ಶೀಘ್ರದಲ್ಲೇ ಮಲ್ಟಿ ಡಿವೈಸ್‌ ಬೆಂಬಲಿಸುವ ವಾಟ್ಸಾಪ್‌ ಫೀಚರ್ಸ್‌ ಬಿಡುಗಡೆ!

|

ವಿಶ್ವದ ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಹಂತಹಂತವಾಗಿ ಬಳಕೆದಾರರಿಗೆ ಸುಲಭವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಬಲ್ಲ ಫೀಚರ್ಸ್‌ಗಳನ್ನ ಪರಿಚಯಿಸುತ್ತಿದೆ. ಸದ್ಯ ಇದೀಗ ಏಕ ಕಾಲದಲ್ಲಿ ಮಲ್ಟಿ ಡಿವೈಸ್‌ಗಳನ್ನ ಸಿಂಗಲ್‌ ಅಕೌಂಟ್‌ ಅನ್ನು ಬಳಸಲು ಅನುಮತಿಸುವ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್ ಸಿದ್ದತೆ ನಡೆಸಿದೆ. ಸದ್ಯ ಈ ಹೊಸ ಫೀಚರ್ಸ್‌ ವಿವಿದ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಆಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಮಲ್ಟಿ ಡಿವೈಸ್‌ಗಳಲ್ಲಿ ಸಿಂಗಲ್‌ ಅಕೌಂಟ್‌ ಬಳಸಲು ಅನುಮತಿಸುವ ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ. ಇನ್ನು ಈ ಫೀಚರ್ಸ್‌ ಬಳಕೆದಾರರು ಒಂದೇ ಸಮಯದಲ್ಲಿ ನಾಲ್ಕು ವಿಭಿನ್ನ ಡಿವೈಸ್‌ಗಳಲ್ಲಿ ವಾಟ್ಸಾಪ್ ಅನ್ನು ಬಳಸಲು ಸಾಧ್ಯವಾಗಲಿದೆ. ಇದಲ್ಲದೆ ವಾಟ್ಸಾಪ್‌ ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಮತ್ತು ಐಒಎಸ್‌ನಲ್ಲಿ ವಾಟ್ಸಾಪ್‌ ಇಂಟರ್ಫೇಸ್ ರಚಿಸಲು ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗ್ತಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಪರಿಚಯಿಸಲಿರುವ ಮಲ್ಟಿ ಡಿವೈಸ್‌ ಫೀಚರ್ಸ್‌ ಬಳಕೆದಾರರು ಎರಡನೇ ಡಿವೈಸ್‌ನಲ್ಲಿ ವಾಟ್ಸಾಪ್ ಅನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ. ಇದರಿಂದ ವಾಟ್ಸಾಪ್‌ ಚಾಟ್ ಹಿಸ್ಟರಿ ಯನ್ನು ಕಾಪಿ ಮಾಡದೇ ವಾಟ್ಸಾಪ್‌ ಅಕೌಂಟ್‌ ಅನ್ನು ಬಳಸಲು ಅವಕಾಶ ಮಾಡಿಕೊಡಬಹುದಾಗಿದೆ. ಆದರೆ ವಾಟ್ಸಾಪ್‌ ಚಾಟ್‌ ಹಿಸ್ಟರಿಯನ್ನು ಕಾಪಿ ಮಾಡಬೇಕಾದರೆ ಡೇಟಾ ಪ್ಲ್ಯಾನ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ವಾಟ್ಸಾಪ್‌ಗೆ ವೈಫೈ ಕನೆಕ್ಟಿವಿಟಿ ಅಗತ್ಯವಿರುತ್ತದೆ. ಆದರೆ ಇಂತಹ ಸಮಸ್ಯೆಯನ್ನ ಮಲ್ಟಿ ಡಿವೈಸ್‌ ಫೀಚರ್ಸ್‌ನಿಂದ ಬಗೆಹರಿಸಬಹುದಾಗಿದೆ.

ವಾಟ್ಸಾಪ್

ಸದ್ಯ ಈ ಫೀಚರ್ಸ್‌ ಅನ್ನು ವಾಟ್ಸಾಪ್ ಡೆಸ್ಕ್‌ಟಾಪ್ ನಲ್ಲಿ ಪರೀಕ್ಷೆಗೆ ಬಳಸಲಾಗಿದೆಯೆಂದು WABetaInfo ವರದಿ ಮಾಡಿದೆ. ಆದರೆ ಇದು ಎರಡನೇ ಮೊಬೈಲ್ ಡಿವೈಸ್‌ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಈ ಫೀಚರ್ಸ್‌ ಅನ್ನು ಬಳಸಿಕೊಂಡು, ನಿಮ್ಮ ಡಿವೈಸ್‌ನಲ್ಲಿನ ಇಂಟರ್ನೆಟ್ ಕನೆಕ್ಟಿವಿಟಿ ವಾಟ್ಸಾಪ್ ಡೆಸ್ಕ್‌ಟಾಪ್‌ಗೆ ಅಗತ್ಯವಿರುವುದಿಲ್ಲ. ಒಮ್ಮೆ ವಾಟ್ಸಾಪ್ ಚಾಟ್ ಹಿಸ್ಟರಿಯನ್ನ ಕಾಪಿ ಮಾಡಿದ ನಂತರ, ಅಂತಿಮವಾಗಿ ನಿಮ್ಮ ಖಾತೆಯನ್ನು ಅದರಿಂದ ಬಳಸಲು ಸಾಧ್ಯವಾಗುತ್ತದೆ. ನಿಮ್ಮ ಎಲ್ಲಾ ಡಿವೈಸ್‌ಗಳಿಗೆ ಯಾವುದೇ ಸಂದೇಶವನ್ನು ತಲುಪಿಸಲು ಇದರಿಂದ ಸಾಧ್ಯವಾಗಲಿದೆ.

ಡಿವೈಸ್‌

ಇದಲ್ಲದೆ ನಿಮ್ಮ ಚಾಟ್ ಹಿಸ್ಟರಿಯನ್ನು ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಸಿಂಕ್ ಮಾಡಬಹುದು. ಅಲ್ಲದೆ ನೀವು ಡಿವೈಸ್‌ ಅನ್ನು ಬಳಸುವಾಗ ಅಥವಾ ತೆಗೆದುಹಾಕುವಾಗ, ನಿಮ್ಮ ಎನ್‌ಕ್ರಿಪ್ಶನ್ ಕೀ ಬದಲಾಗುತ್ತದೆ. ನಿಮ್ಮ ಎನ್‌ಕ್ರಿಪ್ಶನ್ ಕೀ ಬದಲಾದಾಗ, ನಿಮ್ಮ ಭದ್ರತಾ ಅಧಿಸೂಚನೆಗಳು ಆನ್ ಆಗಿದ್ದರೆ ಎಲ್ಲಾ ಆಕ್ಟಿವ್ ಚಾಟ್‌ಗಳಿಗೆ ಸೂಚಿಸಲಾಗುತ್ತದೆ. ಅಲ್ಲದೆ ಮಲ್ಟಿ-ಡಿವೈಸ್‌ ಫೀಚರ್ಸ್‌ಅನ್ನು ಆಕ್ಟಿವಿಟಿಗೊಳಿಸಿದ ನಂತರ ಬಿಡುಗಡೆಯಾಗಲಿರುವ ಐಪ್ಯಾಡ್ ಆಪ್ ಅನ್ನು ಸಹ ವಾಟ್ಸಾಪ್ ಅಭಿವೃದ್ಧಿಪಡಿಸಿದೆ. ಶೀಘ್ರದಲ್ಲೇ ನಿಮ್ಮ ಐಫೋನ್ ಮತ್ತು ಐಪ್ಯಾಡ್‌ನಲ್ಲಿ ಒಂದೇ ಸಮಯದಲ್ಲಿ ವಾಟ್ಸಾಪ್ ಅನ್ನು ಬಳಸಲು ಇದು ನಿಮಗೆ ಅವಕಾಶವನ್ನ ನೀಡಲಿದೆ.

Most Read Articles
Best Mobiles in India

Read more about:
English summary
Being able to use WhatsApp across devices also means that your chat history is going to be synced on all of them.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X