Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಶೇರ್‌ ಮಾಡುವುದು ಹೇಗೆ?

By Suneel

ಯಾವುದಾದರೂ ಡಾಕ್ಯುಮೆಂಟ್‌, ಫೈಲ್‌ಗಳನ್ನು ದೂರದಲ್ಲಿರುವ ಗೆಳೆಯರಿಗೋ ಅಥವಾ ಉಪನ್ಯಾಷಕರಿಗೋ ಇಮೇಲ್‌ ಕಳುಹಿಸಲು ಇಷ್ಟು ದಿನ ಜಿಮೇಲ್ ಅನ್ನೇ ಬಳಸಬೇಕಿತ್ತು. ಅಲ್ಲದೇ ಒಂದು ಡಾಕುಮೆಂಟ್‌, ಫೈಲ್‌ಗಳನ್ನು ಕಳುಹಿಸಲು ಜಿಮೇಲ್‌ಬಳಸಲು ಕಂಪ್ಯೂಟರ್ ಅವಶ್ಯಕವಾಗಿತ್ತು. ಆದರೆ ಈಗ ವಾಟ್ಸಾಪ್‌ನಲ್ಲೇ ಇತರರಿಗೆ ಸಂದೇಶ, ಫೋಟೋ ಕಳುಹಿಸುವ ರೀತಿಯಲ್ಲಿ ಯಾವುದೇ ಡಾಕ್ಯುಮೆಂಟ್‌ ಅನ್ನು ಕಳುಹಿಸಬಹುದಾಗಿದೆ. ವಾಟ್ಸಾಪ್‌ ಈ ಹೊಸ ಫೀಚರ್‌ ಅನ್ನು ಅಭಿವೃದ್ದಿ ಪಡಿಸಿದ್ದು, ಈ ಬಗ್ಗೆ ವಿಶೇಷ ಮಾಹಿತಿ ತಿಳಿಯಲು ಲೇಖನದ ಸ್ಲೈಡರ್‌ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌

ವಾಟ್ಸಾಪ್‌, ಆಂಡ್ರಾಯ್ಡ್‌ ಮತ್ತು ಐಓಎಸ್‌ ವರ್ಸನ್‌ನ 2 ವಾಟ್ಸಾಪ್‌ ಆಪ್‌ಗಳಲ್ಲೂ ಸಹ ಡಾಕುಮೆಂಟ್‌, ಫೈಲ್‌ಗಳನ್ನು ಇತರರಿಗೆ ಕಳುಹಿಸುವ ಹೊಸ ಫೀಚರ್‌ ಅನ್ನು ಅಭಿವೃದ್ದಿಪಡಿಸಿದೆ.

ವಾಟ್ಸಾಪ್‌

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ "Share Document" ಎಂಬ ಹೊಸ ಫೀಚರ್‌ ಅನ್ನು ಅಭಿವೃದ್ದಿಪಡಿಸಿದ್ದು ಐಓಎಸ್‌ನಿಂದ ಆಂಡ್ರಾಯ್ಡ್‌ ಫೋನ್‌ಗಳಿಗೆ, ಆಂಡ್ರಾಯ್ಡ್‌ ಫೋನ್‌ನಿಂದ ಆಂಡ್ರಾಯ್ಡ್‌ ಫೋನ್‌ಗೆ ಡಾಕುಮೆಂಟ್‌ ಶೇರ್‌ ಮಾಡಬಹುದಾಗಿದೆ. ಅಲ್ಲದೇ ಇತರೆ ವಾಟ್ಸಾಪ್‌ ಗ್ರೂಪ್‌ಗಳಿಗೂ ಸಹ ಡಾಕುಮೆಂಟ್‌ ಶೇರ್‌ ಮಾಡಬಹುದು.

ವಾಟ್ಸಾಪ್‌

ವಾಟ್ಸಾಪ್‌

ಐಓಎಸ್‌ನಲ್ಲಿ Share Document ಎಂಬಲ್ಲಿ ಟ್ಯಾಪ್‌ ಮಾಡಬೇಕು. ಟ್ಯಾಪ್‌ ಮಾಡಿದ ನಂತರ ಫೈಲ್‌ ಆಯ್ಕೆ ಮಾಡಿ ಅದರ ಮೇಲೆ ಟ್ಯಾಪ್ ಮಾಡಬೇಕು. ಇತರರಿಗೆ ವೀಡಿಯೋ, ಫೋಟೋಗಳನ್ನು ಹೇಗೆ ಕಳುಹಿಸುತ್ತೀರೋ ಅದೇ ರೀತಿಯಲ್ಲಿ ಡಾಕುಮೆಂಟ್‌ ಅನ್ನು ಕಳುಹಿಸಬೇಕು.

ವಾಟ್ಸಾಪ್‌

ವಾಟ್ಸಾಪ್‌

ಆಂಡ್ರಾಯ್ಡ್‌ ಮೊಬೈಲ್‌ಗಳಲ್ಲಿ ನೀವು ಫೋಟೋ, ವೀಡಿಯೋ ಸೆಂಡ್‌ ಮಾಡಲು ಟ್ಯಾಪ್‌ ಮಾಡುವ ಐಕಾನ್‌ ಮೇಲೆ ಕ್ಲಿಕ್‌ ಮಾಡಿ ಅಲ್ಲಿ ಡಾಕುಮೆಂಟ್ ಎಂಬಲ್ಲಿ ಕ್ಲಿಕ್‌ ಮಾಡಿ. ಇತರರಿಗೆ ವೀಡಿಯೋ, ಫೋಟೋಗಳನ್ನು ಹೇಗೆ ಕಳುಹಿಸುತ್ತೀರೋ ಅದೇ ರೀತಿಯಲ್ಲಿ ಡಾಕುಮೆಂಟ್‌ ಅನ್ನು ಕಳುಹಿಸಬೇಕು.

ವಾಟ್ಸಾಪ್‌

ವಾಟ್ಸಾಪ್‌

ನೀವು ಇತರರಿಗೆ ಡಾಕುಮೆಂಟ್‌ ಕಳುಹಿಸಲು ನಿಮ್ಮ ವಾಟ್ಸಾಪ್‌ ಆಪ್‌ ಅಪ್‌ಡೇಟ್‌ ಮಾಡಬೇಕು. ಅಪ್‌ಡೇಟ್‌ ಮಾಡಿದಾಗ ಹೊಸ ಫೀಚರ್‌ ಬರುತ್ತದೆ ಹಾಗೂ ನೀವು ಯಾರಿಗೆ ಡಾಕುಮೆಂಟ್‌ ಕಳುಹಿಸಲು ಬಯಸುತ್ತಿರೋ ಅವರು ಸಹ ತಮ್ಮ ಆಪ್‌ ಅಪ್‌ಡೇಟ್‌ ಮಾಡಿಕೊಂಡಿರಬೇಕು. ಇಲ್ಲವಾದಲ್ಲಿ ನೇರವಾಗಿ ನಿಮಗೆ ಅವರು ಆಪ್‌ ಅಪ್‌ಡೇಟ್‌ ಮಾಡಿಲ್ಲ ಎಂಬ ನೋಟಿಫಿಕೇಶನ್‌ ಬರುತ್ತದೆ.

ವಾಟ್ಸಾಪ್‌

ವಾಟ್ಸಾಪ್‌

ಬ್ಯುಸಿನೆಸ್‌ ಮತ್ತು ಸಂಸ್ಥೆಗಳೊಂದಿಗೆ ಶೀಘ್ರ ಸಂವಹನಗಳನ್ನು ನೆಡೆಸಲು ವಾಟ್ಸಾಪ್‌ ಮೆಸೇಜ್‌ ಆಪ್‌ ಉಪಯೋಗವಾಗುವ ನಿಟ್ಟಿನಲ್ಲಿ ಈ ಹೊಸ ಫೀಚರ್‌ ತಂದಿದೆ. ವಾಟ್ಸಾಪ್‌ ಅಪ್‌ಡೇಟ್ ಮಾಡಲು ಮೊಬೈಲ್‌ನಲ್ಲಿ ಮೊಬೈಲ್‌ ಡೇಟಾ ಆನ್‌ ಮಾಡಿ ಇಂಟರ್ನೆಟ್ ಸಂಪರ್ಕ ಪಡೆದು ಅಪ್‌ಡೇಟ್‌ ಮಾಡಬೇಕಿದೆ.

 ವಾಟ್ಸಾಪ್‌

ವಾಟ್ಸಾಪ್‌

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ನಲ್ಲಿ ಪ್ರತಿದಿನ ಸುಮಾರು 43 ಶತಕೋಟಿ ಮೆಸೇಜ್‌ಗಳು, 1.6 ಶತಕೋಟಿ ಫೋಟೋಗಳು, 250 ದಶಲಕ್ಷ ವೀಡಿಯೋಗಳು ರವಾನೆಯಾಗುತ್ತಿದ್ದು, ಪ್ರಸ್ತುತ ಸುಮಾರು 1 ಶತಕೋಟಿ ವಾಟ್ಸಾಪ್‌ ಗ್ರೂಪ್‌ಗಳು ಇವೆ ಎಂದು ಅಂಕಿಅಂಶಗಳ ಪ್ರಕಾರ ಹೇಳಲಾಗಿದೆ.

Best Mobiles in India

English summary
WhatsApp now supports document sharing on Android, iOS. Here is how to use.. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+