Subscribe to Gizbot

ಭಾರತದಲ್ಲಿ ವಾಟ್ಸ್‌ಆಪ್‌ಗೆ ಮುಖ್ಯಸ್ಥರು ಬೇಕಂತೆ: ಅವರಿಗೆ ಈ ಅರ್ಹತೆಗಳು ಇರಬೇಂತೆ..!

Written By:

ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಮೇಸೆಜಿಂಗ್ ಆಪ್ ಆಗಿರುವ ವಾಟ್ಸ್‌ಆಪ್, ಸರಿ ಸುಮಾರು 1.3 ಬಿಲಿಯನ್ ಬಳಕೆದಾರರನ್ನು ವಿಶ್ವದಾದ್ಯಂತ ಹೊಂದಿದೆ. ಇದಲ್ಲದೇ ಭಾರತೀಯ ಮಾರುಕಟ್ಟೆಯಲ್ಲಿಯೂ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಭಾರತದ ವ್ಯವಹಾರವನ್ನು ನೋಡಿಕೊಳ್ಳಲು ಕಂಟ್ರಿ ಹೆಡ್ (ದೇಶದ ಮೂಖ್ಯಸ್ಥರು) ಒಬ್ಬರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಭಾರತದಲ್ಲಿ ವಾಟ್ಸ್‌ಆಪ್‌ಗೆ ಮುಖ್ಯಸ್ಥರು ಬೇಕಂತೆ: ಅವರಿಗೆ ಈ ಅರ್ಹತೆಗಳು ಇರಬೇಂತೆ.

ಭಾರತದಲ್ಲಿ ಸುಮಾರು 200 ಮಿಲಿಯನ್ ಬಳಕೆದಾರರು ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಪೇಮೆಂಟ್ ಸೇವೆಯನ್ನು ಆರಂಭಿಸಲು ವಾಟ್ಸ್‌ಆಪ್ ತುದಿಗಾಲಿನಲ್ಲಿ ನಿಂತಿದೆ. ಇದೇ ಮಾದರಿಯಲ್ಲಿ ಬಿಸ್ನೆಸ್ ಆಪ್ ಅನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಚರಣೆಯನ್ನು ನಡೆಸಲು ಯೋಜನೆಯನ್ನು ರೂಪಿಸಿದೆ. ಇದನ್ನೆಲ್ಲವನ್ನು ನಿಭಾಯಿಸಿಕೊಂಡು ಹೋಗುವ ಸಲುವಾಗಿ ವಾಟ್ಸ್‌ಆಪ್ ಭಾರತದಲ್ಲಿ ಮುಖ್ಯಸ್ಥರನ್ನು ನೇಮಕ ಮಾಡಲಿಕೊಳ್ಳಲಿದೆ.

ಭಾರತ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ವಾಟ್ಸ್‌ಆಪ್ ಕಛೇರಿಯನ್ನು ತೆರೆಯಲಿದ್ದು, ಇಲ್ಲಿಯೇ ಕಾರ್ಯನಿರ್ವಹಿಸುವ ಭಾರತದ ಮುಖ್ಯಸ್ಥರು, ಅಮೇರಿಕಾದ ಕಾಲಿಫೋರ್ನಿಯಾದಲ್ಲಿರುವ ವಾಟ್ಸ್‌ಆಪ್ COOಗೆ ವರದಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಭಾರತಕ್ಕಾಗಿಯೇ ಮುಖ್ಯಸ್ಥರೊಬ್ಬರನ್ನು ವಾಟ್ಸ್‌ಆಪ್ ನೇಮಕ ಮಾಡಲು ಮುಂದಾಗಿದೆ.

ಭಾರತದಲ್ಲಿ ವಾಟ್ಸ್‌ಆಪ್‌ಗೆ ಮುಖ್ಯಸ್ಥರು ಬೇಕಂತೆ: ಅವರಿಗೆ ಈ ಅರ್ಹತೆಗಳು ಇರಬೇಂತೆ.

ಈ ಹುದ್ದೆಗೆ ತಮ್ಮನ್ನು ಸೂಕ್ತ ಎಂದುಕೊಳ್ಳುವರು ಮಾರುಕಟ್ಟೆಯಲ್ಲಿ 15+ ವರ್ಷದ ಅನುಭವನ್ನು ಹೊಂದಿರ ಬೇಕಾಗುತ್ತದೆ. ಅಲ್ಲದೇ ಪೇಮೆಂಟ್ ಟೆಕ್ನಾಲಜಿ ವಿಭಾಗದಲ್ಲಿ ಸುಮಾರು 5 ವರ್ಷದ ಅನುಭವನ್ನು ಹೊಂದಿರಬೇಕು ಎನ್ನಲಾಗಿದೆ. ಅಲ್ಲದೇ ಯಾವುದಾರರು ಸ್ಟಾರ್ಟಪ್ ಆರಂಭಿಸಿದ ಅನುಭವ ಇದ್ದರೆ ಇನ್ನು ಉತ್ತಮ ಎಂದು ವಾಟ್ಸ್‌ಆಪ್ ಹೇಳಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಒಟ್ಟಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ವಾಟ್ಸ್‌ಆಪ್. ಮುಂದಿನ ದಿನದಲ್ಲಿ ಇನ್ನಷ್ಟು ಪ್ರಯೋಗಕ್ಕೆ ಮುಂದಾಗಲಿದ್ದು, ಈ ಹಿನ್ನಲೆಯಲ್ಲಿ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಹೊಂದಿರುವವರಿಗೆ ಅಧಿಕಾರವನ್ನು ನೀಡಲು ವಾಟ್ಸ್‌ಆಪ್ ಯೋಜನೆಯನ್ನು ಮಾಡಿದೆ.

English summary
WhatsApp looking for India head. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot