್-ಇನ್ ಪಿಕ್ಚರ್ ಮೋಡ್ ಪ್ರಸ್ತುತ iOS 16.1 ಮತ್ತು ನಂತರದ ಆವೃತ್ತಿಗಳಲ್ಲಿ ಲಭ್ಯವಿದೆ. ಹಾಗೆ ನೋಡಿದರೆ ವೀಡಿಯೊ ಕರೆಗಳಿಗಾಗಿ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಈಗಾಗಲೇ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಇದರಲ್ಲಿ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಅನ್ನು ಆನ್ ಮಾಡಲು, ಡಿವೈಸ್ ಸೆಟ್ಟಿಂಗ್ಸ್> ಅಪ್ಲಿಕೇಶನ್‌ಗಳು ಮತ್ತು ಅಧಿಸೂಚನೆಗಳು>ವಾಟ್ಸಾಪ್> ಅಪ್ಡೇಟ್ < ಪಿಕ್ಚರ್-ಇನ್-ಪಿಕ್ಚರ್‌ಗೆ ಹೋಗಬೇಕಾಗುತ್ತದೆ.

ಇದಲ್ಲದೆ ವಾಟ್ಸಾಪ್ ಇನ್ನು ಅನೇಕ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಡಿಸ್‌ಅಪಿಯರಿಂಗ್ ಮೆಸೇಜ್‌ಗಳ ಶಾರ್ಟ್‌ಕಟ್ ಬಟನ್ ಅಡಿಯಲ್ಲಿ ಹೆಚ್ಚಿನ ಆಯ್ಕೆ ನೀಡಲು ಮುಂದಾಗಿದೆ. ಇದರೊಂದಿಗೆ ವಾಟ್ಸಾಪ್ ಮೀಡಿಯಾ ಫಾರ್ವರ್ಡ್ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ಮಾಡಿದೆ. ಇದು ಐಒಎಸ್ ಬಳಕೆದಾರರಿಗೆ ಅನ್ವಯವಾಗಲಿದ್ದು, ಇದರಿಂದ ಐಒಎಸ್ ಬಳಕೆದಾರರು ಯಾವುದೇ ಚಿತ್ರ ಮತ್ತು ವೀಡಿಯವನ್ನು ಕ್ಯಾಪ್ಶನ್‌ನೊಂದಿಗೆ ಫಾರ್ವರ್ಡ್ ಮಾಡಲು ಅನುಮತಿಸಲಿದೆ. ಇದರಿಂದ ನೀವು ಯಾವುದೇ ಮೀಡಿಯಾ ಫೈಲ್ ಫಾರ್ವರ್ಡ್ ಮಾಡಲು ಪ್ರಯತ್ನಿಸಿದಾಗ ಅಪ್ಲಿಕೇಶನ್ ಕೆಳಭಾಗದಲ್ಲಿ ಹೊಸ ಕ್ಯಾಪ್ಶನ್ ಬಾಕ್ಸ್ ಅನ್ನು ತೋರಿಸಲಿದೆ.


Click it and Unblock the Notifications








