Home
ಸುದ್ದಿಜಾಲ

WhatsApp: ವಾಟ್ಸಾಪ್‌ನಿಂದ ಹೊಸ ಪ್ಲ್ಯಾನ್‌: ಸದ್ಯದಲ್ಲೇ ಬರಲಿದೆ ವೆರಿಫೈಡ್‌ ಬ್ಯಾಡ್ಜ್‌ ಫೀಚರ್ಸ್‌!

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಮತ್ತೊಂದು ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಒಂದಲ್ಲೊಂದು ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟ್ಸಾಪ್‌ ಇದೀಗ ತನ್ನ ಚಾನಲ್‌ಗಳಲ್ಲಿ ವೆರಿಫೈಡ್ ಚಾನೆಲ್ ಬ್ಯಾಡ್ಜ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಪರಿಶೀಲಿಸಿದ ಬ್ಯಾಡ್ಜ್‌ ಹೊಂದಿರುವ ಚಾನಲ್‌ಗಳು ವಿಶ್ವಾಸಾರ್ಹವಾಗಿರುತ್ತವೆ ಎಂದು ಹೇಳಲಾಗಿದೆ.

ಹೌದು, ವಾಟ್ಸಾಪ್‌ ಇತ್ತೀಚಿಗೆ ಪರಿಚಯಿಸಿರುವ ಚಾನಲ್‌ಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದೀಗ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವುದಕ್ಕೆ ವಾಟ್ಸಾಪ್‌ ಮುಂದಾಗಿದೆ. ಅದರಂತೆ ವಾಟ್ಸಾಪ್‌ ಚಾನಲ್‌ಗಳಿಗೆ ವೆರಿಫೈಡ್ ಚಾನೆಲ್ ಬ್ಯಾಡ್ಜ್‌ ನೀಡುವ ನಿಟ್ಟಿನಲ್ಲಿ ಪ್ಲ್ಯಾನ್‌ ಮಾಡುತ್ತಿದೆ. ವಾಟ್ಸಾಪ್‌ನಲ್ಲಿ ನೀಡಲಾಗುವ ವೆರಿಫೈಡ್ ಚಾನೆಲ್ ಬ್ಯಾಡ್ಜ್‌ ಹಸಿರು ಬಣ್ಣದ ಆಯ್ಕೆಯಲ್ಲಿರಲಿದೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವೆರಿಫೈಡ್‌ ಚಾನೆಲ್‌ ಬ್ಯಾಡ್ಜ್‌ ಹೇಗೆ ನೀಡಲಿದೆ ಅನ್ನೊದನ್ನ ಇ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಿಂದ ಹೊಸ ಪ್ಲ್ಯಾನ್‌: ಬರಲಿದೆ ವೆರಿಫೈಡ್‌ ಬ್ಯಾಡ್ಜ್‌ ಫೀಚರ್ಸ್‌!

ಬ್ಯುಸಿನೆಸ್‌ ಅಕೌಂಟ್‌ ತಮ್ಮ ಚಾನಲ್‌ಗಳಲ್ಲಿ ಪರಿಶೀಲನೆ ಬ್ಯಾಡ್ಜ್ ಅನ್ನು ಪ್ರದರ್ಶಿಸುವುದಕ್ಕೆ ಅವಕಾಶ ನೀಡಲು ವಾಟ್ಸಾಪ್‌ ಸಿದ್ಧತೆ ನಡೆಸಿದೆ. ಈ ಮೂಲಕ ಚಾನಲ್‌ಗಳ ಪರಿಶೀಲನೆ ಗುರುತುಗಳನ್ನು ಪ್ರದರ್ಶಿಸುವ ವಿಧಾನವನ್ನು ಬದಲಾಯಿಸುತ್ತಿದೆ. ಈಗಾಗಲೇ Instagram ಮತ್ತು Facebook ನಲ್ಲಿ ಬಳಸುತ್ತಿರುವ ಬ್ಲೂ ಟಿಕ್‌ ಚೆಕ್ ಗುರುತುಗಳ ರೀತಿಯಲ್ಲಿಯೇ ಇರಲಿದೆ. ಸದ್ಯ ಈ ಹೊಸ "ವೆರಿಫೈಡ್‌ ಚಾನಲ್" ಫೀಚರ್ಸ್‌ ಅನ್ನು Android 2.24.1.18 ಅಪ್‌ಡೇಟ್‌ಗಾಗಿ WhatsApp ಬೀಟಾದಲ್ಲಿ ಗುರುತಿಸಲಾಗಿದೆ.

ಇತರ ವೈಶಿಷ್ಟ್ಯಗಳಿಗಿಂತ ಭಿನ್ನವಾಗಿ ಈ ನಿರ್ದಿಷ್ಟ ಫೀಚರ್ಸ್‌ ಇನ್ನೂ ಅಭಿವೃದ್ಧಿಯಲ್ಲಿದೆ. ಆದರಿಂದ ಇದನ್ನು ಸ್ಥಿರ ಚಾನಲ್‌ನಲ್ಲಿ ಎಲ್ಲಾ ಬಳಕೆದಾರರಿಗೆ ಹೊರತರುವ ಮೊದಲು, ಬೀಟಾ ಪರೀಕ್ಷಕರಿಗೆ ಹೊರತರುವ ನಿರೀಕ್ಷೆಯಿದೆ. ಪ್ರಸ್ತುತ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಸ್ಕ್ರೀನ್‌ಶಾಟ್‌ ಪ್ರಕಾರ ಹೊಸ ಪರಿಶೀಲಿಸಿದ ಚಾನಲ್ ವೈಶಿಷ್ಟ್ಯಕ್ಕಾಗಿ ಉದ್ದೇಶಿತ ಇಂಟರ್ಫೇಸ್ ಅನ್ನು ತೋರಿಸಲಾಗಿದೆ. ಅದರಂತೆ ಈ ವೈಶಿಷ್ಟ್ಯವು WhatsApp ವ್ಯಾಪಾರ ಬಳಕೆದಾರರನ್ನು ಗುರಿಯಾಗಿರಿಸಿಕೊಂಡಂತೆ ಕಾಣಿಸಿದೆ.

ವಾಟ್ಸಾಪ್‌ನಿಂದ ಹೊಸ ಪ್ಲ್ಯಾನ್‌: ಬರಲಿದೆ ವೆರಿಫೈಡ್‌ ಬ್ಯಾಡ್ಜ್‌ ಫೀಚರ್ಸ್‌!

ವೆರಿಫೈಡ್‌ ಬ್ಯಾಡ್ಜ್‌ ಹೊಂದಿರುವ ಬ್ಯುಸಿನೆಸ್‌ ಅಕೌಂಟ್‌ಗಳು ಬಳಕೆದಾರರನ್ನು ಸುಲಭವಾಗಿ ಗಮನಸೆಳೆಯುತ್ತವೆ. ಅಲ್ಲದೆ ವಿಶ್ವಾಸಾರ್ಹತೆ ಹೊಂದಿರುತ್ತವೆ ಎಂಬ ಕಾರಣಕ್ಕೆ ಹೆಚ್ಚಿನ ಜನರು ವೆರಿಫೈಡ್‌ ಚಾನಲ್‌ಗಳನ್ನು ಫಾಲೋ ಮಾಡುತ್ತಾರೆ. ವೆರಿಫೈಡ್‌ ಬ್ಯಾಡ್ಜ್‌ ಪಡೆದು ಅಕೌಂಟ್‌ಗಳಿಗೆ ಅವರ ಪ್ರೊಫೈಲ್‌ನಲ್ಲಿ ಪರಿಶೀಲಿಸಿದ ಟಿಕ್ ಮಾರ್ಕ್ ಅನ್ನು ಪಡೆಯಲು ಸಾಧ್ಯವಾಗಲಿದೆ.

ವಾಟ್ಸಾಪ್‌ ಚಾನಲ್‌ಗಳ ವೆರಿಫೈಡ್‌ ಬ್ಯಾಡ್ಜ್‌ ಹಸಿರು ಬಣ್ಣದ ಆಯ್ಕೆಯಲ್ಲಿ ಇರಲಿದೆ. ಪರಿಶೀಲಿಸಿದ ಬ್ಯಾಡ್ಜ್ ಅನ್ನು ಪಡೆದುಕೊಳ್ಳುವ ಚಾನಲ್‌ಗಳು ಹೆಸರು ಮತ್ತು ಪ್ರೊಫೈಲ್ ಚಿತ್ರವನ್ನು ತಕ್ಷಣವೇ ಬದಲಾಯಿಸುತ್ತದೆ. ಅಲ್ಲದೆ ನಿಮ್ಮ ಪರಿಶೀಲಿಸಿದ ವ್ಯಾಪಾರದ ವಿವರಗಳನ್ನು ಬಳಸಲು ಪ್ರಾರಂಭಿಸುತ್ತದೆ. ಒಂದು ವೇಳೆ ನಿಮ್ಮ ಚಾನಲ್‌ನ ಫೋಟೋವನ್ನು ಬದಲಾಯಿಸಲು ನೀವು ಯೋಜಿಸಿದರೆ, ಸ್ಕ್ರೀನ್‌ಶಾಟ್‌ನ ಪ್ರಕಾರ ನಿಮ್ಮ ವ್ಯಾಪಾರದ ಪ್ರೊಫೈಲ್‌ನಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

ವಾಟ್ಸಾಪ್‌ನಿಂದ ಹೊಸ ಪ್ಲ್ಯಾನ್‌: ಬರಲಿದೆ ವೆರಿಫೈಡ್‌ ಬ್ಯಾಡ್ಜ್‌ ಫೀಚರ್ಸ್‌!

ವಾಟ್ಸಾಪ್‌ ನಲ್ಲಿ ಪರಿಶೀಲಿಸಿದ ಚೆಕ್ ಮಾರ್ಕ್ ಅನ್ನು ಪ್ರದರ್ಶಿಸಲು, ವ್ಯಾಪಾರಗಳು ಮೆಟಾ ಪರಿಶೀಲಿಸಿದ ಚಂದಾದಾರಿಕೆಯನ್ನು ಹೊಂದಿರಬೇಕು ಎಂದು ಹೇಳಲಾಗಿದೆ. ಅಂದರೆ ವೈಯಕ್ತಿಕ ಬಳಕೆದಾರರು ಮತ್ತು ವ್ಯಾಪಾರೇತರ ಖಾತೆಗಳು ಚಾನೆಲ್‌ಗಳಿಗೆ ಪರಿಶೀಲಿಸಿದ ಟಿಕ್ ಮಾರ್ಕ್ ಅನ್ನು ಸೇರಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಅಂದರೆ ಬ್ಯುಸಿನೆಸ್‌ ಚಾನೆಲ್‌ ಅಕೌಂಟ್‌ಗಳಿಗೆ ಮಾತ್ರ ವೆರಿಫೈಡ್‌ ಬ್ಯಾಡ್ಜ್‌ ದೊರೆಯಲಿದೆ.

ಇದಲ್ಲದೆ ವಾಟ್ಸಾಪ್‌ ಇತ್ತೀಚಗೆ ನವೆಂಬರ್ 2023ರ ಮಾಸಿಕ ವರದಿಯನ್ನು ಪ್ರಕಟಿಸಿದೆ. ಎಂದಿನಂತೆ ಐಟಿ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ವಾಟ್ಸಾಪ್‌ ನಿಯಮಗಳಿಗೆ ವಿರುದ್ಧವಾಗಿರುವ ಖಾತೆಗಳನ್ನು ಬ್ಯಾನ್‌ ಮಾಡಿದೆ. ಇದರಲ್ಲಿ ವಂಚನೆ ಮಾಡುವ ಉದ್ದೇಶಕ್ಕಾಗಿ ರಚನೆಯಾಗಿರುವ ವಾಟ್ಸಾಪ್‌ ಅಕೌಂಟ್‌ಗಳು, ಬಳಕೆದಾರರ ರಿಪೋರ್ಟ್‌ ಮಾಡಿರುವ ಅಕೌಂಟ್‌ಗಳು ಸೇರಿವೆ.

Best Mobiles in India

English summary
WhatsApp is working on Verified Channel Badge Feature: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+