Home
ಸುದ್ದಿಜಾಲ

ವಿಶ್ವದ ನಂಬರ್‌ ಒನ್‌ ಸ್ಥಾನ ಉಳಿಸಿಕೊಂಡ ವಾಟ್ಸಾಪ್‌!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರನ್ನು ಪಡೆದುಕೊಂಡಿದೆ. ಆದರೆ ಹೊಸ ಗೌಪ್ಯತೆ ನಿಯಮವನ್ನು ಜಾರಿಗೊಳಿಸಿದ ನಂತರ ನಂಬರ್‌ ಒನ್‌ ಸ್ಥಾನವನ್ನು ಕಳೆದುಕೊಳ್ಳಲಿದೆ ಎನ್ನಲಾಗಿತ್ತು. ಆದರೆ ವಾಟ್ಸಾಪ್‌ಗೆ ಪರ್ಯಾಯ ಎನಿಸಿಕೊಂಡಿರುವ ಟೆಲಿಗ್ರಾಮ್‌ ಮತ್ತು ಸಿಗ್ನಲ್‌ ವಾಟ್ಸಾಪ್‌ನ ಹತ್ತಿರ ಕೂಡ ಸುಳಿಯುವುದಕ್ಕೆ ಸಾದ್ಯವಾಗಿಲ್ಲ. ಏಕೆಂದರೆ ವಾಟ್ಸಾಪ್‌ ಆರು ಬಿಲಿಯನ್‌ಗೂ ಅಧಿಕ ಹೆಚ್ಚಿನ ಡೌನ್‌ಲೋಡ್‌ಗಳನ್ನು ಪಡೆದುಕೊಂಡರೆ, ಟೆಲಿಗ್ರಾಮ್‌ 36 ಮಿಲಿಯನ್ ಡೌನ್‌ಲೋಡ್‌ ಹೊಂದಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಅಪ್ಲಿಕೇಶನ್‌ ತನ್ನ ನಂಬರ್‌ ಒನ್‌ ಸ್ಥಾನವನ್ನು ಉಳಿಸಿಕೊಂಡಿದ್ದು, ಟೆಲಿಗ್ರಾಮ್‌ ಮತ್ತು ಸಿಗ್ನಲ್‌ ತಮ್ಮ ಪ್ರಭಾವ ಬೀರುವಲ್ಲಿ ವಿಫಲವಾಗಿವೆ. ವಾಟ್ಸಾಪ್‌ ಇಂದಿಗೂ ಕೂಡ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಬಳಸುವವರೆಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಅಗತ್ಯ ಎನಿಸುವ ಮಟ್ಟಿಗೆ ವಾಟ್ಸಾಪ್‌ ಬಳಸುತ್ತಿದ್ದಾರೆ. ಹಾಗಾದ್ರೆ ವಾಟ್ಸಾಪ್‌ ತನ್ನ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿರುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ಈ ವರ್ಷದ ಪ್ರಾರಂಭದಲ್ಲಿ ವಾಟ್ಸಾಪ್‌ ತನ್ನ ಹೊಸ ಗೌಪ್ಯತೆ ಸೆಟ್ಟಿಂಗ್‌ ವಿಚಾರವಾಗಿ ಸಾಕಷ್ಟು ವಿರೋದ ಎದುರಿಸಿತ್ತು. ಇದೇ ಕಾರಣಕ್ಕೆ ಲಕ್ಷಾಂತರ ಬಳಕೆದಾರರು ವಾಟ್ಸಾಪ್‌ನ ಪ್ರತಿಸ್ಫರ್ಧಿ ಅಪ್ಲಿಕೇಶನ್‌ಗಳನ್ನು ಬಳಸುವುದಕ್ಕೆ ಮುಂದಾದರು. ಅದರಲ್ಲು ವಿಶ್ವದ ನಂಬರ್‌ ಒನ್‌ ಶ್ರೀಮಂತ ಎನಿಸಿಕೊಂಡಿದ್ದ ಎಲಾನ್ ಮಸ್ಕ್ ತನ್ನ 42 ಮಿಲಿಯನ್ ಟ್ವಿಟರ್ ಅನುಯಾಯಿಗಳಿಗೆ ಎನ್ಕ್ರಿಪ್ಟ್ ಮಾಡಿದ ಸಂದೇಶ ಸೇವೆ ಸಿಗ್ನಲ್ ಅನ್ನು ಬಳಸಲು ಹೇಳಿದ ನಂತರ ವಾಟ್ಸಾಪ್‌ ಇನ್ನಷ್ಟು ಬಳಕೆದಾರರನ್ನು ಕಳೆದುಕೊಂಡಿತ್ತು. ಅಷ್ಟೇ ಅಲ್ಲ ಟೆಲಿಗ್ರಾಮ್‌ ಕೂಡ ತನ್ನ ಬಳಕೆದಾರರ ಸಂಖ್ಯೆಯನ್ನು ರಾಕೆಟ್‌ ವೇಗದಲ್ಲಿ ಹೆಚ್ಚಿಸಿಕೊಂಡಿತ್ತು. ಆದರೂ ಕೂಡ ವಾಟ್ಸಾಪ್‌ನ ಇದೀಗ ಮತ್ತೆ ನಂಬರ್‌ ಸ್ಥಾನದಲ್ಲಿಯೇ ಮುಂದುವರೆದಿದೆ, ವಾಟ್ಸಾಪ್‌ ಅನ್ನು ಸೈಡ್‌ಲೈನ್‌ ಮಾಡುವುದಿರಲಿ ಇದರ ಸಮೀಪ ಬರುವುದಕ್ಕೂ ಈ ಎರಡೂ ಅಪ್ಲಿಕೇಶನ್‌ಗಳಿಗೆ ಸಾಧ್ಯವಾಗಿಲ್ಲ.

ವಾಟ್ಸಾಪ್‌

ಇತ್ತೀಚಿನ ಸಂಖ್ಯೆಗಳು ವಾಟ್ಸಾಪ್‌ನ ಪ್ರಾಬಲ್ಯವನ್ನು ತೋರಿಸುತ್ತಿದೆ. ಇತರೆ ಅಪ್ಲಿಕೇಶನ್‌ಗಳಿಂಗಿಂತ ಭಿನ್ನವಾದ ಫೀಚರ್ಸ್‌ಗಳು ಸರಳವಾದ ಬಳಕೆ ಕಾರಣದಿಂದ ವಾಆಟ್ಸಾಪ್‌ ಪ್ರತಿಯಬ್ಬರ ನೆಚ್ಚಿನ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಜನವರಿಯಿಂದ ಪ್ರತಿದಿನ ಟೆಲಿಗ್ರಾಮ್ ಮತ್ತು ಸಿಗ್ನಲ್ ಬಳಸುವ ಜನರು ಹೆಚ್ಚಾಗಿದ್ದರೂ, ನಂತರದ ದಿನಗಳಲ್ಲಿ ಅದು ಕ್ರಮೇಣ ಕಡಿಮೆಯಾಗಿದೆ. ಸಿಗ್ನಲ್‌ನ ದೈನಂದಿನ ಸಕ್ರಿಯ ಬಳಕೆದಾರರು ವರ್ಷದ ಆರಂಭದಲ್ಲಿ 13 ಮಿಲಿಯನ್‌ನಿಂದ 5 ಮಿಲಿಯನ್‌ಗೆ ಕುಸಿದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ವಾಟ್ಸಾಪ್‌ನ ಗೌಪ್ಯತೆ ವಿವಾದವು ಅದರ ಬಳಕೆಯನ್ನು ಸಹ ಕಡಿತಗೊಳಿಸಲಿಲ್ಲ. ಅದರ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ ಇದೇ ಅವಧಿಯಲ್ಲಿ ಸುಮಾರು 5% ರಿಂದ ಸುಮಾರು 600 ಮಿಲಿಯನ್‌ಗೆ ಹೆಚ್ಚಾಗಿದೆ.

ಅಪ್ಲಿಕೇಶನ್‌

ಇದಲ್ಲದೆ ಕಳೆದ ಜನವರಿಯಲ್ಲಿ, ಭದ್ರತೆಯ ಕಾರಣದಿಂದಾಗಿ ಸಿಗ್ನಲ್‌ ಮತ್ತು ಟೆಲಿಗ್ರಾಮ್‌ ಅಪ್ಲಿಕೇಶನ್‌ ಸೇರಿಕೊಂಡಿದ್ದ ಅದೆಷ್ಟೋ ಮಂದಿ ಕೂಡ ವಾಟ್ಸಾಪ್‌ಗೆ ಮರಳಿದ್ದಾರೆ. ಸಿಗ್ನಲ್‌ ಅಪ್ಲಿಕೇಶನ್‌ ಬಳಸುವಾಗ ಉಂಟಾದ ಸರ್ವರ್‌ ತೊಂದರೆ, ಟೆಲಿಗ್ರಾಮ್‌ನಲ್ಲಿ ಉಂಟಾದ ಕಮ್ಯೂನಿಕೇಶನ್‌ ಪ್ರಾಬ್ಲಂಗಳಿಂದ ವಾಟ್ಸಾಪ್‌ಗೆ ಮರಳಿದ್ದಾರೆ. ಅಲ್ಲದೆ ಪ್ರಾರಂಭದಲ್ಲಿ ಸಿಗ್ನಲ್‌ ಅಪ್ಲಿಕೇಶನ್‌ನಲ್ಲಿ ಗ್ರೂಪ್‌ ಕ್ರಿಯೆಟ್‌ ಮಾಡಿಕೊಂಡು ವಾಟ್ಸಾಪ್‌ ತೊರೆಯಿರಿ ಎಂದು ಹೇಳಿದ್ದ ಸಾಕಷ್ಟು ಮಂದಿ ವಾಟ್ಸಾಪ್‌ಗೆ ಮರಳಿ ಮತ್ತೆ ಗ್ರೂಪ್‌ ಕ್ರಿಯೆಟ್‌ ಮಾಡಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ವಾಟ್ಸಾಪ್‌ ತನ್ನ ಪ್ರಾಬಲ್ಯವನ್ನು ಬೆಳೆಸಿಕೊಂಡಿದೆ. ಇದೇ ಕಾರಣಕ್ಕೆ ಪ್ರಸ್ತುತ ದಿನಗಳಲ್ಲಿ ವಾಟ್ಸಾಪ್‌ನ ಜನಪ್ರಿಯತೆ ಕುಗ್ಗಿಸುವಂತಹ ಇನ್ನೊಂದು ಅಪ್ಲಿಕೇಶನ್‌ ಲಭ್ಯವಿಲ್ಲ ಎಂದೇ ಹೇಳಬಹುದು.

Best Mobiles in India

English summary
WhatsApp app rivals, Telegram and Signal, will never be able to reach the heights of popularity that the Facebook-owned app has.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+