ಬಳಕೆದಾರರಿಗೆ ಹೊಸ ಫೀಚರ್ಸ್ ಪರಿಚಯಿಸಲು ವಾಟ್ಸಾಪ್ ಸಿದ್ಧತೆ!
ಜನಪ್ರಿಯ ಮೆಸೇಜಿಂಗ್ ಆಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್ ಒಂದನ್ನು ಪರಿಚಯಿಸಿದೆ. ಈಗಾಗಲೇ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿರುವ ವಾಟ್ಸಾಪ್ ಇದೀಗ ಗ್ರೂಪ್ ಚಾಟ್‌ಗಳಿಗಾಗಿ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ಈ ಫೀಚರ್ಸ್ ಆಂಡ್ರಾಯ್ಡ್‌ನಲ್ಲಿ ಅದರ ಬೀಟಾ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೀಚರ್ಸ್ ಅನ್ನು ಗ್ರೂಪ್ ಚಾಟ್‌ಗಳಲ್ಲಿ ಕಾಣಿಸಿಕೊಳ್ಳುವ "Mention badge " ನೊಂದಿಗೆ ಬರುತ್ತದೆ.
ಹೌದು, ವಾಟ್ಸಾಪ್ ತನ್ನ ಬಳಕೆದಾರರಿಗೆ ಗ್ರೂಪ್ ಚಾಟ್‌ಗಳಲ್ಲಿ Mention badge ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ಆಂಡ್ರಾಯ್ಡ್ 2.21.3.13 ಬೀಟಾ ಅಪ್‌ಡೇಟ್‌ಗಾಗಿ ವಾಟ್ಸಾಪ್‌ನಲ್ಲಿ ಲಭ್ಯವಿದೆ. ಆದರೆ ಇದು ಇನ್ನೂ ಬಳಕೆದಾರರಿಗೆ ಗೋಚರಿಸುವುದಿಲ್ಲ ಎಂದು WABetaInfo ವರದಿ ಮಾಡಿದೆ. ಭವಿಷ್ಯದ ಬಿಡುಗಡೆಯಲ್ಲಿ ಹೊರಹೊಮ್ಮುವ ನಿರೀಕ್ಷೆಯಿರುವ ಈ ಫೀಚರ್ಸ್‌ನಲ್ಲಿ ವಾಟ್ಸಾಪ್ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಹಾಗಾದ್ರೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನ ಈ ಹೊಸ ಫೀಚರ್ಸ್ ವಾಟ್ಸಾಪ್ ಗ್ರೂಪ್ ಚಾಟ್‌ಗಳಿಗೆ ಬಹಳ ಉಪಯುಕ್ತವಾಗಿದೆ. ಇದು ನೀವು ಗುಂಪಿನಲ್ಲಿ ಪ್ರಸ್ತಾಪವನ್ನು ಸ್ವೀಕರಿಸಿದಾಗ, ಗ್ರೂಪ್ ಸೆಲ್‌ನಲ್ಲಿ ಹೊಸ ಬ್ಯಾಡ್ಜ್ ಅನ್ನು ಸೇರಿಸಲಾಗುತ್ತದೆ" ಎಂದು ವಿವರಿಸುತ್ತದೆ. ಇನ್ನು ಗ್ರೂಪ್ ಚಾಟ್‌ಗಳಲ್ಲಿ ಟ್ಯಾಗ್ ಮಾಡಿದಾಗ ವಾಟ್ಸಾಪ್ ಈಗಾಗಲೇ ಬಳಕೆದಾರರಿಗೆ ತಿಳಿಸುತ್ತದೆ. ಆದ್ದರಿಂದ ಈ ಫೀಚರ್ಸ್ ಇದನ್ನು ಇನ್ನಷ್ಟು ವಿಸ್ತರಣೆ ಮಾಡುತ್ತಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಫೀಚರ್ಸ್ ಸ್ಥಿರ ಆವೃತ್ತಿಯಲ್ಲಿ ಯಾವಾಗ ಪರಿಚಯಿಸುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇನ್ನು ವಾಟ್ಸಾಪ್‌ನಲ್ಲಿ ಹೊಸ ಸ್ಟಿಕ್ಕರ್ ಪ್ಯಾಕ್‌ನ ರೋಲ್ ಔಟ್ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು "ಟಟರ್ಸ್ ಎನ್ ಟಾಟ್ಸ್" ಎಂದು ಕರೆಯಲಾಗುತ್ತದೆ, ಮತ್ತು ಸ್ಟಿಕ್ಕರ್ ಪ್ಯಾಕ್ ಪ್ರಸ್ತುತ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಆಸಕ್ತ ಬಳಕೆದಾರರು ಯಾವುದೇ ಚಾಟ್‌ನಲ್ಲಿ ಸ್ಟಿಕ್ಕರ್ ಐಕಾನ್ ಅನ್ನು ಟ್ಯಾಪ್ ಮಾಡಬಹುದು ಮತ್ತು ಹೊಸ ಸ್ಟಿಕ್ಕರ್ ಪ್ಯಾಕ್ ಡೌನ್‌ಲೋಡ್ ಮಾಡಲು ‘+' ಐಕಾನ್ ಆಯ್ಕೆಮಾಡಿ. ಇದು ಸ್ಟಿಕ್ಕರ್ ಪ್ಯಾಕ್‌ಗಳ ಪಟ್ಟಿಯಲ್ಲಿ ಮೊದಲು ಕಾಣಿಸುತ್ತದೆ.

ಇದಲ್ಲದೆ ವಾಟ್ಸಾಪ್ ತನ್ನ ಕೀಬೋರ್ಡ್‌ಗಾಗಿ ಸ್ಟಿಕ್ಕರ್ ಶಾರ್ಟ್‌ಕಟ್‌ನಲ್ಲಿ ಸಹ ಕಾರ್ಯನಿರ್ವಹಿಸುತ್ತಿದೆ. ಹೊಸ ಸ್ಟಿಕ್ಕರ್ ಶಾರ್ಟ್‌ಕಟ್ ಚಾಟ್ ಬಾರ್‌ನಲ್ಲಿ ಕಾಣಿಸುತ್ತದೆ. ಅಲ್ಲದೆ ಚಾಟ್ ಬಾರ್‌ನಲ್ಲಿ ಟೈಪ್ ಮಾಡಿದ ಎಮೋಜಿಗಳು ಅಥವಾ ಪದಗಳಿಗೆ ವಾಟ್ಸಾಪ್ ಯಾವುದೇ ಸಂಬಂಧಿತ ಸ್ಟಿಕ್ಕರ್ ಅನ್ನು ತೋರಿಸುತ್ತದೆ. ಆಂಡ್ರಾಯ್ಡ್‌ಗಾಗಿ ವಾಟ್ಸಾಪ್‌ನ ಬೀಟಾ ಅಪ್ಲಿಕೇಶನ್‌ನಲ್ಲಿ ಈ ಫೀಚರ್ಸ್ ಪ್ರಸ್ತುತ ಅಭಿವೃದ್ಧಿಯಲ್ಲಿದೆ.


Click it and Unblock the Notifications








