Home
ಸುದ್ದಿಜಾಲ

ಗ್ರೂಪ್‌ ವಾಯ್ಸ್‌ಕಾಲ್‌ನಲ್ಲಿ ಹೊಸ ಬದಲಾವಣೆಗೆ ಮುಂದಾದ ವಾಟ್ಸಾಪ್‌!

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ವಾಟ್ಸಾಪ್‌ ಗ್ರೂಪ್‌ ವಾಯ್ಸ್‌ ಕಾಲ್‌ ಫೀಚರ್ಸ್‌ ಅಪ್ಡೇಟ್‌ ಮಾಡಲು ಮುಂದಾಗಿದೆ. ಗ್ರೂಪ್‌ ವಾಯ್ಸ್‌ ಕಾಲ್‌ ಕಾರ್ಯನಿರ್ವಹಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಲು ವಾಟ್ಸಾಪ್‌ ಮುಂದಾಗಿದೆ.

ವಾಟ್ಸಾಪ್‌

ಹೌದು, ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಗ್ರೂಪ್‌ ವಾಯ್ಸ್‌ ಕಾಲ್‌ ಫೀಚರ್ಸ್‌ನಲ್ಲಿ ಹೊಸ ಅಪ್ಡೇಟ್‌ಗೆ ಮುಂದಾಗಿದೆ. ವಾಯ್ಸ್‌ ಕಾಲ್‌ ಫೀಚರ್ಸ್‌ ವಾಟ್ಸಾಪ್‌ ಕಮ್ಯೂನಿಕೇಶನ್‌ ಫೀಚರ್ಸ್‌ಗಳಲ್ಲಿ ಪ್ರಮುಖವಾದ ಭಾಗವಾಗಿದೆ. ಇದೇ ಕಾರಣಕ್ಕೆ ಈ ಅಪ್ಡೇಟ್‌ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಇದಕ್ಕಾಗಿ ಟ್ಯಾಪ್‌ ಟು ಜಾಯಿನ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಹಾಗಾದ್ರೆ ಟ್ಯಾಪ್‌ ಟು ಜಾಯಿನ್‌ ಫೀಚರ್ಸ್‌ ವಾಟ್ಸಾಫ್‌ನಲ್ಲಿ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ 'ಟ್ಯಾಪ್ ಟು ಜಾಯಿನ್‌' ಫೀಚರ್ಸ್‌ ಎಂದರೇನು?

ವಾಟ್ಸಾಪ್ 'ಟ್ಯಾಪ್ ಟು ಜಾಯಿನ್‌' ಫೀಚರ್ಸ್‌ ಎಂದರೇನು?

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಆಹ್ವಾನಿಸಲಾದ ಕರೆಗೆ ಸೇರಲು ಅನುವು ಮಾಡಿಕೊಡುವ ‘ಟ್ಯಾಪ್‌ ಟು ಜಾಯಿನ್' ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈ ಸಮಯದಲ್ಲಿ, ವಾಟ್ಸಾಪ್‌ನಲ್ಲಿನ ಗ್ರೂಪ್‌ ವಾಯ್ಸ್‌ ಕಾಲ್‌ಗಳು ಅಪ್ಲಿಕೇಶನ್‌ನಲ್ಲಿ ಮೂರು ಅಥವಾ ಹೆಚ್ಚಿನ ಬಳಕೆದಾರರನ್ನು ಒಳಗೊಂಡಿರುತ್ತವೆ. ಬಳಕೆದಾರರು ಎದುರಿಸುತ್ತಿರುವ ಅತಿದೊಡ್ಡ ಮಿತಿಯೆಂದರೆ, ಸದಸ್ಯರು ಗ್ರೂಪ್‌ ಕಾಲ್‌ ಅನ್ನು ತಪ್ಪಿಸಿಕೊಂಡರೆ, ಅವರನ್ನು ಮತ್ತೆ ಗ್ರೂಪ್‌ ಕಾಲ್‌ಗೆ ಸೇರಿಸಬೇಕು. WABetaInfo ವರದಿಯ ಪ್ರಕಾರ, ಮೂಲ ಕರೆ ತಪ್ಪಿದರೂ ಸಹ, ಬಳಕೆದಾರರು ತಮ್ಮನ್ನು ಆಹ್ವಾನಿಸಿದ ಕರೆಗೆ ಸೇರಲು ಅನುಮತಿಸುವ ಮೂಲಕ ಈ ಕಾರ್ಯವನ್ನು ಬದಲಾಯಿಸಲು ವಾಟ್ಸಾಪ್ ನೋಡುತ್ತಿದೆ.

ಟ್ಯಾಪ್‌ ಟು ಜಾಯಿನ್‌ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಟ್ಯಾಪ್‌ ಟು ಜಾಯಿನ್‌ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಇನ್ನು ವಾಟ್ಸಾಪ್‌ ಗ್ರೂಪ್‌ಕಾಲ್‌ನಲ್ಲಿ ತಪ್ಪಿದ ಕರೆಯನ್ನು ತೋರಿಸುವ ಬದಲು, ವಾಟ್ಸಾಪ್‌ನಲ್ಲಿನ ಕರೆಗಳ ಟ್ಯಾಬ್‌ನಲ್ಲಿ ಕರೆ ನಡೆಯುತ್ತಿದೆ ಎಂಬ ಸೂಚಕವನ್ನು ಅಪ್ಲಿಕೇಶನ್ ಬಳಕೆದಾರರಿಗೆ ತೋರಿಸುತ್ತದೆ. WABetaInfo ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ ಇದು ಪಟ್ಟಿಯಲ್ಲಿ ‘ಟ್ಯಾಪ್ ಟು ಜಾಯಿನ್‌' ಸಂದೇಶವನ್ನು ತೋರಿಸುತ್ತದೆ. ಏತನ್ಮಧ್ಯೆ, ಬಳಕೆದಾರರಿಗೆ ಮೊದಲಿಗೆ ಗ್ರೂಪ್‌ ವಾಯ್ಸ್‌ ಕಾಲ್‌ ಸೇರಲು ಸಾಧ್ಯವಾಗದಿದ್ದರೆ, ಅವರು ಗ್ರೂಪ್‌ ಚಾಟ್‌ನೊಳಗಿನ ಹೊಸ ‘ಜಾಯಿನ್‌ ಕಾಲ್‌' ಬಟನ್ ಅನ್ನು ಟ್ಯಾಪ್ ಮಾಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಾಟ್ಸಾಪ್ ಗ್ರೂಪ್ ವಾಯ್ಸ್‌ ಕಾಲ್‌

ವಾಟ್ಸಾಪ್ ಗ್ರೂಪ್ ವಾಯ್ಸ್‌ ಕಾಲ್‌

ಐಒಎಸ್‌ನಲ್ಲಿನ ವಾಟ್ಸಾಪ್ ಗ್ರೂಪ್ ವಾಯ್ಸ್ ಕಾಲ್ ಇಂಟರ್ಫೇಸ್‌ಗೆ ಬರುವ ಮತ್ತೊಂದು ಸುಧಾರಣೆ ಆಯ್ಕೆಗಳನ್ನು ಸರಳಗೊಳಿಸುತ್ತದೆ. ಇದು ಆಪಲ್‌ನ ಫೇಸ್‌ಟೈಮ್‌ನಂತೆ ಕಾಣುತ್ತದೆ. ಬಳಕೆದಾರರು ಹೊಸ ರಿಂಗ್ ಬಟನ್ ಅನ್ನು ಸಹ ನೋಡುತ್ತಾರೆ.

ವಾಟ್ಸಾಪ್ ಗ್ರೂಪ್ ಧ್ವನಿ ಕರೆಗಳ ಲಭ್ಯತೆ

ವಾಟ್ಸಾಪ್ ಗ್ರೂಪ್ ಧ್ವನಿ ಕರೆಗಳ ಲಭ್ಯತೆ

ಐಒಎಸ್ 2.21.140.11 ಗಾಗಿ ಈ ಫೀಚರ್ಸ್‌ ವಾಟ್ಸಾಪ್ ಬೀಟಾದಲ್ಲಿ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್ ಬಳಕೆದಾರರಿಗಾಗಿ ವಾಟ್ಸಾಪ್ ಬೀಟಾ ಕೂಡ ಶೀಘ್ರದಲ್ಲೇ ಈ ವೈಶಿಷ್ಟ್ಯವನ್ನು ನೋಡಲಿದೆ ಎಂದು ವರದಿ ಹೇಳಿದೆ.

Best Mobiles in India

English summary
With the upcoming ‘Tap to Join’ feature, WhatsApp is about to make the lives of users so much easier. Here’s how it will work.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+