ವಾಟ್ಸ್‌ಆಪ್‌ ಆಕರ್ಷ‌ಣೆ: ಪ್ರತಿ ತಿಂಗಳು 40 ಕೋಟಿ ಜನ ಬಳಕೆ

Posted By:

ಫೇಸ್‌ಬುಕ್‌ ಜನಪ್ರಿಯತೆಯನ್ನು ಕಡಿಮೆ ಮಾಡುತ್ತಿರುವ ವಾಟ್ಸ್‌ಆಪ್‌ ಈಗ ಮತ್ತೆ ಬಳಕೆದಾರರ ಸಂಖ್ಯೆ ಹೆಚ್ಚಿಸುವ ಮೂಲಕ ಸುದ್ದಿಯಾಗಿದೆ. ಸದ್ಯ ಪ್ರತಿ ತಿಂಗಳು ವಿಶ್ವದ 40 ಕೋಟಿ ಮಂದಿ ಸಕ್ರೀಯವಾಗಿ ವಾಟ್ಸ್‌ಆಪ್‌ ಬಳಸುತ್ತಿದ್ದಾರೆ ಎಂದು ವಾಟ್ಸ್‌ಆಪ್‌ ಸಹ ಸಂಸ್ಥಾಪಕ ಉಕ್ರೈನಿನ ಜನ್‌ ಕೌ ವಾಟ್ಸ್‌ ಆಪ್‌ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಲ್ಲಿ  ಹೊಸದಾಗಿ ಹತ್ತು ಕೋಟಿಗೂ ಅಧಿಕ ಜನ ವಾಟ್ಸ್‌ ಆಪ್‌‌ನ್ನು ಬಳಸುತ್ತಿದ್ದಾರೆ ಎಂದು ಬ್ಲಾಗ್‌ನಲ್ಲಿ ಹೇಳಿದ್ದಾರೆ.

ನಮ್ಮದು 50 ಉದ್ಯೋಗಿಗಳಿರುವ ಸಣ್ಣ ಕಂಪೆನಿಯಾಗಿದ್ದು ಬಹಳಷ್ಟು ಜನ ಎಂಜಿನಿಯರ್‌ಗಳಿದ್ದಾರೆ. ಯಾವುದೇ ಮಾರುಕಟ್ಟೆಯ ಪ್ರಚಾರ ಪಡೆಯದೇ ನಾವು ಈ ರೀತಿ ಬೆಳೆಯಲು ಕಾರಣರಾದ ನಮ್ಮ ಎಲ್ಲಾ ಬಳಕೆದಾರರಿಗೆ ಜನ್‌ ಕೌ ಧನ್ಯವಾದ ಹೇಳಿದ್ದಾರೆ.

ವಾಟ್ಸ್‌ ಆಪ್‌ ಆರಂಭಗೊಂಡದ್ದು 2009ರಲ್ಲಿ,ಯಾಹೂ ಕಂಪೆನಿಯ ಮಾಜಿ ಉದ್ಯೋಗಿಗಳಾದ ಅಮೆರಿಕದ ಬ್ರಿಯಾನ್ ಆಕ್ಟನ್(Brian Acton)ಉಕ್ರೈನಿನ ಜನ್‌ ಕೌಮ್‌(Jan Koum) ಅಮೆರಿಕದಲ್ಲಿ ಆರಂಭಿಸಿದರು.

ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್‌ ಫೇಸ್‌ಬುಕ್‌ನ ಜನಪ್ರಿಯತೆ ಕಡಿಮೆಯಾಗುತ್ತಿದೆ.ಜನರು ಫೇಸ್‌ಬು‌ಕ್‌ ಬಳಕೆಯನ್ನು ಕಡಿಮೆ ಮಾಡಿದ್ದು ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸ್‌ ಆಪ್‌ನತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆರಂಭದಲ್ಲಿ ಫೇಸ್‌ಬುಕ್‌ ಹೇಗೆ ಜನಪ್ರಿಯಾಗಿತ್ತೋ ಅದಕ್ಕಿಂತ ವೇಗವಾಗಿ ವಾಟ್ಸ್‌ ಆಪ್‌ ಜನಪ್ರಿಯವಾಗುತ್ತಿದೆ.

ಈಗಾಗಲೇ ಆಂಡ್ರಾಯ್ಡ್‌‌,ವಿಂಡೋಸ್‌ ಫೋನ್‌,ಐಓಎಸ್‌,ಬ್ಲ್ಯಾಕ್‌ಬೆರಿ,ನೋಕಿಯಾ ಸಿರೀಸ್‌ 40,ಸಿಂಬಿಯನ್‌ ಓಎಸ್‌ ಫೋನ್‌‌ಗಳಲ್ಲಿ ವಾಟ್ಸ್‌ ಆಪ್‌ ಲಭ್ಯವಿದ್ದು ಪ್ರತಿದಿನ ವಿಶ್ವದಲ್ಲಿ 27 ಶತ ಕೋಟಿ ಮೆಸೇಜ್‌ಗಳು ವಾಟ್ಸ್‌ ಆಪ್‌ನಲ್ಲಿ ಹರಿದಾಡುತ್ತಿವೆ.

ಹೀಗಾಗಿ ಜನ ಒಮ್ಮಿಂದೊಮ್ಮೆಗೆ ಈ ವಾಟ್ಸ್‌ಆಪ್‌ನತ್ತ ಸೆಳೆಯಲು ಏನು ಕಾರಣ? ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್‌ ಫೇಸ್‌ಬುಕ್‌ಗಿಂತ ಇದು ಹೇಗೆ ಸುರಕ್ಷಿತವಾಗಿದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈಯಕ್ತಿಕ

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?


ಫೇಸ್‌‌ಬುಕ್‌ಗೆ ಹೋಲಿಸಿದರೆ ವ್ಯಾಟ್ಸ್‌ ಆಪ್‌ವನ್ನು ವೈಯಕ್ತಿಕ ಎಂದೇ ಹೇಳಬಹುದು. ನಿಮ್ಮ ಗ್ರೂಪ್‌ನಲ್ಲಿ ಅಪ್ಪಿ ತಪ್ಪಿ ಏನಾದ್ರೂ ಪೋಸ್ಟ್‌‌ ಆದ್ರೂ ಅದನ್ನು ಗ್ರೂಪಿನ ಸದಸ್ಯರು ಮಾತ್ರ ವೀಕ್ಷಿಸಬಹುದು.ವಾಟ್ಸ್‌ಆಪ್‌ನಲ್ಲಿ ಪೋಸ್ಟ್‌ ಸಾರ್ವ‌ಜನಿಕವಾಗಿ ಬಹಿರಂಗವಾಗುವುದಿಲ್ಲ.

 ಭದ್ರತೆ

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?


ಫೇಸ್‌ಬುಕ್‌ಗೆ ಹೋಲಿಸಿದರೆ ವಾಟ್ಸ್‌ಆಪ್‌‌‌‌ ಹೆಚ್ಚು ಸುರಕ್ಷತೆಯನ್ನು ಹೊಂದಿದೆ. ಜೊತೆಗೆ ಬಳಕೆದಾರರ ತಪ್ಪಿನಿಂದಲೇ ವಾಟ್ಸ್‌ಆಪಲ್‌ ಅಕೌಂಟ್‌ ಹ್ಯಾಕ್‌ ಅಗುವ ಸಾಧ್ಯತೆ ಕಡಿಮೆ. ಆದರೆ ಫೇಸ್‌‌ಬುಕ್‌ನಲ್ಲಿ ನಮ್ಮ ತಪ್ಪಿನಿಂದಲೇ ಆಕೌಂಟ್‌ ಹ್ಯಾಕ್‌ ಅಗುವ ಸಾಧ್ಯತೆ ಹೆಚ್ಚು.

 ಕ್ವಿಕ್‌:

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?


ಫೇಸ್‌ಬುಕ್‌ನಲ್ಲಿ ಯಾವುದೋ ಮೆಸೇಜ್‌ನ್ನು ಸ್ನೇಹಿತರಿಗೆ ಕಳುಹಿಸಿದರೆ ಅದನ್ನು ಸ್ನೇಹಿತರು ನೋಡಿದ್ದಾರೋ ಇಲ್ಲವೋ ಎನ್ನುವುದು ಕಳುಹಿಸಿದ ವ್ಯಕ್ತಿಗೆ ಗೊತ್ತೇ ಆಗುವುದಿಲ್ಲ.ಆದರೆ ವಾಟ್ಸ್‌‌ ಆಪ್‌ನಲ್ಲಿ ಈ ಸಮಸ್ಯೆಯೇ ಇಲ್ಲ.ಕಳುಹಿಸಬೇಕಾದ ವ್ಯಕ್ತಿಗೆ ನೇರವಾಗಿ ಹೋಗುತ್ತದೆ ಜೊತೆಗೆ ಅವರು ಆನ್‌ಲೈನ್‌ಲ್ಲಿ ಇದ್ದಾರೋ, ಕೊನೆ ಬಾರಿಗೆ ವಾಟ್ಸ್‌ಆಪ್‌ನ್ನು ಬಳಕೆ ಮಾಡಿದ ದಿನಾಂಕ/ಸಮಯವನ್ನು ಸ್ನೇಹಿತರು ಸುಲಭವಾಗಿ ತಿಳಿಯಬಹುದಾಗಿದೆ.

ನಿಮ್ಮ ಅಕೌಂಟ್‌ ನಿಮ್ಮದೇ.

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?


ಫೇಸ್‌ಬುಕ್‌ನಲ್ಲಿ ಒಂದೇ ವ್ಯಕ್ತಿಯ ಹೆಸರಿನಲ್ಲಿ ವಿವಿಧ ಅಕೌಂಟ್‌ಗಳನ್ನು ಕ್ರಿಯೆಟ್‌ ಮಾಡಿ ಮೋಸ ಮಾಡುವವರಿದ್ದಾರೆ. ಆದರೆ ವಾಟ್ಸ್‌ ಆಪ್‌‌ ಈ ರೀತಿಯ ಮೋಸ ಸಾಧ್ಯನೇ ಇಲ್ಲ.ನಿಮ್ಮ ಅಕೌಂಟ್‌‌ ನಿಮ್ಮದೇ ಆಗಿರುತ್ತದೆ. ಒಂದೇ ವೇಳೆ ಫೋಟೋ ಹಾಕಿ ಅಕೌಂಟ್‌ ಸೃಷ್ಟಿಸಿದ್ದರೂ ನಿಮ್ಮ ಫೋನಿನಲ್ಲಿ ಸೇವ್‌ ಆಗಿರುವ ಎಲ್ಲಾ ಸ್ನೇಹಿತರ ಜೊತೆ ಸಂಪರ್ಕಿಸಲು ಬೇರೆಯವರಿಗೆ ಸಾಧ್ಯವಿಲ್ಲ.

ನಿಜವಾದ ಸ್ನೇಹಿತರು:

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?


ಫೇಸ್‌ಬುಕ್‌ನ ನೂರಕ್ಕೂ ಅಧಿಕ ಸ್ನೇಹಿತರಿರಬಹುದು. ಆದರೆ ಅದರಲ್ಲಿ ನಾವು ಸಂಪರ್ಕ ಹೊಂದಿರುವುದು ಕೆಲವೇ ಕೆಲವು ಸ್ನೇಹಿತರಲ್ಲಿ ಮಾತ್ರ.ಆದರೆ ವಾಟ್ಸ್‌ಆಪ್‌ ಹಾಗಲ್ಲ. ನಿಮ್ಮ ಫೋನ್‌ contacts ನಲ್ಲಿರುವ ಸ್ನೇಹಿತರು ಯಾರೆಲ್ಲ ಇದ್ದರೋ ಅವರ ಜೊತೆ ಮಾತ್ರ ಸಂಪರ್ಕ ಮಾಡಬಹುದು.

 ಯೂಸರ್‌ ನೇಮ್‌‌ ಮತ್ತು ಪಾಸ್‌ವರ್ಡ್‌ ಬೇಡ:

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?


ವಾಟ್ಸ್‌ ಆಪ್‌ನಲ್ಲಿ ಯಾವುದೇ ಇಮೇಲ್‌ ಐಡಿ,ಪಾಸ್‌ವರ್ಡ್‌‌ ಟೈಪ್‌ ಮಾಡಿ ಅಕೌಂಟ್‌ ಕ್ರಿಯೆಟ್‌ ಮಾಡಿ ಓಪನ್‌ ಮಾಡುವ ಅಗತ್ಯವಿಲ್ಲ.ಫೋನ್‌ ನಂಬರ್‌ ಒಂದು ಇದ್ದರೆ ಸಾಕು ಅಕೌಂಟ್‌ ಕ್ರಿಯೆಟ್‌ ಆಗುತ್ತದೆ.

 ಲಾಗಿನ್‌/ಲಾಗ್‌ ಔಟ್‌ ಮಾಡುವ ಅಗತ್ಯವಿಲ್ಲ:

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?

ವಾಟ್ಸ್‌ ಆಪ್‌ನಲ್ಲಿ ಲಾಗಿನ್‌ ಲಾಗ್‌ಔಟ್‌ ಮಾಡುವ ಪ್ರಮೇಯವೇ ಬರುವುದಿಲ್ಲ. ಪುಶ್‌‌ ನೋಟಿಫಿಕೇಶನ್‌ ಯಾವಾಗಲೂ ಆನ್‌ ಅಗಿರುತ್ತದೆ.ಇಂಟರ್‌ನೆಟ್‌ ಸಂಪರ್ಕ‌ ಆದ ಕೂಡಲೇ ಸ್ನೇಹಿತರ ಮೆಸೇಜ್‌ ನಿಮ್ಮ ವಾಟ್ಸ್‌ ಆಪ್‌ ಅಕೌಂಟ್‌ ಬರತೊಡಗುತ್ತದೆ.

 ಜಾಹೀರಾತು ಇಲ್ಲ:

ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?


ಈ ಹಿಂದಿನ ಪುಟದಲ್ಲಿ ತಿಳಿಸಲಾದ ಕಾರಣದ ಜೊತೆಗೆ ಜಾಹೀರಾತು ಮೆಸೇಜ್‌ಗಳು ವಾಟ್ಸ್‌ ಆಪ್‌ನಲ್ಲಿ ಬರುವುದೇಇಲ್ಲ. ಆಪ್‌ನಲ್ಲಿ ಯಾವುದೇ ಕಾರಣಕ್ಕೆ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಕಂಪೆನಿ ಬ್ಲಾಗ್‌ನಲ್ಲಿ ಈಗಾಗಲೇ ಘೋಷಿಸಿದೆ. ಈ ವಿಶೇಷತೆಯಿಂದಾಗಿ ಬಳಕೆದಾರರಿಗೆ ಇದು ಮತ್ತಷ್ಟು ಹತ್ತಿರವಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot