Home
ಸುದ್ದಿಜಾಲ

WhatsApp: ವಾಟ್ಸಪ್‌ನಲ್ಲಿ ಹೊಸ ಅಪ್ಡೇಟ್‌: ಶೀಘ್ರದಲ್ಲೇ ನೀವು ಕಾಲ್ ಮಾಡುವಾಗ ಈ ಫೀಚರ್‌ ಲಭ್ಯ

ವಾಟ್ಸಪ್‌ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್‌! Whatsapp ಆಗಾಗ ತನ್ನ ಬಳಕೆದಾರರಿಗೆ ಹೊಸತನವನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಮೂಲಕ ಗ್ರಾಹಕರು ಬೇರೆ ಮೆಸೇಜಿಂಗ್ ಆಪ್‌ ಕಡೆ ಕಣ್ಣೆತ್ತಿ ನೋಡದಂತೆ ಮಾಡುವ ಫೀಚರ್ಸ್‌ಗಳನ್ನು ನೀಡುತ್ತಿದೆ. ಇದೀಗ ವಾಟ್ಸಪ್ ಇಂಟರ್‌ಫೇಸ್‌ನಲ್ಲಿ (WhatsApp new feature) ಹೊಸ ಬದಲಾವಣೆ ಮಾಡಿದೆ. ಈ ಹೊಸ ಅಪ್ಡೇಟ್‌ ಪ್ರಸ್ತುತ Androidನ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಇನ್ಮುಂದೆ ಹೊಸ ಇಂಟರ್‌ಫೇಸ್‌ನಲ್ಲಿ (WhatsApp Calling interface) ವಾಟ್ಸಪ್‌ ಕಾರ್ಯನಿರ್ವಹಿಸುತ್ತದೆ.

ಮೆಟಾ ನೇತೃತ್ವದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಇದೀಗ, ವಾಟ್ಸಪ್ ಇಂಟರ್‌ಫೇಸ್‌ನಲ್ಲಿ ಬದಲಾವಣೆ ಮಾಡಿದ್ದು, ಮತ್ತೆ ಕರೆ ಮಾಡುವ ಇಂಟರ್‌ಫೇಸ್‌ನಲ್ಲಿ ಈ ಫೀಚರ್‌ ಲಭ್ಯವಿದೆ. ಈ ಹಿಂದೆ ಕಾಲ್ ಮಾಡುವಾಗ ಬ್ಯಾಕ್ ಬಟನ್ ಬದಲಿಗೆ ಮಿನಿಮೈಜ್ ಬಟನ್ ಅನ್ನು ತರಲಾಗಿತ್ತು. ಹಾಗಿದ್ರೆ, ಈ ಬದಲಾವಣೆ ಯಾಕೆ ಮಾಡಲಾಗುತ್ತಿದೆ? ಇದರಿಂದ ನಿಮಗೆ ಏನು ಅನುಕೂಲ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

WhatsAppನಲ್ಲಿ ಹೊಸ ಅಪ್ಡೇಟ್‌: ಹೊಸ ಕಾಲಿಂಗ್ ಬಾರ್ ಔಟ್!

WhatsApp Calling interface ವಿಭಾಗದಲ್ಲಿ (ಹೊಸ ಕರೆ ಬಾರ್) ವಾಟ್ಸಪ್‌ ಹೊಸ ಪ್ರಯೋಜನ ಕಲ್ಪಿಸಿಕೊಡಲು ಮುಂದಾಗಿದೆ. ವಾಟ್ಸಪ್‌ ಇತ್ತೀಚೆಗೆ ಮಾಡಿದ ಅಪ್ಡೇಟ್‌ನಲ್ಲಿ, ಕಾಲ್ ಇಂಟರ್‌ಫೇಸ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು. ಇದೀಗ, ಕೆಳಗಿನ ಕಾಲಿಂಗ್ ಬಾರ್‌ (WhatsApp Calling bar) ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಅಪ್ಡೇಟ್‌ ಪ್ರಸ್ತುತ ಕೆಲವು ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್ ಬೀಟಾ 2.24.12.14 ಆವೃತ್ತಿಯಲ್ಲಿ ಈ ಹೊಸ ಅಪ್ಡೇಟ್‌ ಅನ್ನು ಪಡೆಯಬಹುದು.

ಮೊದಲಿಗಿಂತ ದೊಡ್ಡದಾಗಿ ಕಾಣುತ್ತೆ ಪ್ರೊಫೈಲ್ ಫೋಟೋ

WABetainfo ಕಾಲ್ ಬಾರ್‌ನ ಅಪ್ಡೇಟ್‌ ಮಾಡಿರುವ ಇಂಟರ್ಫೇಸ್ ಅನ್ನು ತೋರಿಸುವ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ. ಇದರ ಆಧಾರದ ಮೇಲೆ WhatsApp ಕಾಲಿಂಗ್ ಬಾರ್‌ನ ಕೆಳಗಿನ ಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಪ್ರೊಫೈಲ್ ಫೋಟೋ ಮೊದಲಿಗಿಂತ ದೊಡ್ಡದಾಗಿ ಕಾಣಿಸುತ್ತದೆ. ಈ ಅಪ್‌ಡೇಟ್ ಪ್ರಸ್ತುತ ಕೆಲವು ಬೀಟಾ (Google Play Storeನಲ್ಲಿ 2.24.12.14 ಆವೃತ್ತಿ) ಬಳಕೆದಾರರಿಗೆ ಮಾತ್ರ ಲಭ್ಯವಿದ್ದರೂ, ಇದು ಶೀಘ್ರದಲ್ಲೇ ಹೆಚ್ಚಿನ ಜನರಿಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ಇಮ್ಯಾಜಿನ್ ಎಂಬ ಮತ್ತೊಂದು ಫೀಚರ್‌ ಅನ್ನು WhatsAppನಲ್ಲಿ ಪರೀಕ್ಷಿಸಲಾಗುತ್ತಿದೆ. ಮೆಟಾ LLM ಮಾದರಿಯನ್ನು ಆಧರಿಸಿದೆ. ಈ ಫೀಚರ್ ಬಳಕೆದಾರರಿಗೆ ಪಠ್ಯದಿಂದ ಫೋಟೋಗಳನ್ನು ರಚಿಸಲು ಅನುಮತಿಸುತ್ತದೆ. ಈ ಫೋಟೋಗಳನ್ನು AI ಮೂಲಕ ರಚಿಸಬಹುದು. WhatsApp ಇತ್ತೀಚೆಗೆ ಸ್ಟೇಟಸ್ ಅಪ್‌ಡೇಟ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುತ್ತಿದೆ. ಸ್ಟೇಟಸ್‌ನಲ್ಲಿ ಒಂದು ನಿಮಿಷದ ವೀಡಿಯೊವನ್ನು ಪೋಸ್ಟ್ ಮಾಡಲು ಅವಕಾಶ ನೀಡಿದೆ.

AI ಚಾಲಿತ ಇಮೇಜ್ ಎಡಿಟರ್

ಈ ನಡುವೆ ಮತ್ತೊಂದು ನಿರೀಕ್ಷಿತ ಫೀಚರ್‌ ಬಗ್ಗೆ WA ಬೀಟಾ ವರದಿ ಮಾಡಿದೆ. ಅಂದರೆ WhatsApp ಶೀಘ್ರದಲ್ಲೇ ಎಐ (AI) ಚಾಲಿತ ಇಮೇಜ್ ಎಡಿಟರ್ ಅನ್ನು ಪಡೆದುಕೊಳ್ಳಬಹುದು. ಇದು ಬಳಕೆದಾರರಿಗೆ ಆಪ್‌ನಿಂದಲೇ ಫೋಟೋಗಳನ್ನು ಎಡಿಟ್‌ ಮಾಡಲು ಅನುಮತಿಸುತ್ತದೆ. ಆಂಡ್ರಾಯ್ಡ್‌ಗಾಗಿ ಇತ್ತೀಚಿನ ಬೀಟಾ ಅಪ್‌ಡೇಟ್ (ಆವೃತ್ತಿ 2.24.7.13) ಎಐ ಚಾಲಿತ ಇಮೇಜ್ ಎಡಿಟರ್‌ಗಾಗಿ ಕೋಡ್ ಅನ್ನು ಒಳಗೊಂಡಿದೆ. ಈ ಫೀಚರ್ಸ್‌ ಇನ್ನೂ ಅಭಿವೃದ್ಧಿ ಹಂತದಲ್ಲಿದೆ.

ವಾಟ್ಸಪ್ ಸ್ಟೇಟಸ್‌ ಅವಧಿ ಒಂದು ನಿಮಿಷಕ್ಕೆ ಏರಿಕೆ!

ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ WhatsAppನಲ್ಲಿ ದಿನಕ್ಕೊಂದು ಹೊಸ ಹೊಸ ಫೀಚರ್‌ಗಳು ಸೇರಿಕೊಳ್ಳುತ್ತಿದೆ. ವಾಟ್ಸಪ್‌ ಸ್ಟೇಟಸ್‌ (WhatsApp Status) ಅವಧಿಯನ್ನು ಒಂದು ನಿಮಿಷಕ್ಕೆ ಏರಿಕೆ ಮಾಡಲಾಗದೆ. ಇದರಿಂದಾಗಿ ವಾಟ್ಸಪ್ ಬಳಕೆದಾರರು ಒಂದು ನಿಮಿಷ (60 ಸೆಕೆಂಡ್) ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಬಹುದಾಗಿದೆ. ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್‌ಗಾಗಿ ಬೀಟಾ ಸ್ಥಿತಿ ನವೀಕರಣಗಳ ಮೂಲಕ ಒಂದು ನಿಮಿಷದವರೆಗಿನ ವೀಡಿಯೊಗಳನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವ ಸೌಲಭ್ಯವನ್ನು ಪರಿಚಯಿಸಿದೆ.

Best Mobiles in India

English summary
WhatsApp is once again making changes to the calling interface in its beta app for Android. This time, they are rolling out a new calling bar, following the earlier introduction of a minimise button to prevent accidental call endings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+