ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಮತ್ತೊಂದು ಕುತೂಹಲಕಾರಿ ಫೀಚರ್ಸ್‌!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಬಳಕೆದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ವಾಟ್ಸಾಪ್ ಶೀಘ್ರದಲ್ಲೇ 'ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕಪ್' ಆಯ್ಕೆಯನ್ನು ಸೇರಿಸುವ ನಿರೀಕ್ಷೆಯಿದೆ. ಈ ಆಯ್ಕೆಯನ್ನು ಸಕ್ರಿಯಗೊಳಿಸಿದರೆ ವಾಟ್ಸಾಪ್ ಸೇರಿದಂತೆ ಯಾರೂ ಕೂಡ ನಿಮ್ಮ ಖಾಸಗಿ ಚಾಟ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಸದ್ಯದಲ್ಲೇ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕಪ್' ಆಯ್ಕೆಯನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಆಯ್ಕೆಯಿಂದ ಬಳಕೆದಾರರ ಖಾಸಗಿ ಚಾಟ್‌ಗಳು ಇನ್ನು ಹೆಚ್ಚಿನ ಸುರಕ್ಷತೆಯನ್ನು ಪಡೆದುಕೊಳ್ಳಲಿವೆ ಎಂದು ವರದಿಯಾಗಿದೆ. ಇನ್ನು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗೆ ಚಾಟ್‌ಗಳನ್ನು ಬ್ಯಾಕಪ್ ಮಾಡುವ ಬಗ್ಗೆ ಅನೇಕ ಜನರು ಕಾಳಜಿ ವಹಿಸುತ್ತಿರುವುದರಿಂದ ವಾಟ್ಸಾಫ್‌ ಈ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ವಾಟ್ಸಾಪ್‌ ನಿಮ್ಮ ಎಲ್ಲಾ ಚಾಟ್‌ಗಳನ್ನು Google ಡ್ರೈವ್‌ಗೆ ಬ್ಯಾಕಪ್ ಮಾಡಲು ವಾಟ್ಸಾಪ್ ನಿಮಗೆ ಅವಕಾಶ ನೀಡುತ್ತದೆ. ಹಾಗಾದ್ರೆ ಈ ಹೊಸ ಆಯ್ಕೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಹೊಸ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕಪ್' ಆಯ್ಕೆಯನ್ನು ನೀಡುವ ಮೂಲಕ ನಿಮ್ಮ ಚಾಟ್‌ಗಳನ್ನು ಗೂಗಲ್‌ ಡ್ರೈವ್‌ಗೆ ಬ್ಯಾಕ್‌ಪ್‌ ಮಾಡಲು ಅವಕಾಶ ನೀಡಲಿದೆ. ಸದ್ಯ "ನಿಮ್ಮ ಬ್ಯಾಕಪ್ ಅನ್ನು ಎನ್‌ಕ್ರಿಪ್ಟ್ ಮಾಡಿ" ಆಯ್ಕೆಯನ್ನು ಸೇರಿಸುತ್ತದೆ ಎಂದು ಸ್ಕ್ರೀನ್‌ಶಾಟ್‌ಗಳು ಲೀಕ್‌ ಆಗಿವೆ. ಇನ್ನು ಈ ಫೀಚರ್ಸ್‌ ಅನ್ನು ವಾಟ್ಸಾಪ್‌ 2.21.10.2 ಆಂಡ್ರಾಯ್ಡ್ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಇದಲ್ಲದೆ ನೀವು ನಿಮ್ಮ ಚಾಟ್ ಬ್ಯಾಕಪ್‌ಗಳಿಗಾಗಿ ಎನ್‌ಕ್ರಿಪ್ಶನ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು, ನೀವು ಪಾಸ್‌ವರ್ಡ್ ಅನ್ನು ಸೆಟ್‌ ಮಾಡಬೇಕಾದ ಅಗತ್ಯವಿದೆ.

ಇನ್‌ಸ್ಟಾಲ್‌

ಈ ಹೊಸ ಆಯ್ಕೆಯಿಂದ ನೀವು ಯಾವುದೇ ಡಿವೈಸ್‌ನಲ್ಲಿ ವಾಟ್ಸಾಪ್ ಅನ್ನು ರಿ ಇನ್‌ಸ್ಟಾಲ್‌ ಮಾಡಿದಾಗ, ಅದನ್ನು ಡೀಕ್ರಿಪ್ಟ್ ಮಾಡಲು ನೋಂದಾಯಿತ ಪಾಸ್‌ಕೋಡ್ ಅನ್ನು ಟೈಪ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಆದರೆ ಇದರಲ್ಲಿರುವ ವಿಷಯವನ್ನು ಯಾರು ಕೂಡ ನೋಡಲಾಗುವುದಿಲ್ಲ. ಏಕೆಂದರೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅದನ್ನು ಅನಧಿಕೃತ ಪ್ರವೇಶದಿಂದ ರಕ್ಷಿಸುತ್ತದೆ. ಚಾಟ್ ಬ್ಯಾಕಪ್‌ಗಳನ್ನು ಎನ್‌ಕ್ರಿಪ್ಟ್ ಮಾಡುವ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದಾಗ, ಪಾಸ್‌ವರ್ಡ್ ಬದಲಾಯಿಸಲು ಅಥವಾ ಎನ್‌ಕ್ರಿಪ್ಶನ್ ಅನ್ನು ನಿಷ್ಕ್ರಿಯಗೊಳಿಸಲು ವಾಟ್ಸಾಪ್ ಒಂದು ಆಯ್ಕೆಯನ್ನು ಸಹ ನೀಡಲಿದೆ ಎನ್ನಲಾಗಿದೆ.

ಬ್ಯಾಕಪ್

ಒಂದು ವೇಳೆ ನೀವು ಪಾಸ್‌ವರ್ಡ್ ಕಳೆದುಕೊಂಡರೆ ಎನ್‌ಕ್ರಿಪ್ಟ್ ಮಾಡಲಾದ ಎಂಡ್-ಟು-ಎಂಡ್ ಬ್ಯಾಕಪ್ ಅನ್ನು ರಿ ಇನ್‌ಸ್ಟಾಲ್‌ ಮಾಡಲು ವಾಟ್ಸಾಪ್ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಸಹ ಹೇಳಲಾಗಿದೆ. ಆದರಿಂದ ನೀವು ಪಾಸ್‌ವಾರ್ಡ್‌ ಅನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅತಿ ಅಗತ್ಯ. ಇನ್ನು ವಾಬೆಟಾಇನ್‌ಫೋ ವರದಿಯ ಪ್ರಕಾರ. "ವಾಟ್ಸಾಪ್ ರಿಕವರಿ ಕೀ ಯನ್ನು ಕ್ರಿಯೆಟ್‌ ಮಾಡುವ ಸಾಧ್ಯತೆಯನ್ನು ಹೊಂದಿದೆ ಎನ್ನಲಾಗಿದೆ. ಇದು ನೀವು ಪಾಸ್ವರ್ಡ್ ಕಳೆದುಕೊಂಡಾಗ ಅಥವಾ ಆ ಬ್ಯಾಕಪ್ ಅನ್ನು ರಿ ಇನ್‌ಸ್ಟಾಲ್‌ ಮಾಡಲು ನೀವು ಬಯಸಿದಾಗ ಉಪಯುಕ್ತವಾಗಿದೆ" ಎಂದು ವರದಿಯಲ್ಲಿ ಹೇಳಲಾಗಿದೆ.

Best Mobiles in India

English summary
Whatspp might introduce end-to-end encrypted backup option soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X