ಸದ್ಯದಲ್ಲೇ ವಾಟ್ಸಾಪ್‌ ಸ್ಟೇಟಸ್‌ ಅಪ್ಡೇಟ್‌ನಲ್ಲಿ ಸೇರಲಿದೆ ಹೊಸ ಫೀಚರ್ಸ್‌!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಅನ್ನು ಬಳಸದವರೇ ಇಲ್ಲ ಅನ್ನಬಹುದು. ಅಷ್ಟರ ಮಟ್ಟಿಗೆ ಹೆಚ್ಚಿನ ಬಳಕೆದಾರರನ್ನು ವಾಟ್ಸಾಪ್‌ ಸೆಳೆದಿದೆ. ಬಳಕೆದಾರರ ನೆಚ್ಚಿನ ಮೆಸೆಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ವಾಟ್ಸಾಪ್‌ ಒಳಗೊಂಡಿರುವ ಆಕರ್ಷಕ ಫೀಚರ್ಸ್‌ಗಳು. ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿಶೇರ್‌ ಮಾಡಲಾದ ಇಮೇಜ್‌ಗಳನ್ನು ಎಡಿಟ್‌ ಇಲ್ಲವೇ ರದ್ದುಗೊಳಿಸುವುದಕ್ಕೆ ಅವಕಾಶ ನೀಡುವುದಕ್ಕೆ ಮುಂದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಬಳಕೆದಾರರು ಹಂಚಿಕೊಂಡ ಇಮೇಜ್‌ಗಳನ್ನು ಅಂಡೂ ಮತ್ತು ರೀಡೊ ಮಾಡುವುದಕ್ಕೆ ಅವಕಾಶ ನೀಡಲಿದೆ ಎನ್ನಲಾಗಿದೆ. ಇದಕ್ಕಾಗಿ ಹೊಸ ಬಟನ್‌ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ಹೊಸ ಫೀಚರ್ಸ್‌ನಿಂದಾಗಿ ವಾಟ್ಸಾಪ್‌ ಸ್ಟೇಟಸ್‌ ಅಪ್ಡೇಟ್‌ ಮಾಡುವಾಗ ಉಂಟಾಗುವ ಎಡವಟ್ಟುಗಳನ್ನು ಸರಿಪಡಿಸಬಹುದು. ಹಾಗಾದ್ರೆ ವಾಟ್ಸಾಪ್‌ ಹೊಸದಾಗಿ ಪರಿಚಯಿಸಲಿರುವ ಅಂಡೂ ರೀಡೂ ಬಟನ್‌ ಹೇಗೆ ಕಾರ್ಯನಿರ್ವಹಿಸಲಿದೆ. ಇದರ ವಿನ್ಯಾಸ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಬೇಟಾಇನ್ಫೋ ವರದಿಯ ಪ್ರಕಾರ, ವಾಟ್ಸಾಪ್‌ ಅಂಡೂ ರೀಡೂ ಬಟನ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಇದಲ್ಲದೆ ವಾಟ್ಸಾಪ್‌ ಸ್ಟೇಟಸ್‌ ಅಪ್ಡೇಟ್‌ ಮಾಡುವಾಗ ಇಮೇಜ್‌ ರದ್ದುಗೊಳಿಸುವ ಬಟನ್‌ ಪರಿಚಯಿಸುವುದಕ್ಕೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇದಲ್ಲದೆ ವಾಟ್ಸಸಾಪ್‌ನಲ್ಲಿ ನೀವು ಹಂಚಿಕೊಂಡ ಸ್ಟೇಟಸ್‌ ಅನ್ನು ಮತ್ತೆ ಪಡೆಯುವುದಕ್ಕೆ ಅವಕಾಶ ನೀಡಲಿದೆ. ಜೊತೆಗೆ ಆಕಸ್ಮಿಕವಾಗಿ ಪೋಸ್ಟ್ ಮಾಡಿರುವ ಸ್ಟೇಟಸ್ ಅಪ್‌ಡೇಟ್ ಅನ್ನು ತ್ವರಿತವಾಗಿ ಡಿಲೀಟ್ ಮಾಡಲು ಸಹಾಯ ಮಾಡುವ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಾಟ್ಸಾಪ್

ವಾಟ್ಸಾಪ್ ಈಗಾಗಲೇ ತಮ್ಮ ಸ್ಟೇಟಸ್ ಅಪ್‌ಡೇಟ್‌ಗಳನ್ನು ಅಳಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿದೆ. ಆದಾಗ್ಯೂ, ಹೊಸ Undo ಬಟನ್ ಬಳಕೆದಾರರಿಗೆ ಇನ್ನು ವೇಗವಾಗಿ ಕಾರ್ಯನಿರ್ವಹಿಸುವುದಕ್ಕೆ ಸಹಕಾರಿಯಾಗಲಿದೆ. ನೀವು ಸ್ಟೇಟಸ್‌ ಅನ್ನು ಡಿಲೀಟ್‌ ಮಾಡಿದಾಗ ಸ್ಟೇಟಸ್‌ ಅಪ್ಡೇಟ್‌ ಡಿಲೀಟ್‌ ಮಾಡಿದ್ದೀರಿ ಎಂಬುದನ್ನು ವಾಟ್ಸಾಪ್‌ ತಿಳಿಸಿಕೊಡಲಿದೆ ಎಂದು ವಾಟ್ಸಾಪ್‌ ಬ್ಲಾಗ್ ಸೈಟ್ ಹೇಳುತ್ತದೆ. ಸದ್ಯ ಆಂಡ್ರಾಯ್ಡ್ ಆವೃತ್ತಿ 2.21.22.6 ಗಾಗಿ ವಾಟ್ಸಾಪ್ ಬೀಟಾದ ಭಾಗವಾಗಿ ಸ್ಟೇಟಸ್ ಅಪ್‌ಡೇಟ್‌ಗಳಿಗಾಗಿ ವಾಟ್ಸಾಪ್‌ನ ಅಂಡೂ ಬಟನ್ ಲಭ್ಯವಿದೆ. ನಿರ್ದಿಷ್ಟ ಬೀಟಾ ಪರೀಕ್ಷಕರು ಮಾತ್ರ ಈ ಫೀಚರ್ಸ್‌ ಬಳಸಬಹುದಾಗಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಬ್ಯವಾಗಲಿದೆಯಾ ಅನ್ನೊದು ಇನ್ನು ಬಹಿರಂಗವಾಗಿಲ್ಲ. ಸದ್ಯ ಪರೀಕ್ಷಾ ಹಂತದಲ್ಲಿರುವುದರಿಂದ ಕಾದು ನೋಡಬೇಕಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಶೀಘ್ರದಲ್ಲೇ ಪರಿಚಯಿಸಲಿರುವ ಫೀಚರ್ಸ್‌ಗಳಲ್ಲಿ ನ್ಯೂ ನೋಟ್ಸ್‌ ಫೀಚರ್‌ ಕೂಡ ಒಂದಾಗಿದೆ. ಇದಕ್ಕಾಗಿ "ಜಾಗತಿಕ ವಾಯ್ಸ್‌ ಮೆಸೇಜ್‌ ಪ್ಲೇಯರ್" ನಲ್ಲಿ ಕೆಲಸ ಮಾಡುತ್ತಿದೆ. ಇದು ಬಳಕೆದಾರರಿಗೆ ಚಾಟ್ ಬಿಟ್ಟ ನಂತರವೂ ವಾಯ್ಸ್‌ ಮೆಸೇಜ್‌ಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಬಳಕೆದಾರರು ವಾಯ್ಸ್‌ ಮೆಸೇಜ್‌ ಅನ್ನು ಪ್ಲೇ ಮಾಡಿದ ನಂತರ, ಆ ಚಾಟ್ ಅನ್ನು ತೊರೆದ ನಂತರವೂ ಮೇನ್‌ ಅಪ್ಲಿಕೇಶನ್‌ನ ಮೇಲ್ಭಾಗಕ್ಕೆ ವಾಯ್ಸ್‌ ಮೆಸೇಜ್‌ಗಳನ್ನು ಪಿನ್ ಮಾಡುತ್ತದೆ. ಅಲ್ಲದೆ ನೀವು ವಾಯ್ಸ್‌ ಮೆಸೇಜ್‌ ಅನ್ನು ಕೇಳುವಾಗಲೂ ಇತರ ಕಂಟ್ಯಾಕ್ಟ್‌ಗಳಿಗೆ ಮೆಸೇಜ್‌ ಕಳುಹಿಸುವುದಕ್ಕೆ ಕೂಡ ಸಾಧ್ಯವಾಗಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಹೊಸ ಕಸ್ಟಮ್ ಪ್ರೈವೆಸಿ ಸೆಟ್ಟಿಂಗ್ ಆಯ್ಕೆಯನ್ನು ಪರಿಚಯಿಸುತ್ತಿದೆ. ಸದ್ಯ ವಾಟ್ಸಾಪ್‌ ಕಸ್ಟಮ್‌ ಪ್ರೈವೆಸಿ ಸೆಟ್ಟಿಂಗ್‌ಗಳಲ್ಲಿ ಹೊಸದಾಗಿ "ನನ್ನ ಸಂಪರ್ಕಗಳನ್ನು ಹೊರತುಪಡಿಸಿ" ಆಯ್ಕೆಯನ್ನು ಸೇರಿಸುತ್ತಿದೆ. ಇದು ನಿರ್ದಿಷ್ಟ ಸಂಪರ್ಕಗಳಿಗಾಗಿ ಬಳಕೆದಾರರನ್ನು ಲಾಸ್ಟ್‌ ಸೀನ್‌ ನೋಡಲು ಅನುಮತಿ ನೀಡಲಿದೆ. ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್‌ ಈಗಾಗಲೇ ಈ ಫೀಚರ್ಸ್‌ ಅನ್ನು ಪರೀಕ್ಷಿಸಲು ಆರಂಭಿಸಿದೆ.

ವಾಟ್ಸಾಪ್

ವಾಟ್ಸಾಪ್ ಇತ್ತೀಚೆಗೆ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಬೀಟಾ ಬಳಕೆದಾರರಿಗಾಗಿ ಆವೃತ್ತಿ 2.21.200.11 ಅಪ್‌ಡೇಟ್ ಅನ್ನು ಪರಿಚಯಿಸಿದೆ. ಈ ಅಪ್ಡೇಟ್‌ನಲ್ಲಿ ಬಳಕೆದಾರರು ರಿ ಡಿಸೈನ್‌ ಮಾಡಲಾದ ಬಬಲ್ಸ್‌ ಅನ್ನು ವೀಕ್ಷಿಸಲು ಅನುಮತಿಸುತ್ತದೆ. ಹಳೆಯ ಚಾಟ್ ಬಬಲ್‌ಗೆ ಹೋಲಿಸಿದರೆ ಬೀಟಾ ಬಳಕೆದಾರರು ಈಗ ದುಂಡಾದ, ದೊಡ್ಡದಾದ ಮತ್ತು ಹೆಚ್ಚು ವರ್ಣರಂಜಿತ ಚಾಟ್ ಬಬಲ್‌ಗಳನ್ನು ಕಾಣಬಹುದಾಗಿದೆ. ಈ ಫೀಚರ್ಸ್‌ ಪ್ರಸ್ತುತ ಬೀಟಾದಲ್ಲಿದೆ ಎಂಬುದನ್ನು ಗಮನಿಸುವುದು ಮುಖ್ಯ.

Best Mobiles in India

English summary
WhatsApp is in the process of testing a new Undo button that can be of great value to users during emergencies.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X