Home
ಸುದ್ದಿಜಾಲ

ಶೀಘ್ರದಲ್ಲೇ ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ!

ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇದಲ್ಲದೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ 'ಡಿಲೀಟ್ ಫಾರ್ ಎವೆರಿ ಒನ್' ಫೀಚರ್ಸ್‌ನಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಡಿಲೀಟ್ ಫಾರ್ ಎವೆರಿ ಒನ್ ನಲ್ಲಿ ಸಮಯದ ಮಿತಿಯನ್ನು ಹೆಚ್ಚಿಸುವುದಕ್ಕೆ ಮುಂದಾಗಿದ್ದು, ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಡಿಲೀಟ್ ಫಾರ್ ಎವೆರಿ ಒನ್ ಫೀಚರ್ಸ್‌ನಲ್ಲಿ ಸಮಯದ ಮಿತಿ ಬದಲಾಯಿಸಲು ಕಾರ್ಯನಿರ್ವಹಿಸುತ್ತಿದೆ. ಡಿಲೀಟ್ ಫಾರ್ ಎವೆರಿ ಒನ್ ಫೀಚರ್ಸ್‌ನ ಸಮಯದ ಮಿತಿಯನ್ನು ಎರಡು ದಿನ ಮತ್ತು 12 ಗಂಟೆಗಳವರೆಗೆ ವಿಸ್ತರಿಸಲು ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಇದರಿಂದ ನೀವು ತಪ್ಪಾಗಿ ಕಳುಹಿಸಿದ ಸಂದೇಶವನ್ನು ಎರಡು ದಿನಗಳ ಒಳಗೆ ಡಿಲೀಟ್ ಫಾರ್ ಎವೆರಿ ಒನ್ ಮೂಲಕ ಡಿಲೀಟ್‌ ಮಾಡಲು ಅವಕಾಶ ಸಿಗಲಿದೆ. ಹಾಗಾದ್ರೆ ಡಿಲೀಟ್ ಫಾರ್ ಎವೆರಿ ಒನ್ ಸಮಯದ ವಿಸ್ತರಣೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಬಳಕೆದಾರರ ತಾವು ಕಳುಹಿಸಿದ ಸಂದೇಶದಲ್ಲಿ ತಪ್ಪಾಗಿದ್ದರೆ ಅದನ್ನು ಕೂಡಲೇ ಡಿಲೀಟ್ ಫಾರ್ ಎವೆರಿನ್ ಮೂಲಕ ಡಿಲೀಟ್‌ ಮಾಡಬಹುದು. ಇದರಿಂದ ಸಂದೇಶ ಸ್ವೀಕರಿಸಿದವರು ಕೂಡ ನಿಮ್ಮ ಸಂದೇಶವನ್ನು ಉಳಿಸಿಕೊಳ್ಳಲು ಸಾದ್ಯವಿಲ್ಲದಂತೆ ಮಾಡಬಹುದು. ಆದರೆ ಈ ಫೀಚರ್ಸ್‌ ಪ್ರಸ್ತುತ ಒಂದು ಗಂಟೆ, ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯನ್ನು ಹೊಂದಿದೆ. ಇದನ್ನು ಎರಡು ದಿನಗಳು ಮತ್ತು 12 ಗಂಟೆಗಳ ತನಕ ವಿಸ್ತರಣೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದೆ ಎಂದು ವರದಿಯಾಗಿದೆ. ಇದರಿಂದ ಎರಡು ದಿನಗಳು 12ಗಂಟೆಗಳ ಒಳಗೆ ನೀವು ಕಳುಹಿಸಿದ ಸಂದೇಶ ತಪ್ಪಾಗಿದ್ದರೆ ಡಿಲೀಟ್‌ ಫಾರ್‌ ಎವರಿ ಒನ್‌ ಮೂಲಕ ಡಿಲೀಟ್‌ ಮಾಡಬಹುದು.

ವಾಟ್ಸಾಪ್‌

ವಾಟ್ಸಾಪ್‌ ಬೀಟಾ ಟ್ರ್ಯಾಕರ್ WABetaInfo ವರದಿಯ ಪ್ರಕಾರ, ವಾಟ್ಸಾಪ್‌ ಆಂಡ್ರಾಯ್ಡ್‌ ಬೀಟಾ ಆವೃತ್ತಿ 2.22.410ನಲ್ಲಿ 'ಡಿಲೀಟ್ ಫಾರ್ ಎವೆರಿ ಒನ್' ಸಮಯದ ಮಿತಿಯನ್ನು ಎರಡು ದಿನಗಳು ಮತ್ತು 12 ಗಂಟೆಗಳವರೆಗೆ ವಿಸ್ತರಿಸುತ್ತಿದೆ ಎಂದು ಹೇಳಿದೆ. ಅಂದರೆ ಬಳಕೆದಾರರು ಸಂದೇಶವನ್ನು ಶಾಶ್ವತವಾಗಿ ಅಳಿಸಲು ಎರಡೂವರೆ ದಿನಗಳ ತನಕ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಈ ಫೀಚರ್ಸ್‌ ಅನ್ನು ಬಳಸಿಕೊಂಡು ನೀವು ಸಂದೇಶ ಡಿಲೀಟ್‌ ಮಾಡಿದ ನಂತರ "ಈ ಸಂದೇಶವನ್ನು ಅಳಿಸಲಾಗಿದೆ" ಎಂಬ ನೋಟಿಫಿಕೇಶನ್‌ನೊಂದಿಗೆ ಬದಲಾಯಿಸಲಾಗುತ್ತದೆ.

ಡಿಲೀಟ್

ಇನ್ನು ಡಿಲೀಟ್ ಫಾರ್ ಎವೆರಿ ಒನ್ ಫೀಚರ್ಸ್‌ನಲ್ಲಿ ಸಮಯದ ಮಿತಿ ಬದಲಾವಣೆಯ ಬಗ್ಗೆ ವರದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷದ ನವೆಂಬರ್‌ನಲ್ಲಿ,ಡಿಲೀಟ್ ಫಾರ್ ಎವೆರಿ ಒನ್ ಸಮಯದ ಮಿತಿಯನ್ನು ಏಳು ದಿನಗಳವರೆಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಈ ಸಮಯದ ಮಿತಿಯ ವಿಸ್ತರಿಸಿದ ಫೀಚರ್ಸ್‌ ರೂಲ್‌ಔಟ್‌ ಆಗಲೇ ಇಲ್ಲ. ಇನ್ನು ಈ ಫೀಚರ್ಸ್‌ ಪ್ರಾರಂಭದಲ್ಲಿ ಲಭ್ಯವಾಗಿದ್ದಾಗ ಏಳು ನಿಮಿಷಗಳ ಸಮಯದ ಮಿತಿಯನ್ನು ಹೊಂದಿತ್ತು. ಆದರೆ ವಾಟ್ಸಾಪ್‌ 2018ರಲ್ಲಿ ಡಿಲೀಟ್ ಫಾರ್ ಎವೆರಿ ಒನ್ ಸಮಯದ ಮಿತಿಯನ್ನು ಒಂದು ಗಂಟೆಯ ಅವಧಿಗೆ ವಿಸ್ತರಣೆ ಮಾಡಿತ್ತು.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್‌ ಮೈಗ್ರೇಷನ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದಕ್ಕೂ ಮೊದಲು ಆಂಡ್ರಾಯ್ಡ್‌ ಮತ್ತು iOS ಬಳಕೆದಾರರಿಗೆ ತಮ್ಮ ಚಾಟ್ ಹಿಸ್ಟರಿಯನ್ನು ಟ್ರಾನ್ಸಫರ್‌ ಮಾಡುವುದು ಕಷ್ಟಕರವಾಗಿತ್ತು. ಇದರಿಂದ ಹೊಸ ಆಪರೇಟಿಂಗ್ ಸಿಸ್ಟಮ್‌ಗೆ ಹೋಗುವುದರಿಂದ ಹಳೆಯ ಚಾಟ್‌ಗಳನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ ಇದೀಗ ವಾಟ್ಸಾಫ್‌ ತನ್ನ ಚಾಟ್‌ ಬಿಸ್ಟರಿ ಟ್ರಾನ್ಸಫರ್‌ ವಿಷಯವನ್ನು ಸಾಕಷ್ಟು ಸರಳಗೊಳಿಸಿದೆ. ಸದ್ಯ iOS ಬಳಕೆದಾರರು ಈಗ ತಮ್ಮ ಚಾಟ್‌ಗಳನ್ನು ಸ್ಯಾಮ್‌ಸಂಗ್‌ ಹಾಗೂ ಪಿಕ್ಸೆಲ್‌ ಡಿವೈಸ್‌ಗಳಿಗೆ ಸುಲಭವಾಗಿ ವರ್ಗಾಯಿಸಬಹುದು.ಆದರೆ ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ 12 ಚಾಲನೆಯಲ್ಲಿರುವ ಎಲ್ಲಾ ಫೋನ್‌ಗಳು ಚಾಟ್ ಟ್ರಾನ್ಸಫರ್‌ ಫೀಚರ್ಸ್‌ ಪಡೆಯಲಿವೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
WhatsApp is reportedly working on extending the time limit for the ‘Delete for Everyone' feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+