ವಾಟ್ಸಾಪ್‌ ಪೇ ನಡೆಗೆ ದಂಗಾದ ಗೂಗಲ್‌ಪೇ, ಫೋನ್‌ಪೇ!

|

ವಾಟ್ಸಾಪ್ ಜನಪ್ರಿಯ ಮೆಸೇಜ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಯುಪಿಐ ಆಧಾರಿತ ಪಾವತಿ ಸೇವೆ ನೀಡುವ ವಾಟ್ಸಾಪ್‌ ಪೇ ಅನ್ನು ಕೂಡ ಪರಿಚಯಿಸಿದೆ. ಸದ್ಯ ಇದೀಗ ವಾಟ್ಸಾಪ್‌ಪೇ ಮೂಲಕ ಪಾವತಿ ಮಾಡುವ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್‌ ಆಫರ್‌ ನೀಡಲು ಮುಂದಾಗಿದೆ. ಈ ಹೊಸ ಕ್ಯಾಶ್‌ಬ್ಯಾಕ್‌ ಆಫರ್‌ ಮೂಲಕ ಭಾರತದಲ್ಲಿ ವಾಟ್ಸಾಪ್‌ಪೇ ಸೇವೆಯನ್ನು ಇನ್ನಷ್ಟು ಜನಪ್ರಿಯತೆಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಯುಪಿಐ ನಗದು ಪಾವತಿ ಸೇವೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಇದಕ್ಕೆ ಪೂರಕವಾಗಿ ವಾಟ್ಸಪ್‌ಪೇ ಬಳಸುವ ಬಳಕೆದಾರರಿಗೆ ಭರ್ಜರಿ ಕ್ಯಾಶ್‌ಬ್ಯಾಕ್‌ ನೀಡಲು ಮುಂದಾಗಿದೆ. ಸದ್ಯ ಕ್ಯಾಶ್‌ಬ್ಯಾಕ್‌ ನೀಡುವ ಫೀಚರ್ಸ್‌ ಬೀಟಾಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ. ಆಂಡ್ರಾಯ್ಡ್‌ ವಾಟ್ಸಾಪ್‌ ಬೀಟಾ ಅಪ್ಲಿಕೇಶನ್‌ ಚಾಟ್‌ಬಾರ್‌ ಮೇಲ್ಭಾಗದಲ್ಲಿ ''Give cash'' get ₹51 back." ಎಂಬ ಸಂದೇಶದೊಂದಿಗೆ ಬ್ಯಾನರ್ ಅನ್ನು ಪ್ರದರ್ಶಿಸಲು ಪ್ರಾರಂಭಿಸಿದೆ. ಹಾಗಾದ್ರೆ ವಾಟ್ಸಾಫ್‌ಪೇನಲ್ಲಿ ಕ್ಯಾಶ್‌ಬ್ಯಾಕ್‌ ಆಫರ್‌ ಪಡೆಯೋದು ಹೇಗೆ? ಯಾರಿಗೆಲ್ಲಾ ವಾಟ್ಸಾಪ್‌ ಪೇನಲ್ಲಿ ಕ್ಯಾಶ್‌ಬ್ಯಾಕ್‌ ಆಫರ್‌ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ಪೇ

ವಾಟ್ಸಾಪ್‌ ಇದೀಗ ತನ್ನ ವಾಟ್ಸಾಪ್‌ಪೇ ಮೂಲಕ ಹಣ ಕಳುಹಿಸುವವರಿಗೆ ಭರ್ಜರಿ ಕ್ಯಾಶ್‌ ಬ್ಯಾಕ್‌ ನೀಡುತ್ತಿದೆ. ವಾಟ್ಸಾಪ್‌ ಪೇ ಮೂಲಕ ವಿವಿಧ ಸಂಪರ್ಕಗಳಿಗೆ ಹಣವನ್ನು ಕಳುಹಿಸುವ ಮೂಲಕ ನೀವು ಐದು ಬಾರಿ 51ರೂ. ತನಕ ಕ್ಯಾಶ್‌ಬ್ಯಾಕ್ ಪಡೆಯಬಹುದು. ಹಾಗಂತ ಈ ಕ್ಯಾಶ್‌ಬ್ಯಾಕ್ ಆಫರ್‌ನ ಮೊತ್ತದ ಮೇಲೆ ವಾಟ್ಸಾಪ್‌ ಸಹ ಯಾವುದೇ ಮಿತಿಯನ್ನು ನಿಗದಿಪಡಿಸಿಲ್ಲ. ನೀವು ಒಂದು ರೂ ಪಾವತಿ ಮಾಡಿದರೂ ಕ್ಯಾಶ್‌ಬ್ಯಾಕ್‌ ದೊರೆಯಲಿದೆ ಎಂದು ಹೇಳಲಾಗಿದೆ. ಆದರಿಂದ ನೀವು ಯಾವುದೇ ಸಂಪರ್ಕಕ್ಕೆ ಒಂದು ರೂ ಕಳುಹಿಸಿದರೆ ವಾಟ್ಸಾಪ್‌ ನೋಟಿಫಿಕೇಶನ್‌ ಮೂಲಕ 51ರೂ. ತಕ್ಷಣವೇ ನಿಮ್ಮ ಖಾತೆಗೆ ಜಮೆಯಾಗುತ್ತದೆ.

ವಾಟ್ಸಾಪ್‌ ಪೇ

ವಾಟ್ಸಾಪ್‌ ಪೇ ನೀಡುವ ಕ್ಯಾಶ್‌ಬ್ಯಾಕ್ ಖಾತರಿಯಾಗಿದ್ದರೂ, ನೀವು ಅದನ್ನು ಐದು ಬಾರಿ ಮಾತ್ರ ಪಡೆಯಬಹುದು ಎನ್ನಲಾಗಿದೆ. ಸದ್ಯ ಈ ಫೀಚರ್ಸ್‌ ಬೀಟಾ ಬಳಕೆದಾರರಿಗೆ ಮತ್ತು ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯವಿದೆ. ಈಗಾಗಲೇ ಯುಪಿಐ ಪಾವತಿಗಳು ಭಾರತದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿವೆ. ಆದರೆ ಎಲ್ಲಾ ಸೇವೆಗಳನ್ನು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಮುಂದಾಗಿರುವ ವಾಟ್ಸಾಪ್‌ ಇತರೆ ಪಾವತಿ ಸೇವೆಗಳಿಗೆ ಮುಂದಿನ ದಿನಗಳಲ್ಲಿ ಭರ್ಜರಿ ಪೈಪೋಟಿ ನೀಡುವ ಸಾದ್ಯತೆ ಇದೆ.

ವಾಟ್ಸಾಪ್‌

ಇದೇ ಕಾರಣಕ್ಕೆ ವಾಟ್ಸಾಪ್‌ ಪೇ ಪಾವತಿ ಸೇವೆಯನ್ನು ಬಳಸುವಂತೆ ಬಳಕೆದಾರರನ್ನು ಸೆಳೆಯಲು ವಾಟ್ಸಾಪ್‌ ಮುಂದಾಗಿದೆ. ಇದಕ್ಕಾಗಿ ಗೂಗಲ್‌ಪೇ ಹೇಗೆ ಪ್ರಾರಂಭದಲ್ಲಿ ಹೆಚ್ಚಿನ ಕ್ಯಾಶ್‌ಬ್ಯಾಕ್‌ ಆಫರ್‌ ನೀಡಿತ್ತೊ ಅದೇ ಮಾದರಿಯಲ್ಲಿ ವಾಟ್ಸಾಪ್‌ಪೇ ಕೂಡ ಹೆಜ್ಜೆ ಹಾಕುತ್ತಿದೆ. ಭಾರತದಲ್ಲಿ ಗೂಗಲ್‌ಪೇ ಮೊದಲ ಬಾರಿಗೆ ಪ್ರಾರಂಭವಾದಾಗ ಸ್ಕ್ರ್ಯಾಚ್ ಕಾರ್ಡ್‌ಗಳ ಮೂಲಕ 1,000 ವರೆಗೆ ಕ್ಯಾಶ್‌ಬ್ಯಾಕ್ ನೀಡಿತು. ಇದರ ಮೂಲಕ ಯುಪಿಐ ಪಾವತಿ ಸೇವೆ ಬಳಸುವ ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆದಿತ್ತು.

ವಾಟ್ಸಾಪ್‌

ಇದೀಗ ವಾಟ್ಸಾಪ್‌ ತನ್ನ ವಾಟ್ಸಾಪ್‌ಪೇ ಬಳಸುವವರಿಗೆ ಕ್ಯಾಶ್‌ಬ್ಯಾಕ್‌ ನೀಡಲಿದೆ. ಕೇವಲ ಒಂದು ರೂ ಸೆಂಡ್‌ ಮಾಡಿದ್ರೂ ಕೂಡ ನಿಮಗೆ 51ರೂ.ಗಳ ಕ್ಯಾಶ್‌ಬ್ಯಾಕ್‌ ದೊರೆಯಲಿದೆ. ಇನ್ನು ಈ ಕ್ಯಾಶ್‌ಬ್ಯಾಕ್‌ ಫರ್‌ ಅನ್ನು ಐದು ಬಾರಿ ಮಾತ್ರ ಪಡೆಯಬಹುದಾಗಿದೆ. ಸದ್ಯ ವಾಟ್ಸಾಪ್‌ ಅಪ್ಲಿಕೇಶನ್‌ನ ಚಾಟ್ ಬಾರ್‌ನಲ್ಲಿಯೇ ಪಾವತಿ ಶಾರ್ಟ್‌ಕಟ್ ಬಟನ್ ಅನ್ನು ಕೂಡ ಸೇರಿಸಿದೆ. ವಾಟ್ಸಾಪ್ ಪೇ ಶಾರ್ಟ್‌ಕಟ್ ಒಂದು ರೂಪಾಯಿ ಚಿಹ್ನೆಯ ಬಟನ್ ಆಗಿದೆ. ಇದನ್ನು ಟ್ಯಾಪ್‌ ಮಾಡುವ ಮೂಲಕ ಹಣ ಪಾವತಿ ಮಾಡಬಹುದಾಗಿದೆ.

ವಾಟ್ಸಾಪ್ ಪೇ ಮೂಲಕ ಹಣವನ್ನು ಕಳುಹಿಸುವುದು ಹೇಗೆ?

ವಾಟ್ಸಾಪ್ ಪೇ ಮೂಲಕ ಹಣವನ್ನು ಕಳುಹಿಸುವುದು ಹೇಗೆ?

ಇತರ ಬಳಕೆದಾರರು ವಾಟ್ಸಾಪ್ ಅಥವಾ ವಾಟ್ಸಾಪ್ ಹೊರಗೆ ಕಳುಹಿಸಿದ ಹಣವನ್ನು ಸ್ವೀಕರಿಸುವುದು ಸುಲಭ. ವಾಟ್ಸಾಪ್ ಪೇ ಅನ್ನು ಬಳಸುವ ಯಾರಿಂದಲೂ ನೀವು ಹಣವನ್ನು ಪಡೆಯಬಹುದು, ಅವರು ಯುಪಿಐ ಅನ್ನು ಆಧರಿಸಿದ ಅಪ್ಲಿಕೇಶನ್ ಅನ್ನು ವಾಟ್ಸಾಪ್‌ನಂತೆಯೇ ಬಳಸುತ್ತಿರಬೇಕು. ಪಾವತಿಗಳಿಗಾಗಿ ಯುಪಿಐ ಬಳಸುವುದರ ಒಂದು ದೊಡ್ಡ ಅನುಕೂಲವೆಂದರೆ ಬಳಕೆದಾರರು ವಿಭಿನ್ನ ಅಪ್ಲಿಕೇಶನ್‌ಗಳನ್ನು ಬಳಸಿದರೂ ಪರಸ್ಪರ ಹಣವನ್ನು ಕಳುಹಿಸಬಹುದು. ಇದರರ್ಥ ಬಳಕೆದಾರರು Google Pay ನಲ್ಲಿದ್ದರೂ ಸಹ, ಅವರು ನಿಮಗೆ WhatsApp Pay ನಲ್ಲಿ ಹಣವನ್ನು ಕಳುಹಿಸಬಹುದು. ಇದೇ ರೀತಿಯಾಗಿ, ಫೋನ್‌ಪೇ ಅನ್ನು ಮಾತ್ರ ಬಳಸುವ ಬಳಕೆದಾರರಿಗೆ ನೀವು ವಾಟ್ಸಾಪ್ ಪೇ ನಿಂದ ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ.

Best Mobiles in India

English summary
WhatsApp Offers Rs. 51 Cashback For Select Android Users To Take On The Competition.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X