ವಾಯ್ಸ್ ನೋಟ್ ಫೀಚರ್ಸ್‌ನಲ್ಲಿ ಹೊಸ ಬದಲಾವಣೆಗೆ ಮುಂದಾದ ವಾಟ್ಸಾಪ್!
ಮೆಟಾ ಒಡೆತನದ ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಕಾಲಕ್ಕೆ ಅನುಗುಣವಾಗಿ ಹೊಸ ಅಪ್ಡೇಟ್‌ಗಳನ್ನು ನೀಡುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ವಾಯ್ಸ್ ನೋಟ್ ಫೀಚರ್ಸ್‌ನಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಬಳಕೆದಾರರು ವಾಯ್ಸ್ ನೋಟ್ ರೆಕಾರ್ಡ್ ಮಾಡುವಾಗ ಆಡಿಯೊವನ್ನು ವಿರಾಮಗೊಳಿಸುವ ಮತ್ತು ಪುನರಾರಂಬಿಸಲು ಅವಕಾಶ ನೀಡುವ ಫೀಚರ್ಸ್ ಕಾರ್ಯನಿರ್ವಹಿಸುತ್ತಿದೆ.

ಹೌದು, ವಾಟ್ಸಾಪ್ ತನ್ನ ವಾಯ್ಸ್ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಆಡಿಯೊವನ್ನು ವಿರಾಮಗೊಳಿಸುವ ಮತ್ತು ಪುನರಾರಂಭಿಸುವ ಫೀಚರ್ಸ್ ಸೇರ್ಪಡೆ ಮಾಡಲು ಮುಂದಾಗಿದೆ. ಸದ್ಯ ಈ ಫೀಚರ್ಸ್ ಅನ್ನು ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ ಈ ಫೀಚರ್ಸ್ ಲಭ್ಯವಾಗಿದೆ. ಇದರಿಂದ ಬಳಕೆದಾರರು ಕಳುಹಿಸಬೇಕಾದ ವಾಯ್ಸ್ ನೋಟ್ ಅನ್ನು ಸರಿಯಾಗಿ ಕಳುಹಿಸಬಹುದು. ಅಲ್ಲದೆ ವಾಯ್ಸ್ ನೋಟ್ ರೆಕಾರ್ಡ್ ಮಾಡುವಾಗ ವಿರಾಮಗೊಳಿಸಬಹುದು. ಹಾಗಾದ್ರೆ ವಾಟ್ಸಾಪ್ ಪರಿಚಯಿಸಿರುವ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ತನ್ನ ಬಳಕೆದಾರರು ವಾಯ್ಸ್ ನೋಟ್ ರೆಕಾರ್ಡ್ ಮಾಡುವಾಗ ಹೊಸ ವಿರಾಮ ಬಟನ್ ಅನ್ನು ಪರಿಚಯಿಸಲು ಮುಂದಾಗಿದೆ. ಈ ಪಾಸ್ ಬಟನ್ ಅನ್ನು ಟ್ಯಾಪ್ ಮಾಡಿದ ನಂತರ, ವಾಯ್ಸ್ ನೋಟ್ ರೆಕಾರ್ಡ್ ಮಾಡುವುದನ್ನು ಪುನರಾರಂಭಿಸಲು ಸಾಧ್ಯವಾಗಲಿದೆ. ಈ ಫೀಚರ್ಸ್ ಅನ್ನು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗಿದೆ. ಇನ್ನು ಈ ಫೀಚರ್ಸ್ ಆಂಡ್ರಾಯ್ಡ್ 2.22.6.7 ಅಪ್‌ಡೇಟ್‌ನಲ್ಲಿ ಪರಿಚಯಿಸಿದೆ. ಇದನ್ನು ನಿಮ್ಮ ವಾಟ್ಸಾಪ್ ಖಾತೆಯಲ್ಲಿ ಕಾಣದಿದ್ದರೆ ನೀವಿನ್ನು ಅಪ್ಡೇಟ್ ಮಾಡಿಲ್ಲ ಎಂದೇ ಅರ್ಥ.

ಇನ್ನು ವಾಟ್ಸಾಪ್ ತನ್ನ ಬಳಕೆದಾರರಿಗೆ ವಾಯ್ಸ್ ಕಾಲ್ ಸೇರುವುದಕ್ಕೆ ಕಾಲ್ ಲಿಂಕ್ ಕ್ರಿಯೆಟ್ ಮಾಡಲು ಅವಕಾಶ ನೀಡಲು ಮುಂದಾಗಿದೆ. ವಾಟ್ಸಾಪ್ ಶೀಘ್ರದಲ್ಲೇ ಕಾಲ್ ಲಿಂಕ್‌ಗಳನ್ನು ಬಳಸಿಕೊಂಡು ವಾಟ್ಸಾಪ್ ಕಾಲ್ ಸೇರುವುದಕ್ಕೆ ಅವಕಾಶ ನೀಡಲಿದೆ. ವಾಟ್ಸಾಪ್ ಕಾಲ್ ಹೋಸ್ಟ್ ಮಾಡುವವರು ಕಾಲ್ಸ್ ಲಿಂಕ್ಸ್ ಕ್ರಿಯೆಟ್ ಮಾಡುವುದಕ್ಕೆ ಅವಕಾಶ ನೀಡಲಿದ್ದು, ಇದರಿಂದ ನೀವು ವಾಟ್ಸಾಪ್ ಕಾಲ್‌ನಲ್ಲಿ ಸೇರುವುದು ಸುಲಭವಾಗಲಿದೆ. ಇನ್ನು ಕಾಲ್ ಹೋಸ್ಟ್ ಕಾಲ್ಸ್ ಲಿಂಕ್ ಮೂಲಕ ಯಾರನ್ನು ಬೇಕಾದರೂ ಕಾಲ್‌ಗೆ ಇನ್ವೈಟ್ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇದಲ್ಲದೆ ಲಿಂಕ್ ಅನ್ನು ಬಳಸಿಕೊಂಡು ವಾಟ್ಸಾಪ್‌ನಲ್ಲಿ ಕರೆ ಮಾಡಲು ಅವಕಾಶ ದೊರೆಯಲಿದೆ.

ಇನ್ನು ಈ ಹೊಸ ಫೀಚರ್ಸ್ ಈಗಾಗಲೇ ಮೆಸೆಂಜರ್ ರೂಮ್‌ಗಳಲ್ಲಿ ಲಭ್ಯವಿರುವ ಫೀಚರ್ಸ್ ಮಾದರಿಯಲ್ಲಿಯೇ ಇದ್ದರೂ ಸ್ವಲ್ಪ ಭಿನ್ನವಾಗಿರುತ್ತದೆ. ಮೆಸೆಂಜರ್ ರೂಮ್ ಅನ್ನು ಫೇಸ್‌ಬುಕ್ ಅಕೌಂಟ್ ಇಲ್ಲದವರೂ ಕೂಡ ಸೇರಬಹುದು. ಆದರೆ ವಾಟ್ಸಾಪ್ ಕಾಲ್ ಅನ್ನು ವಾಟ್ಸಾಪ್ ಅಕೌಂಟ್ ಹೊಂದಿರುವ ಬಳಕೆದಾರರು ಮಾತ್ರ ಸೇರುವುದಕ್ಕೆ ಅವಕಾಶವಿದೆ. ಸದ್ಯ ಈ ಫೀಚರ್ಸ್ ಇನ್ನು ಅಭಿವೃದ್ಧಿ ಹಂತದಲ್ಲಿರುವುದರಿಂದ, ಪ್ರಸ್ತುತ ಕಾಲ್ ಲಿಂಕ್ಸ್ ಕ್ರಿಯೆಟ್ ಮಾಡಲು ಸಾಧ್ಯವಿಲ್ಲ. ಆದರೆ ಶೀಘ್ರದಲ್ಲೇ ಈ ಫೀಚರ್ಸ್ ಅನ್ನು ವಾಟ್ಸಾಪ್ ಪರಿಚಯಿಸಲಿದೆ ಎಂದು ವರದಿಯಾಗಿದೆ.

ಇದಲ್ಲದೆ ವಾಟ್ಸಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಹೊಸ ಸರ್ಚ್ ಬಟನ್ ಪರಿಚಯಸಲು ಮುಂದಾಗಿದೆ. ಇದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಸಂಪರ್ಕಗಳು ಮತ್ತು ಗುಂಪು ಚಾಟ್‌ಗಳ ಮಾಹಿತಿ ಪುಟದಲ್ಲಿ ಈ ಸರ್ಚ್ ಆಯ್ಕೆಯನ್ನು ಕಾಣಬಹುದಾಗಿದೆ. ಪ್ರಸ್ತುತ, ಈ ಫೀಚರ್ಸ್ ಅನ್ನು ಬೀಟಾ ಪರೀಕ್ಷಕರ ಗ್ರೂಪ್‌ನಲ್ಲಿ ಪರಿಚಯಿಸಲಾಗುತ್ತಿದೆ. ಇನ್ನು ಈ ಸರ್ಚ್ ಬಟನ್ ಮೂಲಕ ನೀವು ನಿರ್ಧಿಷ್ಟ ಮೆಸೇಜ್‌ಗಳನ್ನು ಸರ್ಚ್ ಮಾಡುವುದು ಸುಲಭವಾಗಲಿದೆ. ಇದು ಒಂದು ರೀತಿಯಲ್ಲಿ ಶಾರ್ಟ್‌ಕಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.


Click it and Unblock the Notifications








