Whatsapp:2020 ರಲ್ಲಿ ವಾಟ್ಸಾಪ್ ಪರಿಚಯಿಸಿದ ಪ್ರಮುಖ ಫೀಚರ್ಸ್‌ಗಳು!
ಜಗತ್ತಿನ ಜನಪ್ರಿಯ ಇನ್ಸಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಕಾಲಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿರುವ ವಾಟ್ಸಾಪ್ 2020 ರಲ್ಲಿ ಸಾಕಷ್ಟು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರ ಉತ್ತಮ ಅನುಭವಕ್ಕಾಗಿ 2019ರ ಕೆಲವು ಫೀಚರ್ಸ್‌ಗಳನ್ನು ಆಪ್ಡೇಟ್ ಮಾಡಿದೆ.

ಹೌದು, ವಾಟ್ಸಾಪ್ ಪ್ರತಿವರ್ಷದಂತೆ 2020ರಲ್ಲಿಯೂ ಅನೇಕ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಕುತೂಹಲಕಾರಿ ಫೀಚರ್ಸ್‌ಗಳ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಿದೆ. ಇವುಗಳಲ್ಲಿ ನ್ಯೂ ಸ್ಟೋರೇಜ್ ಮ್ಯಾನೇಜ್ ಮೆಂಟ್ ಟೂಲ್, ವಾಟ್ಸಾಪ್ ಡಾರ್ಕ್ ಮೋಡ್, ವಾಟ್ಸಾಪ್ ಪೇ, ಸರ್ಚ್ ಆಪ್ಡೇಟ್ ಟೂಲ್, ಡಿಸ್ ಅಪಿಯರಿಂಗ್ ಫೀಚರ್ಸ್‌ಗಳು ಸಾಕಷ್ಟು ಗಮನ ಸೆಳೆದಿವೆ. ಹಾಗಾದ್ರೆ 2020 ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಲ್ಲಿ ಸೇರಿಸಲಾದ ಅತ್ಯುತ್ತಮ ವಾಟ್ಸಾಪ್ ಫೀಚರ್ಸ್‌ಗಳ ಪಟ್ಟಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಡಾರ್ಕ್ ಮೋಡ್
ಈ ವರ್ಷದ ಆರಂಭದಲ್ಲಿ, ವಾಟ್ಸಾಪ್ ತನ್ನ ಬಳಕೆದಾರರಿಗೆ ಡಾರ್ಕ್ ಮೋಡ್ ಫೀಚರ್ಸ್ ಅನ್ನು ಪರಿಚಯಿಸಿತು. ವಾಟ್ಸಾಪ್ ಡಾರ್ಕ್ ಥೀಮ್ ಕಣ್ಣುಗಳಿಗೆ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ. ಅಲ್ಲದೆ ನಿಮ್ಮ ಫೋನ್‌ನ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಲಿದೆ. ವಾಟ್ಸಾಪ್‌ನಲ್ಲಿ ಡಾರ್ಕ್ ಥೀಮ್ ಅನ್ನು ಸಕ್ರಿಯಗೊಳಿಸಲು, ನೀವು ಸೆಟ್ಟಿಂಗ್‌ಗಳ ವಿಭಾಗಕ್ಕೆ ಭೇಟಿ ನೀಡಬೇಕು, ನಂತರ ‘ಚಾಟ್‌ಗಳು' ಟ್ಯಾಪ್ ಮಾಡಿ. ಈಗ, ಡಿಸ್‌ಪ್ಲೇ ವಿಭಾಗದಲ್ಲಿನ ‘ಥೀಮ್' ಗೆ ಹೋಗಿ, ಅದು ನಿಮಗೆ ಲೈಟ್, ಡಾರ್ಕ್ ಮತ್ತು ಸಿಸ್ಟಮ್ ಡೀಫಾಲ್ಟ್ ಸೇರಿದಂತೆ ಮೂರು ಆಯ್ಕೆಗಳನ್ನು ತೋರಿಸುತ್ತದೆ. ಆಂಡ್ರಾಯ್ಡ್ 9 ಅಥವಾ ಅದಕ್ಕಿಂತ ಕಡಿಮೆ ಚಾಲನೆಯಲ್ಲಿರುವವರು, ಸೆಟ್ ಬೈ ಬ್ಯಾಟರಿ ಸೇವರ್ ಆಯ್ಕೆಯನ್ನು ನೋಡುತ್ತಾರೆ. ಆಂಡ್ರಾಯ್ಡ್ ಮತ್ತು ಐಒಎಸ್ ವಾಟ್ಸಾಪ್ ಬಳಕೆದಾರರಿಗೆ ಡಾರ್ಕ್ ಮೋಡ್ ಲಭ್ಯವಿದೆ.

ಗ್ರೂಪ್ ವಾಯ್ಸ್ / ವೀಡಿಯೊ ಕಾಲ್ ಮಿತಿ ಹೆಚ್ಚಳ
ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಲಾಕ್‌ಡೌನ್ ಜಾರಿಯಾದಾಗ ಜನರು ಮನೆ ಒಳಾಂಗಣದಲ್ಲಿ ಉಳಿಯುವ ಸಮಯದಲ್ಲಿ ಸ್ನೇಹಿತರು ಮತ್ತು ಜನರ ನಡುವೆ ಸಂವಹನ ನಡೆಸಲು ವೀಡಿಯೊ ಕರೆ ಅಪ್ಲಿಕೇಶನ್‌ಗಳನ್ನು ಬಳಸಿದರು. ಮೆಸೇಜಿಂಗ್ ಸೇವೆಯು ಗ್ರೂಪ್ ವೀಡಿಯೊ ಮತ್ತು ವಾಯ್ಸ್ ಕಾಲ್‌ಗಳಿಗಾಗಿ ಕೇವಲ ನಾಲ್ಕು ಭಾಗವಹಿಸುವವರಿಗೆ ಮಾತ್ರ ಅನುಮತಿಸುತ್ತಿತ್ತು, ಆದರೆ ಅದನ್ನು COVID-19 ಲಾಕ್‌ಡೌನ್ ಸಮಯದಲ್ಲಿ ಜನರು ಉತ್ತಮವಾಗಿ ಸಂಪರ್ಕ ಸಾಧಿಸಲು ವಾಟ್ಸಾಪ್ ಭಾಗವಹಿಸುವವರ ಮಿತಿಯನ್ನು ಎಂಟು ಬಳಕೆದಾರರಿಗೆ ವಿಸ್ತರಿಸಲಾಯಿತು.

ನ್ಯೂ ಸ್ಟೋರೇಜ್ ಮ್ಯಾನೇಜ್‌ಮೆಂಟ್ ಟೂಲ್
ಇನ್ನು ಈ ವರ್ಷ ವಾಟ್ಸಾಪ್ ಪರಿಚಯಿಸಿದ ಅತ್ಯುತ್ತಮ ಫೀಚರ್ಸ್‌ಗಳಲ್ಲಿ ನ್ಯೂ ಸ್ಟೋರೇಜ್ ಮ್ಯಾನೇಜ್‌ಮೆಂಟ್ ಟೂಲ್ ಕೂಡ ಒಂದಾಗಿದೆ. ಇದು ಸ್ಟೋರೇಜ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿನ ಎಲ್ಲಾ ಫಾರ್ವರ್ಡ್ ಮಾಡಲಾದ ಫೋಟೋಗಳು, ವೀಡಿಯೊಗಳು, ಫೈಲ್‌ಗಳನ್ನು ಪರಿಶೀಲಿಸಬಹುದು. ವೈಯಕ್ತಿಕ ಚಾಟ್‌ನ ಎಲ್ಲಾ ಮಿಡೀಯಾಗಳನ್ನು ಪ್ರತ್ಯೇಕವಾಗಿ ಅಳಿಸಲು ಸಹ ನಿಮಗೆ ಅನುಮತಿಸಲಾಗಿದೆ. ಇದು 5MB ಗಿಂತ ದೊಡ್ಡದಾದ ಹಲವಾರು ಫೈಲ್‌ಗಳನ್ನು ತೋರಿಸುತ್ತದೆ.

ವಾಟ್ಸಾಪ್ ಆಡ್ವಾನ್ಸ್ ಸರ್ಚ್
2020 ರಲ್ಲಿ, ವಾಟ್ಸಾಪ್ ಆಪ್ಡೇಟ್ ಸರ್ಚ್ ಫೀಚರ್ಸ್ ಅನ್ನು ಸಹ ಪರಿಚಯಿಸಿತು. ಇದು ಎಲ್ಲಾ ಬಳಕೆದಾರರಿಗೆ ಫೋಟೋಗಳು, ಪಠ್ಯಗಳು, ಆಡಿಯೋ, ಜಿಐಎಫ್‌ಗಳು ಮತ್ತು ವೀಡಿಯೊಗಳೊಂದಿಗೆ ಮಾತ್ರವಲ್ಲದೆ ಡಾಕ್ಯುಮೆಂಟ್‌ಗಳು ಮತ್ತು ಲಿಂಕ್‌ಗಳೊಂದಿಗೆ ಹುಡುಕಾಟವನ್ನು ಫಿಲ್ಟರ್ ಮಾಡಲು ಅನುಮತಿಸುತ್ತದೆ. ಇನ್ನು ವಾಟ್ಸಾಪ್ ಅಪ್ಲಿಕೇಶನ್ ಚಾಟ್ ಹಿಸ್ಟರಿಯಿಂದ ಸರ್ಚ್ ಫಲಿತಾಂಶಗಳನ್ನು ಪ್ರದರ್ಶಿಸುತ್ತದೆ ಮತ್ತು ಫೋಟೋಗಳು, ಲಿಂಕ್‌ಗಳು ಮತ್ತು ವೀಡಿಯೊಗಳಿಗಾಗಿ ಒಂದೇ ಕೀವರ್ಡ್ ಹುಡುಕಲು ಆಯ್ಕೆಗಳನ್ನು ನೀಡುತ್ತದೆ.

ವಾಟ್ಸಾಪ್ ಪೇಮೆಂಟ್
WhatsApp Payments ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಂತಿಮವಾಗಿ ವಾಟ್ಸಾಪ್ ಪೇಮೆಂಟ್‌ಗೆ ಹಸಿರು ನಿಶಾನೆ ನೀಡಿದೆ. ಬಹು ನಿರೀಕ್ಷಿತ ವಾಟ್ಸಾಪ್ ಪೇಮೆಂಟ್ ಸೇವೆಯನ್ನು ಶುರು ಮಾಡಿದೆ. ಬಳಕೆದಾರರು ಇನ್ಮುಂದೆ ಚಾಟ್ ಮಾಡುವ ಜೊತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ ಹಾಗೂ ಹಣ ಸ್ವೀಕರಿಸಬಹುದಾಗಿದೆ. ಈ ಸೇವೆಯು ವಾಟ್ಸಾಪ್ ಅನ್ನು ಮತ್ತಷ್ಟು ಜನಪ್ರಿಯ ಮಾಡುವ ಸಾಧ್ಯತೆಗಳು ಹೆಚ್ಚು.

ವಾಟ್ಸಾಪ್ ಡಿಸ್‌ಅಪಿಯರ್
ವಾಟ್ಸಾಪ್ ಇದೀಗ ಮೆಸೆಜ್ ಡಿಸ್‌ಅಪಿಯರ್ ಆಯ್ಕೆಯನ್ನು ಅಳವಡಿಸಿದೆ. ಈ ಫೀಚರ್ಸ್‌ನಲ್ಲಿ ವಾಟ್ಸಾಪ್‌ನಲ್ಲಿನ ನೂತನ ಮೆಸೇಜ್‌ಗಳು ಏಳು ದಿನಗಳ ನಂತರ ಕಣ್ಮರೆಯಾಗುತ್ತದೆ(disappear). ಇನ್ನು ಈ ಆಯ್ಕೆಯು ಗ್ರೂಪ್ ಮೆಸೆಜ್ ಹಾಗೂ ವೈಯಕ್ತಿಕ ಮೆಸೆಜ್ ಎರಡಕ್ಕೂ ಲಭ್ಯ. ಹಾಗೆಯೇ ಆಂಡ್ರಾಯ್ಡ್, ಐಓಎಸ್, ಕೈಯೋಸ್ ಓಎಸ್‌ಗಳ ಆವೃತ್ತಿಯಲ್ಲಿಯೂ ಲಭ್ಯ.

ರಿಪೋರ್ಟ್ ಕಂಟೆಂಟ್ ಮೆಸೇಜ್
ವಾಟ್ಸಾಪ್‌ನ ಈ ಹೊಸ ಫೀಚರ್ ಬಳಕೆದಾರರ ಹೆಚ್ಚು ಅನುಕೂಲವಾಗಲಿದ್ದು, ವಾಟ್ಸಾಪ್‌ನಲ್ಲಿ ಸ್ಪ್ಯಾಮ್ ಅಥವಾ ಕಿರುಕುಳುದಂತಹ ಸಮಸ್ಯೆಗಳು ಕಂಡು ಬಂದರೇ ರಿಪೋರ್ಟ್ ಮಾಡಬಹುದಾಗಿದೆ. ಎಲ್ಲ ವಾಟ್ಸಾಪ್ ಬಳಕೆದಾರರಿಗೆ ಈ ಆಯ್ಕೆ ಅಲಭ್ಯ. ಸದ್ಯ ಬೀಟಾ ಆವೃತ್ತಿಯಲ್ಲಿ ಈ ಸೇವೆಯು ಪರೀಕ್ಷಾರ್ಥವಾಗಿ ಇದೆ.


Click it and Unblock the Notifications








