Home
ಸುದ್ದಿಜಾಲ

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಹೊಸ ಆಯ್ಕೆ! ಇದರಿಂದಾಗುವ ಲಾಭ ಅಷ್ಟಿಷ್ಟಲ್ಲ!

ವಾಟ್ಸಾಪ್‌ ಪ್ರತನಿತ್ಯವೂ ಒಂದಲ್ಲ ಒಂದು ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಲೇ ಇದೆ. ಬಳಕೆದಾರರ ಅನುಕೂಲಕ್ಕಾಗಿ ಏನೆಲ್ಲಾ ಸಾಧ್ಯವೋ ಎಲ್ಲಾ ಮಾದರಿಯ ಫೀಚರ್ಸ್‌ಗಳನ್ನು ಅಳವಡಿಸುವ ನಿಟ್ಟಿನಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಾ ಬಂದಿದೆ. ಅದರಂತೆ ಇದೀಗ ಹೊಸದಾಗಿ 'ಪುಶ್‌ ನೇಮ್‌ ವಿಥಿನ್‌ ದಿ ಚಾಟ್‌ ಲಿಸ್ಟ್‌' ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ.

ಹೌದು, ವಾಟ್ಸಾಪ್‌ ಐಒಎಸ್‌ ಬೀಟಾ ವರ್ಷನ್‌ನಲ್ಲಿ ಚಾಟ್‌ ಪಟ್ಟಿಯೊಳಗೆ ಪುಶ್‌ ಹೆಸರು ("Push name within the chat list") ಫೀಚರ್ಸ್‌ ಸೇರ್ಪಡೆ ಮಾಡಲು ಮುಂದಾಗಿದೆ. ಇದು ಅಪರಿಚಿತ ಗುಂಪಿನ ಸದಸ್ಯರಿಂದ ಸಂದೇಶವನ್ನು ಸ್ವೀಕರಿಸಿದಾಗ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ಗಳನ್ನು ಕಾಣುವಂತೆ ಮಾಡಲಿದೆ. ಹಾಗಾದ್ರೆ ಈ ಹೊಸ ಫೀಚರ್ಸ್ ಹೇಗೆಲ್ಲಾ ಉಪಯುಕ್ತವಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಹೊಸ ಆಯ್ಕೆ! ಇದರಿಂದಾಗುವ ಲಾಭ ಅಷ್ಟಿಷ್ಟಲ್ಲ!

ಏನಿದರ ವಿಶೇ‍ಷ? ಇದರಿಂದಾಗುವ ಉಪಯೋಗ ಏನು?

ವಾಟ್ಸಾಪ್‌ ಐಒಎಸ್‌ ಬೀಟಾ ವರ್ಷನ್‌ ಸೇರಿರುವ ಹೊಸ ಫುಶ್‌ ನೇಮ್‌ ವಿಥಿನ್‌ ದಿ ಚಾಟ್‌ ಲಿಸ್ಟ್‌ ಫೀಚರ್ಸ್‌ ಹೆಸರೇ ಸೂಚಿಸುವಂತೆ ವಿಶೇಷವಾಗಿದೆ. ನಿಮ್ಮ ವಾಟ್ಸಾಪ್‌ ಗ್ರೂಪ್‌ನಲ್ಲಿ ಅಪರಿಚಿತ ಸಂಖ್ಯೆಯಂದ ಸಂದೇಶವನ್ನು ಸ್ವೀಕರಿಸಿದರೆ ಪ್ರತಿ ಬಾರಿ ಫೋನ್‌ ನಂಬರ್‌ ಬದಲಿಗೆ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ ಅನ್ನು ತೋರಿಸಲಿದೆ. ಇದರಿಂದ ಪ್ರತಿ ಭಾರಿಯು ಸಂದೇಶ ಕಳುಹಿಸಿದ ಸಂದೇಶವನ್ನು ಕಾಣುವ ಬದಲಿಗೆ ಪುಶ್‌ ನೇಮ್‌ ನಿಮಗೆ ಕಾಣಿಸಲಿದೆ ಎಂದು ವಾಬೇಟಾ ಇನ್ಫೋ ವರದಿ ಮಾಡಿದೆ.

ಇನ್ನು ಈ ಫೀಚರ್ಸ್‌ ಮೂಲಕ ಬಳಕೆದಾರರು ಅಪರಿಚಿತ ಕಂಟ್ಯಾಕ್ಟ್‌ ಯಾರೆಂದು ಅರ್ಥಮಾಡಿಕೊಳ್ಳಲು ಅವಕಾಶ ನೀಡಲಿದೆ. ಅಲ್ಲದೆ ನೀವು ಪ್ರತಿ ಭಾರಿ ಸಂದೇಶ ಕಳುಹಿಸುವ ಸಂಖ್ಯೆಯನ್ನು ಸೇವ್‌ ಮಾಡಬೇಕಾದ ಅನಿವಾರ್ಯತೆ ಕೂಡ ಬರುವುದಿಲ್ಲ. ಈ ಹೊಸ ಫೀಚರ್ಸ್‌ ಆಯ್ಕೆಯು ಬಿಗ್‌ ಗ್ರೂಪ್‌ ಚಾಟ್‌ಗಳನ್ನು ಭಾಗವಹಿಸುವವರಿಗೆ ತುಂಬಾನೇ ಉಪಯುಕ್ತವಾಗಲಿದೆ. ಇದರಲ್ಲಿ ಪ್ರತಿಯೊಬ್ಬರ ಸಂಖ್ಯೆಯನ್ನು ಹುಡುಕುತ್ತಾ ಕೂರುವ ಬದಲು ಸಂದೇಶ ಕಳುಹಿಸಿದವರನ್ನು ಟ್ರ್ಯಾಕ್‌ ಮಾಡಲು ಅವಕಾಶ ನೀಡಲಿದೆ.

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಹೊಸ ಆಯ್ಕೆ! ಇದರಿಂದಾಗುವ ಲಾಭ ಅಷ್ಟಿಷ್ಟಲ್ಲ!

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ತನ್ನ ಜನವರಿ ತಿಂಗಳ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಜನವರಿ ತಿಂಗಳಿನಲ್ಲಿ 29 ಲಕ್ಷಕ್ಕೂ ಅಧಿಕ ಭಾರತೀಯ ಖಾತೆಗಳನ್ನು ಬ್ಯಾನ್‌ ಮಾಡಿದೆ. ಈ ಮೂಲಕ ಹೊಸ ವರ್ಷದ ಸಮಯದಲ್ಲಿ ಭಾರತೀಯರಿಗೆ ಬಿಗ್‌ ಶಾಕ್‌ ನೀಡಿರೋದು ಬಹಿರಂಗವಾಗಿದೆ. ಹಾಗಂತ ಈ ಅಕೌಂಟ್‌ಗಳನ್ನು ಸುಖಾಸುಮ್ಮನೇ ಬ್ಯಾನ್‌ ಮಾಡಲಾಗಿಲ್ಲ. ಬದಲಿಗೆ ಬಳಕೆದಾರು ಮಾಡಿದ ರಿಪೋರ್ಟ್‌ ಹಾಗೂ ಹೊಸ ಐಟಿ ನಿಯಮಗಳ ಅನ್ವಯ ವಾಟ್ಸಾಪ್‌ ಈ ಕ್ರಮ ಕೈಗೊಂಡಿದೆ. ಭಾರತದಲ್ಲಿ ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಪ್ರತಿ ತಿಂಗಳು ಬಳಕೆದಾರರ ಸುರಕ್ಷತೆಗಾಗಿ ತಾವು ತೆಗೆದುಕೊಂಡ ಕ್ರಮಗಳ ಬಗ್ಗೆ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ವರದಿ ನೀಡುವುದು ಕಡ್ಡಾಯವಾಗಿದೆ.

ಇನ್ನು ಭಾರತ ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು, 2021ರ ನಿಯಮ 4(1)(ಡಿ) ಅಡಿಯಲ್ಲಿ ವಾಟ್ಸಾಪ್‌ ಈ ಅಕೌಂಟ್‌ ಬ್ಯಾನ್‌ ಮಾಡಿದೆ. ಜನವರಿ 1 ರಿಂದ ಜನವರಿ 31, 2023 ರ ನಡುವೆ ಈ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲಾಗಿದೆ ಎಂದು ವಾಟ್ಸಾಪ್‌ ಹೇಳಿದೆ. ಬಳಕೆದಾರರಿಂದ ಕುಂದುಕೊರತೆಗಳನ್ನು ಸ್ವೀಕರಿಸಿದ ನಂತರ ಈ ಖಾತೆಗಳಿಗೆ ಬ್ಯಾನ್‌ ಬಿಸಿ ಮುಟ್ಟಿಸಲಾಗಿದೆ. ಭಾರತದ ಕಾನೂನುಗಳನ್ನು ಅಥವಾ ವಾಟ್ಸಾಪ್‌ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣಕ್ಕಾಗಿ ಈ ರೀತಿಯ ಕ್ರಮ ಕೈಗೊಂಡಿರುವುದಾಗಿ ವಾಟ್ಸಾಪ್‌ ಹೇಳಿದೆ.

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಹೊಸ ಆಯ್ಕೆ! ಇದರಿಂದಾಗುವ ಲಾಭ ಅಷ್ಟಿಷ್ಟಲ್ಲ!

ವಾಟ್ಸಾಪ್‌ ಜನವರಿಯಲ್ಲಿ ಬ್ಯಾನ್‌ ಮಾಡಿರುವ 2,918,000 ಬ್ಯಾನ್‌ ಅಕೌಂಟ್‌ಗಳಲ್ಲಿ ಯಾವುದೇ ರಿಪೋರ್ಟ್‌ಗಳನ್ನು ಸ್ವೀಕರಿಸುವ ಮೊದಲು ಸುಮಾರು 1,038,000 ಖಾತೆಗಳನ್ನು ಬ್ಯಾನ್‌ ಮಾಡಿರುವುದಾಗಿ ವರದಿಯಾಗಿದೆ. ಅಲ್ಲದೆ ಈ ಸಮಯದಲ್ಲಿ ವಾಟ್ಸಾಪ್ 1461 ದೂರು ವರದಿಗಳನ್ನು ಸ್ವೀಕರಿಸಿದೆ, ಇದರಲ್ಲಿ 1337 ಬ್ಯಾನ್‌ ಮೇಲ್ಮನವಿಗಳನ್ನು ಮಾಡಲಾಗಿದೆ. ಆದರೆ ಈ ದೂರುಗಳಲ್ಲಿ ಕೇವಲ 191 ಅಕೌಂಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

Best Mobiles in India

English summary
This feature is currently available for some beta testers that install the latest version of WhatsApp beta for iOS from the TestFlight app: know more details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+