ಶೀಘ್ರದಲ್ಲೇ ವಾಟ್ಸಾಪ್‌ಗೆ ಸೇರಲಿದೆ ಹೊಸ ಫೀಚರ್ಸ್.. ಇದರ ಉಪಯೋಗ ಕೇಳಿದ್ರೆ ಅಚ್ಚರಿಯಾಗುತ್ತೆ
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ಹೊಸ ಫೀಚರ್ಸ್ ಅನ್ನು ಪಡೆಯಲಿದೆ. ಈ ಫೀಚರ್ಸ್ ವಾಟ್ಸಾಪ್ ಗ್ರೂಪ್ ಸೇರುವ ಬಳಕೆದಾರರ ಅನುಭವವನ್ನು ಸುಧಾರಿಸಲಿದೆ ಎನ್ನಲಾಗಿದೆ. ಸದ್ಯ ಈ ಫೀಚರ್ಸ್ ಇನ್ನು ಕೂಡ ಅಭಿವೃದ್ದಿಯ ಹಂತದಲ್ಲಿದ್ದು, ಇದರ ವಿವರಗಳನ್ನು ವಾಟ್ರಾಪ್ ಫೀಚರ್ಸ್ ಟ್ರ್ಯಾಕರ್ ವಾಬೇಟಾಇನ್ಫೋ ಶೇರ್ ಮಾಡಿದೆ.
ಹೌದು, ವಾಟ್ಸಾಪ್ ಗ್ರೂಪ್ ಸೇರುವ ಬಳಕೆದಾರರಿಗೆ ಹೊಸ ಫೀಚರ್ಸ್ ಸದ್ಯದಲ್ಲೇ ಲಭ್ಯವಾಗಲಿದೆ. ಇದು ವಾಟ್ಸಾಪ್ ಗ್ರೂಪ್‌ಗೆ ನೀವು ಸೇರುವುದು ಬೇಕಾ ಬೇಡವೇ ಅನ್ನೋದನ್ನ ನಿರ್ಧರಿಸುವುದಕ್ಕೆ ನಿಮಗೆ ಸಹಕಾರಿಯಾಗಲಿದೆ. ಇದಕ್ಕಾಗಿ ನಿಮಗೆ ವಾಟ್ಸಾಪ್ ಗ್ರೂಪ್ ಸದಸ್ಯರನ್ನು ಚಾಟ್‌ಗೆ ಸೇರಿಸುವ ಮೊದಲು ಗುಂಪಿನಿಂದ 24 ಗಂಟೆಗಳ ಸಂದೇಶಗಳನ್ನು ತೋರಿಸುತ್ತದೆ ಎನ್ನಲಾಗಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ನಿಂದ ನಿಮಗೆ ಏನೆಲ್ಲಾ ಲಾಭವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ಗೆ ಸೇರಲಿರುವ ಹೊಸ ಫೀಚರ್ಸ್ ಗ್ರೂಪ್‌ಗೆ ಹೊಸ ಸದಸ್ಯರು ಸೇರುವಾಗ ಸಾಕಷ್ಟು ಉಪಯೋಗಕ್ಕೆ ಬರಲಿದೆ. ಇದನ್ನು ವಾಟ್ಸಪ್ ಗ್ರೂಪ್ ಅಡ್ಮಿನ್ ಮಾತ್ರ ಸಕ್ರಿಯಗೊಳಿಸಬಹುದಾಗಿದೆ. ಇದರಿಂದ ಹೊಸದಾಗಿ ವಾಟ್ಸಾಪ್ ಗ್ರೂಪ್‌ಗೆ ಸೇರಿದ ಸದಸ್ಯರಿಗೆ ಇತ್ತೀಚಿನ ಸಂದೇಶಗಳ ಕುರಿತು ಸಹಾಯ ಮಾಡುತ್ತದೆ. ಅಂದರೆ ಈ ಫೀಚರ್ಸ್ ''ರೀಸೆಂಟ್ ಹಿಸ್ಟರಿ ಶೇರಿಂಗ್'' ಎಂದು ಹೆಸರಿಸಲಾಗಿದೆ. ಹೊಸದಾಗಿ ಸೇರಿದ ಸದಸ್ಯರಿಗೆ ಗ್ರೂಪ್‌ನಲ್ಲಿ ಇತ್ತೀಚಿಗೆ ಯಾವೆಲ್ಲಾ ಸಂದೇಶಗಳನ್ನು ಕಳುಹಿಸಲಾಗಿದೆ ಅನ್ನೊದನ್ನ ತಿಳಿಯಲು ಅವಕಾಶ ಮಾಡಿಕೊಡಲಿದೆ.
ಸದ್ಯ ಈ ಫೀಚರ್ಸ್ ಅನ್ನು ಆಂಡ್ರಾಯ್ಡ್ 2.23.18.5 ವಾಟ್ಸಾಪ್ ಬೀಟಾದಲ್ಲಿ ಗುರುತಿಸಲಾಗಿದೆ. ಆದರೆ ಬೀಟಾ ಪರೀಕ್ಷಕರು ವಾಟ್ಸಾಪ್‌ನ ಇತ್ತೀಚಿನ ಪರೀಕ್ಷಾ ಆವೃತ್ತಿಯಲ್ಲಿ ಇದನ್ನು ಪ್ರಯತ್ನಿಸಲು ಸಾಧ್ಯವಿಲ್ಲ. ಏಕೆಂದರೆ ಇದು ಇನ್ನು ಕೂಡ ಅಭಿವೃದ್ದಿ ಹಂತದಲ್ಲಿದೆ. ಈ ಫೀಚರ್ಸ್ ಎಲ್ಲಾ ಬಳಕೆದಾರರಿಗೆ ಯಾವಾಗ ಹೊರಹೊಮ್ಮುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇತ್ತೀಚೆಗೆ ವಾಟ್ಸಾಪ್ ಬಳಕೆದಾರರು ಹೊಸ ಚಾನಲ್‌ಗೆ ಸೇರಿದಾಗ 30 ದಿನಗಳ ಹಿಂದಿನ ಸಂದೇಶಗಳನ್ನು ನೋಡಲು ಅವಕಾಶ ನೀಡಿದೆ. ಆದರೆ ಈ ಫೀಚರ್ಸ್ ಚಾನಲ್‌ಗಿಂತ ಭಿನ್ನವಾಗಿದ್ದು, ರೀಸೆಂಟ್ ಹಿಸ್ಟರಿ ಶೇರಿಂಗ್ ಫೀಚರ್ಸ್ 24 ಗಂಟೆಗಳ ಕಡಿಮೆ ವಿಂಡೋವನ್ನು ನೀಡಲಿದೆ.
ಈಗಾಗಲೇ ಹೇಳಿರುವಂತೆ ಈ ಫೀಚರ್ಸ್ ಅನ್ನು ಗ್ರೂಪ್ ಅಡ್ಮಿನ್ ಮಾತ್ರ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ಇದನ್ನು ಗ್ರೂಪ್ ಅಡ್ಮಿನ್ ಆಕ್ಟಿವ್ ಮಾಡಿದರೆ ಅಸ್ತಿತ್ವದಲ್ಲಿರುವ ಸದಸ್ಯರಿಗೆ ಈ ಫೀಚರ್ಸ್ ಆನ್ ಆಗಿರುವ ಸಂದೇಶ ಕಾಣಲಿದೆ.
ಇದಲ್ಲದೆ ಇತ್ತೀಚಿಗೆ ವಾಟ್ಸಾಪ್ ನ್ಯೂ ಜೆನೆರೇಟಿವ್ AI ಬ್ಯಾಕ್ಡ್ ಫೀಚರ್ ಅನ್ನು ಪರೀಕ್ಷಿಸುತ್ತಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ಹೊಸ ಅನುಭವವನ್ನು ಪಡೆದುಕೊಳ್ಳಬಹುದು. ಅಂದರೆ ವಾಟ್ಸಾಪ್ ಬಳಕೆದಾರರು ಕೇವಲ ಟೆಕ್ಸ್ಟ್ ಪ್ರಾಂಪ್ಟ್‌ನೊಂದಿಗೆ ಕಸ್ಟಮ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್ ಮಾಡಬಹುದಾಗಿದೆ. ಇದರಿಂದ ಬಳಕೆದಾರರು ತಮ್ಮ ಆಲೋಚನೆಯನ್ನು ಸ್ಟಿಕ್ಕರ್ ಆಗಿ ಕನ್ವರ್ಟ್ ಮಾಡಲು ಅವಕಾಶ ಸಿಗಲಿದೆ ಎಂದು ವರದಿಯಾಗಿದೆ.
ಇನ್ನು ಈ ಹೊಸ ಆಯ್ಕೆಯು ಆಂಡ್ರಾಯ್ಡ್ 2.23.17.8 ವಾಟ್ಸಾಪ್ ಬೀಟಾ ಬಳಕದಾರರಿಗೆ ಲಭ್ಯವಿದೆ. ಇದರ ಮೂಲಕ ಬಳಕೆದಾರರು ತಮ್ಮ ಕಲ್ಪನೆಯನ್ನು ತ್ವರಿತವಾಗಿ ಅನಿಮೇಟೆಡ್ ಸ್ಟಿಕ್ಕರ್ ಆಗಿ ಕನ್ವರ್ಟ್ ಮಾಡಬಹುದು. ಸದ್ಯ ಈ ಆಯ್ಕೆಯು ಸೀಮಿತ ಸಂಖ್ಯೆಯ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆದರೆ ಮುಂಬರುವ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ನೀವು ಕೂಡ ವಾಟ್ಸಾಪ್ ಬೀಟಾ ಪ್ರವೇಶ ಬಳಕೆದಾರರಾಗಿದ್ದರೆ AI ಸ್ಟಿಕ್ಕರ್ ಜನರೇಟಿವ್ ಫೀಚರ್ಸ್ ಲಭ್ಯವಿರಲಿದೆ.


Click it and Unblock the Notifications








