Whatsapp: ಇಷ್ಟು ದಿನ ಎಲ್ಲರನ್ನೂ ಕಾಡ್ತಿದ್ದ ಸಮಸ್ಯೆಗೆ ಈ ಫೀಚರ್ಸ್ ಮುಕ್ತಿ ನೀಡಲಿದೆ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (Whatsapp)ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಬರುವ ಅಪರಿಚಿತ ಕರೆಗಳ ಕಿರಿಕಿರಿ ತಪ್ಪಿಸಲು ಮುಂದಾಗಿದೆ. ಇದಕ್ಕಾಗಿ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಈ ಆಯ್ಕೆಯಿಂದಾಗಿ ನೀವು ಅಪರಿಚಿತ ಕರೆಗಳಿಂದ ರಕ್ಷಣೆ ಪಡೆಯಬಹುದಾಗಿದೆ.
ಹೌದು, ವಾಟ್ಸಾಪ್ ಹೊಸದಾಗಿ Silence Unknown Callers ಫೀಚರ್ಸ್ ಬಿಡುಗಡೆ ಮಾಡಿದೆ. ಇದರಿಂದ ನಿಮಗೆ ಸ್ಪ್ಯಾಮ್ ಅಥವಾ ಅಪರಿಚಿತ ಸಂಖ್ಯೆಯ ಕರೆಗಳನ್ನು ಸೈಲೆಂಟ್ ಮಾಡಲಿದೆ ಎಂದು ಹೇಳಲಾಗಿದೆ. ಅಪರಿಚಿತ ಕರೆಗಳನ್ನು ಸೈಲೆನ್ಸ್ ಮಾಡುವ ಸೆಟ್ಟಿಂಗ್ ಅನ್ನು ಸರಳವಾಗಿ ಟಾಗಲ್ ಮಾಡುವುದಕ್ಕೆ ಅವಕಾಶವಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಅಪರಿಚಿತ ಕರೆಗಳನ್ನು ಸೈಲೆನ್ಸ್ ಮಾಡುವ ಫೀಚರ್ಸ್ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸಾಮಾನ್ಯ ಕರೆಗಳಲ್ಲಿ ಅಪರಿಚಿತ ಕರೆಗಳ ಕಿರಿಕಿರಿ ಅನುಭವಿಸಿದ್ದ ಜನರಿಗೆ ವಾಟ್ಸಾಪ್‌ನಲ್ಲಿಯೂ ಸಹ ಸ್ಪ್ಯಾಮ್ ಕರೆಗಳ ಹಾವಳಿ ಜಾಸ್ತಿಯಾಗಿದೆ. ವಾಟ್ಸಾಪ್‌ನಲ್ಲಿಯೂ ಸಹ ಅಪರಿಚಿತ ವ್ಯಕ್ತಿಗಳ ಕರೆಗಳಿಂದ ಜನ ಬೇಸತ್ತು ಹೋಗಿದ್ದಾರೆ. ಆದರೆ ಇದಕ್ಕೆ ಫುಲ್‌ಸ್ಟಾಪ್ ಇಡೋದಕ್ಕೆ ವಾಟ್ಸಾಪ್ ಮುಂದಾಗಿದೆ. ಇದಕ್ಕಾಗಿ ಅಪರಿಚಿತ ಕರೆಗಳನ್ನು ಸೈಲೆನ್ಸ್ ಮಾಡುವ ಆಯ್ಕೆಯನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಈ ಆಯ್ಕೆಯು ನಿಮಗೆ ಅಪರಿಚಿತ ಕರೆ ಬಂದರೆ ಅದನ್ನು ಸೈಲೆನ್ಸ್ ಮಾಡಲಿದೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ವಾಟ್ಸಾಪ್ ಬಳಕೆದಾರರು ಅಪರಿಚಿತ ಸಂಪರ್ಕಗಳಿಂದ ಒಳಬರುವ ಕರೆಗಳನ್ನು ಸೈಲೆನ್ಸ್ ಮಾಡುವ ಆಯ್ಕೆಯನ್ನು ಘೋಷಿಸಿದ್ದಾರೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಡಿವೈಸ್‌ಗಳಲ್ಲಿ ಕೂಡ ಲಭ್ಯವಾಗಲಿದೆ. ಇನ್ನು ಈ ಆಯ್ಕೆಯನ್ನು ಸಕ್ರಿಯಗೊಳಿಸುವ ಬಳಕೆದಾರರು ಅಪರಿಚಿತ ಸಂಪರ್ಕಗಳಿಂದ ಕರೆಗಳಿಂದ ಯಾವುದೇ ರೀತಿಯಿಂದಲೂ ತೊಂದರೆಗೊಳಗಾಗುವುದಿಲ್ಲ ಎಂದು ಹೇಳಲಾಗಿದೆ.
ಆದರೆ ನಿಮಗೆ ಕರೆ ಬಂದಿರುವ ಬಗ್ಗೆ ವಾಟ್ಸಾಪ್ ನೋಟಿಫಿಕೇಶನ್‌ನಲ್ಲಿ ಕಾಣಲಿದೆ. ಅಂದರೆ ಬಳಕೆದಾರರು ಅಪರಿಚಿತ ವ್ಯಕ್ತಿಯಿಂದ ಬರುವ ಕರೆಯನ್ನು ತಪ್ಪಿಸಿಕೊಳ್ಳುವುದಿಲ್ಲ, ಬದಲಿಗೆ ಅಪರಿಚಿತ ಕರೆ ಬಂದಾಗ ನಿಮ್ಮ ಫೋನ್ ರಿಂಗ್ ಆಗುವುದನ್ನು ಈ ಫೀಚರ್ಸ್ ತಡೆಯಲಿದೆ. ಇದರಿಂದ ನಿಮಗೆ ಕರೆ ಬಂದಿರುವುದು ಕೂಡ ತಿಳಿಯುವುದಿಲ್ಲ ಎನ್ನಲಾಗಿದೆ. ಇನ್ನು ಈ ಫೀಚರ್ಸ್ ಅನ್ನು ನಿಮ್ಮ ಆಂಡ್ರಾಯ್ಡ್‌ನಲ್ಲಿ ಆಕ್ಟಿವ್ ಗೊಳಿಸಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಅಂದರೆ ಆಂಡ್ರಾಯ್ಡ್ ಫೋನ್ ಬಳಕೆದಾರರು ಮೊದಲಿಗೆ ವಾಟ್ಸಾಪ್‌ನಲ್ಲಿರುವ ಮೂರು-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಬೇಕು. ನಂತರ ಸೆಟ್ಟಿಂಗ್ಸ್ > ಪ್ರೈವೆಸಿ > ಕರೆಗಳನ್ನು ಟ್ಯಾಪ್ ಮಾಡಬೇಕು. ಇದಾದ ನಂತರ ವಾಟ್ಸಾಪ್‌ನಲ್ಲಿ ಸೇರ್ಪಡೆ ಆಗಿರುವ ಸೈಲೆನ್ಸ್ ಅಪರಿಚಿತ ಕರೆಗಾರರ ಆಯ್ಕೆಯನ್ನು ಟಾಗಲ್ ಮಾಡಬೇಕಾಗುತ್ತದೆ. ಇನ್ನು ಐಫೋನ್ ಬಳಕೆದಾರರು ವಾಟ್ಸಾಪ್‌ನಲ್ಲಿ ಗೇರ್ ಐಕಾನ್ ಟ್ಯಾಪ್ ಮಾಡಬೇಕು, ನಂತರ ಪ್ರೈವೆಸಿ > ಕರೆಗಳನ್ನು ಟ್ಯಾಪ್ ಮಾಡಿ ಮತ್ತು ಸೈಲೆನ್ಸ್ ಅಪರಿಚಿತ ಕರೆಗಳ ಆಯ್ಕೆಯನ್ನು ಟಾಗಲ್ ಮಾಡಬೇಕಿದೆ.
ಇದಲ್ಲದೆ ವಾಟ್ಸಾಪ್ ಇತ್ತೀಚಿಗೆ ವಾಯಿಸ್ ನೋಟ್ ಅನ್ನು ಸಹ ಸ್ಟೇಟಸ್ ಆಗಿ ಇಡಲು ಅವಕಾಶ ಒದಗಿಸುವ ಮೂಲಕ ಬಳಕೆದಾರರಿಗೆ ಖುಷಿ ನೀಡಿದೆ.ಅಂದಹಾಗೆ ವಾಟ್ಸಾಪ್ ಸ್ಟೇಟಸ್‌ಗೆ ಹಾಕುವ ವಾಯಿಸ್ ನೋಟ್/ ರೆಕಾರ್ಡಿಂಗ್ ಗಳು 30 ಸೆಕೆಂಡ್‌ಗಳಿಗಿಂತ ಹೆಚ್ಚಿರಬಾರದು.
ವಾಯಿಸ್ ರೆಕಾರ್ಡಿಂಗ್ ಅನ್ನು ಸ್ಟೇಟಸ್ ಹಾಕಲು ಈ ಕ್ರಮ ಅನುಸರಿಸಿ
ಹಂತ 1. ಈ ಫೀಚರ್ ಬಳಸಲು ಮೊದಲು ನಿಮ್ಮ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಬೇಕು. ನಂತರ ವಾಟ್ಸಾಪ್ ನಲ್ಲಿ ಸ್ಟೇಟಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 2. ನಂತರ ಈ ಪುಟದಲ್ಲಿ ಪೆನ್ಸಿಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಆಂಡ್ರಾಯ್ಡ್ ಬಳಕೆದಾರರು ಅದನ್ನು ಕೆಳಗಿನ ಬಲ ಭಾಗದ ಮೂಲೆಯಲ್ಲಿ ಕಾಣಬಹುದಾಗಿದೆ. ಇನ್ನು iOS ಬಳಕೆದಾರರು ಅದನ್ನು ಎಲ್ಲಾ ಸ್ಟೇಟಸ್ ಅಪ್ಡೇಟ್ ಮೇಲ್ಭಾಗದಲ್ಲಿ ಕಾಣಬಹುದಾಗಿದೆ.
ಹಂತ 3. ಆ ಬಳಿಕ, ರೆಕಾರ್ಡಿಂಗ್ ಆರಂಭಿಸಲು ಕೆಳಗಿನ ಬಲ ಭಾಗದ ಮೂಲೆಯಲ್ಲಿರುವ ಮೈಕ್ ಐಕಾನ್ ಮೇಲೆ ಟ್ಯಾಪ್ ಮಾಡಿ ಹಿಡಿದುಕೊಳ್ಳಿ.
ಹಂತ 4. ಬಳಿಕ ಮೈಕ್ ಐಕಾನ್ ಅನ್ನು ಎಡಕ್ಕೆ ಸ್ಲೈಡ್ ಮಾಡುವ ಮೂಲಕ ನಿಮಗೆ ಬೇಡದ ರೆಕಾರ್ಡಿಂಗ್ ಅನ್ನು ಡಿಲೀಟ್ ಮಾಡಬಹುದು.
ಹಂತ 5. ನಂತರ ನಿಮ್ಮ ರೆಕಾರ್ಡಿಂಗ್ ನಂತರ ಪ್ಲೇ ಬಟನ್ ಅನ್ನು ಒತ್ತುವ ಮೂಲಕ ರೆಕಾರ್ಡಿಂಗ್ ಸೆಂಡ್ ಮಾಡುವ ಮೊದಲು ಪೂರ್ವವೀಕ್ಷಿಸಬಹುದು.
ಹಂತ 6. ನಿಮಗೆ ರೆಕಾರ್ಡಿಂಗ್ ಇಷ್ಟವಾಗದಿದ್ದರೆ ಅದನ್ನು ಡಿಲೀಟ್ ಸಹ ಮಾಡಬಹುದು. ಬೇಕಿದ್ದರೆ ಮತ್ತೆ ರೆಕಾರ್ಡಿಂಗ್ ಪ್ರಾರಂಭಿಸಬಹುದು
ಹಂತ 7. ಇಷ್ಟವಾದ ವಾಯ್ಸ್ ನೋಟ್ ಸ್ಟೇಟಸ್ ಪೋಸ್ಟ್ ಮಾಡಲು ಕೆಳಗಿನ ಬಲ ಭಾಗದ ಮೂಲೆಯಲ್ಲಿರುವ ಸೆಂಡ್ ಬಟನ್ ಒತ್ತಿರಿ.


Click it and Unblock the Notifications








