ವಾಟ್ಸಾಪ್‌ನ ಈ ಫೀಚರ್ಸ್ ನಿಮಗಾಗುವ ಮುಜುಗರವನ್ನು ತಪ್ಪಿಸಲಿದೆ!
ವಾಟ್ಸಾಪ್ ಅಪ್ಲಿಕೇಶನ್ ಪ್ರತಿನಿತ್ಯವೂ ಒಂದಲ್ಲ ಒಂದು ಫೀಚರ್ಸ್ ಅನ್ನು ಪರೀಕ್ಷಿಸುತ್ತಲೇ ಬಂದಿದೆ. ಬಳಕೆದಾರರಿಗೆ ಅನುಕೂಲವಾಗುವ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುವ ಮೂಲಕ ಎಲ್ಲರಿಂದ ಸೈ ಎನಿಸಿಕೊಂಡಿದೆ. ಸದ್ಯ ಇತ್ತೀಚಿನ ಅಪ್ಡೇಟ್‌ನಲ್ಲಿ ವಾಟ್ಸಾಪ್ ಮತ್ತೊಂದು ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಬಹಿರಂಗವಾಗಿದೆ.
ಹೌದು, ವಾಟ್ಸಾಪ್ ಎಡಿಟ್ ಸೆಂಡ್ ಮೆಸೇಜ್ ಫೀಚರ್ಸ್ ಸೇರ್ಪಡೆ ಮಾಡಲು ಮುಂದಾಗಿದೆ. ಹೆಸರೇ ಸೂಚಿಸುವಂತೆ ಎಡಿಟ್ ಸೆಂಡ್ ಮೆಸೇಜ್ ನೀವು ಕಳುಹಿಸಿದ ಸಂದೇಶವನ್ನು ಮರಳಿ ಎಡಿಟ್ ಮಾಡಲು ಅವಕಾಶ ನೀಡಲಿದೆ. ಹಾಗಾದ್ರೆ ಈ ಫೀಚರ್ಸ್ ಅನ್ನು ಬಳಸುವುದು ಹೇಗೆ? ಇದರ ಕಾರ್ಯವ್ಯಾಪ್ತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಶೀಘ್ರದಲ್ಲೇ ಎಡಿಟ್ ಸೆಂಡ್ ಮೆಸೇಜ್ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಈಗಾಗಲೇ ಸೆಂಡ್ ಮಾಡಿರುವ ಮೆಸೇಜ್ ಅನ್ನು ಎಡಿಟ್ ಮಾಡಲು ಅವಕಾಶ ನೀಡಲಿದೆ. ಆದರೆ ನೀವು ಮೆಸೇಜ್ ಅನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಎಡಿಟ್ ಮಾಡಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಇದರಿಂದ ನೀವು ಕಳುಹಿಸಿದ ಸಮದೇಶದಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಎಡಿಟ್ ಮಾಡುವುದಕ್ಕೆ ಸಾದ್ಯವಾಗಲಿದೆ. ಆದರಿಂದ ನಿಮಗೆ ಆಗಬಹುದಾದ ಮುಜುಗರವನ್ನು ತಪ್ಪಿಸುವುದಕ್ಕೆ ಅವಕಾಶ ನೀಡಲಿದೆ.
ಅಂದರೆ ವಾಟ್ಸಾಪ್ ಬಳಕೆದಾರರು ತಾವು ಕಳುಹಿಸಿದ ಸಂದೇಶದಲ್ಲಿನ ಯಾವುದೇ ತಪ್ಪನ್ನು ಎಡಿಟ್ ಮಾಡಬಹುದಾಗಿದೆ. ಅಲ್ಲದೆ ನೀವು ಕಳುಹಿಸಿದ ಸಂದೇಶದಲ್ಲಿ ಹೆಚ್ಚುವರಿ ಮಾಹಿತಿಯನ್ನುಕೂಡ ಸೇರ್ಪಡೆ ಮಾಡಲು ಅವಕಾಶ ಸಿಗಲಿದೆ. ಈಗಾಗಲೇ ವಾಟ್ಸಾಪ್‌ನಲ್ಲಿ ಬಳಕೆದಾರರು ತಾವು ಸೆಂಡ್ ಮಾಡಿದ ಸಂದೇಶವನ್ನು ಡಿಲೀಟ್ ಫಾರ್ ಎವರಿವನ್ ಮೂಲಕ ಡಿಲೀಟ್ ಮಾಡುವ ಆಯ್ಕೆಯನ್ನು ಸಹ ನೀಡಿದೆ. ದರೆ ಈಗ ನೀಡಿರುವ ಆಯ್ಕೆ ತಪ್ಪು ಸಂದೇಶವನ್ನು ಡಿಲೀಟ್ ಮಾಡುವ ಬದಲು ಎಡಿಟ್ ಮಾಡಲು ಅವಕಾಶ ನೀಡಲಿದೆ.

ಇನ್ನು ಈ ಹೊಸ ಆಯ್ಕೆಯು ಇತ್ತೀಚಿನ ವಾಟ್ಸಾಪ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ. ಇದರ ಮೂಲಕ ನೀವು ಸಂದೇಶಗಳನ್ನು ಮಾತ್ರ ಎಡಿಟ್ ಮಾಡಬಹುದು, ಯಾವುದೇ ವೀಡಿಯೋ ಹಾಗೂ ಇಮೇಜ್ ಸಂದೇಶಗಳನ್ನು ಎಡಿಟ್ ಮಾಡಲು ಅವಕಾಶ ನೀಡುವುದಿಲ್ಲ. ಪ್ರಸ್ತುತ, ಈ ಫೀಚರ್ಸ್ ಐಒಎಸ್ ಬಳಕೆದಾರರಿಗಾಗಿ ಅಭಿವೃದ್ಧಿ ಹಂತದಲ್ಲಿದೆ. ಆದರೆ ಶೀಘ್ರದಲ್ಲೇ ಬೀಟಾ ವರ್ಷನ್‌ನಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಎಲ್ಲ ಬಳಕೆದಾರರು ಕೂಡ ಈ ಫೀಚರ್ಸ್ ಅನ್ನು ಪಡೆದುಕೊಳ್ಳಲು ಸಾದ್ಯವಾಗಲಿದೆ.
ಇದರೊಂದಿಗೆ ವಾಟ್ಸಾಪ್ ತನ್ನ ಐಒಎಸ್ ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸುತ್ತಿದೆ. ಇದು ಐಒಎಸ್ ಡಿವೈಸ್‌ಗಳಲ್ಲಿ ಚಿತ್ರದ ಗುಣಮಟ್ಟವನ್ನು ಬದಲಾಯಿಸಲು ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಈ ಫೀಚರ್ಸ್ ಕೂಡ ಬೀಟಾ ವರ್ಷನ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಈ ಫೀಚರ್ಸ್ ಬಳಸಿಕೊಂಡು ಬಳಕೆದಾರರು ವಾಟ್ಸಾಪ್ ಚಾಟ್ ಸೆಟ್ಟಿಂಗ್ಸ್‌ನಲ್ಲಿ ಫೋಟೋದ ಗುಣಮಟ್ಟವನ್ನು ಆಯ್ಕೆ ಮಾಡಬಹುದಾಗಿದೆ.

ಇದಲ್ಲದೆ ವಾಟ್ಸಾಪ್ ಹೊಸದಾಗಿ ಪ್ರೈವೇಟ್ ನ್ಯೂಸ್‌ಲೆಟರ್ ಟೂಲ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದು ಜನರಿಗೆ ಉಪಯುಕ್ತ ಅಪ್ಡೇಟ್‌ಗಳನ್ನು ಪಡೆಯುವುದಕ್ಕೆ ಮಾರ್ಗದರ್ಶಿ ನೀಡಲಿದೆ ಎಂದು ಹೇಳಲಾಗಿದೆ. ಸ್ಟೇಟಸ್ ಪೇಜ್ ನ್ಯೂಸ್‌ಲೆಟರ್‌ಗಳಿಗಾಗಿ ಐಚ್ಛಿಕ ವಿಭಾಗವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಇದು ಪ್ರೈವೇಟ್ ಚಾಟ್‌ಗಳಿಂದ ಪ್ರತ್ಯೇಕವಾಗಿರಲಿದೆ. ಜೊತೆಗೆ ಪ್ರೈವೇಟ್ ಮೆಸೇಜ್ ಸೆಂಡಿಂಗ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ಗೆ ರಾಜಿಯಾಗುವುದಿಲ್ಲ ಎಂದು ವರದಿಯಾಗಿದೆ.
ಇದಲ್ಲದೆ, ವಾಟ್ಸಾಪ್ ಬಳಕೆದಾರರು ನ್ಯೂಸ್ ಲೆಟರ್ ಮೂಲಕ ತಾವು ಅನುಸರಿಸುವವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಬೇರೆ ಯಾರೂ ಕೂಡ ಅದನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ. ಸದ್ಯ ವಾಬೇಟಾಇನ್ಫೋ ಮಾಡಿರುವ ವರದಿಯ ಪ್ರಕಾರ, ನ್ಯೂಸ್‌ಲೆಟರ್‌ಗಳು ಮಾಹಿತಿಯನ್ನು ಪ್ರಸಾರ ಮಾಡಲು ಒಂದರಿಂದ ಹಲವು ಡಿವೈಸ್‌ಗಳು ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ಗುಂಪುಗಳಿಂದ ಅಪ್ಡೇಟ್‌ಗಳನ್ನು ಸುಲಭವಾಗಿ ಸ್ವಿಕರಿಸುವುದಕ್ಕೆ ಅವಕಾಶ ನೀಡಲಿದೆ. ನ್ಯೂಸ್ ಲೆಟರ್‌ನಿಂದ ಬಳಕೆದಾರರು ಅಂತಿಮವಾಗಿ ಅವರು ಯಾರಿಂದ ಸುದ್ದಿ ಕೇಳಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡಬಹುದಾಗಿದೆ.


Click it and Unblock the Notifications








