Home
ಸುದ್ದಿಜಾಲ

ಹೊಸ ವರ್ಷದ ಪ್ರಯುಕ್ತ ವಾಟ್ಸಾಪ್‌ನಲ್ಲಿ ಬಂದ ವಿಡಿಯೋ ಕರೆಗಳೆಷ್ಟು ಗೊತ್ತಾ?

ಹೊಸವರ್ಷದ ಪ್ರಯುಕ್ತ ವಾಟ್ಸಾಪ್‌ ಹೊಸ ದಾಖಲೆಯನ್ನು ಬರೆದಿದೆ. ವಾಟ್ಸಾಪ್‌ ಮೂಲಕ ಪ್ರತಿನಿತ್ಯ ಸಾಕಷ್ಟು ಜನರು ಸಂದೇಶ ವಿನಿಮಯ ಹಾಗೂ ವಿಡಿಯೋ ಕರೆಗಳನ್ನು ಮಾಡುತ್ತಾರೆ. ಆದರೆ ಹೊಸ ವರ್ಷದ ಶುಭಾಶಯ ವಿನಿಯಮ ಮಾಡುವುದಕ್ಕೆ ವಾಟ್ಸಾಪ್‌ ನಲ್ಲಿ 1.4 ಬಿಲಿಯನ್‌ಗಿಂತ ಹೆಚ್ಚಿನ ವಾಯ್ಸ್‌ ಮತ್ತು ವೀಡಿಯೊ ಕರೆಗಳನ್ನು ಮಾಡಲಾಗಿದೆ. ಇದು ವಾಟ್ಸಾಪ್‌ನಲ್ಲಿ ಒಂದೇ ದಿನದಲ್ಲಿ ಜಾಗತಿಕವಾಗಿ ಮಾಡಿದ ಅತಿ ಹೆಚ್ಚು ವಾಯ್ಸ್‌ ಹಾಗೂ ವಿಡಿಯೋ ಕರೆಗಳಿಗಾಗಿ ದಾಖಲೆ ಬರೆದಿದೆ.

ವಾಟ್ಸಪ್‌

ಹೌದು, ವಾಟ್ಸಪ್‌ ಒಂದೇ 1.4 ಬಿಲಿಯನ್‌ಗಿಂತ ಹೆಚ್ಚಿನ ವಾಯ್ಸ್‌ ಹಾಗೂ ವಿಡಿಯೋ ಕರೆಗಳಿಗೆ ಸಾಕ್ಷಿಯಾಗಿದೆ. ಸದ್ಯ ಕರೊನಾ ವೈರಸ್‌ನ ಆತಂಕ ಇರುವುದರಿಂದ ಹೆಚ್ಚಿನ ಜನರು ಹೊಸ ವರ್ಷವನ್ನು ಮನೆಯಲ್ಲಿಯೇ ಆಚರಿಸಿದ್ದಾರೆ. ಅಲ್ಲದೆ ಮನೆಯಿಂದಲೇ ತಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಶುಭಾಶಯ ವಿನಿಮಯ ಮಾಡಿದ್ದಾರೆ. ಅದರಲ್ಲೂ ಹೆಚ್ಚಿನ ಜನರು ವಾಯ್ಸ್‌ ಹಾಗೂ ವಿಡಿಯೋ ಕರೆಗಾಗಿ ವಾಟ್ಸಾಪ್‌ ಬಳಸಿರುವುದು ವಾಟ್ಸಾಪ್‌ನ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ವಾಟ್ಸಾಪ್

ವಾಟ್ಸಾಪ್ 2019 ಕ್ಕೆ ಹೋಲಿಸಿದರೆ ಹೊಸ ವರ್ಷದ ಮುನ್ನಾದಿನ 2020 ಕ್ಕೆ ಕರೆ ಮಾಡುವಲ್ಲಿ 50 ಪ್ರತಿಶತದಷ್ಟು ಹೆಚ್ಚಳವನ್ನು ದಾಖಲಿಸಿದೆ. ಅಂಕಿಅಂಶಗಳ ಪ್ರಕಾರ, ವಾಟ್ಸಾಪ್ ಬಳಕೆದಾರರು ಹೊಸ ವರ್ಷದ ಮುನ್ನಾದಿನದಂದು 1.4 ಬಿಲಿಯನ್ ವೀಡಿಯೊ, ಧ್ವನಿ ಕರೆಗಳನ್ನು ಮಾಡಿದ್ದಾರೆ. ಹೆಚ್ಚಿನ ಜನರು ತಮ್ಮ ಮನೆಗಳೊಳಗೆ ದಿನವನ್ನು ಕಳೆದರೆ, ಹತ್ತಿರ ಮತ್ತು ಆತ್ಮೀಯರ ಜೊತೆಗೆ ಹೊಸ ವರ್ಷವನ್ನು ಆಚರಿಸಲು ವಾಟ್ಸಾಪ್ ಏಕೈಕ ಅನುಕೂಲಕರ ಆಯ್ಕೆಯಾಗಿದೆ. ಹೊಸ ವರ್ಷದ ಮುನ್ನಾದಿನದಂದು ಫೇಸ್‌ಬುಕ್ ಕೂಡ ಜಾಗತಿಕವಾಗಿ 55 ಮಿಲಿಯನ್ ಲೈವ್ ಪ್ರಸಾರಗಳಿಗೆ ಸಾಕ್ಷಿಯಾಗಿದೆ.

ವಾಟ್ಸಾಪ್

ಇನ್ನು ವಾಟ್ಸಾಪ್ ಭಾರತದಲ್ಲಿ 400 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, 2019 ರಲ್ಲಿ, ಹೊಸ ವರ್ಷದ ಮುನ್ನಾದಿನದಂದು ಜಾಗತಿಕವಾಗಿ 20 ಬಿಲಿಯನ್ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲಾಗಿತ್ತು. ಅದರಲ್ಲೂ ಈ 20 ಬಿಲಿಯನ್ ಸಂದೇಶಗಳಲ್ಲಿ, 12 ಬಿಲಿಯನ್ ಭಾರತದಲ್ಲಿ ಮಾತ್ರ ಕಳುಹಿಸಲಾಗಿತ್ತು. ಇದಲ್ಲದೆ ಈ ಬಾರಿ ವಾಯ್ಸ್‌ ಮತ್ತು ವಿಡಿಯೋ ಕರೆಗಳ ಜೊತೆಗೆ, ಲೈವ್ ವಿಡಿಯೋ ಪ್ರಸಾರಗಳು ಕೂಡ ಹೆಚ್ಚಳವಾಗಿವೆ. ಅದರಲ್ಲೂ ಹೊಸ ವರ್ಷದ ಮುನ್ನಾದಿನ 2020 ರಂದು, ಜಾಗತಿಕವಾಗಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 55 ದಶಲಕ್ಷಕ್ಕೂ ಹೆಚ್ಚು ಲೈವ್ ಪ್ರಸಾರಗಳು ನಡೆದಿವು.

ಫೇಸ್‌ಬುಕ್

ಸದ್ಯ ಫೇಸ್‌ಬುಕ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಜಾಗತಿಕವಾಗಿ ಹೊಸ ವರ್ಷದ ಮುನ್ನಾದಿನ 2020 ರಂದು 1.4 ಶತಕೋಟಿಗೂ ಹೆಚ್ಚು ಧ್ವನಿ ಮತ್ತು ವಿಡಿಯೋ ಕರೆಗಳನ್ನು ಮಾಡಲಾಗಿದೆ, ಇದು ವಾಟ್ಸಾಪ್‌ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಕರೆ ಆಗಿದೆ. ಇನ್ನು ಸರಾಸರಿ ದಿನಕ್ಕೆ ಹೋಲಿಸಿದರೆ NYE ನಲ್ಲಿ 2X ಹೆಚ್ಚಿನ ಗುಂಪು ವೀಡಿಯೊ ಕರೆಗಳನ್ನು ಮಾಡಲಾಗಿದೆ ಎಂದು ಡೇಟಾ ಬಹಿರಂಗಪಡಿಸುತ್ತದೆ. ಇನ್ಸ್ಟಾಗ್ರಾಮ್ನಲ್ಲಿ, ಹೊಸ ವರ್ಷದ ಮುನ್ನಾದಿನದಂದು ಜಾಗತಿಕವಾಗಿ 55 ಮಿಲಿಯನ್ ಲೈವ್ ಪ್ರಸಾರಗಳನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಲಾಗಿದೆ.

Best Mobiles in India

English summary
WhatsApp made a new record on New Year’s Eve with more than 1.4 billion voice and video calls on the messaging app.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+