ಕೊರೋನಾ ಜಾಗೃತಿಗಾಗಿ ವಾಟ್ಸಾಪ್‌ನಿಂದ ‘ಟುಗೆದರ್ ಅಟ್ ಹೋಮ್’ ಸ್ಟಿಕ್ಕರ್ ಪ್ಯಾಕ್‌!

|

ಜಾಗತಿಕವಾಗಿ ಪ್ರಸಿದ್ದವಾದ ಇನ್ಸ್ಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸ್ಆಪ್. ಎಲ್ಲರನ್ನು ಸೆಳೆಯಬಲ್ಲ ಹಾಗೂ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಮೆಸೇಜಿಂಗ್ ಆಪ್ ವಾಟ್ಸಾಪ್‌ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ತಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಉದ್ದೇಶದಿಂದ ಹೆಚ್ಚಿನವರು ವಾಟ್ಸ್ ಆಪ್ ನ್ನು ಬಳಕೆ ಮಾಡಿಯೇ ಮಾಡುತ್ತಾರೆ. ಮೀಡಿಯಾ ಫೈಲ್ಸ್, ಡಾಕ್ಯುಮೆಂಟ್, ಕಾಂಟ್ಯಾಕ್ಟ್ಸ್, ಲೊಕೇಷನ್ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ವಾಟ್ಸಾಪ್‌ ಅತ್ಯುತ್ತಮವಾಗಿರುವ ಫ್ಲ್ಯಾಟ್ ಫಾರ್ಮ್ ಆಗಿದೆ. ಸದ್ಯ ವಾಟ್ಸಾಪ್‌ ಇದೀಗ ಹೊಸ ಫೀಚರ್ಸ್‌ ಒಂದನ್ನ ಪರಿಚಯಿಸಿದೆ.

ಹೌದು

ಹೌದು, ಜಾಗತಿಕವಾಗಿ ಜನಪ್ರಿಯತೆ ಪಡೆದುಕೊಂಡಿರುವ ಇನ್ಸ್ಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ ಕೋವಿಡ್‌-19 ಸಮಯದಲ್ಲಿ ಬಳಕೆದಾರರಿಗೆ ಹೊಸ ಫಿಚರ್ಸ್‌ ಒಂದನ್ನ ಪರಿಚಯಿಸಿದೆ. ಸದ್ಯ ವಾಟ್ಸಾಪ್ ‘ಟುಗೆದರ್ ಅಟ್ ಹೋಮ್' ಎಂಬ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ಪರಿಚಯಿಸಿದ್ದು. ಈ ಕ್ಷಣದಲ್ಲಿ ಜಗತ್ತಿನಾದ್ಯಂತ ಜನರು ಅನುಭವಿಸುತ್ತಿರುವ ಭಾವನೆಗಳು ಮತ್ತು ಸ್ಥಳೀಯ ಭಾವನೆಗಳನ್ನು ಪ್ರತಿಬಿಂಬಿಸಲು ಈ ಹೊಸ ಸ್ಟಿಕ್ಕರ್‌ಗಳನ್ನು ರಚಿಸಲು ಇದನ್ನ ಪರಿಚಯಿಸಿದೆ. ಅಲ್ಲದೆ ಈ ಮಾದರಿಯ ತ್ವರಿತ ಸಂದೇಶ ಕಳುಹಿಸುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ (WHO)ಯೊಂದಿಗೆ ವಾಟ್ಸಾಪ್‌ ಪಾಲುದಾರಿಕೆ ಹೊಂದಿದೆ.

ವಾಟ್ಸಾಪ್‌

ಸದ್ಯ ವಾಟ್ಸಾಪ್‌ ಜಾಗತಿಕವಾಗಿ ಪ್ರಸಿದ್ದವಾದ ಆಪ್‌. ವಾಟ್ಸಾಪ್‌ ಮೂಲಕ ಸಾಕಷ್ಟು ಜನರು ಸಂಪರ್ಕದಲ್ಲಿರುತ್ತಾರೆ. ಹೊಸಹೊಸ ವಿಚಾರಗಳನ್ನ ವಾಟ್ಸಾಪ್‌ನಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥ ವಾಟ್ಸಾಪ್‌ ಸಹಯೊಗದೊಂದಿಗೆ ಕೋವಿಡ್‌-19 ಕುರಿತು ಜಾಗೃತಿ ಮೂಡಿಸುವ ಸ್ಟಿಕ್ಕರ್‌ಗಳು ವಾಟ್ಸಾಪ್‌ನಲ್ಲಿ ಲಬ್ಯವಾಗುವಂತೆ ಮಾಡಿದ್ದಾರೆ. ಈ ಮೂಲಕ ಕೋವಿಡ್‌-19 ವಿರುದ್ದದ ಹೋರಾಟದಲ್ಲಿ ಭಾವನೆಗಳನ್ನ ಸ್ಟಿಕ್ಕರ್‌ಗಳ ಮೂಲಕ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಲಾಗ್ತಿದೆ.

ಇಂಗ್ಲಿಷ್

ಇನ್ನು ಈ ಸ್ಟಿಕ್ಕರ್‌ಗಳು ಇಂಗ್ಲಿಷ್, ಹಿಂದಿ ಮತ್ತು ಇತರ ಭಾಷೆಗಳಲ್ಲಿ ಲಭ್ಯವಿರುತ್ತವೆ. ವಾಟ್ಸಾಪ್ ಎರಡು ವರ್ಷಗಳ ಹಿಂದೆಯೆ ಸ್ಟಿಕ್ಕರ್‌ಗಳನ್ನು ಪರಿಚಯಿಸಿತು. ಅಂದಿನಿಂದ ಇದು ಸಾಮಾಜಿಕ ವೇದಿಕೆಯಲ್ಲಿ ಬಳಕೆದಾರರ ತನ್ನ ಭಾವನೆಗಳನ್ನ ಅಭಿವ್ಯಕ್ತ ಪಡಿಸುವ ಸಾಧನವಾಗಿ ಮಾರ್ಪಾಡಾಗಿದೆ. ಇಲ್ಲಿ ಹಾಸ್ಯ, ದುಃಖ ಎಲ್ಲಾ ಮಾದರಿಯ ಸ್ಟಿಕ್ಕರ್‌ಗಳು ಲಭ್ಯವಿದ್ದವು. ಇದೀ 'ಟುಗೆದರ್‌ ಅಟ್‌ ಹೋಮ್‌' ಸ್ಟಿಕ್ಕ್ರ್‌ ಪ್ಯಾಕ್‌ನಲ್ಲಿ ಕೊರೋನಾ ಕುರಿತ ಸ್ಟಿಕ್ಕರ್‌ಗಳು ಲಬ್ಯವಾಗಲಿದೆ.

ಸ್ಟಿಕ್ಕರ್

ಅಲ್ಲದೆ ಈ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ‘ಟುಗೆದರ್ ಅಟ್ ಹೋಮ್' ನಲ್ಲಿ ಪ್ರಸ್ತುತ ಸನ್ನಿವೇಶದ ಎಲ್ಲಾ ಮನಸ್ಥಿತಿಗಳನ್ನು ಸೂಕ್ತವಾಗಿ ಪ್ರತಿಬಿಂಬಿಸುವ ಸ್ಟಿಕ್ಟರ್‌ಗಳಿವೆ. ಲ್ಯಾಪ್‌ಟಾಪ್‌ ತರುತ್ತಿರುವ ವ್ಯಕ್ತಿ, ಪೈಜಾಮಾ ಧರಿಸಿದ ‘ಮನೆಯಿಂದ ಕೆಲಸ' ಎಂಬ ಹೊಸ ಸೂಚನೆ ನೀಡುವ ಸ್ಟಿಕ್ಕರ್ ಇದರಲ್ಲಿದೆ. ಜೊತೆಗೆ ವಾಟ್ಸಾಪ್ ‘ಏರ್ ಹೈ ಫೈವ್' ಮತ್ತು ‘ಗ್ರೂಪ್ ವಿಡಿಯೋ ಕಾಲಿಂಗ್' ಅನ್ನು ಚಿತ್ರಿಸುವ ಸ್ಟಿಕ್ಕರ್‌ಗಳ ಮೂಲಕ ಸಾಮಾಜಿಕ ದೂರವನ್ನು ಉತ್ತೇಜಿಸುತ್ತದೆ. ಇದಲ್ಲದೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಸ್ಟಿಕ್ಕರ್‌ಗಳು, ಯೋಗ ಮಾಡುತ್ತಿರುವ ಚಿತ್ರಗಳು ಜೊತೆಗೆ ಜನರು ಮತ್ತೆ ಮತ್ತೆ ಕೈ ತೊಳೆಯಲು ನೆನಪಿಸುವಂತಹ ಸ್ಟಿಕ್ಕರ್‌ಗಳು ಲಬ್ಯವಿವೆ.

ಕೊರೋನಾ

ಇನ್ನು ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಹಾಗೂ ಸಾಮಾಜಿಕ ಕಾರ್ಯ ಮಾಡುತ್ತಿರುವವರನ್ನು ಗೌರವಿಸುವ ಸ್ಟಿಕ್ಕರ್‌ಗಳಿವೆ. ಸದ್ಯ "ಟುಗೆದರ್ ಅಟ್ ಹೋಮ್" ಸ್ಟಿಕ್ಕರ್ ಪ್ಯಾಕ್ ವಾಟ್ಸಾಪ್‌ನಲ್ಲಿ ಲಭ್ಯವಿದೆ, ಮತ್ತು ಅದನ್ನು ಇದೀಗ ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಇದು ಪ್ರಸ್ತುತ ಇಂಗ್ಲಿಷ್‌ನಲ್ಲಿ ಲಭ್ಯವಿದೆ ಮತ್ತು ಅರೇಬಿಕ್, ಫ್ರೆಂಚ್, ಜರ್ಮನ್, ಹಿಂದಿ, ಇಂಡೋನೇಷಿಯನ್, ಇಟಾಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪ್ಯಾನಿಷ್ ಮತ್ತು ಟರ್ಕಿಶ್ ಎಂಬ 10 ಭಾಷೆಗಳಿಗೆ ಭಾಷಾಂತರಿಸಲಾಗಿದೆ. ಸ್ಟಿಕ್ಕರ್‌ಗಳ ಮೂಲಕ ಬಳಕೆದಾರರಿಗೆ ಕೊರೋನಾ ಸಮಸ್ಯೆ ಕುರಿತು ಜಾಗೃತಿ ಮೂಡಿಸುವುದಕ್ಕೆ ವಾಟ್ಸಾಪ್‌ ಮುಂದಾಗಿದೆ.

Best Mobiles in India

English summary
WhatsApp has introduced a new sticker pack called ‘Together at Home'.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X