Home
ಸುದ್ದಿಜಾಲ

ಬೀಟಾ ಬಳಕೆದಾರರಿಗೆ ಎನ್‌ಕ್ರಿಪ್ಟೆಡ್‌ ಬ್ಯಾಕಪ್‌ ಫೀಚರ್ಸ್‌ ಪರಿಚಯಿಸಿದ ವಾಟ್ಸಾಪ್‌!

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿರುವ ವಾಟ್ಸಾಪ್‌ ಇದೀಗ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಸದ್ಯ ವಾಟ್ಸಾಪ್‌ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ಕ್ಲೌಡ್‌ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ ಮತ್ತು ಹೆಚ್‌ಡಿ ಫೋಟೋ ಫೀಚರ್ಸ್‌ ಪರಿಚಯಿಸಿದೆ. ಇದರಲ್ಲಿ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ ಫೀಚರ್ಸ್‌ 2.21.15.5 ಆಂಡ್ರಾಯ್ಡ್ ಬೀಟಾ ಅಪ್‌ಡೇಟ್‌ನಲ್ಲಿ ಗೋಚರಿಸುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಭಿಟಾ ಬಳಕೆದಾರರಿಗೆ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ವಾಟ್ಸಾಪ್‌ನಲ್ಲಿ ನಿಮ್ಮ ಎಲ್ಲಾ ಚಾಟ್‌ಗಳು ಪಾಸ್‌ವರ್ಡ್-ಪ್ರೊಟೆಕ್ಷನ್‌ ಹೊಂದಿದೆ. ಆದ್ದರಿಂದ ನೀವು ಪಾಸ್‌ವರ್ಡ್ ಅನ್ನು ರಚಿಸಬೇಕಾಗುತ್ತದೆ. ಅದನ್ನು ಬಳಸಿಕೊಂಡು ನಿಮ್ಮ ಎಲ್ಲಾ ಚಾಟ್‌ಗಳನ್ನು ರಿ ಸ್ಟೋರ್‌ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಹಾಗಾದ್ರೆ ವಾಟ್ಸಾಪ್‌ ಹೊಸದಾಗಿ ಪಪರಿಚಯಿಸುವ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೋಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಹೊಸದಾಗಿ ಪರಿಚಯಿಸಿರುವ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ ಸದ್ಯ ಬೀಟಾ ಆವೃತ್ತಿಯಲ್ಲಿ ಲಬ್ಯವಿದೆ. ಇದು ನಿಮ್ಮ ಚಾಟ್‌ಗಳನ್ನು ರಕ್ಷಿಸಲಿದೆ. ಇದಕ್ಕಾಗಿ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡಬೇಕಾಗುತ್ತದೆ. ಈ ಪಾಸ್‌ವರ್ಡ್ ಖಾಸಗಿಯಾಗಿದೆ ಮತ್ತು ಅದನ್ನು ವಾಟ್ಸಾಪ್, ಫೇಸ್‌ಬುಕ್, ಗೂಗಲ್ ಅಥವಾ ಆಪಲ್‌ನೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ವಾಟ್ಸಾಪ್‌ ಹೇಳಿದೆ. ಅಲ್ಲದೆ ನಿಮ್ಮ ಪಾಸ್‌ವರ್ಡ್ ಅನ್ನು ರಿಸ್ಟೋರ್‌ ಮಾಡಲು ಬಳಸಬಹುದಾದ 64-ಅಂಕಿಯ ಎನ್‌ಕ್ರಿಪ್ಶನ್ ಕೀಲಿಯನ್ನು ಸಹ ವೈಶಿಷ್ಟ್ಯವು ಬೆಂಬಲಿಸುತ್ತದೆ.

ಬ್ಯಾಕಪ್‌

ಇನ್ನು ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ ಫೀಚರ್ಸ್‌ನಲ್ಲಿ 64-ಅಂಕಿಯ ಎನ್‌ಕ್ರಿಪ್ಶನ್ ಕೀಲಿಯನ್ನು ರಚಿಸಲು ವಾಟ್ಸಾಪ್ ಸಹಾಯ ಮಾಡುತ್ತದೆ. ಆದರೆ ನೀವು ಈ ಕೀಲಿಯನ್ನು ಕಳೆದುಕೊಂಡರೆ, ನಿಮ್ಮ ಎಲ್ಲಾ ಡೇಟಾವನ್ನು ಪ್ರವೇಶಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಇದರೊಂದಿಗೆ ವಾಟ್ಸಾಪ್ ಹೆಚಚ್‌ಡಿ ಫೋಟೋಸ್ ಎಂಬ ಫೀಚರ್ಸ್‌ ಅನ್ನು ಸೇರಿಸಿದೆ, ಇದು ನಿಮ್ಮ ಸಂಪರ್ಕಗಳೊಂದಿಗೆ ಹಂಚಿಕೊಳ್ಳಲು ಬಯಸುವ ಫೋಟೋಗಳ ಗುಣಮಟ್ಟವನ್ನು ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.

ವಾಟ್ಸಾಪ್‌

ವಾಟ್ಸಾಪ್‌ಗಾಗಿ ಆಂಡ್ರಾಯ್ಡ್ ಬೀಟಾ ಪರೀಕ್ಷಕರು ಗುಣಮಟ್ಟವನ್ನು ಆಯ್ಕೆ ಮಾಡುವ ಮೂರು ವಿಭಿನ್ನ ಆಯ್ಕೆಗಳನ್ನು ಪಡೆಯುತ್ತಾರೆ.ಮೊದಲನೆಯದು "ಉತ್ತಮ ಗುಣಮಟ್ಟ", ಇದು ಸ್ವಯಂ ವಿವರಣಾತ್ಮಕವಾಗಿದೆ. ಆದರೆ ವಾಟ್ಸಾಪ್ ಉತ್ತಮ-ಗುಣಮಟ್ಟದ ಚಿತ್ರಗಳನ್ನು ಕಳುಹಿಸುವ ಆಯ್ಕೆಯನ್ನು ನೀಡುತ್ತಿಲ್ಲ ಎಂದು ತೋರುತ್ತದೆ. ಫೋಟೋ ಹಗುರವಾಗಿದ್ದರೂ ಸಹ "ಫೋಟೋಗಳನ್ನು ಇನ್ನೂ ಸಂಕುಚಿತಗೊಳಿಸಲಾಗುತ್ತದೆ. ಇದರಲ್ಲಿ ನೀವು ಪಡೆಯುವ ಇತರ ಎರಡು ಆಯ್ಕೆಗಳು "ಆಟೋ" ಮತ್ತು "ಡೇಟಾ ಸೇವರ್." ಈ ವೈಶಿಷ್ಟ್ಯಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲು ಕಂಪನಿಯು ಯಾವಾಗ ಯೋಜಿಸುತ್ತಿದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

Best Mobiles in India

English summary
WhatsApp now independently encrypts your backups in the cloud and this feature is visible in the 2.21.15.5 Android beta update.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+