ವಾಟ್ಸ್‌ಆಪ್‌ನಲ್ಲಿ ಬರ್ತಿದೆ ಮಾರ್ಕ್ ಆ್ಯಸ್ ರೀಡ್ ಫೀಚರ್..!
ವಾಟ್ಸ್ ಆಪ್ ತನ್ನ ಆಂಡ್ರಾಯ್ಡ್ ಬೆಟಾ ಬಳಕೆದಾರರಿಗೆ ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸುತ್ತಿದೆ. ಆ ವೈಶಿಷ್ಟ್ಯದ ಹೆಸರು “Mark as Read” . ನೋಟಿಫಿಕೇಷನ್ ಸೆಂಟರ್ ನಲ್ಲೇ ಈ ವೈಶಿಷ್ಟ್ಯತೆಯು ಮೆಸೇಜ್ ಓದಿದ್ದೀರಿ ಎಂದು ಮಾರ್ಕ್ ಮಾಡಲು ಸಹಾಯ ಮಾಡುತ್ತದೆ. ಸರಳವಾಗಿ ಹೇಳಬೇಕು ಎಂದರೆ, ನೀವು ಮಸೇಜ್ ಓದಲು ಅದನ್ನು ತೆರೆಯಬೇಕಾಗಿಲ್ಲ ಮತ್ತು ನಿಮಗೆ ಮೆಸೇಜ್ ಮಾಡಿದವರು ಆ ಮೆಸೇಜ್ ನ್ನು ನೀವು ಓದಿದ್ದೀರಿ ಎಂಬುದನ್ನು ತಿಳಿಯಬಹುದು.
ನೋಟಿಫಿಕೇಷನ್ ನಲ್ಲೇ ನೀವು ಮೆಸೇಜನ್ನು ಓದಿದ್ದೀರಿ ಎಂದು ಟಿಕ್ ಮಾಡಬಹುದು. ಆಗ ನೀವು ಆ ಮೆಸೇಜ್ ಓದಿದ್ದೀರಿ ಎಂಬ ಸಂಕೇತವು ಮೆಸೇಜ್ ಕಳುಹಿಸಿದವರಿಗೆ ಲಭ್ಯವಾಗುತ್ತದೆ. ನೀವು ನಿಮಗೆ ಬಂದ ಮೆಸೇಜ್ ನಲ್ಲಿ ನೀಲಿ ಟಿಕ್ ನ್ನು ಆಕ್ಟಿವೇಟ್ ಮಾಡಿದರೆ, ಮೆಸೇಜ್ ಕಳುಹಿಸಿದವರಿಗೂ ಕೂಡ ಅದು ನೀಲಿ ಟಿಕ್ ಆಗಿ ಮೆಸೇಜ್ ಓದಿದ್ದಾರೆ ಎಂಬ ಸಂಕೇತವು ಲಭ್ಯವಾಗುತ್ತದೆ.

ಸದ್ಯಕ್ಕೆ ಈ ವೈಶಿಷ್ಟ್ಯತೆಯು ಬೆಟಾ ವರ್ಷನ್ ನಲ್ಲಿ ಮಾತ್ರ ಲಭ್ಯವಿದೆ. ಅಷ್ಟೇ ಅಲ್ಲ, ಕೇವಲ ಆಂಡ್ರಾಯ್ಡ್ ಬೆಟಾ ಬಳಕೆದಾರರಿಗೆ ಮಾತ್ರ ಈ ವಿಶೇಷತೆ ವಾಟ್ಸ್ ಆಪ್ ನಲ್ಲಿ ಸಿಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಬಹುದು. ನೀವು ಕೂಡ ಬೆಟಾ ಬಳಕೆದಾರರಾಗಲು ಇಚ್ಛಿಸಿದ್ದರೆ, ವಾಟ್ಸ್ ಆಪ್ ಬೆಟಾ ಪ್ರೋಗ್ರಾಮ್ ಗೆ ಚಂದಾದಾರರಾಗಬೇಕಾಗುತ್ತದೆ.
ನೀವು ಯಾವುದೇ ಮೆಸೇಜ್ ರಿಸೀವ್ ಮಾಡಿದ ಕೂಡಲೇ ಕಾಣಿಸುವ ನೋಟಿಫಿಕೇಷನ್ ನಲ್ಲೇ ಈ ಮಾರ್ಕ್ ಆಸ್ ರೀಡ್ ಆಯ್ಕೆಯೂ ಲಭ್ಯವಿರುತ್ತದೆ. ನೀವು ಅದನ್ನು ಟ್ಯಾಪ್ ಮಾಡಿದರೆ ಆಯ್ತು. ನಿಮ್ಮ ಸ್ನೇಹಿತರಿಗೆ ನೀವು ಮೆಸೇಜ್ ಓದಿದ್ದೀರಿ ಎಂಬ ಸಂಕೇತ ಸಿಗುತ್ತದೆ. ಒಮ್ಮೆ ನೀವು ಮಾರ್ಕ್ ಆಸ್ ರೀಡ್ ಎಂದು ಕ್ಲಿಕ್ಕಿಸಿದರೆ ಆ ಮೆಸೇಜ್ ನೋಟಿಫಿಕೇಷನ್ ಬಾರ್ ನಿಂದ ಕಣ್ಮರೆಯಾಗುತ್ತದೆ. ಆದರೂ ನೀವು ಈ ನೋಟಿಫಿಕೇಷನ್ ನಿಂದ ರಿಪ್ಲೈ ಮಾಡಲು ಖಂಡಿತ ಅವಕಾಶವಿರುತ್ತದೆ.
ಮ್ಯೂಟ್ ಚಾಟ್ ವೈಶಿಷ್ಟ್ಯವು ಬೆಟಾ ವರ್ಷನ್ ನಲ್ಲೂ ಕೂಡ ಲಭ್ಯವಿಲ್ಲ. ಮಾಹಿತಿಯ ಪ್ರಕಾರ ಮ್ಯೂಟ್ ಚಾಟ್ ಆಯ್ಕೆಯನ್ನು ವಾಟ್ಸ್ ಆಪ್ ಬಿಡುಗಡೆಗೊಳಿಸದೇ ಇರುವ ಸಾಧ್ಯತೆ ಇದೆ. ಆದರೆ ನೋಟಿಫಿಕೇಷನ್ ಪೆನಲ್ ನಲ್ಲೇ ಮೆಸೇಜ್ ನ್ನು ಮ್ಯೂಟ್ ಮಾಡುವ ವೈಶಿಷ್ಟ್ಯವನ್ನು ಸೇರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹೆಸರೇ ಸೂಚಿಸುವಂತೆ, ಈ ವೈಶಿಷ್ಟ್ಯವು 51 ಕ್ಕಿಂತ ಹೆಚ್ಚು ಓದಿರದ ಮೆಸೇಜ್ ಗಳ ಕಾಂಟ್ಯಾಕ್ಟ್ ನ್ನು ಇದು ಮ್ಯೂಟ್ ಮಾಡಲಿದೆಯಂತೆ.
ವಾಟ್ಸ್ ಆಪ್ ಈಗಾಗಲೇ ಗ್ರೂಪ್ ಕಾಲಿಂಗ್ ವೈಶಿಷ್ಟ್ಯತೆಯನ್ನು ಬಿಡುಗಡೆಗೊಳಿಸಿದೆ. ಇದು ನಿಮ್ಮ ಸ್ನೇಹಿತರೊಡನೆ ಗ್ರೂಪ್ ವೀಡಿಯೋ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ. 4 ಜನ ಸದಸ್ಯರನ್ನು ಇದರಲ್ಲಿ ಸೇರಿಸಬಹುದು.
ಅಷ್ಟೇ ಅಲ್ಲ, ವಾಟ್ಸ್ ಆಪ್ ಅನುಮಾನಾಸ್ಪದ ಲಿಂಕ್ ಗಳ ಗುರುತಿಸಿ ಬಳಕೆದಾರರಿಗೆ ತಿಳಿಸುವ ವಿಶೇಷ ವೈಶಿಷ್ಟ್ಯತೆಯನ್ನು ಕೂಡ ಸೇರಿಸುತ್ತಿದೆ. ಆ ಮೂಲಕ ಫೇಕ್ ಸುದ್ದಿಗಳನ್ನು ತಡೆಯಲು ಇದು ನೆರವಾಗುತ್ತದೆ. ಇದು ಕೆಂಪು ವರ್ಣದಲ್ಲಿ ಸಂಕೇತವನ್ನು ನೀಡಿ ನಿಮಗೆ ಫಾರ್ವರ್ಡ್ ಮಾಡಲಾಗಿರುವ ಲಿಂಕ್ ಫೇಕ್ ಆಗಿದ್ದು ಅದನ್ನು ತೆರೆಯದಂತೆ ಬಳಕೆದಾರರಿಗೆ ಸೂಚನೆಯನ್ನು ನೀಡುತ್ತದೆ. ಒಟ್ಟಾರೆ ವಾಟ್ಸ್ ಆಪ್ ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯತೆಗಳ ಮುಖಾಂತರ ಗ್ರಾಹಕರ ಮನಸೆಳೆಯುವಲ್ಲಿ ಮತ್ತಷ್ಟು ದಾಪುಗಾಲು ಹಾಕುತ್ತಿದೆ.


Click it and Unblock the Notifications








