ವಾಟ್ಸಾಪ್ ಸೇರಿದ ಹೊಸ ಫೀಚರ್ಸ್! ಏನಿದು ಸಿಕ್ರೆಟ್ ಕೋಡ್? ಇದನ್ನು ಬಳಸುವುದು ಹೇಗೆ?
ವಾಟ್ಸಾಪ್ ಅಪ್ಲಿಕೇಶನ್ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸತನದ ಫೀಚರ್ಸ್‌ಗಳನ್ನು ಪರಿಚಯಿಸುವಲ್ಲಿ ವಾಟ್ಸಾಪ್ ಸದಾ ಮುಂದಿದೆ. ಇದೀಗ ವಾಟ್ಸಾಪ್ ತನ್ನ ಬಳಕೆದಾರಿಗೆ ಸಿಕ್ರೆಟ್ ಕೋಡ್ ಎನ್ನುವ ಹೊಸ ಫೀಚರ್ಸ್ ಪರಿಚಯಿಸಿದೆ. ಇದು ಚಾಟ್‌ಲಾಕ್ ಬಳಸುವವರಿಗೆ ಉಪಯುಕ್ತವಾಗಿದೆ.
ಹೌದು, ಚಾಟ್‌ಲಾಕ್ ಮಾಡಿದ ಚಾಟ್‌ಗಳನ್ನು ಸುಲಭವಾಗಿ ಪ್ರವೇಶಿಸಲು ವಾಟ್ಸಾಪ್ ಹೊಸ ಫೀಚರ್ಸ್ ಪರಿಚಯಿಸಿದೆ. ಇದನ್ನು ಸಿಕ್ರೆಟ್ ಕೋಡ್ ಎಂದು ಹೆಸರಿಸಲಾಗಿದ್ದು, ಪ್ರಸ್ತುತ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಾತ್ರ ಪರಿಚಯಿಸಲಾಗ್ತಿದೆ. ಈ ಸಿಕ್ರೆಟ್ ಕೋಡ್ ವಾಟ್ಸಾಪ್‌ನಲ್ಲಿ ಲಾಕ್ ಮಾಡಿದ ಚಾಟ್ ಸರ್ಚ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಸಿಕ್ರೆಟ್ ಕೋಡ್ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಇತ್ತೀಚಿಗೆ ಚಾಟ್‌ಲಾಕ್ ಫೀಚರ್ಸ್ ಪರಿಚಯಿಸಿದೆ. ಇದರಿಂದ ಬಳಕೆದಾರರು ತಮಗೆ ತೀರಾ ಸಿಕ್ರೆಟ್ ಎನಿಸುವ ಚಾಟ್‌ಗಳನ್ನು ಲಾಕ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಈ ಚಾಟ್‌ಗಳನ್ನು ತೆರೆಯುವುದಕ್ಕೆ ಬಯೋಮೆಟ್ರಿಕ್ ದೃಡೀಕರಣದ ಅಗತ್ಯ ಕೂಡ ಇದೆ. ಆದರೆ ನಿಮ್ಮ ಲಾಕ್ ಮಾಡಿದ ಚಾಟ್‌ಗಳನ್ನು ಸುಲಭವಾಗಿ ಸರ್ಚ್ ಮಾಡುವುದಕ್ಕೆ ಯಾವುದೇ ಆಯ್ಕೆಗಳನ್ನು ನೀಡಿರಲಿಲ್ಲ. ಇದೇ ಕಾರಣಕ್ಕೆ ವಾಟ್ಸಾಪ್ ಇದೀಗ ಸಿಕ್ರೆಟ್ ಕೋಡ್ ಆಯ್ಕೆಗಳನ್ನು ನೀಡುತ್ತಿದೆ.
ಪ್ರೈವೆಸಿಯ ಕಾರಣಗಳಿಂದಾಗಿ ಲಾಕ್ ಮಾಡಿದ ಚಾಟ್‌ಗಳು ವಾಟ್ಸಾಪ್‌ನ ಸರ್ಚ್ ಬಾರ್‌ನಲ್ಲಿ ಕಾಣುವುದಿಲ್ಲ. ಆದರಿಂದ ನೀವು ಹಲವಾರು ಲಾಕ್ ಚಾಟ್‌ಗಳನ್ನು ಹೊಂದಿದ್ದರೆ ನಿರ್ದಿಷ್ಟ ಲಾಕ್ ಮಾಡಿದ ಚಾಟ್ ಸರ್ಚ್ ಮಾಡುವುದು ಕಷ್ಟವಾಗಲಿದೆ. ಆದರೆ ಈ ಕಷ್ಟವನ್ನು ಸಿಕ್ರೆಟ್ ಕೋಡ್ ಫೀಚರ್ಸ್ ಬಗೆಹರಿಸಲಿದೆ. ಅಂದರೆ ವಾಟ್ಸಾಪ್ ಹೊಸ ಅಪ್ಡೇಟ್ ಮೂಲಕ ಬಳಕೆದಾರರಿಗೆ ಯಾವುದೇ ಚಾಟ್ ಅನ್ನು ಲಾಕ್ ಮಾಡುವಾಗ ಸಿಕ್ರೆಟ್ ಕೋಡ್ ಸೆಟ್ ಮಾಡುವ ಆಯ್ಕೆಯನ್ನು ನೀಡುತ್ತಿದೆ.
ವಾಟ್ಸಾಪ್ ಸರ್ಚ್ ಬಾರ್‌ನಲ್ಲಿ ಬಳಕೆದಾರರು ಸಿಕ್ರೆಟ್ ಕೋಡ್ ಮೂಲಕ ಲಾಕ್ ಆದ ಚಾಟ್ ಅನ್ನು ಸರ್ಚ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದು ಲಾಕ್ ಮಾಡಿದ ಚಾಟ್‌ನ ಹೆಸರನ್ನು ಬಹಿರಂಗಪಡಿಸುತ್ತದೆ. ಆಗ ನೀವು ನಿಮ್ಮ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಚಾಟ್ ಅನ್ನು ಅನ್‌ಲಾಕ್ ಮಾಡಬಹುದು. ಇನ್ನು ಸಿಕ್ರೆಟ್ ಕೋಡ್ ನಲ್ಲಿ ಬಳಕೆದಾರರು ಯಾವುದೇ ಟೆಕ್ಸ್ಟ್ ಅನ್ನು ಸೆಟ್ ಮಾಡಬಹುದು, ಇಲ್ಲವೇ ಎಮೋಜಿಯನ್ನು ಕೂಡ ಸಿಕ್ರೆಟ್ ಕೋಡ್ ಆಗಿ ಬಳಸಬಹುದಾಗಿದೆ.
ವಾಟ್ಸಾಪ್ ಚಾಟ್ ಬಾರ್‌ನ ಮೇಲ್ಭಾಗದಿಂದ ಸಾಮಾನ್ಯ ಎರಡು-ಸ್ವೈಪ್ ವಿಧಾನವನ್ನು ಬಳಸಿಕೊಂಡು ಸಿಕ್ರೆಟ್ ಕೋಡ್ ಹೊಂದಿರುವ ಚಾಟ್‌ಗಳನ್ನು ಪ್ರವೇಶಿಸಬಹುದು. ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಸಿಕ್ರೆಟ್ ಕೋಡ್ ಫೀಚರ್ಸ್ ಅನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ. ವಾಬೇಟಾಇನ್ಫೋ ವರದಿ ಮಾಡಿದಂತೆ ಸಿಕ್ರೆಟ್ ಕೋಡ್ ಫೀಚರ್ಸ್ ಅನ್ನು 2.13.21.9 ಬೀಟಾ ವರ್ಷನ್‌ನಲ್ಲಿ ಗುರುತಿಸಲಾಗಿದೆ. ಇತ್ತೀಚಿನ ಅಪ್‌ಡೇಟ್‌ನೊಂದಿಗೆ ಸ್ಮಾರ್ಟ್ ಗ್ರೂಪ್‌ನ ಬಳಕೆದಾರರಿಂದ ಪ್ರವೇಶಿಸಬಹುದಾಗಿದೆ ಎಂದು ವರದಿಯಾಗಿದೆ.
ಇನ್ನು ಚಾಟ್ ಲಾಕ್ ಫೀಚರ್ಸ್ ಪ್ರಸ್ತುತ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಬೆಂಬಲಿತವಾಗಿಲ್ಲ. ಇದು ಕೇವಲ ಬಳಕೆದಾರರ ಪ್ರಾಥಮಿಕ ಡಿವೈಸ್‌ನಲ್ಲಿ ಮಾತ್ರ ಲಭ್ಯವಿದೆ. ಆದರಿಂದ ವಾಟ್ಸಾಪ್ ಸದ್ಯದಲ್ಲೇ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಚಾಟ್ ಲಾಕ್ ಫೀಚರ್ಸ್ ಅನ್ನು ಪರಿಚಯಿಸುವ ನಿರೀಕ್ಷೆ ಕೂಡ ಇಡಲಾಗಿದೆ. ಲಿಂಕ್ ಮಾಡಲಾದ ಡಿವೈಸ್‌ಗಳಲ್ಲಿ ಚಾಟ್ ಲಾಕ್ ಫೀಚರ್ಸ್ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆಯಾದರೂ, ಇದು ವಾಟ್ಸಾಪ್ ವೆಬ್‌ನಲ್ಲಿ ಲಭ್ಯವಿರುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಪರಿಪೂರ್ಣ ಮಾಹಿತಿ ಬಹಿರಂಗವಾಗಲಿದೆ.


Click it and Unblock the Notifications








