ವಾಟ್ಸಾಪ್‌ನಿಂದ ಬರಲಿದೆ ಮತ್ತೊಂದು ಹೊಸ ಆ್ಯಪ್‌! ಏನಿದರ ವಿಶೇಷ!

|

ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ಬಳಸದ ಸ್ಮಾರ್ಟ್‌ಫೋನ್‌ ಬಳಕೆದಾರರು ಇಲ್ಲ ಎನ್ನುವಷ್ಟರ ಮಟ್ಟಿಗೆ ಎಲ್ಲರನ್ನು ಸೆಳೆದಿದೆ. ಅದಕ್ಕೆ ತಕ್ಕಂತೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುವ ಮೂಲಕ ಎಲ್ಲಾ ವಯೋಮಾನದವರನ್ನು ವಾಟ್ಸಾಪ್‌ ಸೆಳೆದಿದೆ. ಇದೀಗ ವಾಟ್ಸಾಪ್‌ ಸ್ಮಾರ್ಟ್‌ ಟ್ಯಾಬ್‌ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ.

ಮೆಟಾ

ಹೌದು, ಮೆಟಾ-ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ ಟ್ಯಾಬ್ಲೆಟ್‌ಗಳಿಗಾಗಿ ಮೀಸಲಾದ ಹೊಸ ಅಪ್ಲಿಕೇಶನ್‌ ಪರಿಚಯಿಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಅಪ್ಲಿಕೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ ಟ್ಯಾಬ್‌ ಬಳಸುವವರಿಗಾಗಿಯೇ ಹೊಸ ವಾಟ್ಸಾಪ್‌ ಅಪ್ಲಿಕೇಶನ್‌ ಲಭ್ಯವಾಗಲಿದೆ. ಒಂದು ವೇಳೆ ಟ್ಯಾಬ್‌ಗಳಿಗಾಗಿ ವಾಟ್ಸಾಪ್‌ ಹೊಸ ಆ್ಯಪ್‌ ಪರಿಚಯಿಸಿದರೆ ಏನೆಲ್ಲಾ ಲಾಭವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ದಿನಗಳಲ್ಲಿ

ಇಂದಿನ ದಿನಗಳಲ್ಲಿ ಸ್ಮಾರ್ಟ್‌ ಟ್ಯಾಬ್‌ ಬಳಕೆದಾರರು ವಾಟ್ಸಾಪ್‌ ಪ್ರವೇಶಿಸಲು ವಾಟ್ಸಾಪ್‌ನ ಮೊಬೈಲ್‌ ಆವೃತ್ತಿ ಅಥವಾ ವಾಟ್ಸಾಪ್‌ ವೆಬ್‌ ಆವೃತ್ತಿ ಬಳಸುತ್ತಿದ್ದಾರೆ. ಈ ಎರಡು ಹಂತಗಳ ಮೂಲಕ ಟ್ಯಾಬ್‌ಗಳಲ್ಲಿ ವಾಟ್ಸಾಪ್‌ ಬಳಸಲು ಸಾಧ್ಯವಾಗಲಿದೆ. ಆದರೆ ಟ್ಯಾಬ್‌ನಲ್ಲಿ ವಾಟ್ಸಾಪ್‌ ಬಳಸುವುದಕ್ಕೆ ಕೆಲವು ಮಿತಿಗಳನ್ನು ಅಳವಡಿಸಲಾಗಿದೆ. ಆದರಿಂದ ವಾಟ್ಸಾಪ್‌ ಮೊಬೈಲ್‌ ಅಪ್ಲಿಕೇಶನ್‌ ಮಾದರಿಯಲ್ಲಿ ಟ್ಯಾಬ್‌ನಲ್ಲಿ ಬಳಸಲು ಸಾದ್ಯವಿಲ್ಲ. ಇದರಿಂದ ಕೆಲವೊಮ್ಮೆ ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಟ್ಯಾಬ್‌ಗಾಗಿಯೇ ಹೊಸ ಆ್ಯಪ್‌ ಪರಿಚಯಿಸುವುದಕ್ಕೆ ವಾಟ್ಸಾಪ್‌ ಮುಂದಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ಟ್ಯಾಬ್‌ಗಳಿಗಾಗಿ ಹೊಸ ಆ್ಯಪ್ ಪರಿಚಯಿಸಿದರೆ ಬಳಕೆದಾರರಿಗೆ ಅನುಕೂಲವಾಗಲಿದೆ. ಏಕೆಂದರೆ ಟ್ಯಾಬ್‌ನ ಬಿಗ್‌ ಫಾರ್ಮ್‌ ಪ್ಯಾಕ್ಟರ್‌ಗೆ ಅನುಕೂಲವಾಗಲಿದೆ. ಪ್ರಸ್ತುತ ವೆಬ್‌ ಬ್ರೌಸರ್‌ ಮತ್ತು ಮೊಬೈಲ್‌ ಅವೃತ್ತಿಯ ಅಪ್ಲಿಕೇಶನ್‌ಗಳು ಟ್ಯಾಬ್ಲೆಟ್‌ನ ದೊಡ್ಡ ಫಾರ್ಮ್ ಫ್ಯಾಕ್ಟರ್‌ಗೆ ಅನುಗುಣವಾಗಿಲ್ಲ. ಆದ್ದರಿಂದ, ಸ್ಮಾರ್ಟ್‌ಫೋನ್‌ಗಿಂತ ದೊಡ್ಡದಾದ ಆದರೆ ಪರ್ಸನಲ್ ಕಂಪ್ಯೂಟರ್‌ಗಿಂತ ಚಿಕ್ಕದಾದ ಪರದೆಯಲ್ಲಿ ಹೊಂದಿಕೊಳ್ಳುವ ಮೀಸಲಾದ ಅಪ್ಲಿಕೇಶನ್‌ ಟ್ಯಾಬ್‌ ಬಳಕೆದಾರರಿಗೆ ಸೂಕ್ತವಾಗಲಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಟ್ಯಾಬ್ಲೆಟ್‌ ಆವೃತ್ತಿ ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಎಂದು ಬ್ಯಾನರ್‌ನಲ್ಲಿ ಹೇಳಲಾಗಿದೆ. ಈ ಹೊಸ ಇನ್-ಅಪ್ಲಿಕೇಶನ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವಾಬೇಟಾಇನ್ಫೋ ಹೇಳಿದೆ. ಒಂದು ವೇಳೆ ಇದು ನಿಜವಾದರೆ ಟ್ಯಾಬ್‌ನಲ್ಲಿ ಕೂಡ ವಾಟ್ಸಾಪ್‌ ಅನ್ನು ಬಳಸಲು ಬಯಸೋರಿಗೆ ಉಪಯೋಗವಾಗಲಿದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಟ್ಯಾಬ್‌ ಬಳಕೆ ಕೂಡ ಹೆಚ್ಚಿರುವುದರಿಂದ ವಾಟ್ಸಾಪ್‌ನ ಟ್ಯಾಬ್‌ ಆವೃತ್ತಿ ಹೆಚ್ಚು ಜನಪ್ರಿಯತೆ ಪಡೆಯುವ ಸಾಧ್ಯತೆ ಕೂಡ ಇದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ವಾಟ್ಆಪ್‌ ಕಮ್ಯೂನಿಟಿ ಫೀಚರ್ಸ್‌ ಕೂಡ ಒಂದಾಗಿದೆ. ಇದರಿಂದ ನೀವು ವಾಟ್ಸಾಪ್‌ನಲ್ಲಿ ಎಲ್ಲಾ ಗ್ರೂಪ್‌ಗಳನ್ನು ಒಂದೇ ಕಮ್ಯೂನಿಟಿಯಲ್ಲಿ ತರುವುದಕ್ಕೆ ಸಾದ್ಯವಾಗಲಿದೆ. ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಎಲ್ಲರನ್ನು ಒಂದೇ ವೇದಿಕೆಗೆ ತರಲು ಇದು ಸಹಕಾರಿಯಾಗಲಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಕಮ್ಯೂನಿಟಿ ಗುಂಪುಗಳು ವಿವರಣೆ ಮತ್ತು ಮೆನುವನ್ನು ಹೊಂದಿರುತ್ತದೆ. ಇದರಲ್ಲಿ ನೀವು ಯಾವ ಜನರು ಕಮ್ಯೂನಿಟಿ ಸೇರಬಹುದು ಅನ್ನೊದನ್ನ ಆಯ್ಕೆ ಮಾಡಬಹುದು. ದೊಡ್ಡ ಮತ್ತು ಹೆಚ್ಚು ಸಂಕೀರ್ಣವಾದ ಗ್ರೂಪ್ಸ್‌ ನಡುವಿನ ಸಂಭಾಷಣೆಗಳಿಗೆ ರಚನೆ ಮತ್ತು ಸಂಘಟನೆಯನ್ನು ಒದಗಿಸುತ್ತದೆ. ಇದರಿಂದ ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಜನರಿಗೆ ಮುಖ್ಯವಾದುದನ್ನು ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ವಾಟ್ಸಾಪ್‌ನಲ್ಲಿ ಕಮ್ಯೂನಿಟಿ ಫೀಚರ್ಸ್‌ಗಳನ್ನು ಬಳಸುವುದಕ್ಕೆ ಬಳಕೆದಾರರು ತಮ್ಮ ಆಂಡ್ರಾಯ್ಡ್‌ ಚಾಟ್‌ಗಳ ಮೇಲ್ಭಾಗದಲ್ಲಿ ಮತ್ತು ಐಒಎಸ್‌ನಲ್ಲಿ ಕೆಳಭಾಗದಲ್ಲಿರುವ ಹೊಸ ಕಮ್ಯೂನಿಟಿ ಟ್ಯಾಬ್‌ ಅನ್ನು ಟ್ಯಾಪ್‌ ಮಾಡಬೇಕಾಗುತ್ತದೆ. ನಂತರ ಬಳಕೆದಾರರು ಮೊದಲಿನಿಂದ ಹೊಸ ಸಮುದಾಯವನ್ನು ಪ್ರಾರಂಭಿಸಬಹುದು.

Best Mobiles in India

English summary
WhatsApp is working on a dedicated app for tablets

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X