ವಾಟ್ಸಾಪ್‌ನ ಈ ಹೊಸ ಬದಲಾವಣೆ ನಿಮಗೆ ಸಾಕಷ್ಟು ಉಪಕಾರಿಯಾಗಲಿದೆ?

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಕಾಲಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ವಾಟ್ಸಾಪ್‌ ಪರಿಚಯಿಸಿರುವ ಆಕರ್ಷಕ ಫೀಚರ್ಸ್‌ಗಳಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಕೂಡ ಒಂದು. ಸದ್ಯ ಇದೀಗ ವಾಟ್ಸಾಪ್‌ ತನ್ನ ಮೆಸೇಜ್‌ ಡಿಸ್‌ಅಪಿಯರಿಂಗ್ ಫೀಚರ್ಸ್‌ ನಲ್ಲಿ ಮಹತ್ತರವಾದ ಬದಲಾವಣೆಯನ್ನು ಮಾಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಜನಪ್ರಿಯ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ನಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಕಳೆದ ವರ್ಷ ಪರಿಚಯಿಸಿದ್ದ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ನಲ್ಲಿ ಇದೀಗ ಮಲ್ಟಿಪಲ್‌ ಡುರೇಶನ್‌ ಅನ್ನು ಪರಿಚಯಿಸಿದೆ. ಅಂದರೆ ಡಿಸ್‌ಅಪಿಯರಿಂಗ್‌ ಮೆಸೇಜ್‌ ಅನ್ನು ನೀವು ಎರಡು ಆಯ್ಕೆಯಲ್ಲಿ ಬಳಸಬಹುದಾಗಿದೆ. 24 ಗಂಟೆಗಳು ಮತ್ತು 90 ದಿನಗಳವರೆಗೆ ಡಿಸ್‌ಅಪಿಯರಿಂಗ್‌ ಮೆಸೇಜ್‌ ಸಮಯವನ್ನು ಹೆಚ್ಚಿಸಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ನಲ್ಲಿ ಮಲ್ಟಿ ಡುರೇಶನ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್

ವಾಟ್ಸಾಪ್ ಕಳೆದ ವರ್ಷ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಪ್ರಾರಂಭದಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಸಕ್ರಿಯಗೊಳಿಸಿದರೆ ವಾಟ್ಸಾಪ್‌ನಲ್ಲಿ ಬರುವ ಹೊಸ ಸಂದೇಶಗಳು ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಅವಕಾಶ ನೀಡಲಾಗಿತ್ತು. ಇದೀಗ ಬಳಕೆದಾರರು ಡಿಸ್‌ಅಪಿಯರಿಂಗ್‌ ಮೆಸೇಜ್‌ ಟೈಂ ಅನ್ನು 90 ದಿನಗಳವರೆಗೆ ಹೆಚ್ಚಿಸಲು ಅನುಮತಿಸುತ್ತದೆ. ಇದಲ್ಲದೆ, ವಾಟ್ಸಾಪ್‌ ಬಳಕೆದಾರರು ಎಲ್ಲಾ ಹೊಸ ಚಾಟ್‌ಗಳಿಗೆ ಡೀಫಾಲ್ಟ್ ಆಗಿ ಮೆಸೇಜ್‌ ಡಿಸ್‌ಅಪಿಯರಿಂಗ್ ಅನ್ನು ಆನ್ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ.

ವಾಟ್ಸಾಪ್‌

ಇಲ್ಲಿಯ ತನಕ ವಾಟ್ಸಾಪ್‌ನಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಮೂಲಕ ಏಳು ದಿನಗಳ ನಂತರ ಚಾಟ್‌ನಿಂದ ಸಂದೇಶಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುತ್ತದೆ. ಇದೀಗ ವಾಟ್ಸಾಪ್‌ ಡಿಸ್‌ಅಪಿಯರಿಂಗ್‌ ಮೆಸೇಜ್‌ 24 ಗಂಟೆಗಳು ಮತ್ತು 90 ದಿನಗಳ ಎರಡು ಹೊಸ ಆಯ್ಕೆಯನ್ನು ಸೇರಿಸಿದೆ. ಜೊತೆಗೆ ಏಳು ದಿನಗಳ ಆಯ್ಕೆ ಎಂದಿನಂತೆ ಲಭ್ಯವಿರಲಿದೆ. ನಿಮ್ಮ ವಾಟ್ಸಾಪ್‌ಗೆ ಬರುವ ಹೊಸ ಸಂದೇಶ ಎಷ್ಟು ದಿನಗಳ ಉಳಿಯಬೇಕು ಅನ್ನೊದನ್ನ ನೀವು ನಿರ್ಧಾರ ಮಾಡಬಹುದಾಗಿದೆ. ಇದಕ್ಕಾಗಿಯೇ ಕಳೆದ ವರ್ಷ ನಾವು ಕಣ್ಮರೆಯಾಗುತ್ತಿರುವ ಡಿಸ್‌ಅಪಿಯರಿಂಗ್‌ ಮೆಸೇಜ್‌ ಮತ್ತು ಇತ್ತೀಚೆಗೆ ಫೋಟೋಗಳು ಮತ್ತು ವೀಡಿಯೊಗಳು ಒಮ್ಮೆ ವೀಕ್ಷಿಸಿದ ನಂತರ ತಕ್ಷಣವೇ ಕಣ್ಮರೆಯಾಗುವ ಫೀಚರ್ಸ್‌ ಕೂಡ ಸೇರಿಸಿದ್ದೇವೆ ಎಂದು ಕಂಪನಿಯು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ವಾಟ್ಸಾಪ್‌

ಇನ್ನು ನೀವು ವಾಟ್ಸಾಪ್‌ನಲ್ಲಿ ಮೆಸೇಜ್‌ ಡಿಸ್‌ಅಪಿಯರಿಂಗ್‌ ಫೀಚರ್ಸ್‌ ಅನ್ನು ಆಯ್ಕೆ ಮಾಡುವುದರಿಂದ ಹೊಸಚಾಟ್‌ಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗಲಿವೆ. ಇದಕ್ಕಾಗಿ ನೀವು ಸಮಯವನ್ನು ಕೂಡ ಆಯ್ಕೆ ಮಾಡಬಹುದು. 24 ಗಂಟೆಗಳು ಮತ್ತು 90 ದಿನಗಳು ಹಾಗೂ ಈ ಹಿಂದೆ ಇದ್ದ ಏಳು ದಿನಗಳ ಆಯ್ಕೆ ನಿಮಗೆ ಲಭ್ಯವಾಗಲಿದೆ. ಮೆಸೇಜ್‌ ಡಿಸ್‌ಅಪಿಯರಿಂಗ್‌ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದ ಸಂಪರ್ಕಕ್ಕೆ ನೀವು ಈಗ ಡಿಸ್‌ಅಪಿಯರಿಂಗ್ ಮೆಸೇಜ್‌ ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಡಿಸ್‌ಅಪಿಯರಿಂಗ್ ಮೆಸೇಜ್‌ಗಳನ್ನು ಗ್ರೂಪ್‌ಚಾಟ್‌ಗಳಿಗೆ ಕಳುಹಿಸಬಹುದು. ಇದನ್ನು ಗ್ರೂಪ್‌ನಲ್ಲಿ ಸಕ್ರಿಯಗೊಳಿಸುವ ಪ್ರಕ್ರಿಯೆಯು ಒಂದೇ ಆಗಿರುತ್ತದೆ.

ವಾಟ್ಸಾಪ್‌ನಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ ಚಾಟ್ ತೆರೆಯಿರಿ.
ಹಂತ:2 ಡಿಸ್‌ಅಪಿಯರಿಂಗ್‌ ಮೆಸೇಜ್‌ ಕಳುಹಿಸಲು ಬಯಸುವ ಚಾಟ್‌ ಸಂಪರ್ಕದ ಹೆಸರನ್ನು ಟ್ಯಾಪ್ ಮಾಡಿ.
ಹಂತ:3 ಡಿಸ್‌ಅಪಿಯರಿಂಗ್‌ ಮೆಸೇಜ್‌ ಟ್ಯಾಪ್ ಮಾಡಿ. ಪ್ರಾಂಪ್ಟ್ ನಲ್ಲಿ, 'ಕಂಟಿನ್ಯೂ' ಟ್ಯಾಪ್ ಮಾಡಿ.
ಹಂತ:4 ನಂತರ 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳನ್ನು ಆಯ್ಕೆಮಾಡಿ.

ವಾಟ್ಸಾಪ್‌ ಡಿಸ್‌ಅಪಿಯರಿಂಗ್‌ ಮೆಸೇಜ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ವಾಟ್ಸಾಪ್‌ ಡಿಸ್‌ಅಪಿಯರಿಂಗ್‌ ಮೆಸೇಜ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಇನ್ನು ನಿಮ್ಮ ವಾಟ್ಸಾಪ್‌ ಡಿಸ್‌ಅಪಿಯರಿಂಗ್‌ ಮೆಸೇಜ್‌ ಅನ್ನು ಯಾವಾಗ ಬೇಕಾದರೂ ಬಳಕೆದಾರರು ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಯಾವುದೇ ಸಮಯದಲ್ಲಿ ನಿಷ್ಕ್ರಿಯಗೊಳಿಸಬಹುದು. ಒಮ್ಮೆ ನಿಷ್ಕ್ರಿಯಗೊಳಿಸಿದರೆ, ಚಾಟ್‌ನಲ್ಲಿ ಕಳುಹಿಸಲಾದ ಹೊಸ ಸಂದೇಶಗಳು ಇನ್ನು ಮುಂದೆ ಕಣ್ಮರೆಯಾಗುವುದಿಲ್ಲ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ವಾಟ್ಸಾಪ್‌ ಚಾಟ್ ತೆರೆಯಿರಿ.
ಹಂತ:2 ಸಂಪರ್ಕದ ಹೆಸರನ್ನು ಟ್ಯಾಪ್ ಮಾಡಿ.
ಹಂತ:3 ಡಿಸ್‌ಅಪಿಯರಿಂಗ್‌ ಮೆಸೇಜ್‌ ಟ್ಯಾಪ್ ಮಾಡಿ. ಪ್ರಾಂಪ್ಟ್ ನಲ್ಲಿ, 'ಕಂಟಿನ್ಯೂ' ಟ್ಯಾಪ್ ಮಾಡಿ.
ಹಂತ:4 ಆಫ್ ಆಯ್ಕೆಮಾಡಿ.

ವಾಟ್ಸಾಪ್ ಗ್ರೂಪ್‌ಗಳಿಗೂ ಡಿಸ್‌ಅಪಿಯರಿಂಗ್‌ ಮೆಸೇಜ್‌ ಆನ್ ಮಾಡಲು ನಿಮಗೆ ಅವಕಾಶ ನೀಡುವ ಹೊಸ ಆಯ್ಕೆಯನ್ನು ಸೇರಿಸಿದೆ. ಆದರೆ ಈ ಹೊಸ ಫೀಚರ್ಸ್‌ ನಿಮ್ಮ ಆಯ್ಕೆಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಚಾಟ್‌ಗಳನ್ನು ಡಿಲೀಟ್‌ ಮಾಡುವುದಿಲ್ಲ ಅನ್ನೊದನ್ನ ನೀವು ಗಮನಿಸಬೇಕಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗಷ್ಟೇ ತನ್ನ ಬಳಕೆದಾರರಿಗೆ ಕ್ಯಾಬ್‌ ಬುಕ್ಕಿಂಗ್‌ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ ಉಬರ್‌ ಸಂಸ್ಥೆ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇದರಿಂದ ವಾಟ್ಸಾಪ್‌ ಚಾಟ್‌ಬಾಟ್ ಅನ್ನು ಬಳಸಿಕೊಂಡು ಕ್ಯಾಬ್ ಅನ್ನು ಬುಕ್ ಮಾಡಬಹುದಾಗಿದೆ. ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ತನ್ನ ಬ್ಯುಸಿನೆಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಿದೆ. ಸದ್ಯ ಉಬರ್ ಇದನ್ನು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಇನ್ಮುಂದೆ ವಾಟ್ಸಾಪ್‌ ಬಳಕೆದಾರರು ವಾಟ್ಸಾಪ್‌ ಮೂಲಕವೇ ಉಬರ್‌ ಕ್ಯಾಬ್‌ ಅನ್ನು ಬುಕ್‌ಮಾಡಬಹುದಾಗಿದೆ.

ಲಕ್ನೋ

ಭಾರತದಲ್ಲಿ ಲಕ್ನೋ ನಗರದಲ್ಲಿ ಈ ಸೇವೆಯನ್ನು ಪರಿಚಯಿಸಲಾಗಿದೆ. ಶೀಘ್ರದಲ್ಲೇ ಭಾರತದ ಇತರ ನಗರ ಪ್ರದೇಶಗಳಿಗೂ ಈ ಸೇವೆ ವಿಸ್ತಾರವಾಗಲಿದೆ ಎನ್ನಲಾಗಿದೆ. ಇನ್ನು ಈ ಫೀಚರ್ಸ್‌ ಮೂಲಕ ಗ್ರಾಹಕರು ಉಬರ್ ಕಾರುಗಳು, ಉಬರ್ ಮೋಟೋ (ಮೋಟಾರ್ ಸೈಕಲ್‌ಗಳು) ಮತ್ತು ಆಟೋಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ವಾಟ್ಸಾಪ್‌ ಉಬರ್ ಜೊತೆಗೆ ಟೈ-ಅಪ್ ಮಾಡಿಕೊಂಡಿದೆ. ಸದ್ಯ ಭಾರತದಲ್ಲಿ ವಾಟ್ಸಾಪ್‌ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಇದೇ ಕಾರಣಕ್ಕೆ ಉಬರ್‌ ಕೂಡ ತನ್ನ ಪಾಲುದಾರಿಕೆಯನ್ನು ವಾಟ್ಸಾಪ್‌ನೊಂದಿಗೆ ಘೋಷಿಸಿಕೊಂಡಿದೆ. ಇದರಿಂದ ಕ್ಯಾಬ್ ಅನ್ನು ಬುಕ್ ಮಾಡಲು Uber ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅವಶ್ಯಕತೆಯಿಲ್ಲ. ಬದಲಿಗೆ ವಾಟ್ಸಾಪ್‌ ಮೂಲಕವೇ ಉಬರ್ ಕ್ಯಾಬ್‌ ಅನ್ನು ಬುಕ್‌ ಮಾಡಬಹುದಾಗಿದೆ.

Best Mobiles in India

English summary
Disappearing messages when enabled automatically deletes messages from a chat.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X