Home
ಸುದ್ದಿಜಾಲ

ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ ಸಂಚಲನ ಸೃಷ್ಟಿಸೋದು ಪಕ್ಕಾ!

ಇಂದಿನ ದಿನಗಳಲ್ಲಿ ವಾಟ್ಸಾಪ್‌ ಬಹುಮುಖ್ಯವಾದ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ವಾಟ್ಸಾಪ್‌ ಬಳಸದೇ ಇರಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಎಲ್ಲರ ಮನಗೆದ್ದಿದೆ. ಇದಕ್ಕೆ ಮುಖ್ಯ ಕಾರಣ ವಾಟ್ಸಾಪ್‌ ಹೊಂದಿರುವ ಫೀಚರ್ಸ್‌ಗಳು ಆಗಿವೆ. ಜೊತೆಗೆ ವಾಟ್ಸಾಪ್‌ ಕೂಡ ಪ್ರತಿನಿತ್ಯವೂ ಒಂದಲ್ಲ ಒಂದು ಫೀಚರ್ಸ್‌ ಪರಿಚಯಿಸುತ್ತಲೇ ಬಂದಿದೆ.

ಹೌದು, ವಾಟ್ಸಾಪ್‌ ಪ್ರತಿನಿತ್ಯವೂ ಹೊಸ ಸುದ್ದಿಯನ್ನು ನೀಡುತ್ತಲೇ ಬಂದಿದೆ. ಇದೀಗ ತನ್ನ ಆಂಡ್ರಾಯ್ಡ್‌ ಬೀಟಾ ವರ್ಷನ್‌ನಲ್ಲಿ ಹೊಸ ಲಾಕ್‌ ಚಾಟ್‌ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಹಾಗಾದ್ರೆ ಏನಿದು ಹೊಸ ಲಾಕ್‌ ಚಾಟ್‌ ಫೀಚರ್ಸ್‌? ಇದರ ಕಾರ್ಯವೈಖರಿ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ ಸಂಚಲನ ಸೃಷ್ಟಿಸೋದು ಪಕ್ಕಾ!

ವಾಟ್ಸಾಪ್‌ ಆಂಡ್ರಾಯ್ಡ್‌ ಬೀಟಾದಲ್ಲಿ ಹೊಸ ಲಾಕ್‌ ಚಾಟ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದು ಹೆಸರೇ ಸೂಚಿಸುವಂತೆ ಬಳಕೆದಾರರಿಗೆ ತಮ್ಮ ಚಾಟ್‌ಗಳನ್ನು ಲಾಕ್‌ ಮಾಡಲು ಅವಕಾಶ ನೀಡಲಿದೆ. ಇದರಿಂದ ನಿಮ್ಮ ಚಾಟ್‌ಗಳನ್ನು ಯಾರಿಗೂ ಕಾಣದಂತೆ ಹೈಡ್‌ ಮಾಡಲು ಅನುಮತಿಸಲಿದೆ. ಇದರಿಂದ ಬಳಕೆದಾರರಿಗೆ ಇನ್ನಷ್ಟು ಪ್ರೈವೆಸಿ ಕಾಪಾಡಲು ಸಾಧ್ಯವಾಗಲಿದೆ ಎಂದು ವಾಬೇಟಾ ಇನ್ಫೋ ವರದಿ ಮಾಡಿದೆ.

ಇನ್ನು ವಾಟ್ಸಾಪ್‌ ಲಾಕ್‌ಚಾಟ್‌ ಫೀಚರ್ಸ್‌ ಬಳಕೆದಾರರಿಗೆ ತಮ್ಮ ಖಾಸಗಿ ಚಾಟ್‌ಗಳನ್ನು ಹೈಡ್‌ ಮಾಡಲು ಅವಕಾಶ ನೀಡಲಿದೆ. ಅಲ್ಲದೆ ಖಾಸಗಿ ಚಾಟ್‌ ಕಂಟ್ಯಾಕ್ಟ್‌ ಅಥವಾ ಗ್ರೂಪ್‌ನ ಮಾಹಿತಿಯನ್ನು ಯಾರಿಗೂ ಕಾಣದಂತೆ ಲಾಕ್‌ ಮಾಡಲು ಸಹಾಯ ಮಾಡಲಿದೆ. ನೀವು ಒಂದು ಬಾರಿ ಚಾಟ್ ಅನ್ನು ಲಾಕ್ ಮಾಡಿದಾಗ, ಮತ್ತೆ ಚಾಟ್‌ ಪ್ರವೇಶಿಸಲು ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಬಳಸಿ ಪ್ರವೇಶಿಸಬಹುದಾಗಿದೆ. ಇದರಿಂದ ಬೇರೆಯವರು ನಿಮ್ಮ ಚಾಟ್‌ಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ.

ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ ಸಂಚಲನ ಸೃಷ್ಟಿಸೋದು ಪಕ್ಕಾ!

ಒಂದು ವೇಳೆ ನೀವು ಲಾಕ್‌ ಮಾಡಿರುವ ಚಾಟ್‌ ಅನ್ನು ಬೇರೆಯವರು ತೆರೆಯಲು ಪ್ರಯತ್ನಿಸಿದರೆ ಫಿಂಗರ್‌ ಪ್ರಿಂಟ್‌ ಅನ್ನು ಕೇಳಲಿದೆ. ಒಂದು ವೇಳೆ ವಾಟ್ಸಾಪ್‌ ಕೇಳುವ ಅಗತ್ಯ ದೃಢೀಕರಣವನ್ನು ಒದಗಿಸಲು ವಿಫಲವಾದರೆ ಚಾಟ್‌ ಅನ್ನು ರಿಮೂವ್‌ ಮಾಡುವಂತೆ ಕೇಳಲಿದೆ. ಇದಲ್ಲದೆ ಲಾಕ್ ಮಾಡಿದ ಚಾಟ್‌ನಲ್ಲಿ ಸೆಂಡ್‌ ಮಾಡಲಾದ ಫೋಟೋಗಳು ಮತ್ತು ವೀಡಿಯೊಗಳನ್ನು ಡಿವೈಸ್‌ನಲ್ಲಿ ಅಟೋಮ್ಯಾಟಿಕ್‌ ಸೇವ್‌ ಮಾಡಲು ಕೂಡ ಸಾಧ್ಯವಿಲ್ಲ ಎನ್ನಲಾಗಿದೆ.

ಸದ್ಯ ವಾಟ್ಸಾಪ್‌ನ ಈ ಹೊಸ ಲಾಕ್‌ಚಾಟ್‌ ಫೀಚರ್ಸ್‌ ಇನ್ನು ಸಹ ಅಭಿವೃದ್ಧಿಯ ಹಂತದಲ್ಲಿದೆ. ಆದರೆ ಮುಂದಿನ ದಿನಗಳಲ್ಲಿ ವಾಟ್ಸಾಪ್‌ ಅಪ್ಲಿಕೇಶನ್‌ನ ಅಪ್ಡೇಟ್‌ನಲ್ಲಿ ಎಲ್ಲರಿಗೂ ಲಭ್ಯವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದರೊಂದಿಗೆ ವಾಟ್ಸಾಪ್‌ ಇನ್ನು ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುವುದಕ್ಕೆ ಕಾರ್ಯನಿರ್ವಹಿಸುತ್ತಿದೆ.

ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ ಸಂಚಲನ ಸೃಷ್ಟಿಸೋದು ಪಕ್ಕಾ!

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಆಡಿಯೋ ಚಾಟ್ಸ್‌ ಎಂಬ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ಫೀಚರ್ಸ್‌ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದೆ ಎಂದು ವರದಿಯಾಗಿದೆ. ವಾಟ್ಸಾಪ್‌ನ ಹೊಸ ಆಡಿಯೋ ಚಾಟ್ಸ್‌ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆ. ಇನ್ನು ಈ ಹೊಸ ಫೀಚರ್ಸ್‌ ಚಾಟ್ ಹೆಡರ್‌ನಲ್ಲಿ ಕಾಣಿಸಲಿದೆ. ಇದಕ್ಕಾಗಿ ಹೊಸ ತರಂಗ ರೂಪಗಳ ಐಕಾನ್ ಅನ್ನು ಸೇರಿಸಲಾಗುತ್ತದೆ ಎಂದು ವಾ ಬೇಟಾ ಇನ್ಫೋ ವರದಿ ಮಾಡಿದೆ. ಇದು ಬಳಕೆದಾರರಿಗೆ ಆಡಿಯೊ ಚಾಟ್‌ಗಳನ್ನು ನಡೆಸುವುದಕ್ಕೆ ಅವಕಾಶ ನೀಡಲಿದೆ. ಇದಲ್ಲದೆ ಬಳಕೆದಾರರು ಈಗಾಗಲೇ ಚಾಲ್ತಿಯಲ್ಲಿರುವ ಕರೆಗಳನ್ನು ಕೊನೆಗೊಳಿಸಲು ರೆಡ್‌ ಬಟನ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನು ಈ ಹೊಸ ವೇವ್‌ಫಾರ್ಮ್ ಐಕಾನ್ ರಿಯಲ್‌-ಟೈಂ ಆಡಿಯೊ ವಿಶ್ಯುಯಲೈಸೆಷನ್‌ ಸಾಮರ್ಥ್ಯವನ್ನು ಸೂಚಿಸಲಿದೆ. ಇದು ಚಾಟ್ ಹೆಡರ್‌ನ ಮೇಲಿರುವ ಜಾಗವನ್ನು ಆಡಿಯೊ ವೇವ್‌ಫಾರ್ಮ್ ಪ್ರದರ್ಶಿಸಲು ಕಾಯ್ದಿರಿಸುವ ಸಾಧ್ಯತೆಯಿದೆ.

Best Mobiles in India

English summary
WhatsApp is working on a new “Lock chat” feature: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+